[{"data":1,"prerenderedAt":476},["ShallowReactive",2],{"story-maleyali-joteyali":3,"summary-all":85},{"id":4,"title":5,"author":6,"body":7,"cover":17,"date":75,"description":25,"download":76,"extension":77,"meta":78,"navigation":79,"path":80,"seo":81,"slug":82,"stem":83,"__hash__":84},"stories\u002Fstories\u002Fmaleyali-joteyali.md","ಮಳೆಯಲಿ... ಜೊತೆಯಲಿ...","Akshara Hegde",{"type":8,"value":9,"toc":71},"minimark",[10,18,23,26,32,35,38,41,44,47,50,52,55,57,60,63,65,68],[11,12,13],"p",{},[14,15],"img",{"alt":16,"src":17},"Maleyali Joteyali","\u002Fstories\u002Fmaleyali_joteyali.png",[11,19,20],{},[21,22,5],"strong",{},[11,24,25],{},"ಅಂದು ಅವಳೊಂದಿಗೆ.. ಇಂದು ಅವಳ ನೆನಪಿನೊಂದಿಗೆ..",[11,27,28],{},[29,30,31],"em",{},"Written On: Feb-14, 2016",[11,33,34],{},"ಮಲೆನಾಡಿನ ಮಡಿಲ್ಲಲಿರುವ ಒಂದು ಊರು. ಮಳೆಗಾಲದ ಸಮಯ. ತಿಂಗಳಿನಿಂದ ಸುರಿಯುತ್ತಿದ್ದ ಕುಂಭಧ್ರೋಣ ಮಳೆ ನಾಲ್ಕೈದು ದಿನಗಳಿಂದ ಸ್ವಲ್ಪ ಕಡಿಮೆಯಾಗಿತ್ತು. ಆದರೂ ಮೋಡಗಳು ಮಾತ್ರ ಆಗಸದಲ್ಲಿ ಈಜಾಡಿಕೊಂಡೇ ಇದ್ದವು. ಸಂಜೆ ನಾಲ್ಕಕ್ಕೇ ಆರು ಗಂಟೆಯಾದಂತೆ ತೋರುತ್ತಿತ್ತು.",[36,37],"hr",{},[11,39,40],{},"ಅವನು ಮನೆಯಿಂದ ಹೊರಬಂದು ಆಕಾಶದೆಡೆಗೆ ದಿಟ್ಟಿಸಿದ. ಮೋಡಗಳು ಸೂರ್ಯನನ್ನು ಮರೆಮಾಡಿದ್ದವು. ಮಂಜು ಮುಸುಕಿದ ಹೊರಗಿನ ವಾತಾವರಣ, ಇವನ ಮನಸಿನೊಳಗಿನ ಹವಾಮಾನವೆರಡು ಒಂದೇ ಎಂಬಂತಾಗಿತ್ತು. ಒಮ್ಮೆ ನಿಡಿದಾದ ಉಸಿರುಬಿಟ್ಟು ತೋಟದೊಳಗೆ ಹೆಜ್ಜೆಯಿಟ್ಟ.",[11,42,43],{},"ಮಳೆ ಬರುವ ಸೂಚನೆಯಿದ್ದರೂ ನದಿಯತ್ತ ಮುಖ ಮಾಡಿ ನಿಧಾನವಾಗಿ ಸಾಗಿದ. ತೋಟವನ್ನು ದಾಟುವುದರೊಳಗಾಗಿ ಮಳೆ ಸಣ್ಣಗೆ ಜಿನುಗ ತೊಡಗಿತು. ಅದರ ಪರಿವೇ ಇವನಿಗಿಲ್ಲ. ಬೇಲಿಯನ್ನು ದಾಟಿ ಹೊರಕ್ಕಡಿಯಿಟ್ಟಾಗ ಕಂಡಿದ್ದು ದೂರದಲ್ಲಿದ್ದ ನದಿ. ಒಮ್ಮೆ ಸುತ್ತಲೂ ಕಣ್ಣು ಹಾಯಿಸಿದಾಗ ಕಂಡಿದ್ದು ಹಸಿರು ತುಂಬಿದ ಸುಂದರ ಕಾಡು. ಇದೇ ಕಾಡಿನಲ್ಲಿಯೇ ಅಲ್ಲವೇ ತಾನು ಸಣ್ಣವನಿದ್ದಾಗ ಸುತ್ತಾಡಿದ್ದು, ಮನಸಿಗೆ ಸಂತೋಷ ಕೊಡುತ್ತಿದ್ದ ಜಾಗವೀಗೇಕೆ ನೀರಸವೆನಿಸುತ್ತಿದೆ ಅಂದುಕೊಂಡ.",[11,45,46],{},"ಕೆಲಸಕ್ಕೆ ನಾಲ್ಕು ದಿನಗಳ ರಜೆ ಹಾಕಿ ಮನೆಗೆ ಬಂದಿದ್ದನಾತ. ಮೂರು ದಿನಗಳಾಗಲೇ ಮನೆಯೊಳಗೇ ಕೂತು ಕಳೆದಿದ್ದ. ಚಿಕ್ಕಂದಿನಲ್ಲಿ ಓಡಾಡುತ್ತಿದ್ದ ಗುಡ್ಡ-ಬೆಟ್ಟ, ಕಾಡಿನ ಕಡೆಯೂ ಹೋಗುವ ಮನಸ್ಸು ಮಾಡಿರಲಿಲ್ಲ. ನಾಳೆ ಬೆಳಗ್ಗೆ ಮತ್ತೆ ಕೆಲಸಕ್ಕೆ ಹಿಂದಿರುಗಬೇಕು ಎಂದು ಮನಸಿಗೆ ಬರುತ್ತಲೇ ಏಕೋ ಕಸಿವಿಸಿಗೊಂಡಿದ್ದ. ನದಿಯ ಕಡೆಗೊಮ್ಮೆ ಹೋಗಿ ಬರೋಣವೆಂದು ತೀರ್ಮಾನಿಸಿ ಹೊರಗೆ ಬಂದಿದ್ದ.",[11,48,49],{},"ಮಳೆ ಜೋರಾಗಿ ಸುರಿಯತೊಡಗಿತು. ಆದರೂ ಮುಂದುವರೆದು ನದಿಯ ದಂಡೆಯ ತುತ್ತತುದಿಯಲ್ಲಿ ಹೋಗಿ ನಿಂತು ಕೆಳಗೆ ನೋಡಿದ. ನದಿಯು ತನ್ನೊಳಗೆ ಬಾ ಎಂಬಂತೆ ಕರೆಯುವಂತೆನಿಸಿತು. ಹಾಗೇ ನೀರನ್ನೇ ಧಿಟ್ಟಿಸಿ ನೋಡುತ್ತಾ ನಿಂತುಬಿಟ್ಟ. ನಿಧಾನವಾಗಿ ಅಲ್ಲಿ ಅವಳ ಬಿಂಬ ಮೂಡತೊಡಗಿತು.",[36,51],{},[11,53,54],{},"ಅವಳ ಮುಖದತ್ತಲೇ ಮುಗುಳ್ನಗುತ್ತಾ ನೋಡುತ್ತಿದ್ದ. ಆಕೆ ಇದಾವುದರ ಕಡೆ ಗಮನವೀಯದೆ ಮೊಬೈಲ್ ಹಿಡಿದು ಫೇಸ್ಬುಕ್ಕಿನಲ್ಲಿ ಬಂದಿದ್ದ ಸಂದೇಶಗಳಿಗೆ ಮರುತ್ತರವನ್ನು ಕಳುಹಿಸುವುದರಲ್ಲೇ ಮಗ್ನಳಾಗಿದ್ದಳು. ಇವನು ಅವಳನ್ನು ನೋಡುವ ಕಾರ್ಯವನ್ನು ಮುಂದುವರೆಸಿದ್ದ. ಭೋರೆಂದು ಬೀಸುತ್ತಿದ್ದ ಗಾಳಿಯಾಗಲೀ, ಒಂದೇ ಸಮನೆ ಅರ್ಧ ಗಂಟೆಯಿಂದ ಸುರಿಯುತ್ತಿದ್ದ ಅಬ್ಬರದ ಮಳೆಯಾಗಲಿ ಇಬ್ಬರ ಕೆಲಸಕ್ಕೂ ವಿಘ್ನ ತಂದಿರಲಿಲ್ಲ.",[36,56],{},[11,58,59],{},"ತನ್ನ ಯೋಚನಾ ಲಹರಿಯಿಂದ ವಾಸ್ತವಿಕ ಜಗತ್ತಿಗೆ ಹೊರಬರುತ್ತಿದ್ದಂತೆಯೇ ಚಳಿಯಾವರಿಸಿತು. ಕೈಗಳನ್ನು ಬಿಗಿಯಾಗಿ ದೇಹಕ್ಕೆ ಅಮುಕಿ ಹಿಡಿದುಕೊಂಡು ನದಿಯತ್ತ ನೋಡಿದ. ಕತ್ತಲಿನಲ್ಲಿ ಏನೂ ಕಾಣಿಸದಿದ್ದರೂ ಹರಿವಿನ ದನಿಯನ್ನು ಆಲಿಸಿದ. ಪ್ರಶಾಂತವಾಗಿ ಪ್ರವಹಿಸುತ್ತಿದ್ದ ನೀರಿನ ಜುಳುಜುಳು ನಿನಾದ ಕಿವಿಗೆ ಇಂಪಾಗಿ ಬಡಿಯುತ್ತಿತ್ತು. ತನ್ನ ಮನಸ್ಸು ಕೂಡ ಈಗ ನದಿಯ ನೀರಿನಂತೆಯೇ ಶಾಂತಸ್ಥಿತಿಗೆ ಮರಳಿದೆ, ಎಲ್ಲವೂ ಸ್ವಲ್ಪ ದಿನದಲ್ಲಿ ಸರಿಯಾಗಬಹುದು ಎಂದುಕೊಂಡ.",[11,61,62],{},"ಮಳೆ ಯಾವಾಗಲೋ ನಿಂತು ಹೋಗಿತ್ತು. ತಾನಿಲ್ಲಿಗೆ ಬಂದು ಬಹಳ ಸಮಯವಾಗಿದೆ, ಮನೆಯಲ್ಲಿ ಅಮ್ಮ ಗಾಬರಿಪಡುತ್ತಿರಬಹುದು, ತಾನೆಷ್ಟು ಹೊತ್ತು ಯೋಚನೆ ಮಾಡುತ್ತಾ ನಿಂತುಬಿಟ್ಟೆ ಎಂದು ತನ್ನಷ್ಟಕ್ಕೆ ನಗುತ್ತಾ ತಲೆ ಕೆರೆದುಕೊಂಡು ಹಿಂದೆ ತಿರುಗಿ ಹತ್ತು ಹೆಜ್ಜೆಗಳನ್ನಿಡುವಷ್ಟರಲ್ಲಿ ಏನೋ ನೆನಪಾಗಿ ಜೇಬಿಗೆ ಕೈ ಹಾಕಿದ. ಅದಿನ್ನೂ ಅಲ್ಲೇ ಭದ್ರವಾಗಿತ್ತು. ಮತ್ತೆ ತಾನು ಹೊಸ ಜೀವನವನ್ನು ಆರಂಬಿಸಬೇಕಾದರೆ ಅವಳ ನೆನಪಿನ ಯಾವುದೇ ವಸ್ತುಗಳೂ ಇರಬಾರದೆಂದುಕೊಂಡು ಕೊನೆಯ ಬಾರಿಗೆಂಬಂತೆ ಕೈಯಲ್ಲಿಡಿದು ಎದೆಗೊಮ್ಮೆ ಒತ್ತಿಕೊಂಡು ನಿಡಿದಾದ ಉಸಿರುಬಿಟ್ಟ.",[36,64],{},[11,66,67],{},"ಸಮಯ ರಾತ್ರಿ ಒಂಬತ್ತಾದರೂ ಮನೆಗೆ ಮಗ ಬಾರದಿರುವುದನ್ನು ನೋಡಿ, ಹೆಂಡತಿಯ ಒತ್ತಾಯದ ಮೇರೆಗೆ ಹೊರಟಿದ್ದರು ರಾಮರಾಯರು. ನದಿಯ ಬಳಿ ಹೋಗಿಬರುತ್ತೇನೆಂದು ಹೇಳಿ ಹೋಗಿದ್ದರಿಂದ ನೇರವಾಗಿ ದಂಡೆಯ ಬಳಿಯೇ ಸಾಗಿದರು. ಟಾರ್ಚ್ ಬೆಳಕನ್ನು ಹಾಯಿಸಿದಾಗ ಅವರಿಗೆ ಕಂಡದ್ದು ಆತ ಯಾವಾಗಲೂ ತನ್ನ ಬಳಿಯೇ 24 ಗಂಟೆಯೂ ಇಟ್ಟುಕೊಂಡಿರುತ್ತಿದ್ದ ಕೆಂಪು ಬಣ್ಣದ ಟೆಡ್ಡಿ-ಬಿಯರ್ ಕೀ-ಚೈನ್ ಮಾತ್ರ.",[11,69,70],{},"ಹಾಗಾದರೆ ಅವನು ಧುಮುಕಿದ್ದು ಹಳೆಯ ನೆನಪುಗಳ ಲೋಕದೊಳಗೋ....? ಅಥವಾ ನದಿಯ ನೀರಿನಲ್ಲೋ.....? ಅವಳ ನೆನಪು ಒಂದು ವಸ್ತುವಿನ ಅಂತ್ಯದಿಂದ ಮಾಸದೆಂದೆನಿಸಿ ತನ್ನ ಅಂತ್ಯವನ್ನೇ ಹಾಡಿದನೇ?",{"title":72,"searchDepth":73,"depth":73,"links":74},"",2,[],null,"https:\u002F\u002Fdrive.google.com\u002Ffile\u002Fd\u002F1j1mXlObPWALrmXaqj1ZAn0EeOIgjxTyN\u002Fview?usp=drive_link","md",{},true,"\u002Fstories\u002Fmaleyali-joteyali",{"title":5,"description":25},"maleyali-joteyali","stories\u002Fmaleyali-joteyali","bFGXLvSgNlfOXkTC4a1Pk2r9TcDEYIQ6NgH3dPm78KM",[86,106,125,144,163,182,201,220,239,261,280,292,311,330,348,367,386,404,421,441,458],{"id":87,"title":88,"author":75,"body":89,"category":96,"cover":97,"date":75,"description":98,"extension":77,"meta":99,"navigation":79,"path":100,"readingTime":101,"seo":102,"slug":103,"stem":104,"__hash__":105},"summary\u002Fstories\u002Fsummary\u002Fantima-teerpu.md","ಅಂತಿಮ ತೀರ್ಪು",{"type":8,"value":90,"toc":94},[91],[11,92,93],{},"ಪಶ್ಚಿಮ ಘಟ್ಟದ ಮಡಿಲಲ್ಲಿ ಮಳೆಯ ರಾತ್ರಿ, ಬ್ರಿಟಿಷರ ಕಾಲದ ಮರದ ಗೆಸ್ಟ್ ಹೌಸ್‌ನಲ್ಲಿ ನಾಲ್ಕು ಜನ ಸೇರಿದ್ದಾರೆ — ಶತಾಯುಷಿ ಜಮೀನ್ದಾರ ಶಂಕರೇಗೌಡರ ವಿಲ್ ಓದಲು. ಆದರೆ ಪತ್ರಕರ್ತ ಸೂರ್ಯ ಅವರ ಸಾವಿನ ಹಿಂದಿನ ಸತ್ಯವನ್ನು ಬಯಲಿಗೆಳೆಯುತ್ತಾನೆ — ದ್ವೇಷ, ದುರಾಸೆ, ಮತ್ತು ವಂಚನೆಯ ಕಥೆ.",{"title":72,"searchDepth":73,"depth":73,"links":95},[],"Fiction","\u002Fstories\u002Fantima-teerpu\u002Fimage1.png","ಪಶ್ಚಿಮ ಘಟ್ಟದ ಮಡಿಲಲ್ಲಿ ಒಂದು ಮಳೆಯ ರಾತ್ರಿ, ನಾಲ್ಕು ಜನರ ನಡುವೆ ನಡೆಯುವ ಸತ್ಯದ ಹುಡುಕಾಟ.",{},"\u002Fstories\u002Fantima-teerpu","15 min read",{"title":88,"description":98},"antima-teerpu","stories\u002Fsummary\u002Fantima-teerpu","5bvz31rQvy2g65GyMknlrAXYwTU3enXlIMDosxhsitQ",{"id":107,"title":108,"author":75,"body":109,"category":96,"cover":116,"date":75,"description":117,"extension":77,"meta":118,"navigation":79,"path":119,"readingTime":120,"seo":121,"slug":122,"stem":123,"__hash__":124},"summary\u002Fstories\u002Fsummary\u002Fchadurangadaata.md","ಚದುರಂಗದಾಟ",{"type":8,"value":110,"toc":114},[111],[11,112,113],{},"ಚದುರಂಗದ ಮಣೆಯ ಮೇಲೆ ರಾಜನನ್ನು ಬೀಳಿಸಲು ಕಾಲಾಳು ಕೊನೆಯವರೆಗೂ ಹೋರಾಡಲೇಬೇಕು. ಮಾಜಿ ಗೃಹ ಸಚಿವ ಅಭಯ್ ಪಾಟೀಲನ ಭ್ರಷ್ಟಾಚಾರದ ಸಾಮ್ರಾಜ್ಯದ ವಿರುದ್ಧ ಸೂರ್ಯನ ಅಂತಿಮ ಯುದ್ಧ. ತನ್ನ ತಂದೆಯ ಕೊಲೆಯ ಸತ್ಯವನ್ನು ಬಯಲಿಗೆಳೆಯಲು ಅಧಿಕಾರದ ಕೋಟೆಯನ್ನು ಭೇದಿಸಬೇಕಾದ ಅಪಾಯಕಾರಿ ಆಟ.",{"title":72,"searchDepth":73,"depth":73,"links":115},[],"\u002Fstories\u002Fchadurangadaata\u002Fimage1.png","ಭ್ರಷ್ಟ ರಾಜಕಾರಣಿ ಅಭಯ್ ಪಾಟೀಲನ ವಿರುದ್ಧ ಸೂರ್ಯನ ಅಂತಿಮ ಹೋರಾಟ.",{},"\u002Fstories\u002Fchadurangadaata","25 min read",{"title":108,"description":117},"chadurangadaata","stories\u002Fsummary\u002Fchadurangadaata","Njiw1HA5zNacgYqKNRMiGSfd6g5v0hWwugWGpcsNYg4",{"id":126,"title":127,"author":75,"body":128,"category":75,"cover":135,"date":75,"description":136,"extension":77,"meta":137,"navigation":79,"path":139,"readingTime":75,"seo":140,"slug":141,"stem":142,"__hash__":143},"summary\u002Fstories\u002Fsummary\u002Fcircle.md","Circle",{"type":8,"value":129,"toc":133},[130],[11,131,132],{},"ಗಡಿಯಾರದ ಚಿಕ್ಕ ಮುಳ್ಳು ೧೨ನ್ನು ದಾಟಿ ೧ರತ್ತ ಧಾಪುಗಾಲಿಡುತ್ತಿತ್ತು. ಅವಳು ತನ್ನ ಅಪಾರ್ಟ್‌ಮೆಂಟ್‌ನ ಟೆರೇಸ್ನ ತುತ್ತತುದಿಯಲ್ಲಿ ಕತ್ತಲಿನಲ್ಲಿ ಕರಗಿ ಲೀನವಾಗಿ ನಿಂತಿದ್ದಾಳೆ. 'u r a cheater. esht life na haal madiddiya? its enough. get outta my lyf' - ವಾತ್ಸಾಪ್ನಲ್ಲಿ ಇದ್ದ ಆ ಸಂದೇಶವನ್ನೇ ಮತ್ತೆ ಮತ್ತೆ ಓದಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.",{"title":72,"searchDepth":73,"depth":73,"links":134},[],"\u002Fstories\u002Fcircle.jpg","Secrets, love, betrayal and revenge",{"download":138},"https:\u002F\u002Fdrive.google.com\u002Ffile\u002Fd\u002F0B32WA8IcsE3QWk9Zc3RBOXc3dVk\u002Fview?usp=drive_link&resourcekey=0-0N5ZQM6SVSRDqyoHADQgpA","\u002Fstories\u002Fcircle",{"title":127,"description":136},"circle","stories\u002Fsummary\u002Fcircle","mNGN67ELByqoMCB9OVwOBrwZX-kKbwDcnF7Tee8p_78",{"id":145,"title":146,"author":75,"body":147,"category":75,"cover":154,"date":75,"description":155,"extension":77,"meta":156,"navigation":79,"path":158,"readingTime":75,"seo":159,"slug":160,"stem":161,"__hash__":162},"summary\u002Fstories\u002Fsummary\u002Fenendu-hesaridali.md","ಏನೆಂದು ಹೆಸರಿಡಲಿ",{"type":8,"value":148,"toc":152},[149],[11,150,151],{},"\"ಎಂದೆಂದಿಗೂ ನಿನ್ನ ನೆನಪುಗಳು ನಮ್ಮೊಂದಿಗೆ\"\nನನ್ನೆದುರು ಇದ್ದ ಗೋರಿಕಲ್ಲಿನ ಮೇಲೆ ಕೆತ್ತಲ್ಪಟ್ಟಿತ್ತು. ಅಂತ್ಯಸಂಸ್ಕಾರ ಮುಗಿದು ಗಂಟೆಗಳೇ ಕಳೆದು ಹೋಗಿದ್ದರೂ ನಾನಿನ್ನೂ ಮನೆಗೆ ಮರಳದೇ ಅಲ್ಲೇ ನಿಂತಿದ್ದೆ. ನೀನು ನನಗೆ ತುಂಬಾನೇ ಸ್ಪೆಶಲ್. ನೀನೇ ತಾನೇ ನನಗೆ ಲೈಫ್ ಅಂದ್ರೆ ಏನು ಅಂತ realize ಆಗೋ ಹಾಗೆ ಮಾಡಿದ್ದು. ಈ ಪ್ರಪಂಚ ಮೇಲಿನಿಂದ ನೋಡೋಕೆ ಮಾತ್ರ ಬಣ್ಣದ ಬುಗರಿ. ಆದ್ರೆ ಇಂದೊಂದು ಕತ್ತಲೆಯ ಕೂಪ. ಅದರಲ್ಲಿ ನೀನು ಒಮ್ಮೆ ಬೀಳತೊಡಗಿದೆ. ಯಾರು ನಿನ್ನ ಸಹಾಯಕ್ಕೆ ಬರಲಿಲ್ಲ. ಎಲ್ಲರೂ ಸುಮ್ಮನೆ ನೋಡುತ್ತಾ ನಿಲ್ಲುವವರೇ. ನೀನು ಆ ಕಂದಕಕ್ಕೆ ಹಾರಿದೆ. ನೀನು ನನ್ನನು ಕೈಹಿಡಿದು ಎತ್ತಲು ನೋಡಿದೆ. ಸಾಧ್ಯವಾಗಲಿಲ್ಲ. ಉಫ್... ನೀನು ನೆಲವನ್ನು ತಲುಪಿದೆ. But ನಾನು ಬೀಳುತ್ತಲೇ ಇದ್ದೇನೆ.",{"title":72,"searchDepth":73,"depth":73,"links":153},[],"\u002Fstories\u002Fenendu-hesaridali.jpg","I miss you and you'll wait for me",{"download":157},"https:\u002F\u002Fdrive.google.com\u002Ffile\u002Fd\u002F1kgDPpPL3spc4_mznGpJlOz3iYNrKwzDk\u002Fview?usp=drive_link","\u002Fstories\u002Fenendu-hesaridali",{"title":146,"description":155},"enendu-hesaridali","stories\u002Fsummary\u002Fenendu-hesaridali","5SFT8Th-uQFlfP2SVlLO7ApAf6BtpTZlGEu8AAhfqTE",{"id":164,"title":165,"author":75,"body":166,"category":96,"cover":173,"date":75,"description":174,"extension":77,"meta":175,"navigation":79,"path":176,"readingTime":177,"seo":178,"slug":179,"stem":180,"__hash__":181},"summary\u002Fstories\u002Fsummary\u002Fgaajina-mane.md","ಗಾಜಿನ ಮನೆ",{"type":8,"value":167,"toc":171},[168],[11,169,170],{},"ಗಾಜಿನ ಮನೆಯಲ್ಲಿ ವಾಸಿಸುವವರು ಕಲ್ಲು ಎಸೆಯುವುದಿಲ್ಲ, ಜಿಗಿಯುವುದೂ ಇಲ್ಲ — ಅವರನ್ನು ತಳ್ಳಲಾಗುತ್ತದೆ. ಟೆಕ್-ನೋವಾ ಸಂಸ್ಥೆಯ ಸಿ.ಇ.ಒ ವಿಕ್ರಮ್ ಸಿಂಗ್ ನಲವತ್ತನೇ ಮಹಡಿಯಿಂದ ಬಿದ್ದು ಸತ್ತಾಗ ಪೋಲೀಸರು ಆತ್ಮಹತ್ಯೆ ಎಂದರು. ಆದರೆ ಸೂರ್ಯ ಸ್ಮಾರ್ಟ್ ಹೋಮ್ ಸಿಸ್ಟಮ್‌ನ ಡಿಜಿಟಲ್ ಹೆಜ್ಜೆಗುರುತುಗಳಲ್ಲಿ ಪರ್ಫೆಕ್ಟ್ ಕೊಲೆಯ ಸಾಕ್ಷ್ಯ ಕಂಡುಕೊಳ್ಳುತ್ತಾನೆ.",{"title":72,"searchDepth":73,"depth":73,"links":172},[],"\u002Fstories\u002Fgaajina-mane\u002Fimage1.png","ಟೆಕ್-ನೋವಾ ಸಂಸ್ಥೆಯ ಸಿ.ಇ.ಒ ವಿಕ್ರಮ್ ಸಿಂಗ್ ಅವರ ಅನುಮಾನಾಸ್ಪದ ಸಾವಿನ ಹಿಂದಿನ ಡಿಜಿಟಲ್ ಸತ್ಯವನ್ನು ಸೂರ್ಯ ಬಯಲಿಗೆಳೆಯುತ್ತಾನೆ.",{},"\u002Fstories\u002Fgaajina-mane","12 min read",{"title":165,"description":174},"gaajina-mane","stories\u002Fsummary\u002Fgaajina-mane","PQMdJ-c1qqFr7EatDEoO_eM98pUzTBwqkEJxhs9ynNo",{"id":183,"title":184,"author":75,"body":185,"category":75,"cover":192,"date":75,"description":193,"extension":77,"meta":194,"navigation":79,"path":196,"readingTime":75,"seo":197,"slug":198,"stem":199,"__hash__":200},"summary\u002Fstories\u002Fsummary\u002Fhrudaya-halagide.md","ಹೃದಯ ಹಾಳಾಗಿದೆ",{"type":8,"value":186,"toc":190},[187],[11,188,189],{},"ಹೇಗೆ ಪ್ರಾರಂಭಿಸಬೇಕು ಅಂತಾನೆ ತಿಳೀತಿಲ್ಲ. ಆದ್ರೂ ಇವತ್ತು ನಿನಗೆ ಹೇಳ್ಬೇಕಾದದ್ದು ತುಂಬಾ ಇದೆ. ನಮ್ಮ ಸ್ನೇಹಕ್ಕೆ ಹತ್ತು ವರ್ಷಕ್ಕಿಂತ ಜಾಸ್ತಿ ವಯಸ್ಸಾದರೂ ನಮಗೆ ನಾವೇ friends ಅಂತ ಹೇಳಿಕೊಂಡು ದಶಕವಾಯಿತು ಅಷ್ಟೇ. ನಾವಿಬ್ಬರೂ ಯಾವಾಗ್ಲೂ ಜಗಳ ಮಾಡ್ತಾನೇ ಇದ್ರು ಅದು ಯಾವತ್ತೂ serious ಅಂತ ಹೇಳೋ ಮಟ್ಟಕ್ಕೆ ಹೋಗಿಲ್ಲ.",{"title":72,"searchDepth":73,"depth":73,"links":191},[],"\u002Fstories\u002Fhrudaya-halagide.jpeg","A story about a man who is trying to find himself.",{"download":195},"https:\u002F\u002Fdrive.google.com\u002Ffile\u002Fd\u002F1mr0nZQGddeAnSV75l8uvsoU_A1ON9mGl\u002Fview?usp=drive_link","\u002Fstories\u002Fhrudaya-halagide",{"title":184,"description":193},"hrudaya-halagide","stories\u002Fsummary\u002Fhrudaya-halagide","FiBcSVIZE9moOFVLu-z_8BPyvYAIl-wcgdFBwcq487I",{"id":202,"title":203,"author":75,"body":204,"category":96,"cover":211,"date":75,"description":212,"extension":77,"meta":213,"navigation":79,"path":215,"readingTime":177,"seo":216,"slug":217,"stem":218,"__hash__":219},"summary\u002Fstories\u002Fsummary\u002Fin-the-ruins-of-memory.md","In The Ruins of Memory",{"type":8,"value":205,"toc":209},[206],[11,207,208],{},"On the day before the new system was set to go live, he pulled his hoodie low over his head, put on his headphones, and sat down to hammer out the code.\nHe typed furiously, and no one dared interrupt. With his hoodie up, he was in the zone—performing brain surgery on a single task: finishing the project.\nHe received his death sentence with pure calm: textbook case of frontotemporal dementia at age 32. While his family wept beside him, he complimented the doctor's wedding ring.\nShe found herself scrutinizing every interaction: Was that his last joke? His last laugh? His last hug? She never knew.\nHowever diminished, a person lingers in the shattered roadways of their mind.",{"title":72,"searchDepth":73,"depth":73,"links":210},[],"\u002Fstories\u002Fin-the-ruins-of-memory.png","A story of love, loss, and what remains.",{"download":214,"featured":79},"https:\u002F\u002Fdrive.google.com\u002Ffile\u002Fd\u002F1Su6ZeXXcmDqxXjZdJXZ_wucAbxS7RRTs\u002Fview?usp=sharing","\u002Fstories\u002Fin-the-ruins-of-memory",{"title":203,"description":212},"in-the-ruins-of-memory","stories\u002Fsummary\u002Fin-the-ruins-of-memory","afgaUHURlM8PVjlZcXpnFJLIqtwHAT0dqU6UgieH-lE",{"id":221,"title":222,"author":75,"body":223,"category":96,"cover":230,"date":75,"description":231,"extension":77,"meta":232,"navigation":79,"path":233,"readingTime":234,"seo":235,"slug":236,"stem":237,"__hash__":238},"summary\u002Fstories\u002Fsummary\u002Fkoneya-tappoppige.md","ಕೊನೆಯ ತಪ್ಪೊಪ್ಪಿಗೆ",{"type":8,"value":224,"toc":228},[225],[11,226,227],{},"ಸತ್ಯ ಸಾಯುವುದಿಲ್ಲ — ಅದು ಕೆಲವೊಮ್ಮೆ ಮಾತು ಕಳೆದುಕೊಂಡು ಮೌನವಾಗಿ ನರಳುತ್ತಿರುತ್ತದೆ. 20 ವರ್ಷಗಳ ಹಿಂದೆ ತನ್ನ ತಂದೆ ಪತ್ರಕರ್ತ ರಘುವೀರ್ ಅವರ ಆಕಸ್ಮಿಕ ಸಾವಿನ ಹಿಂದಿನ ಸತ್ಯವನ್ನು ಹುಡುಕುತ್ತಾ ಸೂರ್ಯ ನಿವೃತ್ತ ಡಿಸಿಪಿ ಶಂಕರ್ ಪ್ರಸಾದ್ ಅವರ ಬಳಿ ಬರುತ್ತಾನೆ — ಅವರ ಮಾತು ನಿಂತಿದೆ, ಆದರೆ ಕಣ್ಣಲ್ಲಿರುವ ಸತ್ಯ ಇನ್ನೂ ಜೀವಂತವಿದೆ.",{"title":72,"searchDepth":73,"depth":73,"links":229},[],"\u002Fstories\u002Fkoneya-tappoppige\u002Fimage1.png","ಪತ್ರಕರ್ತ ಸೂರ್ಯ, ತನ್ನ ತಂದೆಯ 20 ವರ್ಷಗಳ ಹಿಂದಿನ ಸಾವಿನ ರಹಸ್ಯವನ್ನು ಬೇಧಿಸಲು ಮೌನವಾಗಿರುವ ನಿವೃತ್ತ ಪೊಲೀಸ್ ಅಧಿಕಾರಿಯ ಕೊನೆಯ ತಪ್ಪೊಪ್ಪಿಗೆಯನ್ನು ಹುಡುಕುತ್ತಾನೆ.",{},"\u002Fstories\u002Fkoneya-tappoppige","10 min read",{"title":222,"description":231},"koneya-tappoppige","stories\u002Fsummary\u002Fkoneya-tappoppige","ZUpdtOBz2GTy6kInN6lZTiWe0BtN3HzJAoJ3btz2nM8",{"id":240,"title":241,"author":75,"body":242,"category":75,"cover":252,"date":75,"description":253,"extension":77,"meta":254,"navigation":79,"path":256,"readingTime":75,"seo":257,"slug":258,"stem":259,"__hash__":260},"summary\u002Fstories\u002Fsummary\u002Flast-secret-of-a-merchant.md","The Last Secret of A Merchant",{"type":8,"value":243,"toc":250},[244,247],[11,245,246],{},"ಹರಿ ಎಂದಿನಂತೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಮನೆಯಿಂದ ಹೊರ ನಡೆದಾಗ ಬೆಳಗಿನ ಸೂರ್ಯನ ಕಿರಣ ಚರಕಪುರವನ್ನು ಇನ್ನೂ ಸಂಪೂರ್ಣವಾಗಿ ಆವರಿಸಿರಲಿಲ್ಲ.\nಅವನ ಕ್ರಮಬದ್ಧ ಜೀವನದಲ್ಲಿ ಅನಿರೀಕ್ಷಿತ ತಿರುವು ಕಾದಿತ್ತು. ತಿಳಿನೀರಿನ ಆಳದಲ್ಲಿ ಕಪ್ಪನೆಯ ಆಕೃತಿಯೊಂದು ಅಲುಗಾಡದೆ ಮಲಗಿತ್ತು.\nಆ ಕತ್ತಲೆಯ ಆಕೃತಿ ಯಾರು? ಅದು ಅಲ್ಲಿ ಏಕೆ ಕಾಯುತ್ತಿದೆ? ಮತ್ತು ಮುಖ್ಯವಾಗಿ, ಅದಕ್ಕೂ ಈತನಿಗೂ ಏನಾದರೂ ಸಂಬಂಧವಿದೆಯೇ?",[11,248,249],{},"...\nಈ ಹತ್ಯೆಯನ್ನು ಬೇಧಿಸಲು ಮತ್ತೆ ಬಂದಿದ್ದಾರೆ ಸರಳಾಕ್ಷ ಹುಲಿಮೀಸೆ ಮತ್ತು ಇನ್ಸ್ಪೆಕ್ಟರ್ ಗೋಪಾಲಾಚಾರ್ಯ.",{"title":72,"searchDepth":73,"depth":73,"links":251},[],"\u002Fstories\u002Flast-secret-of-merchant\u002F1.jpg","A thread from investigations of Saralaksha Hulimeese",{"download":255},"https:\u002F\u002Fdrive.google.com\u002Ffile\u002Fd\u002F1Bb2n_tSbjWgddGuJ2e3VMfszRw7DNo7a\u002Fview?usp=sharing","\u002Fstories\u002Flast-secret-of-a-merchant",{"title":241,"description":253},"last-secret-of-a-merchant","stories\u002Fsummary\u002Flast-secret-of-a-merchant","hj6M3HUsw6N4QdRkli72J3rPyuAurI-VC_T8JFBPsMw",{"id":262,"title":263,"author":75,"body":264,"category":75,"cover":271,"date":75,"description":272,"extension":77,"meta":273,"navigation":79,"path":275,"readingTime":75,"seo":276,"slug":277,"stem":278,"__hash__":279},"summary\u002Fstories\u002Fsummary\u002Flove-triangle.md","Love Triangle",{"type":8,"value":265,"toc":269},[266],[11,267,268],{},"ಹಲವರು ಸೋಲ್ತಾರೆ, ಕೆಲವರು ಗೆಲ್ತಾರೆ...\nಒಬ್ಬರಿಗೇ ಇಬ್ಬಿಬ್ಬರು ಲೈನ್ ಹೊಡೀತಾರೆ...\nಸ್ನೇಹ.. ದ್ವೇಷಕ್ಕೆ ತಿರುಗುತ್ತೆ...\nಮತ್ತೊಬ್ಬರ ಗೆಲುವು ಇನ್ನೊಂದು ಮನಸ್ಸಿಗೆ ಏಟು ಕೊಡುತ್ತೆ...\nಕೊನೆಯಲ್ಲಿ ಅಂತ್ಯ ಹೇಗೆ ಇರುತ್ತೆ..?",{"title":72,"searchDepth":73,"depth":73,"links":270},[],"\u002Fstories\u002Flove_triangle.jpg","A story about a love triangle",{"download":274},"https:\u002F\u002Fdrive.google.com\u002Ffile\u002Fd\u002F1P7eNcBAqDl8LVPeTi_nOk53jTjqduqg8\u002Fview?usp=drive_link","\u002Fstories\u002Flove-triangle",{"title":263,"description":272},"love-triangle","stories\u002Fsummary\u002Flove-triangle","k_Ce6VbWPVtWj3f5-7ZCg7eVD_uS5D6z7txaqgraBOQ",{"id":281,"title":5,"author":75,"body":282,"category":75,"cover":17,"date":75,"description":193,"extension":77,"meta":288,"navigation":79,"path":80,"readingTime":75,"seo":289,"slug":82,"stem":290,"__hash__":291},"summary\u002Fstories\u002Fsummary\u002Fmaleyali-joteyali.md",{"type":8,"value":283,"toc":286},[284],[11,285,34],{},{"title":72,"searchDepth":73,"depth":73,"links":287},[],{"download":76},{"title":5,"description":193},"stories\u002Fsummary\u002Fmaleyali-joteyali","mRsOCjDK6XIE6KUDbJkXVBBK_U1fJnAtvZMoo_7O-_4",{"id":293,"title":294,"author":75,"body":295,"category":96,"cover":302,"date":75,"description":303,"extension":77,"meta":304,"navigation":79,"path":305,"readingTime":306,"seo":307,"slug":308,"stem":309,"__hash__":310},"summary\u002Fstories\u002Fsummary\u002Fmooka-devara-sannidhi.md","ಮೂಕ ದೇವರ ಸನ್ನಿಧಿ",{"type":8,"value":296,"toc":300},[297],[11,298,299],{},"ಶಾಪಗಳು ಕಲ್ಲಿನ ವಿಗ್ರಹಗಳಲ್ಲಿರುವುದಿಲ್ಲ — ಅವು ಮನುಷ್ಯರ ಹೃದಯದಲ್ಲಿ ಹುದುಗಿರುವ ದ್ವೇಷ ಮತ್ತು ದುರಾಸೆಗಳಲ್ಲಿರುತ್ತವೆ. ಹಂಪಿಯ ಉತ್ಖನನ ಸ್ಥಳದಲ್ಲಿ ಖ್ಯಾತ ಇತಿಹಾಸಕಾರ ಡಾ. ಅವಿನಾಶ್ ಆಚಾರ್ಯ ರಾತ್ರೋರಾತ್ರಿ ಕಣ್ಮರೆಯಾದಾಗ, ಸೂರ್ಯ ಮೂಕ ದೇವರ ಶಾಪದ ಹಿಂದಿನ ಮಾನವ ದುರಾಸೆಯ ಸತ್ಯವನ್ನು ಹುಡುಕುತ್ತಾನೆ.",{"title":72,"searchDepth":73,"depth":73,"links":301},[],"\u002Fstories\u002Fmooka-devara-sannidhi\u002Fimage1.png","ಹಂಪಿಯ ಉತ್ಖನನ ಸ್ಥಳದಲ್ಲಿ ಖ್ಯಾತ ಇತಿಹಾಸಕಾರರ ನಿಗೂಢ ಕಣ್ಮರೆ ಮತ್ತು ಶತಮಾನಗಳ ಹಳೆಯ ರಹಸ್ಯ.",{},"\u002Fstories\u002Fmooka-devara-sannidhi","18 min read",{"title":294,"description":303},"mooka-devara-sannidhi","stories\u002Fsummary\u002Fmooka-devara-sannidhi","ZJq1qdd7dFnuvaxcSJQQpKO1KEldRAZAnP0i-u2YajE",{"id":312,"title":313,"author":75,"body":314,"category":321,"cover":322,"date":75,"description":193,"extension":77,"meta":323,"navigation":79,"path":325,"readingTime":101,"seo":326,"slug":327,"stem":328,"__hash__":329},"summary\u002Fstories\u002Fsummary\u002Fnever-again.md","Never Again",{"type":8,"value":315,"toc":319},[316],[11,317,318],{},"\"Amrutha.. I think you need a hug.\", Vijay consoled sobbing Amrutha. Suddenly she hugged him tightly. He has no words to say. But he can only make her feel comfort. Even in the middle of crowd she is flying in dreamworld.. Because of him. But they don't know that something big coming to end everything... and lead to a big devastating turn in life so that they'll never meet again...\"",{"title":72,"searchDepth":73,"depth":73,"links":320},[],"Romance","\u002Fstories\u002Fnever_again.jpg",{"download":324},"https:\u002F\u002Fdrive.google.com\u002Ffile\u002Fd\u002F1fBUU5T2X36AYW8mmsLF8bM9C9BgOFu3O\u002Fview?usp=drive_link","\u002Fstories\u002Fnever-again",{"title":313,"description":193},"never-again","stories\u002Fsummary\u002Fnever-again","RD8xDk97BlK7AdXfWw7o3QP2Zny0QqWQhldATF4D33I",{"id":331,"title":332,"author":75,"body":333,"category":75,"cover":340,"date":75,"description":193,"extension":77,"meta":341,"navigation":79,"path":343,"readingTime":75,"seo":344,"slug":345,"stem":346,"__hash__":347},"summary\u002Fstories\u002Fsummary\u002Fninagagi.md","He's Waiting... ನಿನಗಾಗಿ",{"type":8,"value":334,"toc":338},[335],[11,336,337],{},"ಎಂಟು ವರ್ಷಗಳ ಅವನ ನಿರೀಕ್ಷೆ ಸುಳ್ಳಾಗಲಲಿಲ್ಲ. ಅವನನ್ನು ನೋಡಲು ಅವಳು ಬರುತ್ತಿದ್ದಾಳೆ. ಇವನ ಸಂತೋಷವನ್ನು ಅಳೆಯಲು ಮಾಪನಗಳೇ ಇರಲಿಲ್ಲ. ಮಾತನಾಡಲು ಸಾವಿರಾರು ವಿಷಯಗಳಿದ್ದರೂ ಸ್ವರವೇ ಹೊರಡಲಿಲ್ಲ. ಅವಳನ್ನೇ ಧಿಟ್ಟಿಸಿ ನೋಡುತ್ತಿದ್ದ ಆದಿತ್ಯ. ​ಕೈಯಲ್ಲಿ ಚೆಂಗುಲಾಬಿಯನ್ನು ಹಿಡಿದು ನಿಂತಿದ್ದ ಅವಳನ್ನೇ ನೋಡುತ್ತಿದ್ದಾನೆ. ಅವಳು ಮತ್ತೆ ಬಂದಿದ್ದಾಳೆ.",{"title":72,"searchDepth":73,"depth":73,"links":339},[],"\u002Fstories\u002Fninagagi.jpg",{"download":342},"https:\u002F\u002Fdrive.google.com\u002Ffile\u002Fd\u002F0B32WA8IcsE3QR0NrVUt2WnBrQzA\u002Fview?usp=drive_link&resourcekey=0-pZBUoKOJJ25AwL_ZLgAZsw","\u002Fstories\u002Fninagagi",{"title":332,"description":193},"ninagagi","stories\u002Fsummary\u002Fninagagi","aNh_UqH3UxCoF_d0TVrKNRixnZ3AE99uTU60660rU54",{"id":349,"title":350,"author":75,"body":351,"category":75,"cover":358,"date":75,"description":359,"extension":77,"meta":360,"navigation":79,"path":362,"readingTime":75,"seo":363,"slug":364,"stem":365,"__hash__":366},"summary\u002Fstories\u002Fsummary\u002Fpriti-anirikshita.md","ಪ್ರೀತಿ ಅನಿರೀಕ್ಷಿತ",{"type":8,"value":352,"toc":356},[353],[11,354,355],{},"ಸುಂದರ ಹೂತೋಟದ ಮೂಲೆಯಲ್ಲೊಂದು ಶತಮಾನಗಳಿಂದ ಬೆಳೆದು ನಿಂತಿರುವ ದೊಡ್ಡದೊಂದು ಮಾವಿನ ಮರ. ಮರದ ಕೆಳಗೆ ದಶಕಗಳ ಹಿಂದೆ ಮಾಡಿದ ಒಂದು ಕಲ್ಲಿನ ಬೆಂಚು. ಮಳೆಗಾಲದಲ್ಲಿ ಪಾಚಿಗಟ್ಟಿದ್ದ ಕುರುಹುಗಳು ಈಗಲೂ ಗೋಚರಿಸುತ್ತಿವೆ. ಅದರ ಮೇಲೆ ಅವಳು ಕುಳಿತಿದ್ದಾಳೆ, ಕೃಶಗೊಂಡಿರುವ ದೇಹ, ಇಂಗಿ ಹೋಗಿರುವ ಕಣ್ಣುಗಳು, ಬಣ್ಣ ಮಾಸಿದ ಸೀರೆ. ಹೌದು. ಅದು ಅವಳೇ. ಶ್ವೇತಾ ರಾವ್ ಮೊಣಕಾಲುಗಳ ಮೇಲೆ ಗಲ್ಲವಿಟ್ಟುಕೊಂಡು ಶೂನ್ಯ ನೋಟ ಬೀರುತ್ತಾ ಏನನ್ನೋ ಗಾಢವಾಗಿ ಯೋಚಿಸುತ್ತಾ ಕುಳಿತಿದ್ದಾಳೆ. ಅನಿರೀಕ್ಷಿತ ಪ್ರೇಮ ಕಥೆ; ಅವಳ ಜೀವನದ ವಿಚಿತ್ರ ವ್ಯಥೆ. ಅದು ಅವಳದೇ LOVE STORY.",{"title":72,"searchDepth":73,"depth":73,"links":357},[],"\u002Fstories\u002Flove_unexpected.jpg","A story of a girl",{"download":361},"https:\u002F\u002Fdrive.google.com\u002Ffile\u002Fd\u002F0B32WA8IcsE3Qc245UUNyOGZqSkE\u002Fview?usp=drive_link&resourcekey=0-bYxuGTKr5w_Y0zAIT_5e4g","\u002Fstories\u002Fpriti-anirikshita",{"title":350,"description":359},"priti-anirikshita","stories\u002Fsummary\u002Fpriti-anirikshita","ebki43G9sgx15zRvRjAOqO_GRdyei8mwE4mBPaNW6yw",{"id":368,"title":369,"author":75,"body":370,"category":75,"cover":377,"date":75,"description":378,"extension":77,"meta":379,"navigation":79,"path":381,"readingTime":75,"seo":382,"slug":383,"stem":384,"__hash__":385},"summary\u002Fstories\u002Fsummary\u002Ftears-of-a-martyr.md","Tears of a Martyr",{"type":8,"value":371,"toc":375},[372],[11,373,374],{},"ರಘು ತನ್ನ ತಲೆಯನ್ನು ಎತ್ತಲು ಹೆಣಗಾಡಿದ. ಆದರೆ ಮೂರು ಗುಂಡುಗಳನ್ನು ಹಿಡಿದಿಟ್ಟುಕೊಂಡಿದ್ದ ದೇಹ ಅವನಿಗೆ ಸಹಕರಿಸುವ ಸ್ಥಿತಿಯಲ್ಲಿರಲಿಲ್ಲ. ಕತ್ತಲೆ ತುಂಬಿದ ಕಣ್ಣುಗಳು ಕಾಲಘಟ್ಟದಲ್ಲಿ ಹಿಂದಕ್ಕೆ ಕೊಂಡೊಯ್ದವು. ಯುದ್ಧಭೂಮಿಯಲ್ಲಿ ಮಲಗಿ ನೋವುಣ್ಣುತ್ತಿದ್ದರೂ ದೂರದ ಕರುನಾಡಿನಲ್ಲಿ, ಮನೆಯ ಅಂಗಳದಲ್ಲಿ ನಿಂತಿದ್ದ ತಾಯಿಯ ನೆನಪು ತುಟಿಯ ಮೇಲೆ ನಗುವನ್ನು ತರಿಸಿತ್ತು. ನೆನಪಿನ ಮಸುಕಾದ ಹಾದಿಯಲ್ಲಿ ಯೋಚನೆ ಸಾಗಿತ್ತು. ಮುಚ್ಚಿದ ಕಣ್ಣುಗಳಲ್ಲಿ ರಚಿತವಾಗುತ್ತಿದ್ದ ಚಿತ್ರ ನಿಧಾನವಾಗಿ ನೈಜತೆಗೆ ತಿರುಗುತ್ತಿತ್ತು. ತನ್ನ ತಾಯಿಯ ಮುಗ್ದತೆ, ಪ್ರೀತಿ, ಅಕ್ಕರೆ ಮತ್ತು ಕಾಳಜಿಯನ್ನು ಮತ್ತೆ ಅನುಭವಿಸಲು ಸಮಯದಲ್ಲಿ ಭೂತದತ್ತ ಸಾಗಿದನು.",{"title":72,"searchDepth":73,"depth":73,"links":376},[],"\u002Fstories\u002Ftears_of_martyr.jpg","A soldier never cries...",{"download":380},"https:\u002F\u002Fdrive.google.com\u002Ffile\u002Fd\u002F1wbwxQG1UwQbHv4krUiclaSOjcBrgEiCH\u002Fview?usp=drive_link","\u002Fstories\u002Ftears-of-a-martyr",{"title":369,"description":378},"tears-of-a-martyr","stories\u002Fsummary\u002Ftears-of-a-martyr","OI6yx-tNoLBAY5stlElf7e8aljVbmBsmmQpPgiqMhwA",{"id":387,"title":388,"author":75,"body":389,"category":75,"cover":396,"date":75,"description":193,"extension":77,"meta":397,"navigation":79,"path":399,"readingTime":75,"seo":400,"slug":401,"stem":402,"__hash__":403},"summary\u002Fstories\u002Fsummary\u002Fthe-burning-desires.md","The Burning Desires",{"type":8,"value":390,"toc":394},[391],[11,392,393],{},"“Kill him now… Now or never…!!! ಇದೇ ನಿನ್ನ ನಾಶವಾದ ಬದುಕಿಗೆ ಏಕೈಕ ನ್ಯಾಯಯುತ ಪರಿಹಾರ.” - ಮತ್ತೆ ಮತ್ತೆ ತಲೆಯೊಳಗೆ ಪ್ರತಿಧ್ವನಿಸುತ್ತಿರುವ ವಾಕ್ಯ. ಮುಗ್ದಮುಖದ ಸ್ವಾತಿ ಅಡುಗೆ ಕೋಣೆಯಿಂದ ಹೊರಬಂದಳು. ಕೈಯಲ್ಲಿ ಹಿಡಿದ ಚಾಕುವಿನ ಮೊನಚು ಕೆಂಪು ಬಣ್ಣದ ದೀಪದಲ್ಲಿ ಹೊಳೆಯುತ್ತಿತ್ತು. ಕೋಣೆಯಲ್ಲಿ ಮಂಚದ ಮೇಲೆ ಅಂಗಾತವಾಗಿ ಸುಸ್ತಾಗಿ ಮಲಗಿದ್ದ ವ್ಯಕ್ತಿಯತ್ತ ಹೆಜ಼್ಜ಼ೆ ಹಾಕಿದಳು.",{"title":72,"searchDepth":73,"depth":73,"links":395},[],"\u002Fstories\u002Fthe_burning_desires.jpg",{"download":398},"https:\u002F\u002Fdrive.google.com\u002Ffile\u002Fd\u002F14moaOF_uQRHiY2BnHAoSm5sOvAQe9pCq\u002Fview?usp=drive_link","\u002Fstories\u002Fthe-burning-desires",{"title":388,"description":193},"the-burning-desires","stories\u002Fsummary\u002Fthe-burning-desires","U66gtrgO4eTFbWDmLsjcNhHh6NkX7hsE4NGB3cJ7wj4",{"id":405,"title":406,"author":75,"body":407,"category":75,"cover":414,"date":75,"description":193,"extension":77,"meta":415,"navigation":79,"path":416,"readingTime":75,"seo":417,"slug":418,"stem":419,"__hash__":420},"summary\u002Fstories\u002Fsummary\u002Fthe-gentleman.md","The Gentleman",{"type":8,"value":408,"toc":412},[409],[11,410,411],{},"ಹುಟ್ಟುತ್ತಾ ಎಲ್ಲರೂ ಸಾಮಾನ್ಯರಾಗಿಯೇ ಹುಟ್ಟುತ್ತಾರೆ. ಆದರೆ ನಂತರ ಮರೆಯಲಾರದ ಇತಿಹಾಸ ಸೃಷ್ಟಿಸಿ ಮರೆಯಾಗುತ್ತಾರೆ. ಬದುಕಿನಲ್ಲಿ ನಡೆಯುವ ಕೆಲವು ಘಟನೆಗಳು ಜೀವನ ಪಥವನ್ನೇ ಬದಲಾಯಿಸಿ ಬಿಡುತ್ತದೆ. ಕೆಲವು ತಿರುವುಗಳು ಸಾಮಾನ್ಯರನ್ನು ಅಸಾಮಾನ್ಯರನ್ನಾಗಿಸಿದರೆ, ಕೆಲವರು ಸರ್ವನಾಶವಾಗಿ ಬಿಡುತ್ತಾರೆ. THE GENTLEMANನಂತಹವರು ದೃವ ತಾರೆಗಳಾಗುತ್ತಾರೆ.",{"title":72,"searchDepth":73,"depth":73,"links":413},[],"\u002Fstories\u002Fthe_gentleman.png",{},"\u002Fstories\u002Fthe-gentleman",{"title":406,"description":193},"the-gentleman","stories\u002Fsummary\u002Fthe-gentleman","QZNQywBOnWn06AJidhUyozqX62O_EpDL2YqmMD6VC6c",{"id":422,"title":423,"author":75,"body":424,"category":431,"cover":432,"date":75,"description":193,"extension":77,"meta":433,"navigation":79,"path":435,"readingTime":436,"seo":437,"slug":438,"stem":439,"__hash__":440},"summary\u002Fstories\u002Fsummary\u002Fthe-photograph.md","The Photograph",{"type":8,"value":425,"toc":429},[426],[11,427,428],{},"\"ನೀವು ನನಗೆ actually ಏನಾಗಿದೆ ಅಂತ ಹೇಳೋದಕ್ಕೆ ಪ್ರಯತ್ನ ಪಡ್ತಿದ್ದೀರ? ಅಂದ್ರೆ ನನಗೆ....?”\n\"ಹೌದು ಹೌದು. ನಾನು ನಿಮಗೆ already ಹೇಳಿದೀನಿ ಇದು ಹೇಗೆ ಅಂತ\", ಎಂದು ತನ್ನ ಹೇಳಿಕೆಯನ್ನು ನನಗೆ ಮನವರಿಕೆ ಮಾಡಿಸಲು ಪ್ರಯತ್ನಿಸುತ್ತಿದ್ದರು ಡಾ. ಅಭಿಷೇಕ್ ನಾಯರ್.\n“But, ನಾನು ಹೇಗೆ ನನ್ನ ಪಾಸ್ಟ್ ಲೈಫ್ ನೋಡ್ಲಿಕ್ಕೆ ಸಾಧ್ಯ. ನೆನಪು ಮಾಡ್ಕೋಳ್ ಬಹುದು. ಬಟ್ ರಿಪೀಟ್ ಆಗಿ ಅದೇ ಸೀನ್ ಅಲ್ಲಿ ನಾನೇ ಇರ್ತೀನಿ. ಅದು ಹೇಗೆ ಸಾಧ್ಯ?\"\n​\"ಹಾಹಾ. ಸಾಧ್ಯ ಇದೆ. ಏಕಾಗ್ರತೆಯೇ ಇವೆಲ್ಲದಕ್ಕೂ ಮೂಲ. You just need to concentrate. ಅಷ್ಟೇ\"",{"title":72,"searchDepth":73,"depth":73,"links":430},[],"Mystery","\u002Fstories\u002Fthe_photograph.jpg",{"download":434},"https:\u002F\u002Fdrive.google.com\u002Ffile\u002Fd\u002F1OJt5pPjhG7hwXQPWsqTHmNk2ZlbEj-sP\u002Fview?usp=drive_link","\u002Fstories\u002Fthe-photograph","8 min read",{"title":423,"description":193},"the-photograph","stories\u002Fsummary\u002Fthe-photograph","Df98woawS5BTjeN7b_ifUAf607usb5FjOPed4EiJmKg",{"id":442,"title":443,"author":75,"body":444,"category":75,"cover":451,"date":75,"description":193,"extension":77,"meta":452,"navigation":79,"path":453,"readingTime":75,"seo":454,"slug":455,"stem":456,"__hash__":457},"summary\u002Fstories\u002Fsummary\u002Fy2121.md","Y2121",{"type":8,"value":445,"toc":449},[446],[11,447,448],{},"ಈ ವಿಶ್ವದ ನಿರ್ಮಾಣವಾಗಿ ಸರಿ ಸುಮಾರು 5 ಬಿಲಿಯನ್ ವರ್ಷಗಳ ಒಂದು ಅಂದಾಜು ಲೆಕ್ಕಾಚಾರವಾಗಿದ್ದರೂ ಭೂಮಿಯ ಮೇಲೆ ಜೀವಿಗಳ ಉಗಮವಾಗಿ ಕೆಲವೇ ಮಿಲಿಯನ್ ವರ್ಷಗಳಾಗಿವೆ. ಭೂಮಿಯ ಮೇಲಿನ ವಾತಾವರಣ ಬದಲಾಗುತ್ತ ಬಂದಂತೆ ಜೀವಿಗಳ ದೇಹಗಳಲ್ಲಿ ಬದಲಾವಣೆಗಳಾಗುತ್ತಾ ಬಂದವು. ಈ ವಿಕಾಸಗಳಲ್ಲಿ ಪ್ರಕೃತಿಯ ವಿನಾಶಕ್ಕೆ ಕಾರಣವಾಗುವ ಮನುಷ್ಯನ ವಿಕಾಸವೂ ಒಂದು. ಬೆಂಕಿಯುಂಡೆಯಾಗಿದ್ದ ಗೋಳವೊಂದು ತಂಪಾಗಿ ಹಸಿರು ಪೃಥ್ವಿಯಾಗಿತ್ತು. ಈಗ ಮತ್ತೆ ಬೆಂಕಿಯುಂಡೆಯಾಗುವತ್ತ ಸಾಗುವಂತೆ ಮಾಡಿದ್ದು ನಾವೇ ಅಲ್ಲವೇ?",{"title":72,"searchDepth":73,"depth":73,"links":450},[],"\u002Fstories\u002Fy2121.jpg",{},"\u002Fstories\u002Fy2121",{"title":443,"description":193},"y2121","stories\u002Fsummary\u002Fy2121","R7vCmaFUDrS9OOuikeNO8ht587BhUsm5lkQpnrpbHTE",{"id":459,"title":460,"author":75,"body":461,"category":75,"cover":468,"date":75,"description":193,"extension":77,"meta":469,"navigation":79,"path":471,"readingTime":75,"seo":472,"slug":473,"stem":474,"__hash__":475},"summary\u002Fstories\u002Fsummary\u002Fyou.md","You",{"type":8,"value":462,"toc":466},[463],[11,464,465],{},"ಒಂದು ನೆರಳು ಮನೆಯಿಂದ ಹೊರಗೆ ಓಡಿದಂತಾಯಿತು. ಆತನ ದಿಗ್ಬ್ರಮೆ ಉಲ್ಬಣಗೊಳ್ಳುವಂತೆ ಮನೆಯ ಮುಂದಿನ ಬಾಗಿಲಿನ ಲಾಕ್ ತೆರೆದಿತ್ತು. ಯಾರೋ ಈಗ ತಾನೇ ಗಟ್ಟಿಯಾಗಿ ಎಳೆದಂತೆ ಬಾಗಿಲು ಅಲುಗಾಡುತ್ತಿತ್ತು. ಬಾಗಿಲಿನ ಸನಿಹಕ್ಕೆ ಹೋಗಿ ಹೊರಕ್ಕೆ ಇಣುಕಿ ನೋಡಿದ. ಅಪಾರ್ಟ್‌ಮೆಂಟಿನ ವರಾಂಡದ ಲೈಟ್ ಎಲ್ಲವೂ ಉರಿಯುತ್ತಿತ್ತು. ಆ ದಾರಿ ಸಹಜವಾಗಿಯೇ ತೋರಿತು. ಹಠಾತ್ ಚಲನವಲನದ ಸೂಚನೆಗಳು ಕಂಡುಬರಲಿಲ್ಲ.",{"title":72,"searchDepth":73,"depth":73,"links":467},[],"\u002Fstories\u002Fyou.jpg",{"download":470},"https:\u002F\u002Fdrive.google.com\u002Ffile\u002Fd\u002F1SbDfLnsQLth6bFB3glT_B48PKOX_reMT\u002Fview?usp=drive_link","\u002Fstories\u002Fyou",{"title":460,"description":193},"you","stories\u002Fsummary\u002Fyou","Q-NVxMSQTaAMKT0yetwJmGJ7APwMfy8HY_K5W8eqSHg",1781856567841]