[{"data":1,"prerenderedAt":536},["ShallowReactive",2],{"story-circle":3,"summary-all":144},{"id":4,"title":5,"author":6,"body":7,"cover":133,"date":134,"description":135,"download":136,"extension":137,"meta":138,"navigation":139,"path":140,"seo":141,"slug":21,"stem":142,"__hash__":143},"stories\u002Fstories\u002Fcircle.md","Circle","Akshara Hegde",{"type":8,"value":9,"toc":129},"minimark",[10,18,22,26,29,32,35,39,42,45,47,51,54,57,59,63,66,69,71,75,78,81,84,87,90,93,96,99,102,105,107,111,114,117,120,123],[11,12,13],"p",{},[14,15],"img",{"alt":16,"src":17},"Cover Image","https:\u002F\u002Fhegdeheartbeats.weebly.com\u002Fuploads\u002F7\u002F2\u002F7\u002F5\u002F72751619\u002Fpublished\u002Fcircle.jpg?1490989735",[19,20,5],"h1",{"id":21},"circle",[19,23,25],{"id":24},"scene-1","Scene 1",[11,27,28],{},"ಗಡಿಯಾರದ ಚಿಕ್ಕ ಮುಳ್ಳು ೧೨ನ್ನು ದಾಟಿ ೧ರತ್ತ ಧಾಪುಗಾಲಿಡುತ್ತಿತ್ತು. ಅವಳು ತನ್ನ ಅಪಾರ್ಟ್‌ಮೆಂಟ್‌ನ ಟೆರೇಸ್ನ ತುತ್ತತುದಿಯಲ್ಲಿ ಕತ್ತಲಿನಲ್ಲಿ ಕರಗಿ ಲೀನವಾಗಿ ನಿಂತಿದ್ದಾಳೆ. \"u r a cheater. esht life na haal madiddiya? its enough. get outta my lyf\" - ವಾತ್ಸಾಪ್ನಲ್ಲಿ ಇದ್ದ ಆ ಸಂದೇಶವನ್ನೇ ಮತ್ತೆ ಮತ್ತೆ ಓದಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.",[11,30,31],{},"ಸಮಯವು ಮಾತ್ರ ವಿರಮಿಸದೆ ಮುಂದಕ್ಕೆ ಸರಿಯುತ್ತಿತ್ತು. ಒಮ್ಮೆ ಆಕಾಶದತ್ತ ಧಿಟ್ಟಿಸಿನೋಡಿದಳು. ಮೋಡವಿಲ್ಲದ ಶುಭ್ರಾಗಸದಲ್ಲಿ ಮಿಂಚುತ್ತಿರುವ ತಾರೆಗಳು ಇವಳ ಕಂಗಳಲ್ಲಿ ಪ್ರತಿಬಿಂಬಿಸಿದವು. ಕೆಳಗೆ ನೋಡಿದಾಗ ಕಂಡದ್ದು ನಿರ್ಜನವಾದ ರಸ್ತೆ. ತನ್ನ ಪರಿಸ್ಥಿತಿಯನ್ನು ತಾನೇ ಹಳಿದುಕೊಳ್ಳುತ್ತಾ ಒಮ್ಮೆ ಧೀರ್ಘವಾಗಿ ಉಸಿರನ್ನೆಳೆದುಕೊಂಡು ಮತ್ತೊಂದು ಹೆಜ್ಜೆ ಎತ್ತಿಟ್ಟಳು. ಅದು ಅವಳ ಕೊನೆಯ ಹೆಜ್ಜೆ. ಗಾಳಿಯಲ್ಲಿತ್ತು ಕಾಲು. ಕೆಲವೇ ಸೆಕೆಂಡುಗಳಲ್ಲಿ ಅವಳ ದೇಹ ರಸ್ತೆಯ ನಡುವಲ್ಲಿ, ರಕ್ತದ ಮಡುವಲ್ಲಿತ್ತು.",[33,34],"hr",{},[19,36,38],{"id":37},"scene-2","Scene 2",[11,40,41],{},"ಬೀಪ್ ಬೀಪ್ ಸದ್ದುಗಳು ಲಯಬದ್ದವಾಗಿ ಕಿವಿಗೆ ಬಡಿದಾಗ ಭಾರ್ಗವ ನಿಧಾನವಾಗಿ ಕಣ್ಣುಗಳನ್ನು ತೆರೆದ. ಶಭ್ಧ ಬಂದತ್ತ ತಿರುಗಿ ನೋಡಲು ಯತ್ನಿಸಿದ. ಉಹೂ. ಅವನಿಂದ ಸಾಧ್ಯವಾಗುತ್ತಿಲ್ಲ. ದೇಹದ ಯಾವ ಭಾಗಗಳೂ ಅವನ ಪ್ರಯತ್ನಕ್ಕೆ ಸ್ಪಂಧಿಸುತ್ತಿಲ್ಲ. ನರಕಯಾತನೆ ಆಗುತ್ತಿದ್ದರೂ ತನ್ನೆಲ್ಲಾ ಶಕ್ತಿ ಬಳಸಿ ಎದ್ದು ಕುಳಿತಾಗ ಕಂಡದ್ದು ದೇಹಕ್ಕೆ ಅಂಟಿಕೊಂಡಿದ್ದ ವಿವಿಧ ಯಂತ್ರಗಳಿಂದ ಹೊರಬಂದಂತಹ ಬೇರೆಬೇರೆ ಬಣ್ಣದ ವೈರುಗಳು. ಹಿಂದಿನ ದಿನ ಏನಾಗಿತ್ತು ಎಂಬುದನ್ನು ನೆನಪಿಸಿಕೊಳ್ಳಲು ಹರಸಾಹಸ ಪಡತೊಡಗಿದ. ಯಾವುದೋ ಕಟ್ಟಡವೊಂದರ ಮೇಲೆ ನಿಂತಿರುವ ಅಸ್ಪಷ್ಟ ಚಿತ್ರಣ ಮೂಡೀತೆ ವಿನಹ ಉಳಿದಿದ್ದೆಲ್ಲವೂ ಕಿವಿಗಳ ತಮಟೆ ಸೀಳುವಂತಿರುವ ಅವರಿವರ ಅರಚಾಟಗಳು ಮಾತ್ರ. ಕಿರಿಚಾಟದ ಪ್ರತಿಧ್ವನಿಗಳನ್ನು ಸಹಿಸಲಾರಾದವನಾಗಿ 'ಸ್ಟಾಪ್ ಇಟ್, ಸ್ಟಾಪ್ ಇಟ್' ಎಂದು ಹುಯಿಲಿಡತೊಡಗಿದ. ಹೆಚ್ಚಿದ ಒತ್ತಡದಿಂದಾಗಿ ತಲೆಯಲ್ಲಾಗಿದ್ದ ಗಾಯದಿಂದ ರಕ್ತ ಚಿಮ್ಮಿಬಂದು ಶ್ವೇತವರ್ಣದ ಬ್ಯಾಂಡೇಜನ್ನು ಕೆಂಪಾಗಿಸಿತು.",[11,43,44],{},"ಭಾರ್ಗವನ ಅರಚಾಟವನ್ನು ಕೇಳಿ ಗಾಬರಿಯಿಂದ ಬಾಗಿಲು ತೆರೆದು ಒಳಗೆ ಓಡಿಬಂದಳೊಬ್ಬಳು ನರ್ಸ್. ಅವಳ ಹಿಂದೆಯೇ ಧಾವಿಸಿಬಂದಳೊಬ್ಬಳು ಇಪ್ಪತ್ತರ ಆಸುಪಾಸಿನ ಸುಂದರ ಯುವತಿ. ಅವಳು ಶ್ವೇತಾ.",[33,46],{},[19,48,50],{"id":49},"scene-3","Scene 3",[11,52,53],{},"ಆಗ ತಾನೇ ಆಫೀಸಿನಿಂದ ಹಿಂತಿರುಗಿದ್ದ ಭಾರ್ಗವ, ಮಂಚದ ಮೇಲೆ ಕುಳಿತು ವ್ಹಾಟ್ಸಪ್ಪ್ನಲ್ಲಿ ಬಂದಿದ್ದ ಸಂದೇಶಗಳನ್ನು ಓದುತ್ತಿದ್ದನು. ಇದ್ದಕ್ಕಿದ್ದಂತೆಯೇ ಅಡುಗೆ ಕೋಣೆಯಿಂದ ಶ್ರುತಿಯು ಚೀರುತ್ತಿರುವುದನ್ನು ಕೇಳಿ ಮಾಬೈಲನ್ನು ಅಲ್ಲೇ ಎಸೆದು ಅವಳಿದ್ದ ಕಡೆಗೆ ಓಡಿದ. ಕೆಲವೇ ಕ್ಷಣಗಳಲ್ಲಿ ಹೊಸ ಸಂದೇಶ ಬಂದಿದ್ದರ ಸೂಚಕವಾಗಿ ಬೀಪ್ ಬೀಪ್ ಸದ್ದು ಬರತೊಡಗಿತ್ತು. ಅವನಾಗಲೇ ಅದನ್ನು ಓದಿ ಅಳಿಸಿದ್ದರೆ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದಾಗಿತ್ತೇನೋ...",[11,55,56],{},"ಅವಳತ್ತ ಬಂದವನೇ ತನ್ನ ತುಟಿಗಳನ್ನು ಅವಳ ತುಟಿಗಳಿಗೆ ಒತ್ತಿ ಹಿಡಿದನು. ಒಮ್ಮೆಲೆ ಅವಳ ಚೀರಾಟ ನಿಂತಿತಲ್ಲದೇ, ಆತನ ಈ ಅನಿರೀಕ್ಷಿತ ನಡೆಗೆ ಅಚ್ಚರಿಯಿಂದ ಕಣ್ಣುಗಳನ್ನು ಹಿಗ್ಗಲಿಸಿದಳು. ಕೆಲವು ಕ್ಷಣಗಳಲ್ಲಿ ಅವಳಿಗರಿವಿಲ್ಲದಂತೆಯೇ ಮುಚ್ಚಿಕೊಂಡವು. ತುಟಿಗಳು ಅವನ ಕಾರ್ಯಕ್ಕೆ ಲಯಬದ್ದವಾಗಿ ಸ್ಪಂದಿಸತೊಡಗಿದವು. ಕೈ ಬೆರಳಿಗಾಗಿದ್ದ ಗಾಯದ ನೋವು ಅದಾಗಲೇ ಮರೆತು ಹೋದಂತಿತ್ತು.",[33,58],{},[19,60,62],{"id":61},"scene-4","Scene 4",[11,64,65],{},"ಒಳಬಂದ ನರ್ಸ್ ಭಾರ್ಗವನನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದಳಾದರೂ, ತನ್ನ ದೇಹಕ್ಕೆ ಅಳವಡಿಸಲಾಗಿದ್ದ ವೈರುಗಳನ್ನು ಕಿತ್ತೆಸೆಯುವುದರಲ್ಲೇ ಬ್ಯುಸಿಯಾಗಿದ್ದ. ಮುಂದೆ ಬಂದ ಶ್ವೇತಾ ಈತನ ಎಡಬುಜದ ಮೇಲೆ ಮೆಲ್ಲಗೆ ಕೈಯಿರಿಸಿ ಸಮಾಧಾನಗೊಳ್ಳುವಂತೆ ತಲೆಯಾಡಿಸಿದಳು.",[11,67,68],{},"ಆಯಸ್ಕಾಂತದಂತೆ ಸೆಳೆಯುವ ಕಣ್ಣುಗಳನ್ನು ಹೊಂದಿರುವ ಅಪರಿಚಿತ ಸುಂದರಿಯನ್ನು ನೋಡಿ ಆವಕ್ಕಾಗಿ ಎವೆಯಿಕ್ಕದೆ ಅವಳ ಮುಖವನ್ನೇ ಧಿಟ್ಟಿಸಿ ನೋಡುತ್ತಿದ್ದು ಬಿಟ್ಟ. \"ನಿಮಗೇನೂ ಆಗಿಲ್ಲ. ಕೆಲವೇ ದಿನಗಳಲ್ಲಿ ಮೊದಲಿನಂತಾಗುವಿರಿ. ರಿಲ್ಯಾಕ್ಸ್\"- ಆ ಮೃಧುವಾದ ಮಾತುಗಳು ಅವಳು ಆಸ್ಪತ್ರೆಯಿಂದ ತೆರಳಿ ಗಂಟೆಗಳು ಉರುಳಿದ ಮೇಲೂ ಈತನ ಕಿವಿಗಳಲ್ಲಿ ಹಾಡಿನಂತೆ ಗುನುಗುಡುತ್ತಿತ್ತು.",[33,70],{},[19,72,74],{"id":73},"scene-5","Scene 5",[11,76,77],{},"ಆಸ್ಪತ್ರೆಯಿಂದ ನೇರವಾಗಿ ತನ್ನ ಆಫೀಸಿನ ಕಡೆಗೆ ಸಾಗಿದ್ದ ಶ್ರುತಿಗೆ ಗೇಟಿನ ಬಳಿಯಲ್ಲೇ ಭಾರ್ಗವನ ಬೈಕಿನ ದರ್ಶನವಾಯಿತು. ಪ್ರತಿನಿತ್ಯವೂ ಒಂದಿಲ್ಲೊಂದು ನೆಪದಲ್ಲಿ ತನ್ನನ್ನು ಮಾತಿಗೆಳೆಯುತ್ತಿದ್ದ ಅವನನ್ನು ಕಂಡರೆ ಒಂದು ರೀತಿಯ ಭಯವಿದ್ದರೂ ಮನಸ್ಸಿನ ಮೂಲೆಯಲ್ಲೊಂದು ಸೆಳೆತ. ನೋಡಲು ಸ್ಫುರದ್ರೂಪಿಯಾಗಿದ್ದ ಆತ ಎಂತಹ ಸಮಯದಲ್ಲೂ ಧೃತಿಗೆಡದೇ ನಗುನಗುತ್ತಾ ಧೈರ್ಯವಾಗಿ ಎದುರಿಸುವ ಅವನ ಪರಿಯೂ ಕೂಡ ಕಾರಣವಾಗಿರಬಹುದು.",[11,79,80],{},"ಎರಡು ತಿಂಗಳ ಹಿಂದಷ್ಟೇ ಇಂಟರ್‌ನ್ ಆಗಿ ಆ ಕಂಪನಿಗೆ ಸೇರಿಕೊಂಡಿದ್ದಳು ಶ್ರುತಿ. ಅವಳಲ್ಲಿ ಕೆಲಸವಾರಂಭಿಸಿ ವಾರ ಕಳೆಯುವಷ್ಟರಲ್ಲಿ ಅಲ್ಲಿಯ ಎಲ್ಲ ಗಂಡು ಹೈಕಳ, I mean, ಮೇಲ್ ಎಂಪ್ಲಾಯೀಸ್ಗಳ ಗಮನವನ್ನು ತನ್ನ ಸೈಲೆನ್ಸ್ ಮತ್ತು ಇನೋಸೆನ್ಸ್ ಮೂಲಕ ಆಕರ್ಷಿಸಿದ್ದಳು.",[11,82,83],{},"ತನ್ನ ಕ್ಯಾಬಿನ್ನಿನ ಬಾಗಿಲು ತೆರೆದು ಕುಳಿತುಕೊಳ್ಳಬೇಕೆನ್ನುವಷ್ಟರಲ್ಲಿ ಭಾರ್ಗವನ ಧ್ವನಿ ಕೇಳಿ ಬೆಚ್ಚಿ ಬಿದ್ದು ಹಿಂದೆ ತಿರುಗಿದಳು. \"Excuse me, may I come in....madam?\" ಎಂದು ಕಣ್ಣು ಮಿಟುಕಿಸದೆ ತನ್ನನ್ನೇ ನೋಡುತ್ತಿದ್ದವಳನ್ನು ಮತ್ತೊಮ್ಮೆ ಕೇಳಿದ. \"Oh.. Oh sure, Come in...\" ಸಂಭಾಳಿಸಿಕೊಂಡು ಆತನನ್ನು ಎದ್ದು ನಿಂತು ಆಹ್ವಾನಿಸಿದಳು. ಇವತ್ತು ನನ್ನ ಬರ್ತ್‌ಡೇ. ಸೊ ಅಫ್ತೆರ್ನ್ನೊನ್ ಲಂಚ್-ಗೆ ಎಲ್ಲರನ್ನೂ ಕರೆದುಕೊಂಡ್ ಹೋಗ್ತಾ ಇದೀನಿ. ರೆಡೀ ಆಗಿರಿ. ನಾನು ಬಂದು ಕರೀತೀನಿ\" ಎಂದ. \"ಸಾರೀ. ಹ್ಯಾಪೀ ಬರ್ತ್‌ಡೇ. ಈ ಡಿಂಟ್ ನೋ ದಟ್ ಟುಡೇ ಈಸ್ ಯುವರ್...\", ಎನ್ನುವಷ್ಟರಲ್ಲಿ \"ಇಟ್'ಸ್ ಓಕೇ.\" ಎಂದು ಕೈಕುಲುಕಿದ.",[11,85,86],{},"ಆ ಕಡೆಗೊಮ್ಮೆ ಈ ಕಡೆಗೊಮ್ಮೆ ತಿರುಗಿ ತನ್ನ ಇಕ್ಕೆಲಗಳಲ್ಲಿ ಕುಳಿತವರತ್ತ ನೋಡಿ ಅಂಗೈಯಲ್ಲಿ ಗಲ್ಲವಿರಿಸಿ ಕುಳಿತಿದ್ದಳು. ಭಾರ್ಗವ ಹಾಗೂ ಲತಾ; ಇವರಿಬ್ಬರ ನಡುವೆ ಕುಳಿತಿದ್ದಳು ಶ್ರುತಿ. ಕಾರು ವೇಗವಾಗಿ ಯಲಹಂಕದ ಕಡೆಗೆ ಸಾಗುತ್ತಿತ್ತು.",[11,88,89],{},"ಹುಟ್ಟುಹಬ್ಬದ ಪ್ರಯುಕ್ತ ಊಟಕ್ಕೆ ಕರೆದುಕೊಂಡು ಹೊರಟಿದ್ದ ಭಾರ್ಗವ ಕಾರಿನ  ಕೀಯನ್ನು ಹರೀಶನಿಗೆ ರವಾನಿಸಿದ್ದ. ಶ್ರುತಿ ಬರುವುದರೊಳಗಾಗಿ ಲತಾ ಕಿಟಕಿ ಬಳಿಯ ಸೀಟನ್ನು ತನ್ನದಾಗಿಸಿಕೊಂಡಿದ್ದಳು. ಸಣ್ಣಕಿರುವುದರಿಂದ ನೀನು ಮಧ್ಯೆ ಕೂರು ಎಂದು ಇವಳನ್ನು ಕೂರಿಸಿದ್ದರು. ಅವಳ ಎಡಬದಿಯಲ್ಲಿ ಭಾರ್ಗವ ಪವಡಿಸಿದ್ದ. ಮಧ್ಯೆ ಕುಳಿತಿದ್ದ ಶ್ರುತಿ ಆ ಕಡೆಗೊಮ್ಮೆ ಈ ಕಡೆಗೊಮ್ಮೆ ತಿರುಗಿ ಅವರಿಬ್ಬರ ಮುಖವನ್ನೊಮ್ಮೆ ನೋಡಿ ಕೈಗೆ ಗಲ್ಲವನ್ನಾನಿಸಿ ಕುಳಿತಿದ್ದಳು.  ಎರಡೂವರೆ ಗಂಟೆಗಳ ಪ್ರಯಾಣದ ನಂತರ ಹೋಟೆಲೊಂದರ ಎದುರು ನಿಂತಾಗಲೇ ಈಕೆಗೆ ಸಮಾಧಾನವಾದದ್ದು.",[11,91,92],{},"ಊಟ ನಿಧಾನವಾಗಿ ಸಾಗುತ್ತಿತ್ತು. ಎಲ್ಲರೂ ಹಾಸ್ಯಾತ್ಮಕವಾಗಿ ಮಾತನಾಡುತ್ತಾ ಊಟವನ್ನು ಅಸ್ವಾಧಿಸುತ್ತಿದ್ದರೆ ಇವಳು ತನ್ನದೇ ಲೋಕದಲ್ಲಿ ವಿಹರಿಸುತ್ತಾ ಏನೊಂದೂ ಮಾತನಾಡದೆ ಕುಳಿತಿದ್ದಳು. ಭಾರ್ಗವ ಇವಳನ್ನು ಮಾತನಾಡಿಸಲೋಸುಗ \"ಊಟ ಹೇಗಿದೆ? ಈಗ ರಿಟರ್ನ್ ಯಾವ ರೂಟಲ್ಲಿ ಹೋಗ್ತೀರಿ?\" ಎಂದು ಕೇಳಿದ. \"ನೀವು ಹೇಗೂ ಹೆಬ್ಬಾಳದ ಆಫೀಸಿನವರೆಗೂ ನೀವು ಹೊಗ್ತೀರಲ್ವ, ಅಲ್ಲಿವರೆಗೂ ನಿಮ್ಜೋತೇನೇ ಬರ್ತೀನಿ. ಅಲ್ಲಿಂದ ದಿನಾಲೂ ಹೋಗೋ ಬಸ್ಸಿಗೆ ಹೋಗ್ತೀನಿ\" ಎಂದಳು. \"ಊಟ ಹೇಗಿದೆ?\" ಎನ್ನುವ ಪ್ರಶ್ನೆಗಿಂತ \"ಈಗ ರಿಟರ್ನ್ ಯಾವ ರೂಟಲ್ಲಿ ಹೋಗ್ತೀರಿ?\" ಎಂಬುದೇ ಈಕೆಗೆ ಪ್ರಮುಖವಾಗಿ ಕಾಡಿತ್ತು.  ಇವಳ ಮಾತನ್ನು ಕೇಳಿ ಎಲ್ಲರೂ ಗೊಳ್ಳೆಂದು ನಕ್ಕರು. \"ಅಲ್ಲಾ ರೀ, ಇಲ್ಲಿಂದ ಡೈರೆಕ್ಟ್ ಆಗಿ ಮೆಜ಼ೆಸ್ಟಿಕ್-ವರೆಗೂ ಮೆಟ್ರೋದಲ್ಲಿ ಹೋಗಿ. ಅಲ್ಲಿಂದ ನಿಮ್ಮ ಮನೆ ಕಡೆಗೆ ಬಸ್ ಸಿಗುತ್ತೆ. ಬೇಗ ಮನೆ ಸೇರ್ಕೊಳ್ಬಹುದು\", ಎಂದು ನಗುವನ್ನು ಹತ್ತಿಕ್ಕಿಕೊಳ್ಳುತ್ತಾ ಹೇಳಿದಾಗ ಇವಳಿಗೆ ಇರುಸು-ಮುರಿಸಾಯಿತು. ಹರೀಶ ಕೂಡ ಭಾರ್ಗವನ ಮಾತುಗಳನ್ನೇ ಪುನರುಚ್ಚರಿಸಿದಾಗ, ಇದ್ದಕ್ಕಿದ್ದಂತೆ ಬ್ಯಾಗನ್ನು ಹೆಗಲಿಗೇರಿಸಿಕೊಂಡು ಹೊರಟುನಿಂತೆ ಬಿಟ್ಟಳು.",[11,94,95],{},"ಆಗ ಭಾರ್ಗವ ಗಕ್ಕನೆದ್ದು ಅವಳೆಡ ಮುಂಗೈಯನ್ನಿಡಿದು  \"ಏನ್ರೀ.. ಇಷ್ಟಕ್ಕೆ  ಕೋಪ ಮಾಡ್ಕೊಂಡು ಹೊರಟು ಬಿಡೋದಾ? ಬನ್ನಿ ಊಟ ಮಾಡಿ. ನಿಮಗೆ ಹೇಗ್ ಅನ್ಸುತ್ತೋ ಹಾಗೆ ಮಾಡಿ\" ಎಂದಾಗ ಸಮಾಧಾನಗೊಂಡವಳಂತೆ ತಿರುಗಿ ಬಂದು ಕುಳಿತು \"ಸಾರೀ\" ಅಂದು ಎಲ್ಲರ ಮುಖವನ್ನೊಮ್ಮೆ  ನೋಡಿದಳು.",[11,97,98],{},"ಊಟದ ಕಾರ್ಯಕ್ರಮ ಈ ರೀತಿಯ ಡ್ರಾಮದಲ್ಲಿ ಕೊನೆಗೊಂಡಿತು. ಆದಷ್ಟು ಬೇಗ ಹೆಬ್ಬಾಳದ ಆಫೀಸಿಗೆ ಸೇರಿಕೊಂಡರೆ ಸಾಕು ಎಂದು ಮನದಲ್ಲೇ ಶ್ರುತಿ ಪ್ರಾರ್ಥಿಸುತ್ತಿದ್ದ ಶ್ರುತಿಗೆ, ಲತಾ ಐಸ್-ಕ್ರೀಮ್ ತಿಂದು ಹೋಗೋಣವೆಂದಾಗ ಅವಳನ್ನು ಸಾಯಿಸಬೇಕೆನ್ನುವಷ್ಟು ಕೋಪ ಬಂದಿತ್ತು.",[11,100,101],{},"ಎಲ್ಲರೂ ತಮಗೆ ಬೇಕಾದ ಫ್ಲೇವರ್ ಐಸ್ಕ್ರೀಮ್ಗಳನ್ನು ಕೊಂಡುಕೊಂಡರು. ಸ್ಟ್ರಾಬೆರೀ ಫ್ಲೇವರ್ ಹಿಡಿದಿದ್ದ ಶ್ರುತಿಯ ಬಳಿ, \"ನಿಮ್ಮ ಐಸ್-ಕ್ರೀಮಿನಿಂದ ಒಂದು ಸ್ಪೂನ್ ತೆಗೆದುಕೊಳ್ಳಬಹುದೇ, ಮೇಡಮ್? \" ಎಂದು ಭಾರ್ಗವನೆಂದಾಗ ಮೌನವಾಗಿ ಆತನ ಕೈಗೆ ನೀಡಿದಳು. \" ನಿಮ್ಮ್ ಸೆಲೆಕ್ಶನ್ ಸೂಪರ್ ಕಣ್ರೀ. ಐಸ್ ಕ್ರೀಮನ್ನು ಕೂಡ ಯೋಚಿಸಿ ಮಾಡ್ತೀರಿ.\" ಹೊಗಳಿದಾಗ ಐಸ್-ಕ್ರೀಮ್ ತಿನ್ನೋಣವೆಂದು ಕರೆದಿದ್ದು ತಾನು, ಹೊಗಳಿಕೆ ಇವಳಿಗೆ ಎಂದು ಮನಸ್ಸಿನಲ್ಲಿಯೇ ಉರಿದುಕೊಂಡಳು.",[11,103,104],{},"ಈ ರೀತಿಯ ಸಣ್ಣಪುಟ್ಟ ಚೇಷ್ಟೆಗಳ ನಡುವೆ ನಾಲ್ಕು ತಿಂಗಳುಗಳು ಕಳೆಯುವಷ್ಟರಲ್ಲಿ ಶ್ರುತಿ-ಭಾರ್ಗವರ ಸ್ನೇಹ ಗಾಢವಾಗಿತ್ತು. ಇಬ್ಬರೂ ಅಪಾರ್ಟಮೆಂಟ್ವೊಂದರಲ್ಲಿ ಜೊತೆಯಾಗಿ ವಾಸಿಸತೊಡಗಿದರು. ಹೀಗೆ ಅನ್ಯೋನ್ಯವಾಗಿ ಸಹಜೀವನ ನಡೆಸುತ್ತಿದ್ದ ಇವರ ಬಾಳು ಬಿರುಗಾಳಿಯಲ್ಲಿ ಸಿಕ್ಕ ಹಕ್ಕಿಯಂತಾಗಿದ್ದು ಕೇವಲ ಆ ಒಂದು ಸಂದೇಶದಿಂದ. ಶ್ರುತಿ ತರಕಾರಿಯನ್ನು ಕತ್ತರಿಸುವಾಗ ಕೈಗೆ ಚಾಕುವಿನಿಂದ ಗಾಯ ಮಾಡಿಕೊಂಡಿದ್ದಳು.",[33,106],{},[19,108,110],{"id":109},"scene-6","Scene 6",[11,112,113],{},"ಇಂದಿನವರೆಗೂ ತನ್ನ ಎಲ್ಲೆಯ ರೇಖೆಯನ್ನು ದಾಟಿರದಿದ್ದ ಭಾರ್ಗವ ಆಕಸ್ಮಿಕವಾಗಿ ಅವಳ ಕಿರುಚಾಟವನ್ನು ನಿಲ್ಲಿಸಲೋಸುಗ ಮುತ್ತಿಕ್ಕಿದ್ದ. ಹದಿನೈದು ನಿಮಿಷಗಳ ಧೀರ್ಘ ಚುಂಬನದ ನಂತರ ಬೇರ್ಪಟ್ಟಾಗಲೇ ಅವಳಿಗೆ ಗಾಯದ ನೆನಪು ಮರುಕಳಿಸಿದ್ದು. ನಾಚಿ ಕೆಂಪಾದ ಕೆನ್ನೆಯ ಶ್ರುತಿ ರಕ್ತ ಹೆಪ್ಪುಗಟ್ಟಿದ್ದ ಬೆರಳನ್ನು ಅದುಮಿ ಹಿಡಿದಿದ್ದವಳನ್ನು ರೂಮಿಗೆ ಕರೆತಂದಿದ್ದ. ಬಾಂಡ್-ಏಡ್ ಗಾಗಿ ಹುಡುಕಾಡಿ, ಸಿಗದಿದ್ದಾಗ ತನ್ನ ಕರ್ಚೀಫನ್ನೇ ಸುತ್ತಿ ಮೆಡಿಕಲ್ ಶಾಪ್ ಕಡೆಗೆ ಓದಿದ್ದ.",[11,115,116],{},"ಆ ಸಮಯದಲ್ಲೇ ಆಗಿದ್ದು ದೊಡ್ಡದೊಂದು ಎಡವಟ್ಟು. ಮಂಚದ ಮೇಲೆ ಕುಳಿತು ಪಕ್ಕದಲ್ಲೇ ಬಿದ್ದಿದ್ದ ಭಾರ್ಗವನ ಮೊಬೈಲನ್ನು ತೆಗೆದುಕೊಂಡಿದ್ದಳು. ಆನ್ಲಾಕ್ಕ್ ಮಾಡಿದಾಗ ಕಣ್ಣಿಗೆ ರಪ್ಪನೆ ಬಡಿದಿದ್ದು - \"u r a cheater. esht life na haal madiddiya? its enough. get outta my lyf.\" ಮೊದಲಿನಿಂದಲೂ ಯಾರೊಟ್ಟಿಗೂ ಬೇರೆಯದೇ ಬೆಳೆದಿದ್ದವಳು ಈಗ ತನ್ನ ಜೀವನವನ್ನು ಹಂಚಿಕೊಳ್ಳಬೇಕೆಂದು ನಿರ್ಧರಿಸಿದ್ದವನ ಮೇಲೆ ಅನುಮಾನ ಭುಗಿಲೆದ್ದಿತ್ತು. So it led to something worse. ಕೆಲವೊಂದು ಬಾರಿ ಇಂತಹ ಮುಗ್ಧ ಮನಸ್ಸುಗಳು ಅತೀವ ಚಿಂತನೆಗೊಳಪಟ್ಟಾಗ, ಮುಂದಾಗುವ ಕೃತ್ಯಗಳು ಘೋರವಾಗಿರುತ್ತವೆ, ಊಹೆಗೆ ನಿಲುಕದಷ್ಟು.",[11,118,119],{},"ಭಾರ್ಗವ ಬಾಗಿಲು ತೆರೆಯುವುದನ್ನು ಗಮನಿಸಿ ಮೊಬೈಲನ್ನು ಅದೇ ಸ್ಥಳದಲ್ಲಿರಿಸಿದಳು. ಕರ್ಚೀಫ್ ತೆಗೆದು ಬಾಂಡ್-ಏಡ್ ಹಾಕಿದ ಭಾರ್ಗವ ಉಳಿದ ಕೆಲಸ ಮುಗಿಸಲು ಅಡುಗೆ ಮನೆಯತ್ತ ಹೆಜ್ಜೆ ಹಾಕಿದ. ಕೆಲಸದಲ್ಲಿ ತಲ್ಲೀನನಾಗಿದ್ದ ಅವನ ತಲೆಯ ಹಿಂಬಾಗಕ್ಕೆ ಬಲವಾದ ಪೆಟ್ಟೊಂದು ಬಿತ್ತು. ತಲೆಯನ್ನು ಅದುಮಿ ಹಿಡಿದು ನೆಲಕ್ಕೆ ಕುಸಿದು ಬಿದ್ದವನಿಗೆ ಹೆಣ್ಣು ಆಕೃತಿಯೊಂದು ಅವನತ್ತಲೇ ನೋಡುತ್ತಿರುವುದು ಅಸ್ಪಷ್ಟವಾಗಿ ಗೋಚರಿಸಿತು.",[11,121,122],{},"ಕಬ್ಬಿಣದ ಸಲಾಕೆಯನ್ನು ನೆಲ್ಲಕ್ಕೆ ಕುಕ್ಕಿದ ಶ್ರುತಿ ಅಪಾರ್ಟ್ಮೆಂಟಿನ ಟೆರೇಸ್ ಗೆ ಕೊಂಡೊಯ್ಯುವ ಮೆಟ್ಟಿಲಿನತ್ತ ಹೆಜ್ಜೆ ಹಾಕಿದಳು.  ​ಪರಿಧಿ ಎಷ್ಟೇ ದೊಡ್ಡದಾಗಿದ್ದರೂ ಮೊದಲ ಹಾಗೂ ಕೊನೆಯ ಬಿಂದು ಸೇರಲೆ ಬೇಕು. ಇದು ವೃತ್ತ.....!",[11,124,125],{},[126,127,128],"strong",{},"THE END",{"title":130,"searchDepth":131,"depth":131,"links":132},"",2,[],"\u002Fstories\u002Fcircle.jpg",null,"​C = 2πr","https:\u002F\u002Fdrive.google.com\u002Ffile\u002Fd\u002F0B32WA8IcsE3QWk9Zc3RBOXc3dVk\u002Fview?usp=drive_link&resourcekey=0-0N5ZQM6SVSRDqyoHADQgpA","md",{},true,"\u002Fstories\u002Fcircle",{"title":5,"description":135},"stories\u002Fcircle","2VsRBD1DeIMgwPIkcl19XXlhLqOwrvRcS_CSz1iChEM",[145,165,184,198,217,236,255,274,293,315,334,352,371,390,408,427,446,464,481,501,518],{"id":146,"title":147,"author":134,"body":148,"category":155,"cover":156,"date":134,"description":157,"extension":137,"meta":158,"navigation":139,"path":159,"readingTime":160,"seo":161,"slug":162,"stem":163,"__hash__":164},"summary\u002Fstories\u002Fsummary\u002Fantima-teerpu.md","ಅಂತಿಮ ತೀರ್ಪು",{"type":8,"value":149,"toc":153},[150],[11,151,152],{},"ಪಶ್ಚಿಮ ಘಟ್ಟದ ಮಡಿಲಲ್ಲಿ ಮಳೆಯ ರಾತ್ರಿ, ಬ್ರಿಟಿಷರ ಕಾಲದ ಮರದ ಗೆಸ್ಟ್ ಹೌಸ್‌ನಲ್ಲಿ ನಾಲ್ಕು ಜನ ಸೇರಿದ್ದಾರೆ — ಶತಾಯುಷಿ ಜಮೀನ್ದಾರ ಶಂಕರೇಗೌಡರ ವಿಲ್ ಓದಲು. ಆದರೆ ಪತ್ರಕರ್ತ ಸೂರ್ಯ ಅವರ ಸಾವಿನ ಹಿಂದಿನ ಸತ್ಯವನ್ನು ಬಯಲಿಗೆಳೆಯುತ್ತಾನೆ — ದ್ವೇಷ, ದುರಾಸೆ, ಮತ್ತು ವಂಚನೆಯ ಕಥೆ.",{"title":130,"searchDepth":131,"depth":131,"links":154},[],"Fiction","\u002Fstories\u002Fantima-teerpu\u002Fimage1.png","ಪಶ್ಚಿಮ ಘಟ್ಟದ ಮಡಿಲಲ್ಲಿ ಒಂದು ಮಳೆಯ ರಾತ್ರಿ, ನಾಲ್ಕು ಜನರ ನಡುವೆ ನಡೆಯುವ ಸತ್ಯದ ಹುಡುಕಾಟ.",{},"\u002Fstories\u002Fantima-teerpu","15 min read",{"title":147,"description":157},"antima-teerpu","stories\u002Fsummary\u002Fantima-teerpu","5bvz31rQvy2g65GyMknlrAXYwTU3enXlIMDosxhsitQ",{"id":166,"title":167,"author":134,"body":168,"category":155,"cover":175,"date":134,"description":176,"extension":137,"meta":177,"navigation":139,"path":178,"readingTime":179,"seo":180,"slug":181,"stem":182,"__hash__":183},"summary\u002Fstories\u002Fsummary\u002Fchadurangadaata.md","ಚದುರಂಗದಾಟ",{"type":8,"value":169,"toc":173},[170],[11,171,172],{},"ಚದುರಂಗದ ಮಣೆಯ ಮೇಲೆ ರಾಜನನ್ನು ಬೀಳಿಸಲು ಕಾಲಾಳು ಕೊನೆಯವರೆಗೂ ಹೋರಾಡಲೇಬೇಕು. ಮಾಜಿ ಗೃಹ ಸಚಿವ ಅಭಯ್ ಪಾಟೀಲನ ಭ್ರಷ್ಟಾಚಾರದ ಸಾಮ್ರಾಜ್ಯದ ವಿರುದ್ಧ ಸೂರ್ಯನ ಅಂತಿಮ ಯುದ್ಧ. ತನ್ನ ತಂದೆಯ ಕೊಲೆಯ ಸತ್ಯವನ್ನು ಬಯಲಿಗೆಳೆಯಲು ಅಧಿಕಾರದ ಕೋಟೆಯನ್ನು ಭೇದಿಸಬೇಕಾದ ಅಪಾಯಕಾರಿ ಆಟ.",{"title":130,"searchDepth":131,"depth":131,"links":174},[],"\u002Fstories\u002Fchadurangadaata\u002Fimage1.png","ಭ್ರಷ್ಟ ರಾಜಕಾರಣಿ ಅಭಯ್ ಪಾಟೀಲನ ವಿರುದ್ಧ ಸೂರ್ಯನ ಅಂತಿಮ ಹೋರಾಟ.",{},"\u002Fstories\u002Fchadurangadaata","25 min read",{"title":167,"description":176},"chadurangadaata","stories\u002Fsummary\u002Fchadurangadaata","Njiw1HA5zNacgYqKNRMiGSfd6g5v0hWwugWGpcsNYg4",{"id":185,"title":5,"author":134,"body":186,"category":134,"cover":133,"date":134,"description":193,"extension":137,"meta":194,"navigation":139,"path":140,"readingTime":134,"seo":195,"slug":21,"stem":196,"__hash__":197},"summary\u002Fstories\u002Fsummary\u002Fcircle.md",{"type":8,"value":187,"toc":191},[188],[11,189,190],{},"ಗಡಿಯಾರದ ಚಿಕ್ಕ ಮುಳ್ಳು ೧೨ನ್ನು ದಾಟಿ ೧ರತ್ತ ಧಾಪುಗಾಲಿಡುತ್ತಿತ್ತು. ಅವಳು ತನ್ನ ಅಪಾರ್ಟ್‌ಮೆಂಟ್‌ನ ಟೆರೇಸ್ನ ತುತ್ತತುದಿಯಲ್ಲಿ ಕತ್ತಲಿನಲ್ಲಿ ಕರಗಿ ಲೀನವಾಗಿ ನಿಂತಿದ್ದಾಳೆ. 'u r a cheater. esht life na haal madiddiya? its enough. get outta my lyf' - ವಾತ್ಸಾಪ್ನಲ್ಲಿ ಇದ್ದ ಆ ಸಂದೇಶವನ್ನೇ ಮತ್ತೆ ಮತ್ತೆ ಓದಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.",{"title":130,"searchDepth":131,"depth":131,"links":192},[],"Secrets, love, betrayal and revenge",{"download":136},{"title":5,"description":193},"stories\u002Fsummary\u002Fcircle","mNGN67ELByqoMCB9OVwOBrwZX-kKbwDcnF7Tee8p_78",{"id":199,"title":200,"author":134,"body":201,"category":134,"cover":208,"date":134,"description":209,"extension":137,"meta":210,"navigation":139,"path":212,"readingTime":134,"seo":213,"slug":214,"stem":215,"__hash__":216},"summary\u002Fstories\u002Fsummary\u002Fenendu-hesaridali.md","ಏನೆಂದು ಹೆಸರಿಡಲಿ",{"type":8,"value":202,"toc":206},[203],[11,204,205],{},"\"ಎಂದೆಂದಿಗೂ ನಿನ್ನ ನೆನಪುಗಳು ನಮ್ಮೊಂದಿಗೆ\"\nನನ್ನೆದುರು ಇದ್ದ ಗೋರಿಕಲ್ಲಿನ ಮೇಲೆ ಕೆತ್ತಲ್ಪಟ್ಟಿತ್ತು. ಅಂತ್ಯಸಂಸ್ಕಾರ ಮುಗಿದು ಗಂಟೆಗಳೇ ಕಳೆದು ಹೋಗಿದ್ದರೂ ನಾನಿನ್ನೂ ಮನೆಗೆ ಮರಳದೇ ಅಲ್ಲೇ ನಿಂತಿದ್ದೆ. ನೀನು ನನಗೆ ತುಂಬಾನೇ ಸ್ಪೆಶಲ್. ನೀನೇ ತಾನೇ ನನಗೆ ಲೈಫ್ ಅಂದ್ರೆ ಏನು ಅಂತ realize ಆಗೋ ಹಾಗೆ ಮಾಡಿದ್ದು. ಈ ಪ್ರಪಂಚ ಮೇಲಿನಿಂದ ನೋಡೋಕೆ ಮಾತ್ರ ಬಣ್ಣದ ಬುಗರಿ. ಆದ್ರೆ ಇಂದೊಂದು ಕತ್ತಲೆಯ ಕೂಪ. ಅದರಲ್ಲಿ ನೀನು ಒಮ್ಮೆ ಬೀಳತೊಡಗಿದೆ. ಯಾರು ನಿನ್ನ ಸಹಾಯಕ್ಕೆ ಬರಲಿಲ್ಲ. ಎಲ್ಲರೂ ಸುಮ್ಮನೆ ನೋಡುತ್ತಾ ನಿಲ್ಲುವವರೇ. ನೀನು ಆ ಕಂದಕಕ್ಕೆ ಹಾರಿದೆ. ನೀನು ನನ್ನನು ಕೈಹಿಡಿದು ಎತ್ತಲು ನೋಡಿದೆ. ಸಾಧ್ಯವಾಗಲಿಲ್ಲ. ಉಫ್... ನೀನು ನೆಲವನ್ನು ತಲುಪಿದೆ. But ನಾನು ಬೀಳುತ್ತಲೇ ಇದ್ದೇನೆ.",{"title":130,"searchDepth":131,"depth":131,"links":207},[],"\u002Fstories\u002Fenendu-hesaridali.jpg","I miss you and you'll wait for me",{"download":211},"https:\u002F\u002Fdrive.google.com\u002Ffile\u002Fd\u002F1kgDPpPL3spc4_mznGpJlOz3iYNrKwzDk\u002Fview?usp=drive_link","\u002Fstories\u002Fenendu-hesaridali",{"title":200,"description":209},"enendu-hesaridali","stories\u002Fsummary\u002Fenendu-hesaridali","5SFT8Th-uQFlfP2SVlLO7ApAf6BtpTZlGEu8AAhfqTE",{"id":218,"title":219,"author":134,"body":220,"category":155,"cover":227,"date":134,"description":228,"extension":137,"meta":229,"navigation":139,"path":230,"readingTime":231,"seo":232,"slug":233,"stem":234,"__hash__":235},"summary\u002Fstories\u002Fsummary\u002Fgaajina-mane.md","ಗಾಜಿನ ಮನೆ",{"type":8,"value":221,"toc":225},[222],[11,223,224],{},"ಗಾಜಿನ ಮನೆಯಲ್ಲಿ ವಾಸಿಸುವವರು ಕಲ್ಲು ಎಸೆಯುವುದಿಲ್ಲ, ಜಿಗಿಯುವುದೂ ಇಲ್ಲ — ಅವರನ್ನು ತಳ್ಳಲಾಗುತ್ತದೆ. ಟೆಕ್-ನೋವಾ ಸಂಸ್ಥೆಯ ಸಿ.ಇ.ಒ ವಿಕ್ರಮ್ ಸಿಂಗ್ ನಲವತ್ತನೇ ಮಹಡಿಯಿಂದ ಬಿದ್ದು ಸತ್ತಾಗ ಪೋಲೀಸರು ಆತ್ಮಹತ್ಯೆ ಎಂದರು. ಆದರೆ ಸೂರ್ಯ ಸ್ಮಾರ್ಟ್ ಹೋಮ್ ಸಿಸ್ಟಮ್‌ನ ಡಿಜಿಟಲ್ ಹೆಜ್ಜೆಗುರುತುಗಳಲ್ಲಿ ಪರ್ಫೆಕ್ಟ್ ಕೊಲೆಯ ಸಾಕ್ಷ್ಯ ಕಂಡುಕೊಳ್ಳುತ್ತಾನೆ.",{"title":130,"searchDepth":131,"depth":131,"links":226},[],"\u002Fstories\u002Fgaajina-mane\u002Fimage1.png","ಟೆಕ್-ನೋವಾ ಸಂಸ್ಥೆಯ ಸಿ.ಇ.ಒ ವಿಕ್ರಮ್ ಸಿಂಗ್ ಅವರ ಅನುಮಾನಾಸ್ಪದ ಸಾವಿನ ಹಿಂದಿನ ಡಿಜಿಟಲ್ ಸತ್ಯವನ್ನು ಸೂರ್ಯ ಬಯಲಿಗೆಳೆಯುತ್ತಾನೆ.",{},"\u002Fstories\u002Fgaajina-mane","12 min read",{"title":219,"description":228},"gaajina-mane","stories\u002Fsummary\u002Fgaajina-mane","PQMdJ-c1qqFr7EatDEoO_eM98pUzTBwqkEJxhs9ynNo",{"id":237,"title":238,"author":134,"body":239,"category":134,"cover":246,"date":134,"description":247,"extension":137,"meta":248,"navigation":139,"path":250,"readingTime":134,"seo":251,"slug":252,"stem":253,"__hash__":254},"summary\u002Fstories\u002Fsummary\u002Fhrudaya-halagide.md","ಹೃದಯ ಹಾಳಾಗಿದೆ",{"type":8,"value":240,"toc":244},[241],[11,242,243],{},"ಹೇಗೆ ಪ್ರಾರಂಭಿಸಬೇಕು ಅಂತಾನೆ ತಿಳೀತಿಲ್ಲ. ಆದ್ರೂ ಇವತ್ತು ನಿನಗೆ ಹೇಳ್ಬೇಕಾದದ್ದು ತುಂಬಾ ಇದೆ. ನಮ್ಮ ಸ್ನೇಹಕ್ಕೆ ಹತ್ತು ವರ್ಷಕ್ಕಿಂತ ಜಾಸ್ತಿ ವಯಸ್ಸಾದರೂ ನಮಗೆ ನಾವೇ friends ಅಂತ ಹೇಳಿಕೊಂಡು ದಶಕವಾಯಿತು ಅಷ್ಟೇ. ನಾವಿಬ್ಬರೂ ಯಾವಾಗ್ಲೂ ಜಗಳ ಮಾಡ್ತಾನೇ ಇದ್ರು ಅದು ಯಾವತ್ತೂ serious ಅಂತ ಹೇಳೋ ಮಟ್ಟಕ್ಕೆ ಹೋಗಿಲ್ಲ.",{"title":130,"searchDepth":131,"depth":131,"links":245},[],"\u002Fstories\u002Fhrudaya-halagide.jpeg","A story about a man who is trying to find himself.",{"download":249},"https:\u002F\u002Fdrive.google.com\u002Ffile\u002Fd\u002F1mr0nZQGddeAnSV75l8uvsoU_A1ON9mGl\u002Fview?usp=drive_link","\u002Fstories\u002Fhrudaya-halagide",{"title":238,"description":247},"hrudaya-halagide","stories\u002Fsummary\u002Fhrudaya-halagide","FiBcSVIZE9moOFVLu-z_8BPyvYAIl-wcgdFBwcq487I",{"id":256,"title":257,"author":134,"body":258,"category":155,"cover":265,"date":134,"description":266,"extension":137,"meta":267,"navigation":139,"path":269,"readingTime":231,"seo":270,"slug":271,"stem":272,"__hash__":273},"summary\u002Fstories\u002Fsummary\u002Fin-the-ruins-of-memory.md","In The Ruins of Memory",{"type":8,"value":259,"toc":263},[260],[11,261,262],{},"On the day before the new system was set to go live, he pulled his hoodie low over his head, put on his headphones, and sat down to hammer out the code.\nHe typed furiously, and no one dared interrupt. With his hoodie up, he was in the zone—performing brain surgery on a single task: finishing the project.\nHe received his death sentence with pure calm: textbook case of frontotemporal dementia at age 32. While his family wept beside him, he complimented the doctor's wedding ring.\nShe found herself scrutinizing every interaction: Was that his last joke? His last laugh? His last hug? She never knew.\nHowever diminished, a person lingers in the shattered roadways of their mind.",{"title":130,"searchDepth":131,"depth":131,"links":264},[],"\u002Fstories\u002Fin-the-ruins-of-memory.png","A story of love, loss, and what remains.",{"download":268,"featured":139},"https:\u002F\u002Fdrive.google.com\u002Ffile\u002Fd\u002F1Su6ZeXXcmDqxXjZdJXZ_wucAbxS7RRTs\u002Fview?usp=sharing","\u002Fstories\u002Fin-the-ruins-of-memory",{"title":257,"description":266},"in-the-ruins-of-memory","stories\u002Fsummary\u002Fin-the-ruins-of-memory","afgaUHURlM8PVjlZcXpnFJLIqtwHAT0dqU6UgieH-lE",{"id":275,"title":276,"author":134,"body":277,"category":155,"cover":284,"date":134,"description":285,"extension":137,"meta":286,"navigation":139,"path":287,"readingTime":288,"seo":289,"slug":290,"stem":291,"__hash__":292},"summary\u002Fstories\u002Fsummary\u002Fkoneya-tappoppige.md","ಕೊನೆಯ ತಪ್ಪೊಪ್ಪಿಗೆ",{"type":8,"value":278,"toc":282},[279],[11,280,281],{},"ಸತ್ಯ ಸಾಯುವುದಿಲ್ಲ — ಅದು ಕೆಲವೊಮ್ಮೆ ಮಾತು ಕಳೆದುಕೊಂಡು ಮೌನವಾಗಿ ನರಳುತ್ತಿರುತ್ತದೆ. 20 ವರ್ಷಗಳ ಹಿಂದೆ ತನ್ನ ತಂದೆ ಪತ್ರಕರ್ತ ರಘುವೀರ್ ಅವರ ಆಕಸ್ಮಿಕ ಸಾವಿನ ಹಿಂದಿನ ಸತ್ಯವನ್ನು ಹುಡುಕುತ್ತಾ ಸೂರ್ಯ ನಿವೃತ್ತ ಡಿಸಿಪಿ ಶಂಕರ್ ಪ್ರಸಾದ್ ಅವರ ಬಳಿ ಬರುತ್ತಾನೆ — ಅವರ ಮಾತು ನಿಂತಿದೆ, ಆದರೆ ಕಣ್ಣಲ್ಲಿರುವ ಸತ್ಯ ಇನ್ನೂ ಜೀವಂತವಿದೆ.",{"title":130,"searchDepth":131,"depth":131,"links":283},[],"\u002Fstories\u002Fkoneya-tappoppige\u002Fimage1.png","ಪತ್ರಕರ್ತ ಸೂರ್ಯ, ತನ್ನ ತಂದೆಯ 20 ವರ್ಷಗಳ ಹಿಂದಿನ ಸಾವಿನ ರಹಸ್ಯವನ್ನು ಬೇಧಿಸಲು ಮೌನವಾಗಿರುವ ನಿವೃತ್ತ ಪೊಲೀಸ್ ಅಧಿಕಾರಿಯ ಕೊನೆಯ ತಪ್ಪೊಪ್ಪಿಗೆಯನ್ನು ಹುಡುಕುತ್ತಾನೆ.",{},"\u002Fstories\u002Fkoneya-tappoppige","10 min read",{"title":276,"description":285},"koneya-tappoppige","stories\u002Fsummary\u002Fkoneya-tappoppige","ZUpdtOBz2GTy6kInN6lZTiWe0BtN3HzJAoJ3btz2nM8",{"id":294,"title":295,"author":134,"body":296,"category":134,"cover":306,"date":134,"description":307,"extension":137,"meta":308,"navigation":139,"path":310,"readingTime":134,"seo":311,"slug":312,"stem":313,"__hash__":314},"summary\u002Fstories\u002Fsummary\u002Flast-secret-of-a-merchant.md","The Last Secret of A Merchant",{"type":8,"value":297,"toc":304},[298,301],[11,299,300],{},"ಹರಿ ಎಂದಿನಂತೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಮನೆಯಿಂದ ಹೊರ ನಡೆದಾಗ ಬೆಳಗಿನ ಸೂರ್ಯನ ಕಿರಣ ಚರಕಪುರವನ್ನು ಇನ್ನೂ ಸಂಪೂರ್ಣವಾಗಿ ಆವರಿಸಿರಲಿಲ್ಲ.\nಅವನ ಕ್ರಮಬದ್ಧ ಜೀವನದಲ್ಲಿ ಅನಿರೀಕ್ಷಿತ ತಿರುವು ಕಾದಿತ್ತು. ತಿಳಿನೀರಿನ ಆಳದಲ್ಲಿ ಕಪ್ಪನೆಯ ಆಕೃತಿಯೊಂದು ಅಲುಗಾಡದೆ ಮಲಗಿತ್ತು.\nಆ ಕತ್ತಲೆಯ ಆಕೃತಿ ಯಾರು? ಅದು ಅಲ್ಲಿ ಏಕೆ ಕಾಯುತ್ತಿದೆ? ಮತ್ತು ಮುಖ್ಯವಾಗಿ, ಅದಕ್ಕೂ ಈತನಿಗೂ ಏನಾದರೂ ಸಂಬಂಧವಿದೆಯೇ?",[11,302,303],{},"...\nಈ ಹತ್ಯೆಯನ್ನು ಬೇಧಿಸಲು ಮತ್ತೆ ಬಂದಿದ್ದಾರೆ ಸರಳಾಕ್ಷ ಹುಲಿಮೀಸೆ ಮತ್ತು ಇನ್ಸ್ಪೆಕ್ಟರ್ ಗೋಪಾಲಾಚಾರ್ಯ.",{"title":130,"searchDepth":131,"depth":131,"links":305},[],"\u002Fstories\u002Flast-secret-of-merchant\u002F1.jpg","A thread from investigations of Saralaksha Hulimeese",{"download":309},"https:\u002F\u002Fdrive.google.com\u002Ffile\u002Fd\u002F1Bb2n_tSbjWgddGuJ2e3VMfszRw7DNo7a\u002Fview?usp=sharing","\u002Fstories\u002Flast-secret-of-a-merchant",{"title":295,"description":307},"last-secret-of-a-merchant","stories\u002Fsummary\u002Flast-secret-of-a-merchant","hj6M3HUsw6N4QdRkli72J3rPyuAurI-VC_T8JFBPsMw",{"id":316,"title":317,"author":134,"body":318,"category":134,"cover":325,"date":134,"description":326,"extension":137,"meta":327,"navigation":139,"path":329,"readingTime":134,"seo":330,"slug":331,"stem":332,"__hash__":333},"summary\u002Fstories\u002Fsummary\u002Flove-triangle.md","Love Triangle",{"type":8,"value":319,"toc":323},[320],[11,321,322],{},"ಹಲವರು ಸೋಲ್ತಾರೆ, ಕೆಲವರು ಗೆಲ್ತಾರೆ...\nಒಬ್ಬರಿಗೇ ಇಬ್ಬಿಬ್ಬರು ಲೈನ್ ಹೊಡೀತಾರೆ...\nಸ್ನೇಹ.. ದ್ವೇಷಕ್ಕೆ ತಿರುಗುತ್ತೆ...\nಮತ್ತೊಬ್ಬರ ಗೆಲುವು ಇನ್ನೊಂದು ಮನಸ್ಸಿಗೆ ಏಟು ಕೊಡುತ್ತೆ...\nಕೊನೆಯಲ್ಲಿ ಅಂತ್ಯ ಹೇಗೆ ಇರುತ್ತೆ..?",{"title":130,"searchDepth":131,"depth":131,"links":324},[],"\u002Fstories\u002Flove_triangle.jpg","A story about a love triangle",{"download":328},"https:\u002F\u002Fdrive.google.com\u002Ffile\u002Fd\u002F1P7eNcBAqDl8LVPeTi_nOk53jTjqduqg8\u002Fview?usp=drive_link","\u002Fstories\u002Flove-triangle",{"title":317,"description":326},"love-triangle","stories\u002Fsummary\u002Flove-triangle","k_Ce6VbWPVtWj3f5-7ZCg7eVD_uS5D6z7txaqgraBOQ",{"id":335,"title":336,"author":134,"body":337,"category":134,"cover":344,"date":134,"description":247,"extension":137,"meta":345,"navigation":139,"path":347,"readingTime":134,"seo":348,"slug":349,"stem":350,"__hash__":351},"summary\u002Fstories\u002Fsummary\u002Fmaleyali-joteyali.md","ಮಳೆಯಲಿ... ಜೊತೆಯಲಿ...",{"type":8,"value":338,"toc":342},[339],[11,340,341],{},"ಮಲೆನಾಡಿನ ಮಡಿಲ್ಲಲಿರುವ ಒಂದು ಊರು. ಮಳೆಗಾಲದ ಸಮಯ. ತಿಂಗಳಿನಿಂದ ಸುರಿಯುತ್ತಿದ್ದ ಕುಂಭಧ್ರೋಣ ಮಳೆ ನಾಲ್ಕೈದು ದಿನಗಳಿಂದ ಸ್ವಲ್ಪ ಕಡಿಮೆಯಾಗಿತ್ತು. ಆದರೂ ಮೋಡಗಳು ಮಾತ್ರ ಆಗಸದಲ್ಲಿ ಈಜಾಡಿಕೊಂಡೇ ಇದ್ದವು. ಸಂಜೆ ನಾಲ್ಕಕ್ಕೇ ಆರು ಗಂಟೆಯಾದಂತೆ ತೋರುತ್ತಿತ್ತು.",{"title":130,"searchDepth":131,"depth":131,"links":343},[],"\u002Fstories\u002Fmaleyali_joteyali.png",{"download":346},"https:\u002F\u002Fdrive.google.com\u002Ffile\u002Fd\u002F1j1mXlObPWALrmXaqj1ZAn0EeOIgjxTyN\u002Fview?usp=drive_link","\u002Fstories\u002Fmaleyali-joteyali",{"title":336,"description":247},"maleyali-joteyali","stories\u002Fsummary\u002Fmaleyali-joteyali","mRsOCjDK6XIE6KUDbJkXVBBK_U1fJnAtvZMoo_7O-_4",{"id":353,"title":354,"author":134,"body":355,"category":155,"cover":362,"date":134,"description":363,"extension":137,"meta":364,"navigation":139,"path":365,"readingTime":366,"seo":367,"slug":368,"stem":369,"__hash__":370},"summary\u002Fstories\u002Fsummary\u002Fmooka-devara-sannidhi.md","ಮೂಕ ದೇವರ ಸನ್ನಿಧಿ",{"type":8,"value":356,"toc":360},[357],[11,358,359],{},"ಶಾಪಗಳು ಕಲ್ಲಿನ ವಿಗ್ರಹಗಳಲ್ಲಿರುವುದಿಲ್ಲ — ಅವು ಮನುಷ್ಯರ ಹೃದಯದಲ್ಲಿ ಹುದುಗಿರುವ ದ್ವೇಷ ಮತ್ತು ದುರಾಸೆಗಳಲ್ಲಿರುತ್ತವೆ. ಹಂಪಿಯ ಉತ್ಖನನ ಸ್ಥಳದಲ್ಲಿ ಖ್ಯಾತ ಇತಿಹಾಸಕಾರ ಡಾ. ಅವಿನಾಶ್ ಆಚಾರ್ಯ ರಾತ್ರೋರಾತ್ರಿ ಕಣ್ಮರೆಯಾದಾಗ, ಸೂರ್ಯ ಮೂಕ ದೇವರ ಶಾಪದ ಹಿಂದಿನ ಮಾನವ ದುರಾಸೆಯ ಸತ್ಯವನ್ನು ಹುಡುಕುತ್ತಾನೆ.",{"title":130,"searchDepth":131,"depth":131,"links":361},[],"\u002Fstories\u002Fmooka-devara-sannidhi\u002Fimage1.png","ಹಂಪಿಯ ಉತ್ಖನನ ಸ್ಥಳದಲ್ಲಿ ಖ್ಯಾತ ಇತಿಹಾಸಕಾರರ ನಿಗೂಢ ಕಣ್ಮರೆ ಮತ್ತು ಶತಮಾನಗಳ ಹಳೆಯ ರಹಸ್ಯ.",{},"\u002Fstories\u002Fmooka-devara-sannidhi","18 min read",{"title":354,"description":363},"mooka-devara-sannidhi","stories\u002Fsummary\u002Fmooka-devara-sannidhi","ZJq1qdd7dFnuvaxcSJQQpKO1KEldRAZAnP0i-u2YajE",{"id":372,"title":373,"author":134,"body":374,"category":381,"cover":382,"date":134,"description":247,"extension":137,"meta":383,"navigation":139,"path":385,"readingTime":160,"seo":386,"slug":387,"stem":388,"__hash__":389},"summary\u002Fstories\u002Fsummary\u002Fnever-again.md","Never Again",{"type":8,"value":375,"toc":379},[376],[11,377,378],{},"\"Amrutha.. I think you need a hug.\", Vijay consoled sobbing Amrutha. Suddenly she hugged him tightly. He has no words to say. But he can only make her feel comfort. Even in the middle of crowd she is flying in dreamworld.. Because of him. But they don't know that something big coming to end everything... and lead to a big devastating turn in life so that they'll never meet again...\"",{"title":130,"searchDepth":131,"depth":131,"links":380},[],"Romance","\u002Fstories\u002Fnever_again.jpg",{"download":384},"https:\u002F\u002Fdrive.google.com\u002Ffile\u002Fd\u002F1fBUU5T2X36AYW8mmsLF8bM9C9BgOFu3O\u002Fview?usp=drive_link","\u002Fstories\u002Fnever-again",{"title":373,"description":247},"never-again","stories\u002Fsummary\u002Fnever-again","RD8xDk97BlK7AdXfWw7o3QP2Zny0QqWQhldATF4D33I",{"id":391,"title":392,"author":134,"body":393,"category":134,"cover":400,"date":134,"description":247,"extension":137,"meta":401,"navigation":139,"path":403,"readingTime":134,"seo":404,"slug":405,"stem":406,"__hash__":407},"summary\u002Fstories\u002Fsummary\u002Fninagagi.md","He's Waiting... ನಿನಗಾಗಿ",{"type":8,"value":394,"toc":398},[395],[11,396,397],{},"ಎಂಟು ವರ್ಷಗಳ ಅವನ ನಿರೀಕ್ಷೆ ಸುಳ್ಳಾಗಲಲಿಲ್ಲ. ಅವನನ್ನು ನೋಡಲು ಅವಳು ಬರುತ್ತಿದ್ದಾಳೆ. ಇವನ ಸಂತೋಷವನ್ನು ಅಳೆಯಲು ಮಾಪನಗಳೇ ಇರಲಿಲ್ಲ. ಮಾತನಾಡಲು ಸಾವಿರಾರು ವಿಷಯಗಳಿದ್ದರೂ ಸ್ವರವೇ ಹೊರಡಲಿಲ್ಲ. ಅವಳನ್ನೇ ಧಿಟ್ಟಿಸಿ ನೋಡುತ್ತಿದ್ದ ಆದಿತ್ಯ. ​ಕೈಯಲ್ಲಿ ಚೆಂಗುಲಾಬಿಯನ್ನು ಹಿಡಿದು ನಿಂತಿದ್ದ ಅವಳನ್ನೇ ನೋಡುತ್ತಿದ್ದಾನೆ. ಅವಳು ಮತ್ತೆ ಬಂದಿದ್ದಾಳೆ.",{"title":130,"searchDepth":131,"depth":131,"links":399},[],"\u002Fstories\u002Fninagagi.jpg",{"download":402},"https:\u002F\u002Fdrive.google.com\u002Ffile\u002Fd\u002F0B32WA8IcsE3QR0NrVUt2WnBrQzA\u002Fview?usp=drive_link&resourcekey=0-pZBUoKOJJ25AwL_ZLgAZsw","\u002Fstories\u002Fninagagi",{"title":392,"description":247},"ninagagi","stories\u002Fsummary\u002Fninagagi","aNh_UqH3UxCoF_d0TVrKNRixnZ3AE99uTU60660rU54",{"id":409,"title":410,"author":134,"body":411,"category":134,"cover":418,"date":134,"description":419,"extension":137,"meta":420,"navigation":139,"path":422,"readingTime":134,"seo":423,"slug":424,"stem":425,"__hash__":426},"summary\u002Fstories\u002Fsummary\u002Fpriti-anirikshita.md","ಪ್ರೀತಿ ಅನಿರೀಕ್ಷಿತ",{"type":8,"value":412,"toc":416},[413],[11,414,415],{},"ಸುಂದರ ಹೂತೋಟದ ಮೂಲೆಯಲ್ಲೊಂದು ಶತಮಾನಗಳಿಂದ ಬೆಳೆದು ನಿಂತಿರುವ ದೊಡ್ಡದೊಂದು ಮಾವಿನ ಮರ. ಮರದ ಕೆಳಗೆ ದಶಕಗಳ ಹಿಂದೆ ಮಾಡಿದ ಒಂದು ಕಲ್ಲಿನ ಬೆಂಚು. ಮಳೆಗಾಲದಲ್ಲಿ ಪಾಚಿಗಟ್ಟಿದ್ದ ಕುರುಹುಗಳು ಈಗಲೂ ಗೋಚರಿಸುತ್ತಿವೆ. ಅದರ ಮೇಲೆ ಅವಳು ಕುಳಿತಿದ್ದಾಳೆ, ಕೃಶಗೊಂಡಿರುವ ದೇಹ, ಇಂಗಿ ಹೋಗಿರುವ ಕಣ್ಣುಗಳು, ಬಣ್ಣ ಮಾಸಿದ ಸೀರೆ. ಹೌದು. ಅದು ಅವಳೇ. ಶ್ವೇತಾ ರಾವ್ ಮೊಣಕಾಲುಗಳ ಮೇಲೆ ಗಲ್ಲವಿಟ್ಟುಕೊಂಡು ಶೂನ್ಯ ನೋಟ ಬೀರುತ್ತಾ ಏನನ್ನೋ ಗಾಢವಾಗಿ ಯೋಚಿಸುತ್ತಾ ಕುಳಿತಿದ್ದಾಳೆ. ಅನಿರೀಕ್ಷಿತ ಪ್ರೇಮ ಕಥೆ; ಅವಳ ಜೀವನದ ವಿಚಿತ್ರ ವ್ಯಥೆ. ಅದು ಅವಳದೇ LOVE STORY.",{"title":130,"searchDepth":131,"depth":131,"links":417},[],"\u002Fstories\u002Flove_unexpected.jpg","A story of a girl",{"download":421},"https:\u002F\u002Fdrive.google.com\u002Ffile\u002Fd\u002F0B32WA8IcsE3Qc245UUNyOGZqSkE\u002Fview?usp=drive_link&resourcekey=0-bYxuGTKr5w_Y0zAIT_5e4g","\u002Fstories\u002Fpriti-anirikshita",{"title":410,"description":419},"priti-anirikshita","stories\u002Fsummary\u002Fpriti-anirikshita","ebki43G9sgx15zRvRjAOqO_GRdyei8mwE4mBPaNW6yw",{"id":428,"title":429,"author":134,"body":430,"category":134,"cover":437,"date":134,"description":438,"extension":137,"meta":439,"navigation":139,"path":441,"readingTime":134,"seo":442,"slug":443,"stem":444,"__hash__":445},"summary\u002Fstories\u002Fsummary\u002Ftears-of-a-martyr.md","Tears of a Martyr",{"type":8,"value":431,"toc":435},[432],[11,433,434],{},"ರಘು ತನ್ನ ತಲೆಯನ್ನು ಎತ್ತಲು ಹೆಣಗಾಡಿದ. ಆದರೆ ಮೂರು ಗುಂಡುಗಳನ್ನು ಹಿಡಿದಿಟ್ಟುಕೊಂಡಿದ್ದ ದೇಹ ಅವನಿಗೆ ಸಹಕರಿಸುವ ಸ್ಥಿತಿಯಲ್ಲಿರಲಿಲ್ಲ. ಕತ್ತಲೆ ತುಂಬಿದ ಕಣ್ಣುಗಳು ಕಾಲಘಟ್ಟದಲ್ಲಿ ಹಿಂದಕ್ಕೆ ಕೊಂಡೊಯ್ದವು. ಯುದ್ಧಭೂಮಿಯಲ್ಲಿ ಮಲಗಿ ನೋವುಣ್ಣುತ್ತಿದ್ದರೂ ದೂರದ ಕರುನಾಡಿನಲ್ಲಿ, ಮನೆಯ ಅಂಗಳದಲ್ಲಿ ನಿಂತಿದ್ದ ತಾಯಿಯ ನೆನಪು ತುಟಿಯ ಮೇಲೆ ನಗುವನ್ನು ತರಿಸಿತ್ತು. ನೆನಪಿನ ಮಸುಕಾದ ಹಾದಿಯಲ್ಲಿ ಯೋಚನೆ ಸಾಗಿತ್ತು. ಮುಚ್ಚಿದ ಕಣ್ಣುಗಳಲ್ಲಿ ರಚಿತವಾಗುತ್ತಿದ್ದ ಚಿತ್ರ ನಿಧಾನವಾಗಿ ನೈಜತೆಗೆ ತಿರುಗುತ್ತಿತ್ತು. ತನ್ನ ತಾಯಿಯ ಮುಗ್ದತೆ, ಪ್ರೀತಿ, ಅಕ್ಕರೆ ಮತ್ತು ಕಾಳಜಿಯನ್ನು ಮತ್ತೆ ಅನುಭವಿಸಲು ಸಮಯದಲ್ಲಿ ಭೂತದತ್ತ ಸಾಗಿದನು.",{"title":130,"searchDepth":131,"depth":131,"links":436},[],"\u002Fstories\u002Ftears_of_martyr.jpg","A soldier never cries...",{"download":440},"https:\u002F\u002Fdrive.google.com\u002Ffile\u002Fd\u002F1wbwxQG1UwQbHv4krUiclaSOjcBrgEiCH\u002Fview?usp=drive_link","\u002Fstories\u002Ftears-of-a-martyr",{"title":429,"description":438},"tears-of-a-martyr","stories\u002Fsummary\u002Ftears-of-a-martyr","OI6yx-tNoLBAY5stlElf7e8aljVbmBsmmQpPgiqMhwA",{"id":447,"title":448,"author":134,"body":449,"category":134,"cover":456,"date":134,"description":247,"extension":137,"meta":457,"navigation":139,"path":459,"readingTime":134,"seo":460,"slug":461,"stem":462,"__hash__":463},"summary\u002Fstories\u002Fsummary\u002Fthe-burning-desires.md","The Burning Desires",{"type":8,"value":450,"toc":454},[451],[11,452,453],{},"“Kill him now… Now or never…!!! ಇದೇ ನಿನ್ನ ನಾಶವಾದ ಬದುಕಿಗೆ ಏಕೈಕ ನ್ಯಾಯಯುತ ಪರಿಹಾರ.” - ಮತ್ತೆ ಮತ್ತೆ ತಲೆಯೊಳಗೆ ಪ್ರತಿಧ್ವನಿಸುತ್ತಿರುವ ವಾಕ್ಯ. ಮುಗ್ದಮುಖದ ಸ್ವಾತಿ ಅಡುಗೆ ಕೋಣೆಯಿಂದ ಹೊರಬಂದಳು. ಕೈಯಲ್ಲಿ ಹಿಡಿದ ಚಾಕುವಿನ ಮೊನಚು ಕೆಂಪು ಬಣ್ಣದ ದೀಪದಲ್ಲಿ ಹೊಳೆಯುತ್ತಿತ್ತು. ಕೋಣೆಯಲ್ಲಿ ಮಂಚದ ಮೇಲೆ ಅಂಗಾತವಾಗಿ ಸುಸ್ತಾಗಿ ಮಲಗಿದ್ದ ವ್ಯಕ್ತಿಯತ್ತ ಹೆಜ಼್ಜ಼ೆ ಹಾಕಿದಳು.",{"title":130,"searchDepth":131,"depth":131,"links":455},[],"\u002Fstories\u002Fthe_burning_desires.jpg",{"download":458},"https:\u002F\u002Fdrive.google.com\u002Ffile\u002Fd\u002F14moaOF_uQRHiY2BnHAoSm5sOvAQe9pCq\u002Fview?usp=drive_link","\u002Fstories\u002Fthe-burning-desires",{"title":448,"description":247},"the-burning-desires","stories\u002Fsummary\u002Fthe-burning-desires","U66gtrgO4eTFbWDmLsjcNhHh6NkX7hsE4NGB3cJ7wj4",{"id":465,"title":466,"author":134,"body":467,"category":134,"cover":474,"date":134,"description":247,"extension":137,"meta":475,"navigation":139,"path":476,"readingTime":134,"seo":477,"slug":478,"stem":479,"__hash__":480},"summary\u002Fstories\u002Fsummary\u002Fthe-gentleman.md","The Gentleman",{"type":8,"value":468,"toc":472},[469],[11,470,471],{},"ಹುಟ್ಟುತ್ತಾ ಎಲ್ಲರೂ ಸಾಮಾನ್ಯರಾಗಿಯೇ ಹುಟ್ಟುತ್ತಾರೆ. ಆದರೆ ನಂತರ ಮರೆಯಲಾರದ ಇತಿಹಾಸ ಸೃಷ್ಟಿಸಿ ಮರೆಯಾಗುತ್ತಾರೆ. ಬದುಕಿನಲ್ಲಿ ನಡೆಯುವ ಕೆಲವು ಘಟನೆಗಳು ಜೀವನ ಪಥವನ್ನೇ ಬದಲಾಯಿಸಿ ಬಿಡುತ್ತದೆ. ಕೆಲವು ತಿರುವುಗಳು ಸಾಮಾನ್ಯರನ್ನು ಅಸಾಮಾನ್ಯರನ್ನಾಗಿಸಿದರೆ, ಕೆಲವರು ಸರ್ವನಾಶವಾಗಿ ಬಿಡುತ್ತಾರೆ. THE GENTLEMANನಂತಹವರು ದೃವ ತಾರೆಗಳಾಗುತ್ತಾರೆ.",{"title":130,"searchDepth":131,"depth":131,"links":473},[],"\u002Fstories\u002Fthe_gentleman.png",{},"\u002Fstories\u002Fthe-gentleman",{"title":466,"description":247},"the-gentleman","stories\u002Fsummary\u002Fthe-gentleman","QZNQywBOnWn06AJidhUyozqX62O_EpDL2YqmMD6VC6c",{"id":482,"title":483,"author":134,"body":484,"category":491,"cover":492,"date":134,"description":247,"extension":137,"meta":493,"navigation":139,"path":495,"readingTime":496,"seo":497,"slug":498,"stem":499,"__hash__":500},"summary\u002Fstories\u002Fsummary\u002Fthe-photograph.md","The Photograph",{"type":8,"value":485,"toc":489},[486],[11,487,488],{},"\"ನೀವು ನನಗೆ actually ಏನಾಗಿದೆ ಅಂತ ಹೇಳೋದಕ್ಕೆ ಪ್ರಯತ್ನ ಪಡ್ತಿದ್ದೀರ? ಅಂದ್ರೆ ನನಗೆ....?”\n\"ಹೌದು ಹೌದು. ನಾನು ನಿಮಗೆ already ಹೇಳಿದೀನಿ ಇದು ಹೇಗೆ ಅಂತ\", ಎಂದು ತನ್ನ ಹೇಳಿಕೆಯನ್ನು ನನಗೆ ಮನವರಿಕೆ ಮಾಡಿಸಲು ಪ್ರಯತ್ನಿಸುತ್ತಿದ್ದರು ಡಾ. ಅಭಿಷೇಕ್ ನಾಯರ್.\n“But, ನಾನು ಹೇಗೆ ನನ್ನ ಪಾಸ್ಟ್ ಲೈಫ್ ನೋಡ್ಲಿಕ್ಕೆ ಸಾಧ್ಯ. ನೆನಪು ಮಾಡ್ಕೋಳ್ ಬಹುದು. ಬಟ್ ರಿಪೀಟ್ ಆಗಿ ಅದೇ ಸೀನ್ ಅಲ್ಲಿ ನಾನೇ ಇರ್ತೀನಿ. ಅದು ಹೇಗೆ ಸಾಧ್ಯ?\"\n​\"ಹಾಹಾ. ಸಾಧ್ಯ ಇದೆ. ಏಕಾಗ್ರತೆಯೇ ಇವೆಲ್ಲದಕ್ಕೂ ಮೂಲ. You just need to concentrate. ಅಷ್ಟೇ\"",{"title":130,"searchDepth":131,"depth":131,"links":490},[],"Mystery","\u002Fstories\u002Fthe_photograph.jpg",{"download":494},"https:\u002F\u002Fdrive.google.com\u002Ffile\u002Fd\u002F1OJt5pPjhG7hwXQPWsqTHmNk2ZlbEj-sP\u002Fview?usp=drive_link","\u002Fstories\u002Fthe-photograph","8 min read",{"title":483,"description":247},"the-photograph","stories\u002Fsummary\u002Fthe-photograph","Df98woawS5BTjeN7b_ifUAf607usb5FjOPed4EiJmKg",{"id":502,"title":503,"author":134,"body":504,"category":134,"cover":511,"date":134,"description":247,"extension":137,"meta":512,"navigation":139,"path":513,"readingTime":134,"seo":514,"slug":515,"stem":516,"__hash__":517},"summary\u002Fstories\u002Fsummary\u002Fy2121.md","Y2121",{"type":8,"value":505,"toc":509},[506],[11,507,508],{},"ಈ ವಿಶ್ವದ ನಿರ್ಮಾಣವಾಗಿ ಸರಿ ಸುಮಾರು 5 ಬಿಲಿಯನ್ ವರ್ಷಗಳ ಒಂದು ಅಂದಾಜು ಲೆಕ್ಕಾಚಾರವಾಗಿದ್ದರೂ ಭೂಮಿಯ ಮೇಲೆ ಜೀವಿಗಳ ಉಗಮವಾಗಿ ಕೆಲವೇ ಮಿಲಿಯನ್ ವರ್ಷಗಳಾಗಿವೆ. ಭೂಮಿಯ ಮೇಲಿನ ವಾತಾವರಣ ಬದಲಾಗುತ್ತ ಬಂದಂತೆ ಜೀವಿಗಳ ದೇಹಗಳಲ್ಲಿ ಬದಲಾವಣೆಗಳಾಗುತ್ತಾ ಬಂದವು. ಈ ವಿಕಾಸಗಳಲ್ಲಿ ಪ್ರಕೃತಿಯ ವಿನಾಶಕ್ಕೆ ಕಾರಣವಾಗುವ ಮನುಷ್ಯನ ವಿಕಾಸವೂ ಒಂದು. ಬೆಂಕಿಯುಂಡೆಯಾಗಿದ್ದ ಗೋಳವೊಂದು ತಂಪಾಗಿ ಹಸಿರು ಪೃಥ್ವಿಯಾಗಿತ್ತು. ಈಗ ಮತ್ತೆ ಬೆಂಕಿಯುಂಡೆಯಾಗುವತ್ತ ಸಾಗುವಂತೆ ಮಾಡಿದ್ದು ನಾವೇ ಅಲ್ಲವೇ?",{"title":130,"searchDepth":131,"depth":131,"links":510},[],"\u002Fstories\u002Fy2121.jpg",{},"\u002Fstories\u002Fy2121",{"title":503,"description":247},"y2121","stories\u002Fsummary\u002Fy2121","R7vCmaFUDrS9OOuikeNO8ht587BhUsm5lkQpnrpbHTE",{"id":519,"title":520,"author":134,"body":521,"category":134,"cover":528,"date":134,"description":247,"extension":137,"meta":529,"navigation":139,"path":531,"readingTime":134,"seo":532,"slug":533,"stem":534,"__hash__":535},"summary\u002Fstories\u002Fsummary\u002Fyou.md","You",{"type":8,"value":522,"toc":526},[523],[11,524,525],{},"ಒಂದು ನೆರಳು ಮನೆಯಿಂದ ಹೊರಗೆ ಓಡಿದಂತಾಯಿತು. ಆತನ ದಿಗ್ಬ್ರಮೆ ಉಲ್ಬಣಗೊಳ್ಳುವಂತೆ ಮನೆಯ ಮುಂದಿನ ಬಾಗಿಲಿನ ಲಾಕ್ ತೆರೆದಿತ್ತು. ಯಾರೋ ಈಗ ತಾನೇ ಗಟ್ಟಿಯಾಗಿ ಎಳೆದಂತೆ ಬಾಗಿಲು ಅಲುಗಾಡುತ್ತಿತ್ತು. ಬಾಗಿಲಿನ ಸನಿಹಕ್ಕೆ ಹೋಗಿ ಹೊರಕ್ಕೆ ಇಣುಕಿ ನೋಡಿದ. ಅಪಾರ್ಟ್‌ಮೆಂಟಿನ ವರಾಂಡದ ಲೈಟ್ ಎಲ್ಲವೂ ಉರಿಯುತ್ತಿತ್ತು. ಆ ದಾರಿ ಸಹಜವಾಗಿಯೇ ತೋರಿತು. ಹಠಾತ್ ಚಲನವಲನದ ಸೂಚನೆಗಳು ಕಂಡುಬರಲಿಲ್ಲ.",{"title":130,"searchDepth":131,"depth":131,"links":527},[],"\u002Fstories\u002Fyou.jpg",{"download":530},"https:\u002F\u002Fdrive.google.com\u002Ffile\u002Fd\u002F1SbDfLnsQLth6bFB3glT_B48PKOX_reMT\u002Fview?usp=drive_link","\u002Fstories\u002Fyou",{"title":520,"description":247},"you","stories\u002Fsummary\u002Fyou","Q-NVxMSQTaAMKT0yetwJmGJ7APwMfy8HY_K5W8eqSHg",1781856567841]