[{"data":1,"prerenderedAt":928},["ShallowReactive",2],{"story-priti-anirikshita":3,"summary-all":535},{"id":4,"title":5,"author":6,"body":7,"cover":523,"date":524,"description":525,"download":526,"extension":527,"meta":528,"navigation":529,"path":530,"seo":531,"slug":532,"stem":533,"__hash__":534},"stories\u002Fstories\u002Fpriti-anirikshita.md","Priti Anirishita","Akshara Hegde",{"type":8,"value":9,"toc":520},"minimark",[10,18,24,27,33,36,39,42,45,48,51,54,59,62,65,68,71,74,77,80,83,85,90,93,96,99,102,105,107,110,113,116,119,121,124,127,130,133,136,139,142,145,148,151,154,157,160,163,166,169,172,175,178,181,184,186,191,194,197,200,203,206,209,212,214,219,222,225,228,231,234,237,240,243,246,249,252,255,258,261,264,267,270,272,296,298,303,306,309,312,315,318,321,323,326,329,332,335,338,341,344,347,350,353,356,359,362,365,368,371,374,377,380,383,386,389,391,394,397,400,403,406,409,412,415,418,421,424,427,429,432,435,438,441,444,447,449,452,455,458,461,464,467,470,472,477,480,483,486,492,494,497,500,503,506,509,514],[11,12,13],"p",{},[14,15],"img",{"alt":16,"src":17},"Cover Image","https:\u002F\u002Fhegdeheartbeats.weebly.com\u002Fuploads\u002F7\u002F2\u002F7\u002F5\u002F72751619\u002Fpicsart-05-20-01-39-48.jpg",[11,19,20],{},[21,22,23],"strong",{},"ಇದರಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು ಯಾವುದೇ ವ್ಯಕ್ತಿಯ ವೈಯಕ್ತಿಕ ಜೀವನಕ್ಕೆ ಸಂಬಂಧ ಪಟ್ಟಿರುವುದಿಲ್ಲ. ಎಲ್ಲಿಯಾದರೂ ಸಾಮ್ಯತೆ ಕಂಡು ಬಂದಲ್ಲಿ ಅದು ಕೇವಲ ಕಾಕತಾಳೀಯವಷ್ಟೇ. ಎಲ್ಲವೂ ಭವಿಷ್ಯತ್ ಕಾಲದ ಒಂದು ಕಾಲ್ಪನಿಕ ಚಿತ್ರಣ.",[11,25,26],{},"ಜೀವನದಲ್ಲಿ ಘಟಿಸುವ ಪ್ರತಿಯೊಂದು ಕ್ಷಣಗಳೂ ಅನಿರೀಕ್ಷಿತ. ಪ್ರೀತಿಯೂ ಇದಕ್ಕೆ ಹೊರತಲ್ಲ. ಪ್ರೀತಿಯೆಂಬುದೇ ಒಂದು ವಿಚಿತ್ರವಾದ ಅನುಭವ. ಬರೆಯ ಹೊರಟರೆ ಮಹಾಕಾವ್ಯವನ್ನೇ ಸೃಷ್ಟಿಸಬಹುದಾದಂತಹ ಬಹುಮುಖದ ವಸ್ತು. ಭಾವನೆಗಳ ಮಹಾ ಪ್ರವಾಹ. ಹಲವಾರು ವಿರುದ್ಧ ಭಾವನೆಗಳನ್ನು ಏಕಕಾಲದಲ್ಲಿ ಹುಟ್ಟುಹಾಕುತ್ತದೆ; ನೋವು, ಸಂತೋಷ, ಅಭದ್ರತೆ ಹಾಗೂ.....",[11,28,29,32],{},[21,30,31],{},"ಮಾರ್ಚ್ 17, 2045:","\nಸುಂದರ ಹೂತೋಟದ ಮೂಲೆಯಲ್ಲೊಂದು ಶತಮಾನಗಳಿಂದ ಬೆಳದು ನಿಂತಿರುವ ದೊಡ್ಡದೊಂದು ಮಾವಿನ ಮರ. ಮರದ ಕೆಳಗೆ ದಶಕಗಳ ಹಿಂದೆ ಮಾಡಿದ ಒಂದು ಕಲ್ಲಿನ ಬೆಂಚು. ಮಳೆಗಾಲದಲ್ಲಿ ಪಾಚಿಗಟ್ಟಿದ್ದ ಕುರುಹುಗಳು ಈಗಲೂ ಗೋಚರಿಸುತ್ತಿವೆ. ಅದರ ಮೇಲೆ ಅವಳು ಕುಳಿತಿದ್ದಾಳೆ, ಕೃಶಗೊಂಡಿರುವ ದೇಹ, ಇಂಗಿ ಹೋಗಿರುವ ಕಣ್ಣುಗಳು, ಬಣ್ಣ ಮಾಸಿದ ಸೀರೆ. ಹೌದು. ಅದು ಅವಳೇ. ಶ್ವೇತಾ ರಾವ್ ಮೊಣಕಾಲುಗಳ ಮೇಲೆ ಗಲ್ಲವಿಟ್ಟುಕೊಂಡು ಶೂನ್ಯ ನೋಟ ಬೀರುತ್ತಾ ಏನನ್ನೋ ಗಾಢವಾಗಿ ಯೋಚಿಸುತ್ತಾ ಕುಳಿತಿದ್ದಾಳೆ. ಅನಿರೀಕ್ಷಿತ ಪ್ರೇಮ ಕಥೆ; ಅವಳ ಜೀವನದ ವಿಚಿತ್ರ ವ್ಯಥೆ. ಅದು ಅವಳದೇ LOVE STORY.",[11,34,35],{},"ತಾನು ಯೋಚನಾ ಶಕ್ತಿಯನ್ನೇ ಕಳೆದುಕೊಂಡಿರುವೆನೆಂದು ಅವಳೊಬ್ಬಳಿಗೆ ಮಾತ್ರ ತಿಳಿದಿದೆ, ವಿಮರ್ಶೆಗೆ ಒಳಪಡಿಸುವ ತಾಳ್ಮೆ ಹೊರಟುಹೋಗಿದೆಯೆಂದೂ; ತನ್ನೆಲ್ಲಾ ನೆನಪುಗಳೂ ಗೋರಿಯಲ್ಲಿ ಮಲಗಿದ್ದರೂ ಒಂದು ನೆನಪು ಮಾತ್ರ ಎಂದಿಗೂ ಮಾಸಿ ಹೋಗದ ಹಚ್ಚೆಯ ರೀತಿಯಲ್ಲಿ ಗಟ್ಟಿಯಾಗಿ ಹೃದಯದ ಗೋಡೆಯ ಮೇಲೆ ಚಿತ್ರಿತವಾಗಿದೆ. ಆ ವ್ಯಕ್ತಿ, ಆ ಪ್ರೀತಿ, ಆ ನೆನಪು, ಒಂದೇ ಕನಸು. ಅವೆಲ್ಲವೂ ತನ್ನಿಂದ ಎಂದೋ ದೂರವಾಗಿವೆ ಎಂದು ಅರಿವಾಗಿದ್ದರೂ, ಈಗ ಅದು ಅನಂತದೆಡೆಗೆ ಹೆಜ್ಜೆಹಾಕಿದೆ ಎಂದು ಅವಳಿಗೂ ಗೊತ್ತಿದೆ. ಅವಳು ಅವನನ್ನು ಶಾಶ್ವತವಾಗಿ ಕಳೆದುಕೊಂಡಿದ್ದಾಳೆ. ಇಂದಿಗೆ 20 ಸಂವತ್ಸರಗಳ ಹಿಂದೆ ಪೃಥ್ವಿಯ ಮೇಲೆ ಸುಂದರ ಹೂವೊಂದು ಅರಳಿದ ದಿನ.  ಖುಷಿಯಿಂದಿರಬೇಕಾದ ದಿನವೇ 'ಪೃಥ್ವಿ'ಯ ಒಡೆಯನ ತಪ್ಪುಗಳಿಂದಾಗಿ ಜೀವನದಲ್ಲಿ ಸುನಾಮಿಯೊಂದು ಅಪ್ಪಳಿಸಿತ್ತು.",[11,37,38],{},"​\"ಇಂದಿನಿಂದ ನೀವಿಬ್ಬರೂ ಗಂಡ-ಹೆಂಡತಿಯರಾಗಿ ಉಳಿದಿರುವುದಿಲ್ಲ. ಈ ನ್ಯಾಯಾಲಯವು ನಿಮ್ಮ ವಿಚ್ಛೇದನಾ ಅರ್ಜಿಯನ್ನು ಸಮ್ಮತಿಸಿದೆ. ಪತಿಯ ಕಡೆಯಿಂದ ಪತ್ನಿಗೆ ಸೇರಬೇಕಾದ ಆಸ್ತಿಯನ್ನು 6 ತಿಂಗಳ ಒಳಗಾಗಿ ನೀಡಬೇಕೆಂದು ಈ ಮೂಲಕ ನ್ಯಾಯಾಲಯವು ಆದೇಶಿಸುತ್ತದೆ.\"- ನ್ಯಾಯಾಧೀಶರ ತೀರ್ಪಿನ ಮಾತುಗಳೇ ಇನ್ನೂ ಅವಳ ಕಿವಿಗಳಲ್ಲಿ ಪ್ರತಿಧ್ವನಿಸುತ್ತಿದೆ. ಈಗ ಅದು ಅಧಿಕೃತವಾಗಿದೆ. ಅವಳಿನ್ನು ಮುಂದೆ ಶ್ವೇತಾ ಶ್ರೀಧರ್ ಹೆಗಡೆ ಅಲ್ಲ.. ಮತ್ತೊಮ್ಮೆ ಶ್ವೇತಾ ರಾವ್ ಆಗಿದ್ದಾಳೆ.",[11,40,41],{},"ಅವನು ನೀಲಿ ಕಣ್ಣಿನ, ಮುದ್ದು ಚಂದ್ರನಂತಿರುವ ಮೊಗದ ಹುಡುಗ. ಒಕ್ಕಟ್ಟಿ ಮನೆತನದ, 'ಪೃಥ್ವಿ ಇಂಡಸ್ಟ್ರೀಸ್'ನ ಏಕೈಕ ವಾರಸುಧಾರ. ಸಾಗರ ಪಟ್ಟಣದಲ್ಲಿ ಎಲ್ಲ ಹುಡುಗಿಯರು ಅಪೇಕ್ಷಿಸುತ್ತಿದ್ದಂತಹ ಆಕರ್ಷಕ ಮೈಕಟ್ಟಿನ ರಾಜಕುಮಾರ. ಪತ್ರಿಕೆಯಲ್ಲಿ ಇವನ ಉನ್ನತ ವ್ಯವಹಾರಗಳ ಬಗ್ಗೆಯೇ ವಾರದಲ್ಲಿ 2-3 ಬಾರಿ ಬರುತ್ತಿತ್ತು. ವಿಧಿಲಿಖಿತವೋ ಅಥವಾ ಅವನ ಹಣೆಬರಹವೋ ಏನೋ..ಅವನಿಂದು ತನ್ನ ವಿಚ್ಚೇಧನಾ ಅರ್ಜಿಯ ಕೊನೆಯ  ತೀರ್ಪನ್ನು ಪಡೆಯಲು ಬರಬೇಕಾಯಿತು.",[11,43,44],{},"ಕೋರ್ಟಿನ ಹೊರಗಡೆ ಮಾದ್ಯಮದವರು ಕ್ಯಾಮರಾವನ್ನು ಜ಼ೂಮ್ ಮಾಡಿಟ್ಟುಕೊಂಡೇ ಅವನಿಗಾಗಿ ಕಾಯುತ್ತಾ ನಿಂತಿದ್ದರು. ದೊಡ್ಡವರು ಎನಿಸಿಕೊಂಡವರನ್ನು ತಮ್ಮ ಚಾನಲ್ಗಳಲ್ಲಿ ತೋರಿಸಿ, ಟಿ.ಆರ್.ಪಿ.ಯನ್ನು ಹೆಚ್ಚಿಸಿಕೊಳ್ಳುವ ಖಯಾಲಿ. ಆದ್ದರಿಂದ ಕೋರ್ಟಿನ ಹಿಂಬಾಗದಿಂದ ಪಾರಾಗಲು ನಿರ್ಧರಿಸಿದ್ದ. ಇದೇ ಕಾರಣಕ್ಕಾಗಿಯೇ ಗೋಗರೆಯುತ್ತಿದ್ದ ತಾಯಿಯನ್ನು ತನ್ನೊಂದಿಗೆ ಕರೆತಂದಿರಲಿಲ್ಲ.",[11,46,47],{},"ಇಂದಿನಿಂದ ಅವನು ಏಕಾಂಗಿಯಾಗಿ ಜೀವನದ ಹಾದಿಯನ್ನು ಸವೆಸಬೇಕು... ಕೊನೆ ಉಸಿರು ಇರುವವರೆಗೂ... ಮುಖ್ಯವಾಗಿ ಅವಳಿಲ್ಲದೆ... ನಡೆಯಬೇಕು. ಕೆನ್ನೆಯ ಕಾಂತಿಗೆ ಚಂದ್ರನೇ ನಾಚುವಂತಿದ್ದ ಅಂದದ ಬೆಡಗಿ, ಪ್ರಶಾಂತವಾಗಿ ಎಲ್ಲಾ ನೋವುಗಳನ್ನು ಸಹಿಸಿಕೊಂಡು ಎಲ್ಲರಿಂದಲೂ ಆರಾಧಿಸಲ್ಪಡುವ, ತನಗೆ ಕೇಡು ಬಯಸಿದವನಿಗೂ ಒಳ್ಳೆಯದಾಗಲಿ ಎಂದು ಬೇಡುವ ನಿಷ್ಕಳಂಕ ಮನಸಿನ... ಎಲ್ಲಕ್ಕಿಂತ ಮುಖ್ಯವಾಗಿ ಅವನ ಜೀವನದಲ್ಲಿ ಪ್ರವೇಶಿಸಿದ ಅತ್ಯಂತ ಪ್ರಕಾಶಮಾನವಾದ ವಜ್ರ; ಶ್ವೇತಾ ಹೆಗಡೆಯ ಗಂಡನಾಗಿ ಇರುವುದು ಇಂದೇ ಕೊನೆಯ ದಿನ.",[11,49,50],{},"ಕೋರ್ಟಿನ ರೀತಿ-ರಿವಾಜುಗಳು ನಡೆಯುತ್ತಿದ್ದಾಗಲೂ ಅವಳೆಡೆಗೆ ಓರೆಗಣ್ಣಿನಿಂದ ನೋಡುತ್ತಲೇ ಇದ್ದ. ಅವನು miss ಮಾಡಿಕೊಳ್ಳುತ್ತಿದ್ದದ್ದು ಅವಳ ಹಣೆಯ ತುದಿಯಲ್ಲಿ, ಬೈತಲೆಯ ದಂಡೆಯ ಬಳಿ ಇಟ್ಟುಕೊಳ್ಳುತ್ತಿದ್ದ ಕೆಂಪು ಕುಂಕುಮವನ್ನು, ಸಣಕಲು ಕೈಗಳ ಸುತ್ತ ಇರುವ ಹಸಿರು ಬಳೆಗಳ ನಾದವನ್ನು,  ಇವನ ದನಿ ಕೇಳಿ ಹೆದರಿದ ನೋಟ ಬೀರುತ್ತಿದ್ದ ಅವಳ ಕಂಗಳನ್ನು. ಆದರೆ ತೀರ್ಪು ಈಗ ಬಂದಾಗಿದೆ. ಅವಳಿನ್ನು ಅವನಿಗೆ ಸೇರಿದವಳಲ್ಲ. ಅವಳ ಮೇಲಿನ ಎಲ್ಲಾ ಹಕ್ಕುಗಳನ್ನು ಕಳೆದುಕೊಂಡಿದ್ದಾನೆ.  ಉಸಿರು ಕಟ್ಟಿದಂತಾಗುತ್ತಿದೆ. ನಾಲಿಗೆ ಒಣಗುತ್ತಿದೆ. ಕಣ್ಣು ಕಪ್ಪಡರುತ್ತಿದೆ. ದೃಷ್ಟಿ ಮಂಜಾಗುತ್ತಿದೆ.",[11,52,53],{},"ಈ ಜಗತ್ತಿನ ಸಂತೋಷವನ್ನೆಲ್ಲಾ ಅನುಭವಿಸಲು ಅವಳು  ಅರ್ಹಳಾಗಿದ್ದಳು. ಅವಳು ಯಾವ ತಪ್ಪು ಮಾಡಿದವಳಲ್ಲ. ತನಗೋಸ್ಕರವಾಗಿ ಅವಳನ್ನು ತನ್ನೊಂದಿಗಿರುವಂತೆ ಬಲವಂತವಾಗಿ ಇರಿಸಿಕೊಳ್ಳಲು ಸಾಧ್ಯವಿರಲಿಲ್ಲ, ಇಷ್ಟು ದಿನ ಮಾಡಿದಂತೆ. ಅಂತೂ ಅವಳು ಇವನ ಮುಷ್ಟಿಯಿಂದ ಪಾರಾಗಿದ್ದಳು. ತನ್ನ ಭಯವಿಲ್ಲದೆಯೇ ಅವಳಿನ್ನು ಖುಷಿಯಿಂದಿರಬಹುದು ಎಂದು ಯೋಚಿಸುತ್ತಾ ಮುಗುಳ್ನಕ್ಕ. ಅದಾಗ್ಯೂ ಆ ನಗು ಯಾರ ಕಿವಿಗೂ ಕೇಳಿಸುವಂತಿರಲ್ಲಿಲ್ಲ, ಕಣ್ಣಿಗೂ ಕಾಣಿಸುವಂತಿರಲಿಲ್ಲ. ಹೀಗೆ ತನ್ನದೇ ಚಿಂತೆಯಲ್ಲಿ ಮಗ್ನನಾಗಿ ದೂರದ ಮೂಲೆಯಲ್ಲಿ ಕಾಣುತ್ತಿದ್ದ ಮಾವಿನ ಮರದ ಕಡೆಗೆ ಹೆಜ್ಜೆ ಹಾಕ ತೊಡಗಿದ. ಶ್ವೇತಾ ಬೆಂಚಿನ ಮೇಲೆ ಕುಳಿತಿದ್ದು ಕಾಣಿಸಿತು. ಅವಳನ್ನು ಕೊನೆಯ ಬಾರಿ ಮಾತನಾಡಿಸಿ ಬರೋಣವೆಂದು ಒಂದು ಹೆಜ್ಜೆ ಎತ್ತಿಡುರುವುದರೊಳಗಾಗಿ ಅವಳ ಮುಂದೆ ಮೊಣಕಾಲೂರಿ ಕುಳಿತಿದ್ದ ಅವನು ಕಾಣಿಸಿದ.",[11,55,56],{},[21,57,58],{},"ಆ ವ್ಯಕ್ತಿ ಯಾರು? ಅವನು ಶ್ವೇತಾಳಿಗೆ ಏನು ಹೇಳುತ್ತಿದ್ದಾನೆ?",[60,61],"hr",{},[11,63,64],{},"ಈಗ ಅವನಿರುವ ಪರಿಸ್ಥಿತಿಯನ್ನು ಅವಲೋಕಿಸಿದರೆ ವಿಶ್ವದಲ್ಲಿ ಅತ್ಯಂತ ಗೊಂದಲದಲ್ಲಿರುವ ವ್ಯಕ್ತಿಯೆಂದರೆ ಅವನೇ ಎನ್ನಬಹುದು. ಅವನೆಂದೂ ಇಂತಹ ಸಂದಿಗ್ಧತೆಯಲ್ಲಿ ಸಿಲುಕಿರಲಿಲ್ಲ. ಶ್ರೀಧರ್ ತಾನು ಪ್ರೀತಿಸಿದ ಹುಡುಗಿಯನ್ನು ಬಲಾತ್ಕಾರವಾಗಿ ಎಳೆದುಕೊಂಡು ಹೋಗಿ ಮದುವೆಯಾದಾಗಲೇ ಆಗಲಿ ಅಥವಾ ಸತತವಾಗಿ ತನ್ನ ತಂಗಿಯನ್ನು ಮದುವೆಯಾಗೆಂದು ಪೀಡಿಸಿದಾಗಲೇ ಆಗಲಿ ಇವನ ಮನಸ್ಸು ಇಂದಿನಷ್ಟು ವಿಚಲಿತಗೊಂಡಿರಲಿಲ್ಲ. ಆದರೆ ಕಳೆದ 2-3 ತಿಂಗಳಿನಿಂದ ಆಗುತ್ತಿರುವ ವಿಚಿತ್ರ  ವಿದ್ಯಮಾನಗಳನ್ನು ನೋಡಿ ನರಕದಲ್ಲಿರುವಂತೆ ಭಾಸವಾಗುತ್ತಿತ್ತು. ಅವನಿಗೆ ತಾನೀಗ ಸಂತೋಷವಾಗಿರುವೆನೆ ಅಥವಾ ಇಲ್ಲವೇ ಎಂಬುದನ್ನು ಕೂಡ ನಿರ್ಧರಿಸಲಾಗದ ಸ್ಥಿತಿಗೆ ತಲುಪಿದ್ದನು. ಅವನು ಪ್ರೀತಿಸಿದ ಏಕೈಕ ವ್ಯಕ್ತಿ ಶ್ವೇತಾ. ಆದರೆ ಈತನ ನಿರ್ಲಕ್ಷ ಮತ್ತು ಮೂರ್ಖತನದ ಕಾರಣದಿಂದ, ಒಂದು ಸುಂದರ, ಮುಗ್ಧ ಜೀವವೊಂದು ಸುಮಾರು ಒಂದು ವರ್ಷಗಳ ಕಾಲ ಮೃಗ ಮನಸ್ಕರಿಂದ ಅತ್ಯಂತ ಯಾತನೆ ಅನುಭವಿಸಬೇಕಾಯಿತು.",[11,66,67],{},"ಶ್ರೀಧರ್ ಮತ್ತು ಇವನ ನಡುವಿನ ತಪ್ಪು ತಿಳುವಳಿಕೆಗಳು, ಭಿನ್ನಾಬಿಪ್ರಾಯಗಳು ಯಾವಾಗಲೋ ಪರಿಹಾರವಾಗಿದ್ದಂತೂ ಸತ್ಯ. ಈಗ ಅವರಿಬ್ಬರ ನಡುವೆ ವೈರತ್ವದ ಛಾಯೆಯೂ ಕೂಡ ಉಳಿದಿಲ್ಲ. ಶ್ವೇತಾಳನ್ನು ವರಿಸುವುದಕ್ಕೆ ಶ್ರೀಧರನಿಂದ ಯಾವ ಅಡ್ಡಿಯೂ ಇರಲಿಲ್ಲ.",[11,69,70],{},"ಈ ವಿಚ್ಚೇಧನದ ನಂತರ ಇವನಿಗಿನ್ನೊಂದು ಅವಕಾಶ ಒದಗಿ ಬಂದಿದೆ. ಹೌದು, ಅವನೀಗ ಮತ್ತೆ ಅವಳನ್ನು ಪಡೆಯುವ ಸದಾವಕಾಶ.  ಈ ಬಾರಿ ಶ್ರೀಧರನಂತೆ ಅವಳನ್ನು ಕಸಿದುಕೊಳ್ಳುವವರು ಯಾರೂ ಇಲ್ಲ. ಶ್ರೀಧರ್ ಮತ್ತೆ ಇವರ ವಿಷಯದಲ್ಲಿ ತಲೆ ಹಾಕಲಾರ. ಕಾಲ, ಪರಿಸ್ಥಿತಿಗಳು ಇವನ ಪರವಾಗಿಯೇ ಇದ್ದರೂ, ಅದೇಕೋ ಮನವು ಅಳುಕುತ್ತಿದೆ. ನಿಡಿದಾದ ಉಸಿರನ್ನು ಬಿಟ್ಟು ಮತ್ತೆ ಯೋಚನೆಗೆ ಮೊದಲು ಮಾಡಿದ. ಕೆಲವು ದಿನಗಳ ಹಿಂದೆ ವಿಶ್ವೇಶ್ವರರಾಯರು ಬಂದು, ಮದುವೆಯ ವಿಷಯವನ್ನು ಪ್ರಸ್ತಾಪಿಸಿದಾಗ, ಇವನೂ ಸೇರಿದಂತೆ, ಇಬ್ಬರ ಕುಟುಂಬದವರೂ ಒಪ್ಪಿಗೆ ಸೂಚಿಸಿದ್ದರು. ಹತ್ತಿರದ ದಿನಗಳಲ್ಲಿ ಯಾವುದೂ ಒಳ್ಳೆಯ ಮುಹೂರ್ತವಿರದ ಕಾರಣಕ್ಕೆ ಮದುವೆಯನ್ನು ಎರಡು ತಿಂಗಳ ನಂತರ ಮಾಡುವುದೆಂದು ಹಿರಿಯರು ನಿಶ್ಚಯಿಸಿದ್ದರು. ವಾಸ್ತವವಾಗಿ ಅವಳನ್ನು ಹಿಂದಕ್ಕೆ ಪಡೆಯಲು ಸಮಯ ವ್ಯರ್ಥ ಮಾಡಲು ಸಿದ್ಧನಿರಲಿಲ್ಲ. ಆಗ ಭೂಮಿಯ ಮೇಲಿನ ಯಾವುದೇ ಜೀವಿಗಿಂತ ಇವನೇ ಅಧಿಕ ಸಂತೋಷದಲ್ಲಿದ್ದವನಾಗಿದ್ದ ಎಂದರೆ ತಪ್ಪಾಗಲಾರದು.",[11,72,73],{},"ಆದರೆ ಅವಳು ಇವನಿಂದ ಆದಷ್ಟು ದೂರವಿರಲು ಶತಪ್ರಯತ್ನ ಮಾಡುತ್ತಿರುವಳೆಂದು ಅವನ ಅಂತರಾಳ ಕೂಗಿ ಕೂಗಿ ಹೇಳುತ್ತಿತ್ತು. ಅವಳು ಹಿಂದಿನಂತೆ ಇವನೆದುರು ಮನಸ್ಸು ಬಿಚ್ಚಿ ಮಾತನಾಡುತ್ತಿರಲಿಲ್ಲ. ಅವಳ ವರ್ತನೆ ಮೊದಲಿನಂತೆ ಮುಕ್ತವಾಗಿರಲಿಲ್ಲ. ಬಹುಶಃ ಅವಳಿಗೆ ಇಷ್ಟವಾಗುತ್ತಿರಲಿಲ್ಲವೇನೋ. ಅವಳ ಸುತ್ತಲಿನ ಪ್ರಪಂಚದೊಂದಿಗೆ ಬೆರೆಯಲಾಗದೆ ತುಂಬಾ ಬದಲಾಗಿದ್ದಳು. ಕೆಲವೊಂದು ಮೂಲವಸ್ತುಗಳು ಹೇಗೆ ಸುತ್ತಲಿನ ಪರಿಸರದೊಂದಿಗೆ ಪ್ರತಿಕ್ರಯಿಸದೆ ಜಡವಾಗಿರುತ್ತಾವೆಯೋ ಹಾಗೆಯೇ ಇವಳಲ್ಲಿ ಯಾವುದೇ ರೀತಿಯ ಚುರುಕಾದ ಚಟುವಟಿಕೆಗಳಿರಲಿಲ್ಲ.",[11,75,76],{},"ಈ ಒಂದು ವರ್ಷಗಳ ಮಿಥ್ಯನೈಜತೆಯ ನಾಟಕವು ಅವಳ ಮುಗ್ದ ಮನಸ್ಸಿನ ಮೇಲೆ ಅಧಿಕವಾಗಿ ಪರಿಣಾಮ ಬೀರಿರಬಹುದು, ಮತ್ತೆ ಹಿಂದಿನ ಸ್ಥಿತಿಗೆ ಮರಳಲು ಸ್ವಲ್ಪ ಸಮಯ ಬೇಕೇ ಬೇಕು. ಬದಲಾಗುತ್ತಿರುವ ಪರಿಸ್ಥಿತಿಗೆ ಅವಳು ಹೊಂದಿಕೊಳ್ಳಲು ಇನ್ನಷ್ಟು ಸಮಯ ನೀಡಬೇಕೆಂದು ನಿರ್ಧರಿಸಿದ್ದ. ಆಮೇಲೆ ಬೇಕಾದರೆ ಇಬ್ಬರು ಒಟ್ಟಿಗೆ ಕುಳಿತು ಭವಿಷ್ಯದ ನಡೆಗಳ ಬಗ್ಗೆ ಚರ್ಚಿಸಿದರಾಯಿತು ಎಂಬ ತೀರ್ಮಾನಕ್ಕೆ ಬಂದಿದ್ದ. ಅವಳಿಗಾಗಿ ಇವನ ಕಣ್ಣುಗಳು ಹುಡುಕುತ್ತಿದ್ದವು. ಮಾವಿನ ಮರದ ಕೆಳಗೆ ಒಂಟಿಯಾಗಿ ಕುಳಿತಿದ್ದ ಶ್ವೇತಾಳನ್ನು ಕಂಡೊಡನೆಯೇ ಓಡಿಹೋಗಿ ಅವಳೆದುರು ಹೋಗಿ ಮೊಣಕಾಲೂರಿ ಕುಳಿತುಕೊಂಡ.",[11,78,79],{},"​ತಮ್ಮಿಬ್ಬರನ್ನು ಇನ್ನೊಂದು ಜೊತೆ ಕಣ್ಣುಗಳು ಎಲೆಗಳ ಮರೆಯಿಂದ ಗಮನಿಸುತ್ತಿವೆ ಎಂಬುದು ಅವರಿಗಾಗ ತಿಳಿಯುವಂತಿರಲಿಲ್ಲ.  ಆ ಕಣ್ಣುಗಳಿಂದ ಎರಡು ಹನಿಗಳು ಎಲೆಗಳ ಮೇಲೆ ಬಿದ್ದು ಜಾರಿ ಮಣ್ಣಿನಲ್ಲಿ ಇಂಗಿ ಹೋದವು. ಶ್ವೇತಾ ತನ್ನೆರಡೂ ಕೈಗಳಿಂದ ಮುಖವನ್ನು ಮುಚ್ಚಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.​",[11,81,82],{},"ಈ ಎಲ್ಲ ಗೊಂದಲಗಳಿಗೆ, ದುಃಖಕ್ಕೆ ಕಾರಣ ಭೂತಕಾಲ. ಇಂದು ರೆಕ್ಕೆ ಮುರಿದು ನೆಲಕ್ಕೆ ಬಿದ್ದಿವೆ ಚಿಟ್ಟೆಗಳು. ಈ ಪಕ್ಷಿಗಳ ಪ್ರೇಮದ ಉತ್ತುಂಗದ ದಿನಗಳು ಗತಕಾಲದಲ್ಲಿದೆ....",[60,84],{},[11,86,87],{},[21,88,89],{},"ಸುಮಾರು ಒಂದು ವರ್ಷಗಳ ಹಿಂದೆ",[11,91,92],{},"ಶ್ವೇತಾ ರಾವ್, 22ರ ಹರೆಯದ ಭರತನಾಟ್ಯದಲ್ಲಿ ಪ್ರಸಿದ್ದಿ ಪಡೆಯುತ್ತಿರುವ ಕಲಾವಿದೆ. ತನ್ನ ನೃತ್ಯಕಲೆ ಹಾಗೂ ಸೌಂದರ್ಯದಿಂದಾಗಿ ಎಲ್ಲರನ್ನೂ ಮೋಹಕ ಲೋಕದಲ್ಲಿ ತೇಲಿಸುತ್ತಿದ್ದಳು. ಎಷ್ಟೋ ಜನ ಹುಡುಗರು dating, love, marriage proposalಗಳನ್ನು ಮುಂದಿಟ್ಟರೂ, ಅವುಗಳಾವುದರ ಕಡೆಗೆ ಗಮನವೀಯ್ಯದೆ ಒಂಟಿಯಾಗೇ ಇದ್ದಳು. ತನ್ನ ನೃತ್ಯ ಬದುಕು ಮತ್ತು ಅವಳ ಕುಟುಂಬದ ಸಂತೋಷವೇ ಅವಳ ಕನಸಾಗಿತ್ತು.",[11,94,95],{},"ಒಂದು ದಿನ ನಂದೋಡಿಯಲ್ಲಿ ನೃತ್ಯ ಕಾರ್ಯಕ್ರಮವೊಂದನ್ನು ಮುಗಿಸಿ, ಅಲಂಕಾರಿಕ ಕೊಠಡಿಯಲ್ಲಿ ಮುಖವನ್ನು ತೊಳೆಯುವುದರಲ್ಲಿ ಮಗ್ನಳಾಗಿದ್ದಳು. ಆಗ ಇದ್ದಕ್ಕಿದ್ದಂತೆ ಒಳಬಂದ ಚಿಕ್ಕ ಹುಡುಗನೊಬ್ಬ ದೊಡ್ಡದೊಂದು ಕೆಂಪು ಗುಲಾಬಿಯ ಪುಷ್ಪಗುಚ್ಛವೊಂದನ್ನು ನೀಡಿ ಹಿಂತಿರುಗಿದ. ಅದರ ಮೇಲೆ ಇಂಗ್ಲೀಷ್ನಲ್ಲಿ ಮುದ್ರಿತವಾಗಿದ್ದ ಹೆಸರನ್ನು ನೋಡಿದಳು. ಹರೀಶ್ ಭಟ್, ಕರುಮನೆ ಎಂದು ಬರೆದಿತ್ತು. ಮೊದಲಿಗೆ ಅದರತ್ತ ನಿರ್ಲಕ್ಷ ಭಾವದಿಂದ ನೋಡಿದರೂ ಅದರ ಮೇಲಿದ್ದ ಸಾಲುಗಳನ್ನು ನೋಡಿ ಉಸಿರು ಸಿಕ್ಕಿಹಾಕಿಕೊಂಡಂತಾಯಿತು. ಮೊದಲ ಬಾರಿಗೆ ಅವಳು ಈ ರೀತಿಯಾದ ಕಾವ್ಯಾತ್ಮಕ ಪತ್ರವನ್ನು ಪಡೆದಿದ್ದಳು. ಇದುವರೆಗೂ ಎಷ್ಟೋ ಹುಡುಗರು ಪತ್ರಗಳನ್ನು, ಹೂಗಳನ್ನು ನೀಡಿದ್ದರೂ, ಈ ಸಾಲುಗಳಷ್ಟು ಯಾವುದೂ ಆಕರ್ಷಿಸಿರಲಿಲ್ಲ. ಆ ಪತ್ರವನ್ನು ತೆಗೆದು ತನ್ನ purseನ ಒಳಗೆ ಇಟ್ಟುಕೊಂಡಳು.",[11,97,98],{},"ಇದಾದ ಬಳಿಕ ಅವಳ ಪ್ರತಿಯೊಂದು ಪ್ರದರ್ಶನದ ಕೊನೆಯಲ್ಲಿಯೂ, ಪುಷ್ಪಗುಚ್ಛದೊಂದಿಗೆ ಕೆಲವು ಸಾಲುಗಳಿಂದ ಕೂಡಿದ ಕವಿತೆಯಿರುತ್ತಿತ್ತು. ಕೆಲವೊಮ್ಮೆ ಬೇಸರ ಮೂಡಿಸುವಂತೆ ಇದ್ದರೂ ಕೆಲವೊಮ್ಮೆ ಖುಷಿ ಕೊಡುವಂತಿರುತ್ತಿತ್ತು. ಆದರೆ ಅದನ್ನು ತನಗೆ ಕಳುಹಿಸುತ್ತಿರುವ ವ್ಯಕ್ತಿ ಯಾರೆಂಬುದನ್ನು ತಿಳಿದುಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟರೂ ಯಶಸ್ವಿಯಾಗಲಿಲ್ಲ. ಹೀಗೆ ತಿಂಗಳುಗಳುರುಳುತ್ತಿದ್ದಂತೆ, ಪ್ರದರ್ಶನದ ನಂತರ ಹೂಗುಚ್ಛದ ಬರುವಿಕೆಗಾಗಿ ಕಾಯುವುದೇ ಅವಳ ಹವ್ಯಾಸವಾಗಿ ಬಿಟ್ಟಿತ್ತು. ತನ್ನ ನೃತ್ಯವನ್ನು ಇಷ್ಟಪಡುವ ವ್ಯಕ್ತಿ. ಅಲ್ಲದೇ ಹೃದಯಾಂತರಾಳದಿಂದ ಭಾವನೆಗಳ ಪದಗಳನ್ನು ಜೋಡಿಸಿ ಕವನಗಳನ್ನು ಬರೆಯುವ ಆ ಅನಾಮಿಕನನ್ನು ನೋಡುವ ಹತಾಶ ಬಯಕೆ ಅವಳಲ್ಲಿ ನಿಧಾನವಾಗಿ ಕಾಡತೊಡಗಿತು.",[11,100,101],{},"\"ಶ್ವೇತಾ, ಎಂತ ಮಾಡ್ತ ಇದ್ದೆ? ನಾನು ನಿನ್ ಹತ್ರ ಸ್ವಲ್ಪ urgent ಆಗಿ ಮಾತಾಡಕಾಗಿತ್ತು\". \"ಹ್ಮ್. ಹೇಳು ಅಪ್ಪ. ನಾನು ಯಾವತ್ತೂ busy ಅಂತ ಹೇಳದಿಲ್ಲೆ, especially ನಿಂಗೆ. ಹೇಳು ಎಂತು ಅಂತ. ಎಂತು ಅಷ್ಟು ಸೀರೀಯಸ್ ವಿಷ್ಯ?\". ತನ್ನನ್ನು ಪ್ರೀತಿಯಿಂದ ಬೆಳೆಸಿದವರಿಗೆ ಅವಳು ತೋರುತ್ತಿದ್ದ ಗೌರವ, ಪ್ರೀತಿಯನ್ನು ಬಣ್ಣಿಸಲು ಸಾಧ್ಯವೇ ಇರಲಿಲ್ಲ. \"ನಿನ್ ಮದುವೆ ಬಗ್ಗೆ ಪ್ರಸ್ತಾಪ ಮಾಡ್ಕಂಡು ಒಬ್ರು ಬಂದಿದ್ದ. ಶ್ರೀಮಂತ ಮನೆತನದವು. ಜೊತೆಗೆ ಒಳ್ಳೆ ಜನಾನು ಹೌದು.\"",[11,103,104],{},"ಇದನ್ನು ಕೇಳುತ್ತಲೇ ಅವಳ ಮುಖ ಬಾಡಿ ಹೋಯಿತು. ಮೊದಲ ಬಾರಿಗೆ ಅವಳ ಹೃದಯಕ್ಕೆ ಮುಳ್ಳೊಂದು ಚುಚ್ಚಿದ ಅನುಭವವಾಯಿತು. ಅವಳಿಗೆ ಒಂದು ಸತ್ಯವಂತೂ ತಿಳಿದಿತ್ತು, ಅವನನ್ನು ನೋಡದೆ ಇದ್ದರೂ ಇಬ್ಬರ ಮಧ್ಯೆ ಏನೋ ಒಂದು ದೈವಬಂಧವಿದೆ ಅನ್ನಿಸತೊಡಗಿತ್ತು. ಅದು ಪ್ರೀತಿಯೆಂದು ಹೇಳಲಾಗದಿದ್ದರೂ, ದಿನಗಳು ಕಳೆದಂತೆ ಅವಳಿಗೇ ತಿಳಿಯದಂತೆ ಅವನನ್ನು ಇಷ್ಟ ಪಡತೊಡಗಿದ್ದಳು. ಆದರೆ ತಂದೆಯ ಮುಂದಿನ ಮಾತುಗಳನ್ನು ಕೇಳುತ್ತಿದ್ದಂತೆ ನಿರಾಶೆ ಮಾಯವಾಗಿ, ಹಾರುವ ಚಿಟ್ಟೆಯಂತೆ ಮನಸ್ಸು ಉಲ್ಲಾಸಗೊಂಡಿತು, \"ಅವನ್ನ ನಾನು ಮೊನ್ನೇನೇ ಭೇಟಿ ಮಾಡಿದ್ದಿ. ತುಂಬಾ ಒಳ್ಳೆಯ ನಡತೆಯ ಹುಡ್ಗ. 28 ದಾಟದ್ರೊಳಗೆ ಯಶಸ್ವಿ businessman ಅಂತ ಹೆಸ್ರು ತಗೈoದ. ಅವನ್ ಹೆಸ್ರು ಹರೀಶ ಅಂತ, ಇಲ್ಲೆ ಕರುಮನೆ ಆತು ಅವಂಗೆ. ಅವ್ರಾಗೆ ಈ ಪ್ರಸ್ತಾಪ ಮುಂದಿಟ್ಕಂಡು ಬಂದಿದ್ದ. ನಂಗೊತಿದು, ನಮ್ಮಿಬ್ಬರ ಕುಟುಂಬದ ಅಂತಸ್ತು ಸ್ವರ್ಗ, ನರಕದಷ್ಟೆ ಅಂತರ ಇದ್ದು ಅಂತ. ಆದ್ರೆ ಅವುಕ್ಕೆ ನಿಜವಾಗ್ಲೂ ನಿನ್ ಮೇಲೆ ಮಮತೆ ಇದ್ದು. ಮದುವೆ ಅದ್ಮೇಲೂ dance ಮುಂದುವರಸ್ತೆ ಅಂದ್ರೂ ಯಾವ್ದೇ ಅಭ್ಯಂತರ ಇಲ್ಲೆ ಅಂತ ಹೇಳಿದ್ದ\".  ಉಫ್... ಆ ದೇವರಿಗೇ ಗೊತ್ತು, ಅವಳು ಸಂತೋಷದಿಂದ ಕುಣಿಯುವುದನ್ನು ಹೇಗೆ ತಡೆದುಕೊಂಡಳು ಅಂತ. ತನ್ನ ಆನಂದವನ್ನು ಹತೋಟಿಗೆ ತಂದುಕೊಂಡು ನಿಧಾನವಾಗಿ ತಲೆಯನ್ನು ಆಡಿಸಿ, ಸಣ್ಣ ದನಿಯಲ್ಲಿ, \"ನೀನ್ ಹೆಂಗ್ ಹೇಳ್ತ್ಯೊ ಹಂಗೆ ಆಗ್ಲಿ. ನೀನ್ ಯಾರನ್ನ ತೋರ್ಸಿದ್ರು ಅವ್ರನ್ನೇ ಮದುವೆ ಆಗ್ತಿ.\"",[60,106],{},[11,108,109],{},"ನಿಧಾನವಾಗಿ ತಲೆಯೆತ್ತಿ ನೋಡಿದರೆ ಅವನೇ ಅವಳೆದುರು ನಗುತ್ತಾ ಕುಳಿತಿದ್ದ. ಅವಳ ಹೃದಯ ಡವ ಡವ ಎಂದು ಜೋರಾಗಿ ಬಡಿದುಕೊಳ್ಳಲಾರಂಬಿಸಿತು. ಇಬ್ಬರ ಕಣ್ಣಿನ ದೃಷ್ಟಿಯೂ ಸೇರಿ ಒಂದಾಯಿತು. ನಾಚಿಕೆಯಿಂದ ಅವಳಿಗೆ ಏನು ಮಾತಾಡಬೇಕೆಂಬುದೇ ತೋಚಲಿಲ್ಲ. ಅವಳ ಅದೃಷ್ಟವನ್ನು ಅವಳಿಗೇ ನಂಬಲು ಸಾಧ್ಯವಾಗುತ್ತಿಲ್ಲ. ತುಂಬಾ handsome, ಅದರೊಟ್ಟಿಗೆ ತಂದೆ ಹೇಳಿದಂತೆ ಒಳ್ಳೆಯ ಗುಣವುಳ್ಳವನು, ಪ್ರತಿಯೊಂದು ಹೆಣ್ಣು ಕೂಡ ಇಂತಹವನನ್ನು ಸ್ವಂತ ಮಾಡಿಕೊಳ್ಳಲು ಬಯಸುವಾಗ, ತನಗೆ ಈ ಅದೃಷ್ಟ ತಾನಾಗಿಯೇ ಒಲಿದಿದೆ ಅಂದುಕೊಂಡಳು. ಅವನು ಇವಳ ಅನಿಸಿಕೆಯನ್ನು ಕೇಳಿದಾಗ ತುಸುನಕ್ಕು ತನ್ನ ಒಪ್ಪಿಗೆಯನ್ನು ಸೂಚಿಸಿದಳು.",[11,111,112],{},"ಅವಳ ಮೃದು ಕೈಗಳ ಮೇಲೆ ತನ್ನ ಕೈಯನ್ನು ಆನಿಸಿದ. ದೊಡ್ಡದೊಂದು restaurant ಒಂದರ ಖಾಸಗಿ ಕೋಣೆಯೊಂದರಲ್ಲಿ ಇಬ್ಬರೇ ಸೋಫಾದ ಮೇಲೆ ಒಬ್ಬರ ಕೈಯನ್ನೊಬ್ಬರು ಹಿಡಿದು ಕುಳಿತಿದ್ದಾರೆ. ಹಠಾತ್ ನಿಶ್ಚಿತಾರ್ಥದ ನಂತರ ಇವರಿಬ್ಬರು ಹೊರಗಡೆ ಭೇಟಿಯಾಗಿದ್ದು ಇದೇ ಮೊದಲ ಬಾರಿ. \"ಶ್ವೇತಾ. sorry, ನಿನ್ಹತ್ರ ಒಂದು ವಿಷ್ಯಾನ ಸ್ವಲ್ಪ late ಆಗಿ ಕೇಳ್ತಾ ಇರದಿಕ್ಕೆ. But... ... ಈ engagement ಓಕೇನಾ? ನೀನು ನನ್ ಜೊತೆ ಖುಷಿಯಾಗಿ ಇದ್ದೇ ಅಲ್ದಾ? ಬೇರೆ ಯಾರಾದ್ರೂ.....\", ಸ್ವಲ್ಪ ಹಿಂಜರಿಯುತ್ತಲೆ ಕೇಳಿದ. ಅವನು ತನ್ನ ಮಾತನ್ನು ಪೂರ್ಣಗೊಳಿಸುವುದರೊಳಗಾಗಿ, ಅವಳು ತನ್ನ ತಲೆಯನ್ನು ಅಡ್ಡಡ್ಡವಾಗಿ ಆಡಿಸಿ, ಸಣ್ಣದಾಗಿ ಹೇಳಿದಳು, \"Pl..Please, ಬೇರೆ ಯಾರಾದ್ರೂ ನನ್ ಮನಸ್ಸಲ್ಲಿ ಇದ್ದಿದ್ರೆ, ನಿಮ್ಗೆ ಮುಂಚೇನೇ ಹೇಳಿ ಬಿಡ್ತಿದ್ದಿ.  Actually, ನೆನ್ನೆ ನಾನು ನಿಮ್ಗೆ ಕಾಲ್ ಮಾಡಿದ್ದು ಬೇರೆ ಕಾರಣಕ್ಕಾಗಿ. ನಾನು ನಿಮ್ ಹತ್ರ ಏನೋ ಕೇಳಕಾಗಿತ್ತು.\"",[11,114,115],{},"ಮತ್ತೆ ಕಣ್ಣುಗಳು ಒಂದಾದವು. \"ಹ್ಮ್. ಕೇಳು. ಏನ್ ಬೇಕು?\". \"ಇದಕ್ಕೂ ಮೊದಲೇ ಎಂತಕೆ ನನ್ನ ಭೇಟಿ ಮಾಡಕೆ ಬರ್ಲೇ? ಉಂ. ನೀವು ಅಷ್ಟೊಂದು ಸಾರಿ ಗುಲಾಬಿ ಹೂ ಕಳ್ಸಿದ್ದಿ, ಆದ್ರೆ ಒಂದೇ ಒಂದು ಬಾರಿನು ಮುಖತಃ ಭೇಟಿ ಮಾಡ್ಲೆ...\". ಹರೀಶ ಈ ಬಾರಿ ಯಾವುದೇ ಹಿಂಜರಿಕೆಯಿಲ್ಲದೆ ಅವಳ ಕೆನ್ನೆಯ ಮೇಲೆ ತನ್ನ ಕೈಯನ್ನಿಟ್ಟು ನಗುತ್ತಾ ಹೇಳಿದ, \"ಶ್ವೇತಾ, ನಿಂಗೆ ನಾ ಈಗ ಹೇಳದು ಸ್ವಲ್ಪ ಅತಿಯಾತು ಅಂತ ಅನಿಸ್ಲಕ್ಕು.  ಆದ್ರೆ fisrt ಟೈಮ್ ಲಿಂಗನಮಕ್ಕಿಲಿ ನಡೆದ ಕಾರ್ಯಕ್ರಮದಲ್ಲಿ ನಿನ್ ನೋಡಿದಾಗ್ಲೆ ಪ್ರೀತಿಲಿ ಬಿದ್ದಿದ್ದಿ. ಅವತ್ತಿನ್ ದಿನಾನೆ ಅರ್ಥ ಆಗಿತ್ತು, ನೀನೊಂದು ಅಪರೂಪದ ಮುತ್ತು, ನನ್ ಲೈಫಲ್ಲಿ ನೀನು ತುಂಬಾ precious ಅಂತ. ನಾನು ನಿನ್ನಂತ ಹುಡುಗಿ ಜೊತೆ ಹೊರಗೆ ಸುತ್ತಾಡದು ಸರಿ ಅನಿಸ್ಲೆ. ಅದಕ್ಕಾಗಿ ಸ್ವಲ್ಪ ದಿನ ನನ್ನನ್ನ ನಾನೇ ಪರೀಕ್ಷೆ ಮಾಡ್ಕಳಕು ಅಂತ ಮಾಡಿದಿ; ಇದು ನಿಜವಾಗ್ಲೂ ಪ್ರೀತಿನಾ ಅಥವಾ ಬರೀ ಆಕರ್ಷಣೆನಾ ಅಂತ. ಯಾವಾಗ ಇದು love ಅಂತ ಗೊತಾತೋ, ಕೂಡ್ಲೆ ಮನೇಲಿ ವಿಷ್ಯ ತಿಳಿಸಿ, ನಿಮ್ಮನೆಗೆ ಮದುವೆ ಪ್ರಸ್ತಾಪ ಮಾಡಲೆ ಬಂದಿ. I want to have you in my life, forever.\" ನಾಚಿಕೆಯಿಂದ ಅವಳ ಕೆನ್ನೆಗಳು ಕೆಂಪು ಬಣ್ಣಕ್ಕೆ ತಿರುಗಿ ಅವಳ ಅಂದವನ್ನು ಇಮ್ಮಡಿಗೊಳಿಸಿತು. ಕಣ್ಣುಗಳು ಅವನ ಕಣ್ಣಿನಲ್ಲಿ ಕಣ್ಣಿಟ್ಟು ನೋಡಲು ನಿರಾಕರಿಸಿದವು. \"ನಿಂಗೇನು ಅಭ್ಯಂತರ ಇಲ್ಲೆ ಅಲ್ದ ಒಂದು ತಿಂಗಳ ನಂತ್ರ ಮದುವೆ ಫಿಕ್ಸ್ ಮಾಡಿದ್ರೆ?\".",[11,117,118],{},"ಶ್ವೇತಾಳ ಮೌನವೇ ಇದಕ್ಕೆ ಉತ್ತರವಾಯಿತು. ತಗ್ಗಿಸಿದ್ದ ತಲೆಯನ್ನು ಮೇಲೆತ್ತಲಿಲ್ಲ. ಹರೀಶ ಅವಳತ್ತ ಇನ್ನಷ್ಟು ಸರಿದ. ಅವಳ ಸೊಂಟದ ಸುತ್ತ ಎಡಗೈಯನ್ನು ಬಳಸಿ ತನ್ನತ್ತ ಸೆಳೆದ. ನಿಧಾನವಾಗಿ ತಲೆ ಬಾಗಿಸಿ ಅವಳ ಬಲಗಿವಿಯ ತೀರಾ ಸನಿಹಕ್ಕೆ ಬಂದು ಸಣ್ಣದಾಗಿ ಪಿಸುದನಿಯಲ್ಲಿ,  ” ಅಷ್ಟೇ, ಅದೇ ಅಂತ್ಯ. ಆಮೇಲೆ ನೀನು ನನ್ನವಳು, ಸಂಪೂರ್ಣವಾಗಿ ನನ್ನವಳು.....just wait for one month.\" ಅದಕ್ಕೆ ಹೌದೆನ್ನುವಂತೆ ನಾಚಿಕೆಯಿಂದ ನಗುತ್ತಾ ತಲೆ ತೂಗಿದಳು. ಅವರ ಈ ಏಕಾಂತತೆ ಅವಳ ಕನ್ಯತ್ವದ ಹೃದಯದಲ್ಲಿ ಹಾವಳಿ ಎಬ್ಬಿಸಿತ್ತು. ಅವಳೆಂದೂ ಒಬ್ಬ ಹುಡುಗನ ಜೊತೆ ಇಷ್ಟೊಂದು ಸನಿಹತೆಯ ಅನುಭವಿರಲಿಲ್ಲ. ಹರೀಶ ತನ್ನ ತುಟಿಯನ್ನು ಅವಳ ಕೆನ್ನೆಗೆ ಸೋಕಿಸಿದ. ಆದರೆ ಅವಳು ಕಂಪಿಸುತ್ತಿರುವುದನ್ನು ನೋಡಿ, ಇಂತಹ ಆತ್ಮೀಯತೆ ಅವಳಿಗೆ ಹೊಸತು ಎಂದು ಮನದಟ್ಟಾಗಿ ಅಪಾರವಾದ ಆಹ್ಲಾದಕರ ಅನುಭವವಾಯಿತು. ತೋರು ಬೆರಳಿನಿಂದ ಅವಳ ಮುಂಗುರಳನ್ನು ಸರಿಸಿ, ಗುಲಾಬಿಯ ಎಸಳಿನಂತಿದ್ದ ಕೆನ್ನೆಗೆ ಮುತ್ತೊಂದನ್ನು ನೀಡಿ ಮೆಲುದನಿಯಲ್ಲಿ ಹೇಳಿದ,-\"We'll do much more, after marriage\". ಅವಳೆಡೆಗೆ ಕಣ್ಣು ಮಿಟುಕಿಸಿದ. ಅವಳು ಮತ್ತೆ ನಾಚಿ ನೀರಾದಳು.",[60,120],{},[11,122,123],{},"\"Get a room guys. ಇದು ಸಾರ್ವಜನಿಕ ಸ್ಥಳ.\"- ಹರೀಶ  ತನ್ನ ಬಹುಕಾಲದ ಆಪ್ತ ಗೆಳೆಯ ಶ್ರೀಧರ್ ಹಾಗೂ ಅವನ ಹಾಲಿ ಗೆಳತಿ ಸೌಮ್ಯಳಿಗೆ ಗದರಿದ. ಅವನು ಒಳಕ್ಕೆ ಧಾವಿಸಿದಾಗ ಅವರಿಬ್ಬರೂ ನಾಳೆ ಎಂಬುದು ಬರುವುದೇ ಇಲ್ಲವೇನೋ ಎಂಬಂತೆ ಇಬ್ಬರೂ ಚುಂಬನದಲ್ಲಿ ಮಗ್ನರಾಗಿದ್ದರು. ಸೌಮ್ಯ ಎಂದಿನಂತೆ ತುಂಡುಡುಗೆಯಲ್ಲಿ ಇದ್ದಳು. ಹರೀಶನಿಗೆ ಇಂತವರನ್ನು ಕಂಡರೆ ಸ್ವಲ್ಪವೂ ಹಿಡಿಸುತ್ತಿರಲಿಲ್ಲ. ಪ್ರೀತಿ-ಸ್ನೇಹ-ಸಂಬಂಧ-ಸಂಸ್ಕೃತಿಗಳನ್ನು ಕೀಳಾಗಿ ಕಾಣುವವರನ್ನು ಕಂಡರೆ ಸಹಿಸುತ್ತಿರಲಿಲ್ಲ. ವಿವಿಧ ಚಟಕ್ಕೆ ಬಲಿಯಾಗಿದ್ದ ಸ್ನೇಹಿತನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದನಾದರೂ ಅವನು ನಡೆಸುತ್ತಿದ್ದ ಜೀವನ ಶೈಲಿಯನ್ನು, ತೆಗೆದುಕೊಳ್ಳುತ್ತಿದ್ದ ನಿರ್ಣಯಗಳನ್ನು ದ್ವೇಷಿಸುತ್ತಿದ್ದ.",[11,125,126],{},"\" ಓಹ್...THE GENTLEMAN ಹರೀಶ್ ಭಟ್ ಅವರಿಗೆ ಸ್ವಾಗತ.\"- ಥಟ್ಟನೆ ಸೌಮ್ಯಳಿಂದ ಬಿಡಿಸಿಕೊಂಡು ಆನಂದದಿಂದ ಕಿರುಚಿದ. \"Stop it ಶ್ರೀಧರ್. ಸೌಮ್ಯ, Please, leave us alone for sometime\". ಮೊದಲು ಹೊರಗೆ ಹೋಗಲು ಹಿಂದೆ-ಮುಂದೆ ನೋಡಿದರೂ, ಶ್ರೀಧರ್ ಸನ್ನೆ ಮಾಡಿದ ಕೂಡಲೇ ಭರಭರನೆ ಹೊರ ನಡೆದಳು. ಅವಳು ಹೊರಹೋಗುತ್ತಿದ್ದಂತೆಯೇ ಹರೀಶ್ ತನ್ನ ಮಾತನ್ನು ಮುಂದುವರೆಸುತ್ತಾ,-\" ನಿಂಗೆ ಚೆನ್ನಾಗಿ ಗೊತಿದು, ನಂಗೆ ಇಂತ ಹುಡ್ಗೀರನ್ನ ಕಂಡ್ರೆ ಆಗದಿಲ್ಲೆ ಅಂತ. Shame on you. Atleast ಅವಳ image ಆದ್ರೂ ಹಾಳ್ ಮಾಡಡ. ಅವಳು...ಅವ\".",[11,128,129],{},"\" ಹೇ.. ಹೇ.. ಮತ್ತೆ ಅದೇ ಹಳೇ lecturing ಶುರು ಮಾಡಡ. After all, ನಾವ್ ಇರದು pubಲ್ಲಿ. ಅವಳು ನನ್ Girlfriend, ನಿಂದಲ್ಲ. ನಾನ್ ಯಾವತ್ತೂ ನಿನ್ನ್ ಹುಡ್ಗಿ ಕಡೆ ಕಣ್ ಎ...\".",[11,131,132],{},"\"ಶ್ರೀಧರ್... \" ಎಂದು ಗರ್ಜಿಸಿ ಹರೀಶ್ ತನ್ನ ಕೈಯನ್ನೆತ್ತಿದೊಡನೆಯೇ, ಶರಣಾಗುವವನಂತೆ,-\"Sorry Bro.. Tell me, ಅತಿಉತ್ತಮರು ಈ ಕಡೆ ಧಾವಿಸಿದರ ಉದ್ದೇಶವೇನೆಂದು ತಿಳಿದುಕೊಳ್ಳಬಹುದೇ?\".",[11,134,135],{},"\" ಮೊನ್ನೆಯಿಂದ ನಿಂಗೆ ಕಾಲ್ ಮಾಡ್ತಾನೆ ಇದ್ದಿ, ಆದರೆ switched-off ಅಂತ ಬತ್ತಿತ್ತು ಅಥವಾ busy ಅಂತ. Mostly ನೀನು ನನ್ನ ಬೇಕು ಅಂತಾನೆ avoid  ಮಾಡ್ತ ಇದ್ರು ಇದ್ದಿಕ್ಕು. ಅದಕ್ಕಾಗೇ ನಾನಿಲ್ಲಿವರೆಗೆ ಬರಕಾತು. Actually, ನಿಂಗೆ ಒಂದು good news ಹೇಳಕಾಗಿತ್ತು. ಶ್ರೀ, ನಂಗೆ ಮೊನ್ನೇನೆ engagement ಆತು, ಇನ್ನೊಂದ್ ತಿಂಗಳೊಳಗೆ ಮದುವೆ fix ಆಗ್ತು.\"",[11,137,138],{},"\"What the..! ಆ ಮೇಷ್ಟ್ರು ಮಗಳು.. dancer.. ಥೈ ತಕ ತಕ... ಹಾ..ಹಾ..ಹಾ..\".",[11,140,141],{},"\" ಅಂತ ಪದಗಳನ್ನ use ಮಾಡಡ. ನಿನ್ ಹತ್ರ ಮಾತಾಡಿ ಪ್ರಯೋಜನ ಇಲ್ಲೆ, ಕುಡ್ದಿದ್ದು ಹೆಚ್ಚಾಯ್ದು.\"- ಎಂದು ಶ್ರೀಧರ್ ನ ನಡತೆಯನ್ನು ಖಂಡಿಸಿ ಹೊರಡಲನುವಾದ.",[11,143,144],{},"\"Sorry Bro, sorry.. please. So..., ಹಾಗಾದ್ರೆ ನೀನು ನಿನ್ನ ಕನಸಿನ ರಾಣಿ ಜೊತೇನೇ ಮದುವೆ ಆಗಕೆ ಹೊರಟಿದ್ದೆ.\" ಹರೀಶ ಕೂಡಲೇ ನಗುತ್ತಾ ಹೇಳಿದ,-\"Yes, She's my princess, dream girl. ಅವಳ ಹೆಸ್ರು ಶ್ವೇತಾ. ನೀನು ಗ್ರೀಸ್ ಗೆ business-trip ಅಂತ ಹೋಗಿದ್ದಾಗ್ಲೇ ನನ್ engagement ಆತು.\" ತನ್ನ ಕಣ್ಣುಗಳನ್ನು ತಿರುಗಿಸುತ್ತಾ ಮತ್ತೆ ಹೇಳಿದ,-\" ನಿಂಗೆ ನೆನಪಿಲ್ಲೆ ಅನಿಸ್ತು, ಆದ್ರೆ ನಾನ್ one-time ಹೇಳಿದ್ದಿದ್ದಿ. ಅವಳನ್ನ ಬಿಟ್ಟು ಬದುಕಕೆ ಆಗ್ತಲ್ಲೇ ಅಂತ. So, ಯಾರಿಗೂ ವಿಷ್ಯ ತಿಳಿಸ್ದೇ, unofficial ಆಗಿ ಮನೆಲೇ simple ಆಗಿ engagement ಮಾಡಿ ಆತು. ಆದ್ರೆ ಮದುವೆಗೂ ಮುಂಚೆ ದೊಡ್ಡದಾಗಿ bachelor-party ಮಾಡನ ಅಂತ... ಇದ್ದು\".",[11,146,147],{},"\"Congrats yaar..! one-time ನೀ ಹೇಳಿದ್ದೆ... ಅವಳು ಮಾಡಕಿದ್ರೆ ಅಪ್ಸರೆ ತರ ಕಾಣ್ತ ಅಂತ. Uff.. ಹಾಗಾದ್ರೆ ಅಮ್ಮಂಗೆ, ತಂಗಿಗೆ ಹೇಳಕಾತು. ಅವಿಬ್ರೂ ಬಾರಿ ಖುಷಿ ಪಡ್ತಾ ಇದನ್ನ ಕೇಳಿ\". \"Ohh.. ಶ್ರೀ, Thanks ಕಣೋ\", ಹೇಳಿ ಮತ್ತೆ ಪೀಠಿಕೆ ಹಾಕದೆ ಶ್ರೀಧರನನ್ನು ಸೆಳೆದು ಬಿಗಿಯಾಗಿ ಅಪ್ಪಿಕೊಂಡ.",[11,149,150],{},"ಎರಡು ದಿನಗಳ ನಂತರ, ಶ್ರೀಧರ ದಾಪುಗಾಲುಗಳನ್ನಿಡುತ್ತಾ cabinನೊಳಗೆ ನುಗ್ಗಿದ. ಅವನ ತಲೆಗೂದಲು ಕೆದರಿಹೋಗಿ, ಹುಚ್ಚನಂತೆ ಕಾಣುತ್ತಿದ್ದ. ಅವನ ಕಣ್ಣುಗಳು ಬೆಂಕಿಯುಂಡೆಗಳನ್ನು ಉಗುಳುತ್ತವೆಯೇನೋ ಅನ್ನುವಷ್ಟು ಕೆಂಪಾಗಿದ್ದವು. ಹರೀಶನ ಬಳಿ ಸಾಗಿ ಕಾಲರ್ ಹಿಡಿದು ಘರ್ಜಿಸಿದ, -\"ಎಷ್ಟು ಧೈರ್ಯ ನಿಂಗೆ? ಬೇರೆ ಯಾರನ್ನೋ ಮದುವೆ ಆಗೋವಷ್ಟು ಧೈರ್ಯನಾ?\".",[11,152,153],{},"\"What...!? ಏನ್..? ಏನ್ ಹೇಳ್ತಾ ಇದ್ದೇ ನೀನು? ಹುಚ್ ಹಿಡದ್ದ. ಯಾವುದರ ಬಗ್ಗೆ ಮಾತಾಡ್ತಾ ಇದ್ದೇ?\"- ಏನೂ ತಿಳಿಯದೆ ಗೊಂದಲದಲ್ಲಿ ಹರೀಶ ಬಡಬಡಾಯಿಸಿದ. ಸುಮ್ಮನೆ ಶ್ರೀಧರ ತಮಾಷೆಗೆ ಮಾಡುತ್ತಿರಬಹುದೇನೋ ಎಂದು ಹಿಂದೆ ತಿರುಗಹೋದ.",[11,155,156],{},"\"ಪಟಾರ್....\", ಶ್ರೀಧರ ಉತ್ತರ ನೀಡುವ ಬದಲು ಹರೀಶನ ಕೆನ್ನೆಗೆ ಬಲವಾಗಿ ಬಾರಿಸಿದ್ದ.",[11,158,159],{},"\"ಈಗ ನೀನು ಮದುವೆ ನನ್ ತಂಗೀನ ಮದುವೆ ಆಗ್ಲೇ ಬೇಕು. ಉಷಾ ನಿನ್ನ love ಮಾಡ್ತ ಇದ್ದ. ನೀನು ಕೊಳಕು ನಾಯಿ. ಅವಳನ್ನ ಕಂದಕಕ್ಕೆ ತಳ್ಳಿದೆ\".",[11,161,162],{},"\"ಇಲ್ಲೆ. ನಿಂಗೆ ತಲೆಗಿಲೆ ಕೆಟ್ಟಿದ್ದ.\", ಎನ್ನುತ್ತಾ ಶ್ರೀಧರನನ್ನು ತನ್ನಿಂದ ದೂರ ತಳ್ಳಿ ಅವನ ಕಾಲರ್ ಹಿಡಿದು ಚೀರಿದ,- \" I never loved ಉಷಾ. ನಾನಿದನ್ನ ಅವಳಿಗೆ ಹಿಂದೇನೆ ಹೇಳಿದ್ದಿ, ಬಹಳ ಸಮಯದ ಹಿಂದೇನೆ. ಜೊತೆಗೆ ಮೊನ್ನೆ ಇನ್ನೂ ಇದರ ಬಗ್ಗೆ ನಮ್ಮಿಬರ ಮಧ್ಯೆ ಬಾರಿ ವಾದ ಆಗಿತ್ತು. ಅವಾಗ್ಲೂ ಇದನ್ನೇ ಹೇಳಿದ್ದಿ. I love ಶ್ವೇತಾ. I always do. ನಾನ್ ಮದ್ವೆ ಆಗೋದು ಅವಳನ್ನೇ. ಅವಳೇ ನನ್ ಜೀವ. ಅವಳೇ ನಂಗೆ ಎಲ್ಲಾದುವ.\"",[11,164,165],{},"\"ನೀನು ಆ middle-class ಹುಡ್ಗಿಗಾಗಿ, ಕೇವಲ ಆ b***ಗಾಗಿ ನನ್ ತಂಗೀನ ಪ್ರಪಾತಕ್ಕೆ ತಳ್ಳಕೆ ನಾನ್ ಬಿಡದಿಲ್ಲೆ. ನಿಂಗ್ ಏನ್ ಗೊತಿದು, ನಿನ್ಗಿಂತ ಮುಂಚೆ ಎಷ್ಟು bedನ ಬಿಸಿ ಮಾಡಿದ್ದ ಅಂತ...\".",[11,167,168],{},"\"ಶ್ರೀ..\", ಅರಚುತ್ತಾ ಅವನ ಕೆನ್ನೆಗೆ ಏಟು ಹಾಕಿದ. \"Get out!!! ಹೋಗು, ನಿನ್ psycho ತಂಗಿ ಜೊತೆ ಸಾಯಿ ಹೋಗು. ನಾನು ಅವಳನ್ನ ಯಾವ್ದೇ ಕಾರಣಕ್ಕೂ ಮದ್ವೆ ಆಗದಿಲ್ಲೆ. ಅವಳಿಗೆ ಹೇಳು, ಬೇರೆ ಯಾರಿದ್ದಾದ್ರೂ ಬೆಡ್ ಬಿಸಿ ಮಾಡಕೆ. ನಂಗೆ interest ಇಲ್ಲೆ...\". ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಶ್ರೀಧರ ಇವನ ಮುಖಕ್ಕೆ ಬಲವಾಗಿ ಗುದ್ದಿದ.",[11,170,171],{},"ಆದರೆ ಹರೀಶ ತನ್ನ ಬಾಯಿಯಿಂದ ಬರುತ್ತಿದ್ದ ರಕ್ತವನ್ನು ಒರಸಿಕೊಂಡು, ಕೊಂಕು ನಗೆ ಬೀರುತ್ತಾ ಹೇಳಿದ,-\" ಶ್ರೀ, it's so sad, ನಿನ್ನನ್ನ ಒಂದು ಕಾಲದಲ್ಲಿ best friend ಅಂತ consider ಮಾಡಿದ್ದಕ್ಕೆ. ಆದ್ರೆ ನಿಂಗೆ ನನ್ ಮೇಲೆ ಅಧಿಕಾರ ಚಲಾಯಿಸೋ ಹಕ್ಕು ಇಲ್ಲೆ. ನಂಗೆ ನಿನ್ ತಂಗಿ ಮೇಲೆ ಯಾವತ್ತೂ interest ಇರ್ಲೇ. ಅವಳು ನನ್ love ಮಾಡ್ತಾ ಇದ್ರೆ, ಅದು ನನ್ ತಪ್ಪಲ್ಲ. I don’t love her.\"",[11,173,174],{},"\"ನಿಂಗೆ ಎಷ್ಟು ಧೈರ್ಯ ಉಷಾಗೆ hurt ಮಾಡಕೆ .\"",[11,176,177],{},"\"I can't help. I love Shwetha and  will marry her. It’s final.\"",[11,179,180],{},"ಸೆರೆಯಲ್ಲಿಟ್ಟ ಹುಲಿಯಂತೆ ಸಿಟ್ಟಿನಿಂದ ಉಸಿರು ಬಿಡುತ್ತಾ, ಮೇಲಿದ್ದ fileಗಳನ್ನು ನೆಲಕ್ಕೆಸೆದು, ಹರೀಶನತ್ತ ತನ್ನ ತೋರುಬೆರಳನ್ನು ಹಿಡಿದು ಘರ್ಜಿಸಿದ,-\"ಇದಕ್ಕೆ ತಕ್ಕ ಫಲ ಅನುಭವಿಸ್ಲೆ ಬೇಕು ನೀನು, ಮರೆಯಡ.\" ಎನ್ನುತ್ತಾ ಒಂದು ಕ್ಷಣವೂ ಅಲ್ಲಿ ನಿಲ್ಲದೆ ಹೊರಟುಹೋದ.",[11,182,183],{},"ರಾತ್ರಿ ಸುಮಾರು 11 ಗಂಟೆ. ಹರೀಶ ಬಾಕಿ ಉಳಿದಿದ್ದ ಆಫೀಸ್ ಕೆಲಸವನ್ನು ಮಾಡುತ್ತಾ ಕುಳಿತಿದ್ದ. ಅವನ ಮೊಬೈಲ್ಗೆ ಕರೆಯೊಂದು ಬಂತು. ಅತ್ತಕಡೆಯಿಂದ ಗದ್ಗದಿತ ದ್ವನಿಯಲ್ಲಿ ಸುಮಿತ್ರಾರವರು ಆಘಾತಕಾರಿ ಸುದ್ದಿಯೊಂದನ್ನು ತಿಳಿಸಿದರು; ಶ್ರೀಧರ ಬಲಾತ್ಕಾರದಿಂದ ಶ್ವೇತಾಳನ್ನು ಮದುವೆಯಾಗಿ, ಅವನ ಬಂಗಲೆಗೆ ಎಳೆದೊಯ್ದಿದ್ದಾನೆ. ನಮಗೆ ಏನು ಮಾಡಬೇಕೆಂದೇ ತೋಚುತ್ತಿಲ್ಲ. ಆ ಕ್ಷಣ ಅವನಿಗೆ ಏನಾಗುತ್ತಿದೆ ಎಂದು ತಿಳಿಯದಾಯಿತು. ಅವನ ಕೈಯಿಂದ ಜಾರಿದ ಮೊಬೈಲ್ ನೆಲದ ಮೇಲೆ ಬಿದ್ದು ಚೂರು ಚೂರಾಯಿತು, just like his heart.",[60,185],{},[11,187,188],{},[21,189,190],{},"Present day",[11,192,193],{},"\"ಶ್ವೇತಾ, ನಾವೀಗ ಹೊರಡಬೇಕು. \" \"ಹುಹ್...\", ಪರಿಚಿತ ದ್ವನಿಯನ್ನು ಕೇಳಿ, ತನ್ನ ಕತ್ತೆತ್ತಿ ದ್ವನಿ ಬಂದತ್ತ ಶೂನ್ಯ ನೋಟ ಬೀರಿದಳು. \"ಉಂ.. ಎಲ್ಲರೂ ಹೊರಟುಹೋದ. ಅತ್ತೆ, ಮಾವ, ನನ್ನಪ್ಪ-ಅಮ್ಮ... ನಾವಿಬ್ಬರೇ ಇಲ್ಲಿರದು. ನಾವೂ ಈಗ ಹೊರಡಕು.\" \"ಓಹ್..\", ಶ್ವೇತಾ ಎದ್ದು ನಿಲ್ಲಲು ಪ್ರಯತ್ನಿಸಿದಳು. ತಲೆ ಗಿರ್ರೆಂದು ತಿರುಗಿದಂತಾಗಿ ನೆಲಕ್ಕೆ ಕುಸಿದಳು. ಅವಳು ನೆಲವನ್ನು ತಾಕುವ ಮೊದಲೇ ಅವಳತ್ತ ಧಾವಿಸಿದ ಹರೀಶ, ತನ್ನ ಬಾಹುಗಳಲ್ಲಿ ಆಕೆಯನ್ನು ಭದ್ರವಾಗಿ ಹಿಡಿದುಕೊಂಡ.",[11,195,196],{},"\"ಶ್ವೇತಾ, are you fine? ಹೇ..ಏನಾಗ್ತಾ ಇದ್ದು? ಚೆನಾಗಿದ್ದೆ ತಾನೇ?\"",[11,198,199],{},"\"I.. I'm fine...fine. ಸ್ವಲ್ಪ ತಲೆ ತಿರುಗ್ತಿದ್ದು ಅಷ್ಟೇ.\"",[11,201,202],{},"\"ಓಹ್.. ಇವತ್ತು ತುಂಬಾ ತಿರುಗಾಡಿದ್ರಿಂದ ಸುಸ್ತಾಯ್ದು.\" ಅವಳನ್ನು ಮತ್ತೆ ಬೆಂಚಿನ ಮೇಲೆ ಕೂರಿಸಿ, ತಾನು ಅವಳ ಎದುರು ಮೊಣಕಾಲೂರಿ ಕುಳಿತುಕೊಂಡ. ಅವಳ ಕೈಯನ್ನು ಹಿಡಿದು, ಮೆಲುದ್ವನಿಯಲ್ಲಿ, \"are you okay? ಹೇಳು, ನಿಂಗೆ ಏನು ತೊಂದರೆ ಆಗ್ತಿದ್ದು? please, ಹೇಳು.\" ಶ್ವೇತಾ ತನ್ನ ತಲೆಯನ್ನು ಅಡ್ಡಡ್ಡವಾಗಿ ಏನು ಆಗಿಲ್ಲವೆಂದು ಆಡಿಸಿದರೂ ಕಣ್ಣಿನಿಂದ ನೀರು ಕೆನ್ನೆಯ ಮೇಲೆ ಜಾರಿತು.",[11,204,205],{},"\"Please ಶ್ವೇತಾ. ನಿಂಗೆ ಚೆನ್ನಾಗಿ ಗೊತಿದು, ನನ್ first preference ನಿನ್ನ ಖುಷಿಗೆ ಅಂತ. Tell me, what happened? ನಾನ್ solve ಮಾಡ್ತಿ. ಯಾರಾದ್ರೂ ಏನಾದ್ರೂ ಹೇಳಿದ್ವಾ?\"",[11,207,208],{},"ಅವಳು ತನ್ನ ಮೌನವನ್ನು ಮುಂದುವರಿಸಿದಳು. ಹರೀಶ ಅಸಹನೆಯಿಂದ ಅವಳಿಗೆ ಗದರಲೂ ಆಗದೆ, ಸಮಾಧಾನವನ್ನೂ ಮಾಡಲಾರಾದವನಾದ. ಕೊನೆಯ ಬಾರಿಗೆಂಬಂತೆ ಕೇಳಿದ,  \"ಯಾವ್ ಚಿಂತೆ ನಿನ್ನ ಕಾಡ್ತಾ ಇದ್ದು? Media..or.... anyone else? ಬೇರೆ ಯಾರಾದ್ರೂ...?\", ಸ್ವಲ್ಪ ತಡವರಿಸುತ್ತಾ ಇವರಬ್ಬರ ಯಾತನೆಗೆ ಕಾರಣವಾದವನ ಹೆಸರನ್ನು ಮೆಲ್ಲಗೆ ಉಸುರಿದ, \"...ಶ್ರೀ?\" ಅವಳ ಕಣ್ಣುಗಳು ಹರೀಶನತ್ತ ತಿರುಗುತ್ತವೆ, ಅವನು ನಿಜವಾಗಿಯು ಇಷ್ಟೆಲ್ಲ ಪ್ರಮಾದಗಳಿಗೆ ಕಾರಣವಾದವನ ಹೆಸರನ್ನು ಮತ್ತೆ ತನ್ನೆದುರು ಯಾಕೆ ಹೇಳಿದನೆಂದು. ತನ್ನೆಲ್ಲಾ ಶಕ್ತಿಯನ್ನು ಪ್ರಯೋಗಿಸಿ ತಡೆಯಲೆತ್ನಿಸಿದರೂ ಕಣ್ಣೀರನ್ನು ತಡೆಯಲು ಸಾಧ್ಯವಾಗಲೇ ಇಲ್ಲ. ಅವಳ ಕಣ್ಣುಗಳು ಹರೀಶನ ತುಟಿಯ ಚಲನೆಯನ್ನೇ ಅನುಸರಿಸುತ್ತಿದ್ದರೂ, ಕಿವಿಗೆ ಅವನ ಮಾತುಗಳು ತಲುಪುತ್ತಿರಲೇ ಇಲ್ಲ, ಮಿದುಳು ಆ ಶಬ್ದಗಳನ್ನು ತರ್ಕಕ್ಕೆ ಒಳಪಡಿಸುವಲ್ಲಿ ವಿಫಲವಾಗಿತ್ತು.",[11,210,211],{},"ಶ್ವೇತಾ ಅವನತ್ತಲೇ ನೋಡುತ್ತಿರಬಹುದು, ಆದರೆ ಮನಸ್ಸು ಮಾತ್ರ ಕಾಲಚಕ್ರದಲ್ಲಿ ಹಿಂದೆ ಹಿಂದೆ ಓಡತೊಡಗಿತು. ಶ್ರೀಧರ್ ಎಂಬ ವ್ಯಕ್ತಿ ಅವಳ ಜೀವನದಲ್ಲಿ ವಿನಾಶಕಾರಿ, ಭಯಂಕರ ಬಿರುಗಾಳಿಯಾಗಿ ಪ್ರವೇಶಿಸಿದ ಆ ದಿನಗಳತ್ತ ವೇಗವಾಗಿ ಯೋಚನಾಲಹರಿ ಹರಿಯತೊಡಗಿತು.",[60,213],{},[11,215,216],{},[21,217,218],{},"ಒಂದು ವರ್ಷದ ಹಿಂದಿನ ಮಾತು",[11,220,221],{},"ಸಂಜೆ ಸುಮಾರು ಆರು ಗಂಟೆಯ ಸಮಯ. ಪಶ್ಚಿಮದಲ್ಲಿ ಜಾರುತ್ತಿದ್ದ ಸೂರ್ಯನ ಕಿರಣಗಳು ಆಕಾಶವನ್ನು ತಿಳಿಗೆಂಪು ಬಣ್ಣಕ್ಕೆ ತಿರುಗಿಸಿತ್ತು. ಮುಸ್ಸಂಜೆಯ ತಂಪಾದ ಗಾಳಿಯಿಂದ ಆಹ್ಲಾದಕರ ವಾತಾವರಣ. ಶ್ವೇತಾ ತನ್ನ ನೃತ್ಯಶಾಲೆ, \" ನಾದ ನೂಪುರ\"ದಿoದ ಹೊರಡುವುದು ಎಂದಿಗಿಂತ ಸ್ವಲ್ಪ ತಡವೇ ಆಗಿತ್ತು. ತಮ್ಮ ಗೂಡುಗಳಿಗೆ ಮರುಳುತ್ತಿದ್ದ ಚಿಲಿಪಿಲಿ ಸ್ವರಗಳನ್ನು ಆಲಿಸುತ್ತಾ, ತನಗೆ ತೋಚಿದ ಯಾವುದೋ ಹಾಡನ್ನು ಗುನುಗುನಿಸುತ್ತಾ ಮನೆಯ ಕಡೆ ಹೆಜ್ಜೆ ಹಾಕುತ್ತಿದ್ದಳು. ಗುಬ್ಬಚ್ಚಿ-ಗಿಣಿಗಳ ಇಂಪಾದ ದ್ವನಿಗಳ ಜೊತೆ ಇವಳ ಕೋಗಿಲೆಯ ಕಂಠವೂ ಸೇರಿ \"ಜಗತ್ತೇ ನೀನೆಷ್ಟು ಸುಂದರ..\" ಎನ್ನಬೇಕು. ಆದರೆ ಮುಂದಿನ ಕೆಲವೇ ಕ್ಷಣಗಳಲ್ಲಿ ಹದ್ದಿನ ಪ್ರವೇಶವಾಗುವುದನ್ನೂ, ಕೋಗಿಲೆಯನ್ನು ಭೇಟೆಯಾಡಿ ಹೊತ್ತೊಯ್ಯುವುದನ್ನೂ ಯಾರು ತಪ್ಪಿಸುವ ಹಾಗಿರಲಿಲ್ಲ. ಎಲ್ಲವೂ ವಿಧಿ ಲಿಖಿತ.",[11,223,224],{},"ಮನೆಯ ಗೇಟಿನ ಮೇಲೆ ಇನ್ನೇನು ಕೈಯಿಡಬೇಕೆನ್ನುವಷ್ಟರಲ್ಲಿ, ವೇಗವಾಗಿ ಬಂದತಹ ಕಾರೊಂದು ಅವಳಿಂದ ಆರಿಂಚು ದೂರದಲ್ಲಿ 'ಕಿರ್ರ್...ರ್ರ್' ಎಂದು ಜೋರಾಗಿ ಶಬ್ದ ಮಾಡುತ್ತಾ ನಿಂತಿತು. ಸ್ವಲ್ಪ ಆಘಾತವಾದರೂ ಸಾವರಿಸಿಕೊಂಡು, ಚಾಲಕನತ್ತ ತಿರುಗಿ ಕೂಗಿದಳು. ಆದರೆ ಕಾರಿನಿಂದ ಇಳಿದ, ಕುಡಿದು ತೂರಾಡುತ್ತಿದ್ದ ಸುಂದರ ಯುವಕನು, ತನ್ನ ಮೇಲೆ ಪತಿಯ ದರ್ಪವನ್ನು ತೋರುತ್ತಾ ಒರಟಾಗಿ ಚೀರುವುದನ್ನು ನೋಡಿ ಅವಳ ಬಾಯಿಂದ ಶಬ್ದಗಳು ಗಂಟಲಲ್ಲೇ ಉಳಿದವು. \"Shut up, Shut up your d**** mouth.\"",[11,226,227],{},"ಆ ಕ್ಷಣಕ್ಕೆ ಹಿಂದೆ ಸರಿದರೂ, ಕೂಡಲೇ ಸಾವರಿಸಿಕೊಂಡು, \"Who's the hell are you? ಯಾರು ನಿನಗೆ license ಕೊಟ್ಟಿದ್ದು? ಯಾವ ಮೂರ್ಖ ಕೊಟ್ಟಿದ್ದು?\"",[11,229,230],{},"\"ಹೇ.. ನನ್ನೆದುರು ಎಗರಾಡಡ... ಇದುವರೆಗೂ ಯಾರೂ ಕೂಡ ಈ ಶ್ರೀಧರ್ ಹೆಗಡೆ ಎದುರು ಮಾತಾಡೊ ಧೈರ್ಯ ಮಾಡಲ್ಲೆ\"",[11,232,233],{},"\"I dare...ನೀನು ಯಾರಾದ್ರೇನು? Mr... Whatever... ನಾನು, myself ಶ್ವೇತಾ ರಾವ್. ಸ್ವಲ್ಪ ಸಭ್ಯತೆ ಅನ್ನೋದು ನಿನಗೆ ಇದ್ದ? ಯಾವಾಗಾದ್ರೂ ಕಲ್ತಿದ್ಯ? ಒಂದು ಹೆಣ್ಣಿನ ಎದುರು ಹೇಗೆ ಮಾತಾಡಕು ಅಂತ ಗೊತ್ತಿಲ್ಯ?\"",[11,235,236],{},"ಶ್ರೀಧರ ತನಗೆ ಎದಿರು ವಾದಿಸುತ್ತಿರುವ ಶ್ವೇತಾಳ ಕಡೆಗೆ ಒಂದೇ ಸಮನೆ ಅವಳನ್ನೇ ನುಂಗುವಂತೆ ನೋಡಿದ. ರಕ್ತಗೆಂಪು ಬಣ್ಣಕ್ಕೆ ತಿರುಗಿದ್ದ ಅವನ ಕಣ್ಣುಗಳು ಭಯವನ್ನುಂಟುಮಾಡುವಂತಿದ್ದವು. ಮನಸ್ಸಿನಲ್ಲಿಯೇ ಮತ್ತೊಮ್ಮೆ ಹರೀಶನಿಗೆ ಶಪಿಸಿ, ಮತ್ತೆ ತನ್ನ ಅಸಭ್ಯ ಮಾತುಗಳನ್ನು ಮುಂದುವರೆಸಿದ, \"Oh..my..my God..Uff..! ನೀನೇ ಶ್ವೇತಾ. Okay..okay.. ನಾನು ಮರೆತಿದ್ದಿ. ಹೌದು, ನೀನು ಅದನ್ನ ಮಾಡ್ಲಕ್ಕು. Actually  ನೀನು  ಮಾಡಿ ಆಯ್ದು. Already ನನ್ನ ದಾರಿಗೆ ಅಡ್ಡ ಬಂದು ಆಯ್ದು.\" ಯಾವುದೇ ಹಿಂಜರಿಕೆಯಿಲ್ಲದೆ ಅವಳ ಕೈಗಳನ್ನು ಹಠಾತ್ತನೆ ಬಲವಾಗಿ ಹಿಡಿದುಕೊಂಡ. ಅವನ ಉಗುರುಗಳು ಹತ್ತಿಯಂತೆ ಮೃದುವಾಗಿದ್ದ ಅವಳ ಚರ್ಮವನ್ನು ಸೀಳಿ ಒಳಕ್ಕಿಳಿದವು. \"Yes. ಈಗ ನಿನ್ನ ತಪ್ಪೆಲ್ಲವನ್ನು ಸರಿ ಮಾಡ್ಕೊಳೋ ಕಾಲ ಬೈಂದು. ನಿನ್ನ ಮತ್ತು ಹರಿಯ ಮದುವೆ cancel. ಆ ಮದುವೆ ನಡೆಯಕೆ ನಾನು ಬಿಡದಿಲ್ಲೆ. You can't marry him. Never ever..\"",[11,238,239],{},"ಶ್ವೇತಾಳಿಗೆ ಇವನ ಈ ನಡತೆಯಿಂದ ಬಾರಿ ಆಘಾತವಾಯಿತಲ್ಲದೆ, ಹೆದರಿಕೆ ಪ್ರಾರಂಭವಾಯಿತು. ಇದುವರೆಗೂ ಯಾರೂ ಕೂಡ ಅವಳೊಂದಿಗೆ ಇಷ್ಟೊಂದು ಕೆಟ್ಟದಾಗಿ ನಡೆದುಕೊಂಡಿರಲಿಲ್ಲ. ಅವಳ ಶನಿದೆಸೆಯ ಮೊದಲ ಅಧ್ಯಾಯ ಆರಂಭವಾಗಿದ್ದಕ್ಕೆ ಸಾಕ್ಷಿಯಾಗಿ ದೂರದಲ್ಲೊಂದು ಹಸುವನ್ನು ಬಿಟ್ಟರೆ ಬೇರೆ ಯಾರು ಇರಲಿಲ್ಲ.  ಅವನ ಹಿಡಿತ ಬಿಗಿಗೊಳ್ಳುತ್ತಾ ಹೋಗುತ್ತಿದ್ದರಿಂದ, \"ಅಪ್ಪ.. ಅಪ್ಪ..ಬಾ..please.. ಕಾಪಾಡು, ಅಯ್ಯೋ...\" ಎಂದು ನೋವಿನಿಂದ ಚೀರಿದಳು. ಆದರೆ ಅವಳ ಈ ನಡೆ, ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತೆ ಆಯಿತು.  ಅವಳ ಸೊಂಟವನ್ನು ಹಿಡಿದು, ತನ್ನತ್ತ ಎಳೆದುಕೊಂಡ. ಅವಳು ಪ್ರತಿರೋಧವನ್ನೊಡ್ಡಲು ಸಾಧ್ಯವಾಗದೆ ಅವನ ಎದೆಗೆ ಬಂದು ಅಂಟಿಕೊಂಡಳು. \"Shu........t up\" , ಅವನ ಧ್ವನಿಯಲ್ಲಿ ಏನಿತ್ತೋ ತಿಳಿಯದು, ಶ್ವೇತಾ ಒಮ್ಮೆಲೆ ತನ್ನ ಚೀರುವಿಕೆಯನ್ನು ನಿಲ್ಲಿಸಿದಳು. ಹುಲಿಯ ಹಿಡಿತದಲ್ಲಿ ಸಿಕ್ಕಿಬಿದ್ದ ಜಿಂಕೆಯಂತೆ ಅವಳು ಒದ್ಡಾಡ ತೊಡಗಿದಳು. ತನ್ನ ಅಸಹಾಯಕ ಸ್ಥಿತಿಯ ಅರಿವಾಗಿ ಕಣ್ಣೀರು ಉಕ್ಕಿಬಂತು. ಅವನ ಸುಡುನೋಟದಿಂದ ತಪ್ಪಿಸಿಕೊಳ್ಳಲೋಸುಗ ತನ್ನ ತಲೆಯನ್ನು ಬೇರೆ ದಿಕ್ಕಿಗೆ ತಿರುಗಿಸಿದಳು.",[11,241,242],{},"\"ಶ್ವೇತಾ, ಏನಾತು? ಯಾಕೆ ಕೂಗ್ತಾ...\", ಮಗಳ ಚೀರಾಟವನ್ನು ಕೇಳಿ ಅವಸರವಸರವಾಗಿ ಮನೆಯಿಂದ ಹೊರಗೆ ಓಡಿ ಬಂದು, ಅಲ್ಲಿನ ಸನ್ನಿವೇಶವನ್ನು ನೋಡಿ ಕೃಷ್ಣಮೂರ್ತಿರಾಯರು ಗಾಬರಿಗೊಂಡರು.",[11,244,245],{},"\"ಯಾರೋ ನೀನು? ಅವಳನ್ನ ಬಿಡು. ನನ್ನ ಮಗಳನ್ನ ಬಿಡು.\"",[11,247,248],{},"ಅವಳ ಕೈಯ ಮೇಲಿನ ಹಿಡಿತವನ್ನು ಇನ್ನೂ ಬಿಗಿಗೊಳಿಸಿದ ಶ್ರೀಧರ, ಮತ್ತೊಂದು ಕೈಯಿಂದ ಕೃಷ್ಣಮೂರ್ತಿಯವರನ್ನು ತಡೆದು ನಿಸ್ಸಂಕೋಚವಾಗಿ ಘೋಷಿಸಿದ, \"ಈ ಮದುವೆಯನ್ನು ಅವಳು ರದ್ದುಗೊಳಿಸುತ್ತಾಳೆ.\"",[11,250,251],{},"\"ಏನು..? ಓಯ್.. ನೀನ್ಯಾರು? ಅವಳು ಏನನ್ನು ಮಾಡ್ಲಿಕ್ಕೆ ಹೋಗೋದಿಲ್ಲ. ಮಗಳೆ, ಹೆದ್ರಡ. ಬಾ ಇಲ್ಲಿ.\", ಎಂದು ಕೈಯನ್ನು ಮುಂದಕ್ಕೆ ಚಾಚಿದರು.  ಶ್ರೀಧರ ಈ ಬಾರಿ ಅವಳ ಮೇಲಿನ ಹಿಡಿತವನ್ನು ಸಡಿಲಿಸಿದ. ಶ್ವೇತಾ ಒಂದು ಕ್ಷಣವೂ ತಡ ಮಾಡದೆ, ಓಡಿಹೋಗಿ ತಂದೆಯ ಕೈಗಳಲ್ಲಿ ಸೇರಿಕೊಂಡಳು. ಅವಳೆಷ್ಟು ಹೆದರಿದ್ದಳೆಂದರೆ ಹೃದಯ ಒಡೆದೇ ಹೋಗುತ್ತದೆಯೇನೋ ಅನ್ನುವಷ್ಟು ಜೋರಾಗಿ ಬಡಿದುಕೊಳ್ಳುತ್ತಿತ್ತು. ಕೃಷ್ಣಮೂರ್ತಿ ದೃಡವಾಗಿ ಹೇಳಿದರು, \"ನೀನು ಯಾರು ಅಂತ ನಮಗೆ ಗೊತ್ತಿಲ್ಲ. ನಮ್ಮ ಬಗ್ಗೆ ನೀನು ತಪ್ಪು ತಿಳಿದುಕೊಂಡಿರಬಹುದು. ನನ್ನ ಮಗಳಿಗೆ ಏನು ತಿಳಿದಿಲ್ಲ. ಅವಳ ಮದುವೆ ಹರೀಶನ ಜೊತೆ ನಿಶ್ಚಯ ಆಗಿದೆ.\"",[11,253,254],{},"\"ಅವಳು ಅವನನ್ನ ಮದುವೆ ಆಗೋ ಹಾಗೆ ಇಲ್ಲ ಅಷ್ಟೇ. I mean it.\"",[11,256,257],{},"\"ನೀನ್ ಏನ್ ಹೇಳ್ತ ಇದೀಯ? ನಿನಗೆ ಹುಚ್ಚು ಹಿಡಿದಿದೆಯಾ?\"",[11,259,260],{},"\"Yes, I am. ನನ್ ತಂಗಿ ಕಷ್ಟ ಪಡ್ತಿರಬೇಕಾದ್ರೆ ಅವನು ಸಂತೋಷವಾಗಿ ಇರೋಕೆ ನಾನು ಬಿಡಲ್ಲ. Never.\" \"ಭಿನ್ನಾಭಿಪ್ರಾಯ ಇರೋದು ನಿಮ್ಮಿಬ್ಬರ ಮಧ್ಯೆ. ಅದನ್ನ ನೀವು ಪರಿಹರಿಸಿಕೊಳ್ಳಬೇಕು. ನನ್ನ ಮಗಳಿಗೆ ಮುಗ್ದೆ.\"",[11,262,263],{},"\"No, she isn't. ಇವಳಂತ ಹುಡ್ಗಿಯರು ಮಾಡೋದು ಇದೆ ರೀತಿ ಕೆಲ್ಸ; ಶ್ರೀಮಂತ ಹುಡುಗರನ್ನ ಬಲೆಗೆ ಹಾಕ್ಕೊಂಡು, ಮದುವೆ ಮಾಡ್ಕೋ ಅಂತ ಮಾಡೋದು. ನನಗೆ ಗೊತ್ತು, ಇವಳು ಎಷ್ಟೋ ಹುಡುಗರನ್ನ ಬಲೆಗೆ ಬೀಳಿಸಿಕೊಳ್ಳೋಕೆ ಮಾಡಿರ್ತಾಳೆ, ಆದ್ರೆ ಈ idiot ಬಲೆಗೆ ಬಿದ್ದಿದಾನೆ ಅಷ್ಟೇ.\"",[11,265,266],{},"ಶ್ವೇತಾ ತನ್ನ ಹತೋಟಿಯನ್ನು ಸಂಪೂರ್ಣವಾಗಿ ಕಳೆದುಕೊಂಡಳು. ಸಿಟ್ಟು ಮಿತಿಯನ್ನು ಮೀರಿತ್ತು. ಎರಡನೇ ಯೋಚನೆಯೇ ಇಲ್ಲದೆ ತನ್ನ ತಂದೆಯ ಕೈಗಳಿಂದ ಬಿಡಿಸಿಕೊಂಡು, ಶ್ರೀಧರನ ಬಳಿ ಹೋಗಿ, ತೋರುಬೆರಳನ್ನು ಅವನೆಡೆಗೆ ತೋರುತ್ತಾ, \"How dare you? ನೀನು ಹೇಳ್ದ ಹಾಗೆಲ್ಲ ಮಾಡಕ್ ಆಗ್ತಲ್ಲೇ. ಅರ್ಥ ಆಯ್ತಾ? I love Harish. That's all. ನಮ್ಮಿಬ್ಬರಿಗೂ ಸಧ್ಯದಲ್ಲೇ ಮದುವೆ ಆಗ್ತು.\" \"You bloody *****. How...\", ಶ್ರೀಧರ ಮುಂದುವರೆಸುವ ಮುಂಚೆಯೇ, ಶ್ವೇತಾ ಅವನ ಕೆನ್ನೆಗೆ ಚಪ್ಪಲಿ ತೆಗೆದು ಬಾರಿಸಿದಳು.",[11,268,269],{},"ಅವಳು ಕೋಪದ ಭರದಲ್ಲಿ ಹೊಡೆಯುವುದೇನೋ ಹೊಡೆದಳು. ಆದರೆ ಆ ಒಂದು ತಪ್ಪು ಹೆಜ್ಜೆಯೇ ಅವಳ ಮತ್ತು ಹರೀಶನ ಪ್ರೇಮದ ಸಮಾಧಿಗೆ ಮೊದಲ ಕಲ್ಲಾಗುತ್ತದೆ ಎಂದು ಅವಳಿಗೆ ಆಗ ತಿಳಿದಿರಲಿಲ್ಲ.",[60,271],{},[273,274,276,286],"quote",{"thumbnail":275},"https:\u002F\u002Fhegdeheartbeats.weebly.com\u002Fuploads\u002F7\u002F2\u002F7\u002F5\u002F72751619\u002F1461318798.png",[11,277,278,279],{},"ಸಂದೇಶ ಸಂಪ ಅವರ ಸ್ವಪ್ನಸಿಂಚನದಲ್ಲಿ ಮೂಡಿ, ತಮ್ಮ  ಭಾವನೆಗಳನು ಹಾಳೆಯ ಮೇಲೆ ಇಳಿಸಲಾಗಿರುವ ಲೇಖನ.\nVisit  ",[280,281,285],"a",{"href":282,"rel":283},"https:\u002F\u002Fsampasandesha.weebly.com",[284],"nofollow","sampasandesha.weebly.com",[287,288,290],"template",{"v-slot:title":289},"",[11,291,292,295],{},[21,293,294],{},"ಹೃದಯ ಚಂದಿ​ರ"," ಅವಳ ಬಾಳ ಹಂದರದ ಬೆಳ​ಕು.",[60,297],{},[11,299,300],{},[14,301],{"alt":5,"src":302},"https:\u002F\u002Fhegdeheartbeats.weebly.com\u002Fuploads\u002F7\u002F2\u002F7\u002F5\u002F72751619\u002F6392185.jpg?167",[11,304,305],{},"ಚಲನಚಿತ್ರವನ್ನು fast-farward ಮಾಡಿದಂತೆ ಅರ್ಧ ಗಂಟೆಯೊಳಗೆ ಶ್ವೇತಾ, Mrs. ಶ್ರೀಧರ್ ಹೆಗಡೆ ಆಗಿದ್ದಳು. \"ಶ್ರೀ, ನೀನಿನ್ನೂ ಎಳೆ ಮಗು ಅಲ್ಲ. ನಿನಗೆ ಇಷ್ಟ ಬಂದ ಹಾಗೆ ಮಾಡೋದನ್ನ ನೋಡಿ ಸುಮ್ಮನೆ ಕೂರಕೆ ಆಗದಿಲ್ಲೆ. ನೀನು ಅವಳಿಗೆ ಏನ್ ಮಾಡಿದ್ದೆ ನೋಡು. ನೀನು ಯಾರು ಅಂತಾ ಅವಳಿಗೆ ಗೊತ್ತೇ ಇಲ್ಲೆ. ಬಲವಂತವಾಗಿ ಮದುವೆ ಆಯ್ದೆ. ಕಾರಣ ಇಲ್ದೆ ಅವಳ ಜೀವನಾನ ನರಕ ಮಾಡಿದೆ.\", ಮನೆಯ ಬಾಗಿಲಿನ ಬಳಿ ನಾಗರತ್ನ ತನ್ನ ಮಗನ ಮೇಲೆ ಬೆಂಕಿಯ ಮಳೆಯೆರೆಯುತ್ತಿದ್ದಳು.",[11,307,308],{},"ಇಷ್ಟೆಲ್ಲಾ ವಾದಗಳು ಆಗ್ತಾ ಇದ್ದರೂ ಶ್ವೇತಾ ಮಾತ್ರ ಕಲ್ಲಿನ ಬೊಂಬೆಯ ರೀತಿಯಲ್ಲಿ ಶ್ರೀಧರನ ಹಿಂದೆ ನಿಂತಿದ್ದಳು. ಪಂಜರದಲ್ಲಿ ಸಿಕ್ಕಿಕೊಂಡ ಮೊಲದ ರೀತಿಯಲ್ಲಿ ಗಡಗಡ ನಡುಗುತ್ತಿದ್ದಳು. ಕಳೆದ ಎರಡು ಗಂಟೆಗಳು ವಿನಾಶಕಾರಿ ಚಂಡಮಾರುತದೋಪಾದಿಯಲ್ಲಿ ಜಾರಿ ಹೋದವು. ಈ ಹೈ-ಡ್ರಾಮಾ ಕೊನೆಗೊಳ್ಳುವುದಕ್ಕೆ ಮೊದಲೇ ಶ್ವೇತಾ ನಿಯಂತ್ರಣ ಕಳೆದುಕೊಂಡು ನೆಲಕ್ಕೆ ಕುಸಿದು ಕುಳಿತು ಅಳತೊಡಗಿದಳು. ಅವಳಿನ್ನೂ ತಿಳಿಹಸಿರು ಬಣ್ಣದ ನೃತ್ಯ ಶಾಲೆಗೆ ಹೋಗಿದ್ದ ಚೂಡಿದಾರದಲ್ಲೇ ಇದ್ದಳು. ಅವಳ ಹಣೆಯ ತುಂಬಾ ಕುಂಕುಮವು ಹರಡಿಕೊಂಡಿತ್ತು. ನಾಗರತ್ನ ಒಮ್ಮೆಲೆ ಅವಳ ಬಳಿ ಬಾಗಿ ಕುಳಿತು ಮೆಲ್ಲಗೆ ಪ್ರೀತಿಯಿಂದ ಹೇಳಿದರು - \"ಅಳಡ. ಏನು ಆಗದಿಲ್ಲೆ. ಎಲ್ಲ ಸರಿ ಮಾಡ್ತಿ. ನಾನು ಒಳ್ಳೆ  ತಾಯಿ ಆಗಕೆ ಆಗಲ್ಲೆ. ನನ್ನ ಇಬ್ಬರು ಮಕ್ಳು ಕೂಡ...\", ಎನ್ನುವಷ್ಟರಲ್ಲಿ ಶ್ರೀಧರ ಕಿರುಚಲು ಬಾಯಿ ತೆರೆದ. ಆದರೆ ಅವನು ಏನೋ ಒಂದು ಹೇಳುವ ಮೊದಲೇ  - \" ನೀನು ನನ್ನ ಕನಸು, ಮರ್ಯಾದೆ ಎಲ್ಲ ಹಾಳು ಮಾಡಿದೆ\", ನಾಗರತ್ನ ಹೇಳಿದರು. \"ಜೊತೆಗೆ ಅವಳ ಜೀವನಾನು ಕೂಡ\" ಎಂದು ಸೇರಿಸಿದರು. ಅವಳು ಮುಗ್ಧೆ ಅಲ್ಲ. ಇದಕ್ಕೆಲ್ಲ ಅವಳೇ... \", ಎಂದು ತನ್ನ ಮಾತನ್ನು ಎರಡು ಕ್ಷಣ ನಿಲ್ಲಿಸಿ ಮುಂದುವರಿಸಿದ, \"ಕಾರಣ ಏನೇ ಆಗಿರ್ಲಿ, ಈಗ ಮದ್ವೆ ಆಗಿ ಹೊಯ್ದು. ಇವತ್ತಿಂದ ಅವ್ಳು ಇಲ್ಲೆ ಇರ್ತ ಅಷ್ಟೇ.\" ಎಂದು ಹೇಳಿ ವೇಗವಾಗಿ ತನ್ನ ಕೊಠಡಿಯತ್ತ ಬಿರಬಿರನೆ ನಡೆದ. ಅವನು ಒಳನಡೆಯುತ್ತಿದ್ದಂತೆಯೇ ಶ್ವೇತಾ ನಾಗರತ್ನರನ್ನು ಗಟ್ಟಿಯಾಗಿ ತಬ್ಬಿಕೊಂಡು ಮತ್ತೆ ಅಳತೊಡಗಿದಳು.",[11,310,311],{},"\"ಶ್ವೇತಾ, ಶ್ರೀ ನಿನ್ನ ಬಲವಂತವಾಗಿಎಳ್ಕೊಂಡು ಬರಕೆ ಕಾರಣ ಎಂತು ಅಂತ ನಂಗೆ ಗೊತ್ತಿಲ್ಲೆ. ಆದ್ರೆ, ಈಗ ನಾನು ನಿನ್ನ ಜೊತೆ ಇರ್ತಿ. ಅವನು ಏನೇ ಮಾಡಿರೂ ನನಗೆ ತಿಳಿಸು.\"- ಶ್ವೇತಾಳ ಕಣ್ಣನ್ನು ಒರೆಸುತ್ತಾ, ತಾಯಿಯ ರೀತಿಯಲ್ಲಿ ನಾಗರತ್ನ ಸಮಾಧಾನ ಮಾಡಿದರು. ಶ್ವೇತಾ ಸುಮ್ಮನೆ ತನ್ನ ತಲೆಯನ್ನು ಆಡಿಸಿದಳು.",[11,313,314],{},"ಆ ದಿನ ರಾತ್ರಿ ಸುಮಾರು 9 ಗಂಟೆಗೆ ಕೃಷ್ಣಮೂರ್ತಿಯವರಿಗೆ ಕರೆ ಮಾಡಿ,\" ನನ್ನ ಮಗ ತಪ್ಪು ಮಾಡಿದ್ದ. ಆದ್ರೆ ಹಿರಿಯರಾದ ನಾವು ಸ್ವಲ್ಪ ಯೋಚನೆ ಮಾಡಕಾಗ್ತು. ಅವ್ರ ಭವಿಷ್ಯಕ್ಕೆ ತೊಂದ್ರೆ ಅಗಲಾಗ. ಮುಖ್ಯವಾಗಿ ಒಂದು ಹೆಣ್ಣಾದ ಶ್ವೇತಾ ಬಗ್ಗೆ ಯೋಚನೆ ಮಾಡಕು. ಆಗಿದ್ದು ಆಗಿ ಹೋಯ್ದು. ಅವ್ಳಿಗೆ ಏನು ಆಗದೆ ಇರೋ ಹಾಗೆ ನೋಡ್ಕೋಳೋ ಜವಾಬ್ದಾರಿ ನಂದು. ನಾಳೆ ನಮ್ಮನೆಗೆ ಬನ್ನಿ.\" ಎಂದು ಹೇಳಿದರು. ಹರೀಶ ಹಾಗೂ ಕೃಷ್ಣಮೂರ್ತಿಯವರು ಪೊಲೀಸರಿಗೆ ದೂರು ಕೊಡುವುದೆಂದು ಯೋಚಿಸುತ್ತಿದ್ದರು. ಆದರೆ ಒಬ್ಬ ಮಧ್ಯಮ ವರ್ಗದ ಸರಳಜೀವಿಯಾದ ಕೃಷ್ಣಮೂರ್ತಿಯವರಿಗೆ ಆ ದಿನದ ಘಟನೆಗಳು ಆಘಾತವನ್ನು ಉಂಟುಮಾಡಿದ್ದವು. ಏನು ನಿರ್ಧಾರ ತೆಗೆದುಕೊಳ್ಳುವುದೆಂದು ತೋಚಲಿಲ್ಲ. ಶ್ವೇತಾ ಕೃಷ್ಣಮೂರ್ತಿಯವರ ತಂಗಿಯ ಮಗಳು. ಶ್ವೇತಾಳಿಗೆ 6 ವರ್ಷವಾಗಿದ್ದಾಗ ತಾಳಗುಪ್ಪದ ಬಳಿ ನಡೆದಿದ್ದ ಭೀಕರ ರೈಲು ಅಪಘಾತದಲ್ಲಿ ಅವಳ ತಂದೆ-ತಾಯಿ, ಇಬ್ಬರೂ ತೀರಿಕೊಂಡಿದ್ದರು. ಶ್ವೇತಾ ಬಗ್ಗೆ ತುಂಬಾ ಅಕ್ಕರೆ ಇದೆ. ಆದರೆ ಸ್ವಂತ ಮಗಳು ಮದುವೆಯ ವಯಸ್ಸಿಗೆ ಬಂದಿರುವುದರಿಂದ, ಆಘಾತಕಾರಿಯಾಗಿ ಬಂದರೂ, ಆಕಸ್ಮಿಕವಾಗಿ ಸಿಕ್ಕಿದಂತಹ ಶ್ರೀಮಂತ ಹೆಗಡೆ ಮನೆತನದ ಈ ಸಂಬಂಧವನ್ನು ಒಪ್ಪಿಕೊಳ್ಳುವುದೆಂದು ನಿರ್ಧರಿಸಿದರು.",[11,316,317],{},"ಆದರೆ ಆ ರಾಕ್ಷಸನ ಜೊತೆ ರೂಮನ್ನು ಹಂಚಿಕೊಳ್ಳಲು ಶ್ವೇತಾ ಎಷ್ಟು ಹೆದರಿದ್ದಳೆಂದು ಆ ದೇವರಿಗೆ ಗೊತ್ತು. ಮೊದಲರಾತ್ರಿಗೆ ಸಕಲ ಸಿದ್ಧತೆಗಳೂ ನಡೆಯುತ್ತಿರಬೇಕಾದರೆ ಶ್ರೀಧರ ಬಂದು ಅವಳೊಂದಿಗೆ ರೂಮನ್ನು ಹಂಚಿಕೊಳ್ಳುವ ಯಾವುದೇ ಮನಸ್ಸಿಲ್ಲವೆಂದು ಘೋಷಿಸಿದ. ಮನೆಯಲ್ಲಿ ಇದ್ದವರೆಲ್ಲರೂ ಹೇಳಿದರೂ ಕೇಳಲಿಲ್ಲ. ಆದ್ದರಿಂದ ಅವಳ ಮದುವೆಯ ಮೊದಲ ರಾತ್ರಿ ಪಕ್ಕದಲ್ಲಿದ್ದ ಕೋಣೆಯೊಂದರಲ್ಲಿ ಅಳುವುದರೊಂದಿಗೆ ಕೊನೆಗೊಂಡಿತು. ಮಾರನೆಯ ದಿನ ಮುಂಜಾನೆಯೇ ಮಗಳನ್ನು ಸಮಾಧಾನಗೊಳಿಸಲು ಅವಳ ಅಪ್ಪ-ಅಮ್ಮ ಬಂದರು. ಅತ್ಯಂತ ಪ್ರಭಾವಶಾಲಿ ಕುಟುಂಬವಾದ್ದರಿಂದ ಅವರ ವಿರುದ್ಧ ತಾವು ನಿಲ್ಲಲಾರೆವೆಂದೂ, ಜೊತೆಗೆ ಅವಳ ತಂಗಿಯ ಭವಿಷ್ಯದ ಬಗ್ಗೆಯೂ ಸ್ವಲ್ಪ ಯೋಚಿಸೆಂದೂ ಹೇಳಿದರು. ತಾಯಿಯ ಈ ಮಾತುಗಳನ್ನು ಕೇಳುತ್ತಿದ್ದಂತೆ ತನ್ನ ಸಾವು ಈಗಲೇ ಬರಬೇಕೆಂದು ಎಂದು ಮನದಲ್ಲಿಯೇ ಪ್ರಾರ್ಥಿಸಿದಳು. ಹೆಸರಿಲ್ಲದ ಈ ಮದುವೆಯ ಜೊತೆಗೆ, ಕಾರಣವಿಲ್ಲದೆಯೇ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗಿತ್ತು. ಮದುವೆಯ ಮಾರನೆಯ ದಿನವೇ ಶ್ರೀಧರ ಎಲ್ಲಿಗೋ ಹೊರಟು ಹೋಗಿದ್ದ. ಅದು ಅವಳ ಅದೃಷ್ಟವೇ ಎನ್ನಬೇಕು. ಆ ಮನೆಯಲ್ಲಿ ಶ್ವೇತಾ ಬೇಗನೆ ಹೊಂದಿಕೊಂಡಳು. ಇವೆಲ್ಲದರ ಜೊತೆಗೆ ಮನೆಯಲ್ಲಿದ ಪುಟ್ಟ ನಾಯಿಮರಿಯೊಂದು ಅವಳ ಸಂಗಾತಿಯಾಯಿತು. ಅವಳು ಹೋದಲ್ಲೆಲ್ಲಾ ಅವಳ ಹಿಂದೆಯೇ ಸುತ್ತುತ್ತಿತ್ತು.  ಹಿಂಸೆಯನ್ನು ಕೆಲವು ಕಾಲ ಮುಂದೂಡಿರಬೇಕು ಆ ದೇವರು.",[11,319,320],{},"ಶ್ವೇತಾ ತನ್ನ ಅತ್ತೆಯ ಬಳಿಯಿಂದ ಹಲವಾರು ವಿಷಯಗಳನ್ನು ತಿಳಿದುಕೊಂಡಳು. ಕೆಲವು ಸಾಮಾನ್ಯ ವಿಷಯಗಳ ಜೊತೆಗೆ ಕೆಲವೊಂದು ಆಶ್ಚರ್ಯಕರ ಸಂಗತಿಗಳನ್ನು ಕೇಳಲ್ಪಟ್ಟಳು; ಶ್ರೀಧರ ಒಬ್ಬ ಎಮ್.ಬಿ.ಎ ಪದವೀಧರ. ಅದು ಕೂಡ ಉನ್ನತ ವಿಶ್ವವಿಧ್ಯಾಲಯದಲ್ಲಿ ಪಡೆದುಕೊಂಡಿದ್ದು. ಅವನು 26 ವರ್ಷವಾಗಿದ್ದಾಗ ಅವನ ತಂದೆ ತೀರಿಕೊಂಡಿದ್ದು, ನಂತರ ಇವನೇ ಪ್ರತಿಷ್ಟಿತ 'ಪೃಥ್ವಿ ಇಂಡಸ್ಟ್ರೀಸ್'ನ ಮಾಲೀಕನಾಗಿದ್ದು, ಟೈಪ್ 1 ಡೈಯೆಬೆಟಿಕ್ ರೋಗಿಯೂ ಹೌದು. ಇನ್ನೊಂದು ಆಘಾತಕಾರಿ ಸಂಗತಿ ಅವಳು ಕೇಳಿದ್ದೇನೆಂದರೆ, ಹರೀಶ ಇವನ ಕುಚಿಕು ಗೆಳೆಯ. ಅವನಿಗೊಬ್ಬ ತಂಗಿ ಇರುವ ವಿಷಯವೂ ತಿಳಿಯಿತು. ಸೊಸೆಯನ್ನು ಅಕ್ಕರೆಯಿಂದ ನೋಡುವ ಅತ್ತೆಯ ಪರಿಚಯ ಈಗಾದರೂ ಕೂಡ, ಹೆಣ್ಣಿಗೆ ಹೆಣ್ಣೇ ಶತ್ರು ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸುವ ಸನ್ನಿವೇಶಕ್ಕೆ ಮುನ್ಸೂಚನೆಯೆಂಬಂತೆ ಮನೆಯ ಹೊರಗಿನ ಮರವೊಂದರ ಮೇಲೆ ಕುಳಿತಿದ್ದ ಕಾಗೆಯೊಂದು 'ಸಾ ಸಾ' ಎಂದು ಅರಚುತ್ತಿತ್ತು..",[60,322],{},[11,324,325],{},"\"ಟಾಮಿ.. ಎಲ್ಲಿದ್ಯೋ? ಎಲ್ಲಿಗೆ ಹೋದ್ಯೊ?\", ಅರ್ಧ ಗಂಟೆಯಿಂದ ಟಾಮಿ ನಾಯಿಗಾಗಿ ಹುಡುಕುತ್ತಿದ್ದಳು. ರೂಮಿನಲ್ಲಿ ಇವಳ ಜೊತೆಯೇ ಆಟವಾಡಿಕೊಂಡಿದ್ದ ಟಾಮಿ, ಶ್ವೇತಾ ನಿದ್ದೆಗೆ ಜಾರಿದಾಗ ಹೊರಗೆ ಹೋಗಿತ್ತು. ಹೀಗೆ ನಾಯಿಯನ್ನು ಹುಡುಕುತ್ತಾ ಹೊರಟವಳು, ಇದುವರೆಗೂ ಕಾಲಿಡದೇ ದೂರವಿದ್ದ ಮನೆಯ ಒಂದು ಭಾಗಕ್ಕೆ ನಡೆದಳು. ಅಲ್ಲಿ ಸುಂದರವಾದ ಈಜುಕೊಳವಿತ್ತು. ಸುತ್ತಲೂ ಮಣ್ಣಿನ ಮಡಿಕೆಗಳಲ್ಲಿ ಬೆಳೆಸಿದ ಉದ್ಯಾನ. ಆ ಬಾಗಿಲಿನ ಹಿಂದೆ ಇದ್ದ ಸೌಂದರ್ಯಕ್ಕೆ ಮಾರುಹೋದಳು. ಅವಳು ಹಾಗೆಯೇ ಮಂತ್ರಮುಗ್ಧಳಾಗಿ ನಿಂತಿದ್ದವಳು, ಹೂವಿನ ಕುಂಡವೊಂದು ಒಡೆದ ಶಬ್ಧದಿಂದ ವಾಸ್ತವಕ್ಕೆ ಬಂದಳು. ಆಟವಾಡುತ್ತಿದ್ದ ಟಾಮಿ, ಕುಂಡವೊಂದರ ಮೇಲೆ ಜಿಗಿದಿತ್ತು. ಮೂಲೆಯಲ್ಲಿ ನಿಂತಿದ್ದ ಶ್ವೇತಾ ಟಾಮಿಯತ್ತ ಓಡಿದಳು. ತನ್ನ ಕೈಯಲ್ಲಿ ನಾಯಿಮರಿಯನ್ನೆತ್ತಿಕೊಂಡಳು. \"ಟಾಮಿ, ನೀನು ತುಂಬಾ ತುಂಟ. ಈ ಜಾಗ ನಿಂಗೆ ಆಟ ಆಡಕೆ ಒಳ್ಳೆ ಜಾಗ. ಆದ್ರೆ ಇದು ಆ ರಾಕ್ಷಸನ ಜಾಗ. ನೀನೇ ಈ ಪಾಟ್ ಎಲ್ಲ ಒಡೆದಿದ್ದು ಅಂತ ಗೊತ್ತಾದ್ರೆ ನಿನ್ನ ರಕ್ತ ಹೀರಿ ಬಿಡ್ತಾ.\",  ಅದರ ಮೈಮೇಲಿನ ತುಪ್ಪಳದಲ್ಲಿ ಕೈ ಆಡಿಸುತ್ತಾ ಹೇಳಿದಳು.",[11,327,328],{},"\"Oh..!..Really?? ಹಾಗಾದ್ರೆ ಈ ಪ್ರಪಂಚದಲ್ಲಿ ನನ್ನನ್ನ ಕರಕ್ಟ್ ಆಗಿ ಅರ್ಥ ಮಾಡ್ಕೊಂಡಿರೋದು ನೀನೇ.\" ಶ್ವೇತಾಳ ಹಿಂದಿನಿಂದ ಗಂಡುದನಿಯೊಂದು ಕೇಳಿಬಂತು. ಆ ದ್ವನಿ ಕಿವಿಯೊಳಗೆ ಇಳಿಯುತ್ತಿದ್ದಂತೆಯೇ, ಅವಳ ಕಣ್ಣುಗಳು ಭಯದಿಂದ ಅಗಲಗೊಂಡವು, ಉಸಿರು ಅರ್ಧದಲ್ಲಿಯೇ ಸಿಕ್ಕಿಕೊಂಡಿತು. ತಾನೀಗ ಯಾವ ಪರಿಸ್ಥಿತಿಯಲ್ಲಿರುವೆನೆಂದು ಅರಿವಾದೊಡನೆಯೇ ಅಲ್ಲಿಂದ ಓಡಿಹೋಗಲು ವಿಫಲ ಪ್ರಯತ್ನಕ್ಕೆ ಕೈ ಹಾಕಿದಳು. ಶ್ರೀಧರ ತನ್ನ ಕೈಯಿಂದ ಟಾಮಿಯನ್ನು ಕಿತ್ತುಕೊಳ್ಳಬಹುದೆಂಬ ಭಯದಿಂದ, ನಾಯಿಮರಿಯನ್ನು ಎಷ್ಟು ಬಿಗಿ ಹಿಡಿದಿದ್ದಳೆಂದರೆ, ಅದು ನೋವಿನಿಂದ ಅರ್ತ ಸ್ವರದಲ್ಲಿ ಬೊಗಳತೊಡಗಿತು. ಈ ಎರಡು ಬಡಜೀವಗಳು ಭಯದಿಂದ ಕಂಗೆಟ್ಟಿದ್ದನ್ನು ನೋಡಿ ಶ್ರೀಧರನ ಮುಖದಲ್ಲಿ ಪೈಶಾಚಿಕ ನಗುವೊಂದು ಮೂಡಿತು. ಶ್ರೀಧರ ಅವಳನ್ನು ಟೀಸ್ ಮಾಡತೊಡಗಿದ,\"ಟಾಮಿಯನ್ನು ಸಾಯ್ಸಕೆ ನೋಡ್ತೀದ್ಯ? ಹುಹ್..\", ಎನ್ನುವುದರೊಳಗಾಗಿ ಶ್ವೇತಾ ಟಾಮಿಯ ಮೇಲಿನ ಹಿಡಿತವನ್ನು ಸಡಿಲಿಸಿದಳು. ಅವಳ ಕೈಯಿಂದ ಜಾರಿದ ಟಾಮಿ, ಶ್ವೇತಾಳನ್ನು ಅವನ ಬಳಿ ಒಂಟಿಯಾಗಿ ಮಾಡಿ ಆ ರೂಮಿನಿಂದ ಹೊರ ಓಡಿತು. ನಡುಗುವ ದ್ವನಿಯಲ್ಲಿ ಶ್ವೇತಾ, \"I...I am sorry. ನಾನು ಇಲ್ಲಿಗೆ ಬರಲಾಗ್ದಿತ್ತು. ಇನ್ನೊಂದು ಸರಿ ಈ ತರ ಆಗ್ತಲ್ಲೇ.\" ಅವಳ ದಿಗಿಲು ಹೆಚ್ಚುವಂತೆ ಮಾಡಲು, ಶ್ರೀಧರ ಅವಳ ಕೈಯನ್ನು ಬಲವಾಗಿ ಹಿಡಿದು ತನ್ನ ಎದೆಯ ಮೇಲೆ ಬಂದು ಬೀಳುವಂತೆ ಅವಳನ್ನು ತನ್ನತ್ತ ಎಳೆದ. ತನ್ನ ಮುಖವನ್ನು ಅವಳ ತೀರಾ ಸನಿಹಕ್ಕೆ ತಂದ. ಇವನ ಉಸಿರಾಟದ ಬಿಸಿ ಅವಳ ಕೆನ್ನೆಗೆ ಸೋಕುತ್ತಿತ್ತು. ಈ ರೀತಿಯಾದ ಕ್ಷಿಪ್ರಕಾರ್ಯದಿಂದ ಹಾಗೂ ಗಾಬರಿಯಿಂದ ಅವಳಿಗೆ ತಿಳಿಯದೆಯೇ ಕೆನ್ನೆಯ ಮೇಲೆ ಕಣ್ಣೀರು ಉರುಳತೊಡಗಿತು. ಶ್ವೇತಾ ಭಯದಿಂದ ತೊದಲುತ್ತಾ,\"am sorry, ಮತ್ತೆ..\" ಎಂದು ಮತ್ತೊಮ್ಮೆ ಹೇಳಿದಳು. ಆಶ್ಚರ್ಯಕರ ರೀತಿಯಲ್ಲಿ ಅವಳ ಕೈಮೇಲಿನ ಹಿಡಿತವನ್ನು ಸಡಿಲಿಸಿದ. Actually ಅವನು ಅವಳನ್ನು ಟೀಸ್ ಮಾಡುವ ಮೂಡ್-ನಲ್ಲಿದ್ದ. ಅದು ಅಲ್ಲದೆ ಕೆಲವು ದಿನಗಳ ಅವಳ ಅನುಪಸ್ಥಿತಿ, ಅವನೊಳಗಿನ ಭಾವನೆಗಳನ್ನು ಬದಲಾಯಿಸಿತ್ತು. ಅವಳ ಮೇಲಿನ ದ್ವೇಷ ಕಡಿಮೆಯಾಗಿತ್ತು. ಅದರ ಜೊತೆಗೆ ಅವಳ ಬಗ್ಗೆ ಎಲ್ಲಾ ಮಾಹಿತಿಯನ್ನು ಕಲೆಹಾಕಿದ್ದ. ಅವಳ ಸಾಧನೆಗಳಿಂದ ಸ್ವಲ್ಪ ಪ್ರಭಾವಿತನಾಗಿದ್ದ.",[11,330,331],{},"ಶ್ರೀಧರ ಶ್ವೇತಾಳಿಗೆ ಏನೋ ಹೇಳುವುದರೊಳಗಾಗಿ ಅವನ ಹಿಂದಿನಿಂದ ಕೋಪಗ್ರಸ್ತ ದ್ವನಿಯೊಂದು ಕೇಳಿಸಿತು. \"ಅಣ್ಣಾ... ಏನ್ ಮಾಡ್ತ ಇದ್ದೇ ನೀನು? ನಂಗೆ ಇದನ್ನ ನಂಬಕೆ ಆಗ್ತಾ ಇಲ್ಲೆ... ನೀನೂ ಕೂಡ ಅವ್ಳ ಬಲೆಗೆ ಬಿದ್ಯಾ?? ಈ **** ಎಲ್ಲವನ್ನೂ ನನ್ನಿಂದ ಕಿತ್ತುಕೊಳ್ತಾ ಇದ್ದ...\" ವೇಗವಾಗಿ ತಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ದೂರ ಸರಿದು ನಿಂತರು, ಶ್ವೇತಾ ಮತ್ತು ಶ್ರೀಧರ್. ಇಬ್ಬರೂ ಉಷಾಳ ಕಡೆಗೆ ನೋಡತೊಡಗಿದರು. ಶ್ರೀಧರ ಅವಳ ಬಳಿ ಹೋಗಿ ಸಮಾಧಾನಗೊಳಿಸಲು ಪ್ರಯತ್ನಿಸಿದ, \" ಚೋಟು..! ನೀನು ನನ್ನನ್ನ ತಪ್ಪು ತಿಳ್ಕತಾ ಇದ್ದೇ. ನಾನು ಅವಳ ಹತ್ರ ಮಾತೆ ಆಡಲ್ಲೆ. ನಾನು ಎಲ್ಲಾ ಎಕ್ಸ್‌ಪ್ಲೇನ್ ಮಾಡ್ತಿ. ಅವಳು ನಂಗೆ ಏನೇನೂ ಅಲ್ಲ...\" ಉಷಾ ಚಿತ್ತೋನ್ಮಾದದಿಂದ ಕೈಯನ್ನು ಅತ್ತಿಂದಿತ್ತ ಆಡಿಸುತ್ತಾ ತನ್ನ ತಲೆಯನ್ನು ಬಾಗಿಲಿಗೆ ಚಚ್ಚಿಕೊಳ್ಳತೊಡಗಿದಳು. ಅವಳನ್ನು ಶಾಂತಗೊಳಿಸಲು ಪಟ್ಟಪ್ರಯತ್ನವೆಲ್ಲ ವ್ಯರ್ಥವಾಯಿತು. ಅಲ್ಲಿಂದ ಹೊರಹೋಗುವಂತೆ ಶ್ರೀಧರ ಮೊಟ್ಟಮೊದಲ ಬಾರಿಗೆ ಶ್ವೇತಾಳತ್ತ ಬೇಡಿಕೊಳ್ಳುವ ನೋಟ ಬೀರಿದ. ಇವೆಲ್ಲವನ್ನೂ ನೋಡುತ್ತಾ ನಿಂತಿದ್ದ ಶ್ವೇತಾಳಿಗೆ, ಈ ಹಠಾತ್ ಬದಲಾವಣೆ ದಿಗಿಲು ಹುಟ್ಟಿಸಿತು. ಬರುತ್ತಿದ್ದ ಅಳುವನ್ನು ತಡೆಯಲು ಬಾಯಿಗೆ ತನ್ನ ಕೈಯನ್ನು ಅಡ್ಡ ಹಿಡಿದು ರೂಮಿನಿಂದ ಹೊರಗೆ ಓಡಿದಳು.",[11,333,334],{},"ಸುಮಾರು ಒಂದು ತಾಸಿನ ನಂತರ ಶ್ವೇತಾಳ ರೂಮಿನ ಬಾಗಿಲು ದಡಾರನೆ ತೆರೆದುಕೊಂಡಿತು. ಶ್ರೀಧರನ ಕಣ್ಣುಗಳು ಜ್ವಾಲಾಮುಖಿಯನ್ನು ಉಗುಳುವಂತೆ ಕೆಂಪಾಗಿತ್ತು. ಅವನನ್ನು ಈ ಸ್ಥಿತಿಯಲ್ಲಿ ನೋಡಿ ಶ್ವೇತಾ ಜೋರಾಗಿ ಕಿರುಚ ಹೋದವಳು ಅವನು ಇನ್ನೇನಾದರೂ ಮಾಡಬಹುದೆಂದು ಹೆದರಿ ಸಂಭಾಳಿಸಿಕೊಂಡಳು. ಇವಳನ್ನು ಸಮಾಧಾನಗೊಳಿಸುವ ಬದಲು, ಇವಳತ್ತ ತನ್ನ ತೋರುಬೆರಳನ್ನು ನೇರವಾಗಿ ಹಿಡಿದು, ಕಟುವಾಗಿ,",[11,336,337],{},"\"ಎಷ್ಟು ಧೈರ್ಯ ನಿಂಗೆ ಅವಳಿದ್ದಾಗ ನನ್ನ ಹತ್ರ ಬರಕೆ... ನಾನು ನಿನ್ನ..\" ಎಂದು ಹೇಳಿ ಒಂದು ಹೆಜ್ಜೆ ಮುಂದೆ ಇಡುವುದೊರಳಗಾಗಿ ನಾಗರತ್ನ ಬಂದು ಇವರಿಬ್ಬರ ಮಧ್ಯೆ ನಿಂತರು.",[11,339,340],{},"\"ಶ್ರೀ, ಇದೆ ಕೊನೆ ಸರಿ ನಿಂಗೆ ನೆನಪಿಸದು. ಅವ ನಿನ್ನ ಹೆಂಡ್ತಿ. ಹೀಂಗೆ ಹೆಂಡ್ತಿಗೆ ಕಾಟ ಕೊಡದು ಸರಿ ಅಲ್ಲ. ನಮ್ಮ ಕುಟುಂಬದಲ್ಲಿ ಯಾವತ್ತೂ ಈ ರೀತಿ ಆಗಲ್ಲೆ.\"",[11,342,343],{},"\" ಏನಾದ್ರೂ ಆಗಿರ್ಲಿ. ನಾನು ಮಾತ್ರ ಅವಳನ್ನ ..\"",[11,345,346],{},"\"ಆದ್ರೆ ನೀನು ಸತ್ಯಾನ ಬದ್ಲಾಯ್ಸಕೆ ಆಗ್ತಲ್ಲೇ. ನೀನು ಅವ್ಳನ್ನ ಹೆಂಡ್ತಿ ಅಂತ ಒಪ್ಪು-ಬಿಡು, ಅವ್ಳು ನಮ್ಮನೆ ಸೊಸೆ ಅಂತ ನಾ ಒಪ್ಪಿದ್ದಿ ಅಷ್ಟೇ. ನೀನು ಅವ್ಳನ್ನ ಎಳ್ಕೊಂಡು ಬಂದು ಮದ್ವೆ ಆಗದೆ ಹೋಗಿದ್ರೆ ಈ ಪರಿಸ್ಥಿತಿ ಬರ್ತಾನೆ ಇರ್ಲೇ.\"",[11,348,349],{},"\"ಅಮ್ಮ..! ನಿಜವಾಗ್ಲೂ ನೀನು ಉಷಾನ ಅಮ್ಮನೇ ಹೌದಾ? ಎಲ್ಲಾ ಗೊತ್ತಿದ್ದೂ ಇವ್ಳಿಗೆ ಸಪೋರ್ಟ್ ಮಾಡ್ತಿದ್ದೆ. ಇವಳಿಂದಾಗಿ ಹರಿ ನಮ್ಮ ಚೋಟೀನ ದೂರ ತಳ್ಳಿದ್ದು.  ನೀನು ಹೆಂಗೆ ಇವ್ಳಿಗೆ?\"",[11,351,352],{},"\" ಶ್ರೀ..! ನೀನು ತಂಗಿ ಪ್ರೀತಿಲಿ ಕುರುಡ ಆಗಿ ಬಿಟಿದೆ. ಹರಿ ಯಾವತ್ತೂ ಉಷಾನ ಲವ್ ಮಾಡ್ತೆ ಇರ್ಲೇ ಅನ್ನದು ಕಾಣದೆ ಇಲ್ಯಾ?\"",[11,354,355],{},"\" ನಾನು ಇದನ್ನ ನಂಬದಿಲ್ಲೆ. ಇವ್ಳ ಬಲೆಗೆ ಬಿಳೋದಕ್ಕೂ ಮುಂಚೆ ಹರಿ ಲವ್ ಮಾಡ್ತಿದ್ದದ್ದು ಚೋಟಿನೇ. ಅದೇ ಕಾರಣಕ್ಕೆ ಉಷಾ...\", ಎಂದು ಅರ್ಧಕ್ಕೆ ತನ್ನ ಮಾತನ್ನು ನಿಲ್ಲಿಸಿ ರೂಮಿನಿಂದ ವೇಗವಾಗಿ ಹೊರಟುಹೋದ.",[11,357,358],{},"​           ಶ್ವೇತಾ ಮತ್ತೆ ಕುಸಿದು ಕುಳಿತಳು. ಈಗಲೂ ಕೂಡ ಮಾನಸಿಕ ಸಾಂತ್ವನ ನೀಡಿದ್ದು ನಾಗರತ್ನ. ಅವಳ ಈ ಬಲಾತ್ಕಾರಿಕ ಮದುವೆಯ ಹಿಂದಿನ ನಿಜಸಂಗತಿ ತಿಳಿದಮೇಲೆ ಮೊದಲ ಬಾರಿಗೆ ಶ್ವೇತಾ ಹರೀಶನ ಬಗ್ಗೆ ಕೋಪಗೊಂಡಳು.",[11,360,361],{},"\" ಬೇಡ, ಶ್ವೇತಾ. ಉಷಾ, ಪ್ರೀತಿ ಏನು ಅಂತ ತಿಳಿಯೋದಕ್ಕೆ ಮೊದಲೇ ಹರೀಶನ್ನ ಲವ್ ಮಾಡಕೆ ಶುರು ಮಾಡಿದ್ದ. ಇದು ಅವ್ನ ತಪ್ಪಲ್ಲ. ನಾವು ಇವಳ ವಿಷಯ ಅವನ ಹತ್ರ ಹೇಳಕು ಅನ್ನೋಷ್ಟರಲ್ಲಿ ಹರಿ ನಿನ್ನ ಮದ್ವೆ ವಿಷ್ಯ ತಿಳಿಸಿದ. ಇದಾದ ಮೇಲೆ ಶ್ರೀ ಈ ರೀತಿ ಮಾಡ್ತಿದ್ದ. ಹರೀಶ ಯಾವತ್ತೂ ಉಷಾ ಭಾವನೆ ಜೊತೆ ಆಟ ಆಡಲ್ಲೇ. ನಾನು ಮೊದಲೇ ಎಲ್ಲ  ಮಾತಾಡಿದ್ರೆ ನಿನ್ನ ಜೀವನ ಹೀಂಗೆ ಅಗ್ತಿರ್ಲೆ.\", ನಾಗರತ್ನ ಕೂಡ ಶ್ವೇತಾಳ ದುಃಖ ನೋಡಲಾರದೆ ಅಳಲು ಮೊದಲು ಮಾಡಿದರು.",[11,363,364],{},"\"ಅತ್ತೆ, ಅಳಡಿ. ನನಗೆ ಉಷಾ ವಿಷ್ಯ ಯಾವ್ದು ಗೊತ್ತಿರ್ಲೆ. ಗೊತ್ತಿದ್ರೆ ನಾನು ಹರಿ ಜೊತೆ ಮದ್ವೆ ವಿಷ್ಯನಾ ಒಪ್ಪಿಕೊಳ್ತನೆ ಇರ್ಲೇ. ಈಗ್ಲಾದ್ರೂ ಹರಿ ಜೊತೆ ಉಷಾ ಬಗ್ಗೆ ಮಾತಾಡಿ.\", ತನ್ನ ಕಣ್ಣನ್ನು ತಾನೇ ಚುಚ್ಚಿಕೊಳ್ಳುತ್ತಿರುವಂತೆ ಅನುಭವವಾದರೂ ಸಹಿಸಿಕೊಂಡು ಮಾತನ್ನು ಮುಂದುವರೆಸಿದಳು, \"ನಂಗೆ ಹೆಂಗೂ ಮದ್ವೆ ಆಗಿ ಹೋಯ್ದು. ಹರೀಶನ್ನ ಈಗ ಈಸೀಯಾಗಿ ಒಪ್ಪಿಸ್ಲಕ್ಕು.\" ಹೀಗೆ ಒಬ್ಬರನ್ನೊಬ್ಬರು ಸಂತೈಸಿಕೊಳ್ಳತೊಡಗಿದರು.",[11,366,367],{},"ಆದರೆ ಇವರಿಬ್ಬರಿಗೂ ತಿಳಿಯದಂತೆ ಬಾಗಿಲ ಮರೆಯಲ್ಲಿ ನಿಂತು ಯಾರೋ ಒಬ್ಬರು ಕೇಳಿಸಿಕೊಳ್ಳುತ್ತಿದ್ದಾರೆಂಬ ಸಂಗತಿ ಇವರಿಗೆ ಆಗ ತಿಳಿಯುವಂತಿರಲಿಲ್ಲ. ಆ ವ್ಯಕ್ತಿ ಬೇರಾರು ಅಲ್ಲ; ಶ್ರೀಧರ.",[11,369,370],{},"ಆ ದಿನದಿಂದ ಶ್ವೇತಾ ಉಷಾಳ ಕಣ್ಣಿನ ದೃಷ್ಟಿಯಿಂದ  ಆದಷ್ಟು ಮರೆಯಲ್ಲಿ ಇರುವುದಕ್ಕೆ ಪ್ರಯತ್ನಿಸುತ್ತಿದ್ದಳು. ಶ್ರೀಧರ ನಡವಳಿಕೆಯಲ್ಲಿ 180 ಡಿಗ್ರಿ ತಿರುವು ಕಂಡಿತು. ಇಬ್ಬರು ಬೇರೆ ಬೇರೆ ಕೊಠಡಿಯಲ್ಲಿ ವಾಸಿಸುತ್ತಿದ್ದರೂ ಕೂಡ ಅವಳ ಜೊತೆ ಸಂಯಮದಿಂದ ವರ್ತಿಸತೊಡಗಿದ. ತನ್ನ ಬಗ್ಗೆ ಕೆಟ್ಟದಾಗಿ ಉಷಾ ಬೈಯುತ್ತಿದ್ದರೂ ಶ್ವೇತಾ ಮಾತ್ರ ಉಷಾ ಕಳೆದುಕೊಂಡಿದ್ದ ಮೊದಲ ಪ್ರೀತಿಯ ಬಗ್ಗೆಯೇ ಮರುಗುತ್ತಿದ್ದಳು. ಹರೀಶನನ್ನು ಇವಳ ಜೊತೆ ಮದುವೆ ಮಾಡಿಸಬೇಕೆಂದು ಯೋಜನೆಗಳನ್ನು ಹಾಕುತ್ತಿದ್ದಳು. ಒಟ್ಟಿನಲ್ಲಿ ಮೇಣದ ಬತ್ತಿಯಾಗಿ ಉರಿಯುತ್ತಿದ್ದಳು.",[11,372,373],{},"ಹೀಗೆ ಕೆಲವು ವಾರಗಳು ಕಳೆಯುವುದೊರಳಗಾಗಿ ಶ್ವೇತಾ ಮತ್ತೆ ನೃತ್ಯ ತರಗತಿಗೆ ಹೋಗತೊಡಗಿದಳು. ಇವಳಿಗೋಸ್ಕರವಾಗಿ ನಾಗರತ್ನ ಹೊಸದೊಂದು ಕಾರನ್ನು ಖರೀದಿಸಿ, ಒಬ್ಬ ಡ್ರೈವರ್ನನ್ನು ಕೂಡ ನಿಯೋಜಿಸಿದರು. ಅವಳ ನೃತ್ಯಶಾಲೆಗೂ ಕೂಡ ಒಂದೆರಡು  ಬಾರಿ ಹೋಗಿಬಂದರು. ನೃತ್ಯ ಶಿಕ್ಷಕಿ ಅರುಂಧತಿಯವರೊಂದಿಗೂ ಸ್ನೇಹ ಬೆಳೆಸಿಕೊಂಡರು.",[11,375,376],{},"ಅಂದು 'ನಾದ-ನೂಪುರ'ದ ವಾರ್ಷಿಕೋತ್ಸವ. ಪ್ರತಿವರ್ಷದಂತೆ ಈ ವರ್ಷವೂ ಕೂಡ ವಿವಿದ ಪ್ರಕಾರದ ನೃತ್ಯಗಳನ್ನು ಆಯೋಜಿಸಿದ್ದರು. ಅರುಂಧತಿಯವರ ಕಟ್ಟಾಶಿಷ್ಯೆ ಶ್ವೇತಾಳಿಗೆ ಎಲ್ಲಾ ಜವಾಬ್ದಾರಿಗಳನ್ನು ವಹಿಸಲಾಗಿತ್ತು. ಕಾರ್ಯಕ್ರಮವು ತಡವಾಗಿ ಆರಂಭವಾಗಿದ್ದರಿಂದ ಮುಗಿಯುವುದು ೧೧ ಗಂಟೆ ಆಗಬಹುದೆಂದೂ, ಆ ನಂತರವೇ ಕಾರನ್ನು ಕಳುಹಿಸಿ ಎಂದು ಅತ್ತೆಗೆ ಕರೆ ಮಾಡಿದ್ದಳು. ಕಚೇರಿಯಿಂದ ಮರಳುತ್ತಿದ್ದ ಶ್ರೀಧರನಿಗೆ ಕರೆ ಮಾಡಿ, ಶ್ವೇತಾಳ ನೃತ್ಯಶಾಲೆಗೆ ಹೋಗಿ ಅವಳನ್ನು ಕರೆತರಬೇಕೆಂದು ನಾಗರತ್ನ ಹೇಳಿದರು. ಮೊದಲು ಇದು ತನ್ನಿಂದ ಆಗದು ಎಂದಿದ್ದ ಶ್ರೀಧರ, ತಾವೇ ಹೋಗುತ್ತೇವೆಂದು ಅಮ್ಮ ಹೇಳಿದಾಗ ವಿಧಿಯಿಲ್ಲದೆ ನಾದನೂಪುರದ ಕಡೆಗೆ ಬಂದಿದ್ದ.",[11,378,379],{},"ರಕ್ಷಣಾ ಸಿಬ್ಬಂದಿಯ ಬಳಿ ಶ್ವೇತಾ ಬಗ್ಗೆ ಕೇಳಿದಾಗ ಸಭಾಂಗಣದ ದಾರಿಯನ್ನು ತೋರಿಸಿದರು. ಮೊದಲ ಹೆಜ್ಜೆಯನ್ನು ಸಭಾಂಗಣದ ಒಳಗೆ ಇಡುತ್ತಿದ್ದಂತೆಯೇ ಎಲ್ಲಾ ಆರಿಹೋದವು. ಮುಂದಿನ ನೃತ್ಯವೇ ಕೊನೆಯ ಪ್ರದರ್ಶನವೆಂದು ಘೋಷಿಸಲಾಯಿತು. ಅವನ ಸುತ್ತಲೂ ಸಂಪೂರ್ಣ ಕತ್ತಲಾವರಿಸಿದ್ದರಿಂದ ಪಕ್ಕದಲ್ಲೇ ಇದ್ದ ಖುರ್ಚಿಯೊಂದರಲ್ಲಿ ಕುಳಿತ. ಅಲ್ಲಿಂದ ನೇರವಾಗಿ ಎದುರಿನಲ್ಲಿ ಕಾಣುತ್ತಿತ್ತು ರಂಗಸ್ಥಳ. ನಿಧಾನವಾಗಿ ಕೆಂಪು-ನೀಲಿ-ಹಸಿರು ಬಣ್ಣಗಳ ದೀಪಗಳು ಮೂಡಿದವು. ಆ ಬಣ್ಣಗಳ ನಡುವೆ ಲೀನವಾಗಿ ಮೆಲ್ಲನೆ ತಿಳಿನೀಲಿ ಬಣ್ಣದ ಸೀರೆಯುಟ್ಟು ಶ್ವೇತಾ ಆಗಮಿಸಿದಳು. ಹಾಡಿಗನುಸಾರವಾಗಿ ತನ್ನ ಬಳುಕುವ ಬಳ್ಳಿಯಂತಹ ದೇಹವನ್ನು ಚಲಿಸತೊಡಗಿದಳು. ಶ್ರೀಧರ ಉಸಿರಾಡುವುದನ್ನು ಮರೆತು ಅವಳನ್ನೇ ನೋಡುತ್ತಾ ಕುಳಿತುಬಿಟ್ಟ. ಅವಳು ಅಪ್ಸರೆಯಂತಹ ಸೌಂದರ್ಯವನ್ನು ಹೊಂದಿದವಳೆಂದು ತಿಳಿದಿದ್ದು ಇದೆ ಮೊದಲ ಬಾರಿಯಲ್ಲ. ಆದರೆ ಅವಳ ಮೇಲಿನ ನಿಲುವು ಈಗ ಬದಲಾಗಿತ್ತಷ್ಟೆ. ಅವಳನ್ನು ಸಾಮಾನ್ಯ ನೃತ್ಯಗಾರ್ತಿ ಎಂದುಕೊಂಡಿದ್ದವನಿಗೆ ಹರೀಶ ಇವಳ ಹಿಂದೆ ಬಿದ್ದಿದ್ದ ಕಾರಣ ಈಗ ಸಂಪೂರ್ಣವಾಗಿ ಅರಿವಾಗಿತ್ತು. ಮಂತ್ರಮುಗ್ಧನಾದವನಂತೆ ರಂಗಸ್ಥಳದ ಕಡೆಗೆ ನಡೆಯತೊಡಗಿದ. ನೃತ್ಯ ಮುಗಿದಿತ್ತು. ಶ್ವೇತಾ ಎಲ್ಲರಿಗೂ ವಂದಿಸುತ್ತಾ ತೆರೆಯ ಹಿಂದೆ ಮರೆಯಾದಳು.",[11,381,382],{},"ಆಗಲೇ ಅತ್ತೆಯಿಂದ ಬಂದ ಸಂದೇಶವನ್ನು ಓದಿದಳು. ಕಾರನ್ನು ಆಗಲೇ ನೃತ್ಯಶಾಲೆಯ ಬಳಿ ಕಳುಹಿಸಿದ್ದೇನೆಂದು ತಿಳಿಸಿದ್ದರು. ಹೊರಡುವುದಕ್ಕೂ ಮೊದಲು ನೃತ್ಯಶಿಕ್ಷಕಿಗೆ ಒಮ್ಮೆ ತಿಳಿಸಿ ಹೋಗೋಣವೆಂದು ಅವರ ಕೊಠಡಿಯನ್ನು ಪ್ರವೇಶಿಸಿದಳು. ಅಲ್ಲಿದ್ದ ವ್ಯಕ್ತಿಯನ್ನು ನೋಡಿ ಕಣ್ಣನ್ನು ಮಿಟುಕಿಸದೆ ಒಂದು ಏಲಿಯನ್ ಕಂಡಂತೆ ಹಾಗೆಯೇ ನಿಂತುಬಿಟ್ಟಳು.",[11,384,385],{},"\"ಶ್ವೇತಾ..! ನೀನು ಇವನನ್ನು ಭೇಟಿ ಮಾಡಿಸಲು ನಿನಗೆ ಇಷ್ಟ ಇರದೆ ಇದ್ರು, ನಾನೇ ಭೇಟಿ ಮಾಡಿದೆ\" ಎಂದು ಅರುಂಧತಿ ಹೇಳಿದರು. ಈ ಮಾತನ್ನು ಕೇಳಿ ಶ್ರೀಧರ ಮತ್ತು ಶ್ವೇತಾ ಒಬ್ಬರನ್ನೊಬ್ಬರು ಗಾಬರಿಯಿಂದ ನೋಡಿದರು. \"ಅವನ ಕಡೆ ಏಕೆ ಈ ರೀತಿಯಾಗಿ ನೋಡುತ್ತಿದ್ದೀಯ? ನಿನ್ನ ಗಂಡ ಹೌದೋ ಅಲ್ವೋ ಅಂತ ಅನುಮಾನಾನ?\", ಅರುಂಧತಿ ಶ್ವೇತಾಳನ್ನು ಅಣಕಿಸಿದರು. ಶ್ರೀಧರನ ಅನಿರೀಕ್ಷಿತ ಉಪಸ್ಥಿತಿ ಶ್ವೇತಾಳಿಗೆ ಏನು ಉತ್ತರಿಸಬೇಕೆಂದೇ ತೋಚಲಿಲ್ಲ. ತನ್ನ ಖುರ್ಚಿಯಿಂದೆದ್ದ ಶ್ರೀಧರ್, ಅರುಂಧತಿಯವರತ್ತ ತಿರುಗಿ, \"ಮೇಡಂ, ಲೇಟ್ ಆಗ್ತಾ ಇದೆ. ನಾವಿನ್ನು ಹೊರಡುತ್ತೇವೆ\" ಎಂದನು. ಶ್ವೇತಾ ಅರುಂಧತಿಯವರ ಕಾಲಿಗೆ ನಮಸ್ಕರಿಸಲು ತಲೆಬಾಗಿಸಿದಳು. ಶ್ರೀಧರನು ಕೂಡ ತನ್ನೊಡನೆ ಸೇರಿ ತಲೆಬಾಗಿಸಿದ್ದನ್ನು ಕಂಡು ಅವಳಿಗೆ ಎಚ್ಚರ ತಪ್ಪುವುದೊಂದೇ ಬಾಕಿ ಉಳಿದದ್ದು..!",[11,387,388],{},"ಆ ರೂಮಿನಿಂದ ಹೊರಬರುತ್ತಿದ್ದಂತೆ, ಕೆಲವು ವಿದ್ಯಾರ್ಥಿಗಳು ಹಾಗೂ ಮಾಧ್ಯಮ ಸಿಬ್ಬಂದಿಯವರ ದೃಷ್ಟಿ ತಮ್ಮ ಮೇಲೆಯೇ ಇದ್ದಿದ್ದನ್ನು ಕಂಡು ಶ್ರೀಧರ್ ಶ್ವೇತಾಳ ಭುಜದ ಮೇಲಿದ್ದ ಕೈಯನ್ನಿಳಿಸಿ ಸೊಂಟದ ಸುತ್ತ ಬಳಸಿ ಹಿಡಿದ. ಅವನ ಈ ಸಣ್ಣ ನಡತೆ ಶ್ವೇತಾಳಿಗೆ ಎಷ್ಟು ಹಿಂಸೆ ಕೊಡುತ್ತಿದೆ ಎಂಬ ಅರಿವು ಅವನಿಗಿರಲಿಲ್ಲ. ಇವನ ಈ ಹಠಾತ್ ಬದಲಾವಣೆ ಅವಳ ಮನಸ್ಸಿನಲ್ಲಿ ಗೊಂದಲವನ್ನು ಹುಟ್ಟು ಹಾಕಿತ್ತು. ಅವಳು ಎಷ್ಟೇ ಕಷ್ಟಪಟ್ಟು ತನ್ನ ಉದ್ವಿಗ್ನತೆಯನ್ನು ತಡೆಯಲು ಪ್ರಯತ್ನಿಸಿದರೂ ಸೊಂಟದ ಮೇಲೆ ಅವನ ಕೈಗಳಿದ್ದ ಜಾಗದಲ್ಲಿ ಕಂಬಳಿಹುಳು ಹರಿದಾಡಿದಂತಹ ಅನುಭವವನ್ನು ಹತ್ತಿಕ್ಕಲಾಗಲಿಲ್ಲ. ಅವನು ತನ್ನ ಸೌಂದರ್ಯದ ಗಣಿಯನ್ನು ಜಗತ್ತಿಗೆ ತೋರಿಸುವುದರಲ್ಲಿ ಮಗ್ನನಾಗಿದ್ದರೆ, ಶ್ವೇತಾ ತನ್ನ ನೃತ್ಯವನ್ನು ಮೆಚ್ಚುತ್ತಿದ್ದವರತ್ತ ನಗು ಬೀರುತ್ತಿದ್ದಳು. ಇವೆಲ್ಲದರ ನಡುವೆ, ಆ ಜಾಗದಲ್ಲಿ ಆಗುತ್ತಿದ್ದ  ಘಟನಾವಳಿಗೆ ಸಾಕ್ಷಿಯಾಗಿ ಹರೀಶ ನಿಂತಿದ್ದನ್ನು ಇವರಿಬ್ಬರೂ ಗಮನಿಸಲಿಲ್ಲ. ಅವನ ಹೃದಯ ಮತ್ತೆ ರಿಪೇರಿ ಮಾಡಲಾಗದಷ್ಟು ಚೂರುಚೂರಾಗಿತ್ತು. ಅವಳ ಮದುವೆಯ ನಂತರದ ಮೊದಲ ಪ್ರದರ್ಶನ ನೋಡಲು ಹೂಗುಚ್ಛದೊಂದಿಗೆ ಬಂದಿದ್ದ. ಈಗ ಆ ಸುಂದರ ಗುಚ್ಛವು ತನ್ನದೆಂದು ಪಕ್ಕದಲ್ಲೇ ಇದ್ದ ಕಸದ ತೊಟ್ಟಿಯೊಂದು ಹೆಮ್ಮೆ ಪಡುತ್ತಿತ್ತು.",[60,390],{},[11,392,393],{},"ಶ್ವೇತಾ ಸ್ಟೂಲ್ ಒಂದರ ಮೇಲೇರಿ ಅಡುಗೆ ಮನೆಯ ಅಟ್ಟಣಿಗೆಯ ಮೇಲಿದ್ದ ಬಾಟಲಿಗಳನ್ನು ಜೋಡಿಸಿಡುವುದರಲ್ಲಿ ಮಗ್ನಳಾಗಿದ್ದಳು. ಕೆಲಸಕ್ಕೆಂದು ಶಾರದಕ್ಕ ಇದ್ದರೂ ಉಷಾ ಎಂಬ ಹೆಮ್ಮಾರಿ ಅವಳನ್ನು ತನ್ನ ಬಳಿ ಕರೆದಿದ್ದಳು. ಹಠಾತ್ತಾಗಿ ದ್ವನಿಯೊಂದು, \"What the..! Are you mad? ಇಳಿ ಕೆಳಗೆ. ಈಗ್ಲೇ\". ಆ ದ್ವನಿ ಯಾವಾಗಲೂ ಅವಳನ್ನು ನಡುಗಿಸುತ್ತಿತ್ತು. ಹೆದರಿಕೆಯಿಂದ ಎಲ್ಲವನ್ನೂ ಮರೆತು ಬಿಡುತ್ತಿದ್ದಳು. ಈಗ ಕೂಡ ಗಾಬರಿಯಿಂದ ನಡುಗಿಹೋದಳು. ಟೈಲ್ಸ್ ನೆಲದ ಮೇಲವಳು ಬೀಳಬೇಕಾಗಿತ್ತು. ಆದರೆ ಬಲವಾದ ಕೈಗಳು ಅವಳನ್ನು ನೆಲತಾಕುವ ಮೊದಲೇ ಭದ್ರವಾಗಿ ಹಿಡಿದಿದ್ದವು. ಅವಳ ಕಣ್ಣುಗಳು ಮುಚ್ಚಿದ್ದರೂ ತನ್ನನ್ನು ರಕ್ಷಿಸಿದವರು ಯಾರೆಂದು ತಿಳಿದಿದ್ದವು. ಅವಳ ನೃತ್ಯ ಪ್ರದರ್ಶನ ನಡೆದ ರಾತ್ರಿಯಿಂದ ಈ ರೀತಿಯಾದ ಡಿಕ್ಕಿ ಹೊಡೆದುಕೊಳ್ಳುವುದು. ಅವನು ಬೇಕೆಂದೇ ಈ ರೀತಿ ಮಾಡುತ್ತಿರುವನೆಂದು ತಿಳಿದೂ ಅವನ ಎದುರು ಹೋಗುವುದು ನಡೆಯುತ್ತಲೇ ಇತ್ತು. ತನ್ನನ್ನು ರಕ್ಷಿಸಿದ್ದಕ್ಕೆ ಪ್ರತಿಯಾಗಿ ಅವನನ್ನು ಬಲವಾಗಿ ತಬ್ಬಿ ಹಿಡಿದು, ಮುಖವನ್ನು ಅವನ ಕತ್ತಿಗೆ ಒತ್ತಿ ಹಿಡಿದು ಅಡಗಿಕೊಂಡಳು.  ಶ್ರೀಧರ ಒಮ್ಮೆಲೆ ರೋಮಾಂಚನಗೊಂಡ. ಅವಳಿಂದ ಹೊಮ್ಮುತ್ತಿದ್ದ ಹೂವಿನ ಸುಗಂಧ, ಮೈನವಿರೇಳಿಸುವಂತಿದ್ದ ಅವಳ ಮೃದುಮದುರ ಬೆಚ್ಚಗಿನ ದೇಹ ಅವನ  ಇಂದ್ರಿಯಗಳಿಗೆ ಹಾನಿಯುಂಟು ಮಾಡುತ್ತಿದ್ದವು. ಅವಳ ಮುಖದತ್ತ ಧಿಟ್ಟಿಸಿ ನೋಡಿದ. ಕೂದಲಿನ ಕೆಲವು ಎಳೆಗಳು ಮುಖದ ಮೇಲೆ ಹರಡಿಕೊಂಡಿದ್ದು ಅವಳನ್ನು ಬೊಂಬೆಯಂತೆ ಕಾಣುವಂತೆ ಮಾಡಿತ್ತು. ಒಂದು ವಾರದಿಂದೀಚೆಗೆ ಅವಳ ಒಂದು ನೋಟ ಸಾಕಿತ್ತು, ಅವನ ಹೃದಯ ಬಡಿತ ಅಪಾಯಕಾರಿಯಾಗಿ ಹೆಚ್ಚಾಗುತ್ತಿತ್ತು. ಅವನ ಕೈಗಳಲ್ಲಿ ಬಂದಿಯಾಗಿದ್ದ ಶ್ವೇತಾ ತಪ್ಪಿಸಿಕೊಳ್ಳಲು ಹೆಣಗಾಡ ತೊಡಗಿದಾಗ ತನ್ನ ಹಿಡಿತವನ್ನು ಸಡಿಲಿಸಿ ಅವಳನ್ನು ನೆಲದ ಮೇಲೆ ಮೆಲ್ಲಗೆ ನಿಲ್ಲಿಸಿದ. \"I...I... am sorry\", ಅವನ ಕಡೆ ಬಿಟ್ಟು ಬೇರೆಲ್ಲೆಡೆ ನೋಡುತ್ತಾ ತೊದಲಿದಳು. ತನ್ನನ್ನು ಸಂಭಾಳಿಸಿಕೊಂಡು ಶ್ರೀಧರ ಹೇಳಿದ, \"ಇನ್ನೊಂದು ಸರಿ ಈ ರೀತಿ ಕೆಲ್ಸ ಎಲ್ಲ ನೀ ಮಾಡಕೆ ಹೊಡದ. ಶಾರದಕ್ಕ ಇದ್ದ. ಅವಳ ಹತ್ರ ಹೇಳು. ಈ ರೀತಿ ಮೇಲಿನಿಂದ ಬಿದ್ದು ನಿಂಗೇನಾದ್ರೂ ಆಗಿದ್ರೆ?\" ಶ್ವೇತಾ ತನ್ನ ಕಣ್ಣುಗಳನ್ನು ಅಗಲಿಸಿಕೊಂಡು ನೋಡುವುದನ್ನು ಬಿಟ್ಟೆರೆ ಬೇರೇನೂ ಮಾಡಲು ಅವಳಿಂದಾಗಲಿಲ್ಲ.",[11,395,396],{},"ಇದಕ್ಕೂ ಮೊದಲು, ಹರೀಶನೊಂದಿಗೆ ಗಣನೆಗೆ ತೆಗೆದುಕೊಳ್ಳುವಂತಹ ಭೌತಿಕ ಸ್ಪರ್ಶಗಳಾವುದು ಆಗಿರಲಿಲ್ಲ. ಆದರೂ ಆ ಚಿಕ್ಕಚಿಕ್ಕ ಸ್ಪರ್ಶಗಳೂ ಕೂಡ ಇವಳಿಗೆ ಅಹಿತಕರವಾಗಿಯೇ ತೋರುತ್ತಿತ್ತು. ಆದರೆ ಶ್ರೀಧರನೊಂದಿಗೆ ಇದ್ದಾಗ, ಅವನ ದೃಷ್ಟಿ ತನ್ನ ಮೇಲಿದೆ ಎಂದು ಗೊತ್ತಾದರೂ ಸಾಕಿತ್ತು, ಇವಳಿಗೆ ಏನೋ ಒಂದು ರೀತಿಯ ಭಾವನೆಗಳು ಉಕ್ಕಿ ಬರುತ್ತಿದ್ದವು. ಉಸಿರಾಟ ಏರುಪೇರಾಗುತ್ತಿತ್ತು. ಕುತ್ತಿಗೆಯ ಸೂಕ್ಷ್ಮ ಪ್ರದೇಶದ ಮೇಲೆ ಹಿತವಾದ ತಂಗಾಳಿ ಬೀಸಿದ ಹಾಗಾಗುತ್ತಿತ್ತು. ಈಗಿನ ಸ್ಥಿತಿಯ ಅರಿವಿದ್ದರೂ ಕೂಡ, ಅವಳ ಮುಖದ ಮೇಲೆ ಮುದ್ದಾದ ನಗುವೊಂದು ಹರಿದಾಡಿತು. ಬಹಳ ಹೊತ್ತು ನೆಲವನ್ನು ನೋಡುತ್ತಿದ್ದ ಶ್ವೇತಾ ಅವನು ಹೇಳಿದಂತೆಯೇ ಆಗಲಿ ಎಂಬಂತೆ ಧನಾತ್ಮಕವಾಗಿ  ತಲೆಯಾಡಿಸಿದಳು. “What the..! Say something.” ಅವನತ್ತ ಒಮ್ಮೆ ಧಿಟ್ಟಿಸಿ ನೋಡಿದಳು; ಈ ಬಾರಿ ಸ್ವಲ್ಪ ಕಡಿಮೆ ಹೆದರಿಕೆಯಿಂದ..! ಅಡುಗೆ ಮನೆಯಿಂದ ಹೊರಗೋಡುವ ಮೊದಲು ಮೆಲ್ಲಗೆ ಹೇಳಿ ಹೋದಳು,-\"ನೀವು ಹೇಳಿದಂತೆ ಆಗಲಿ.\"",[11,398,399],{},"ತನ್ನ ರೂಮಿನಲ್ಲಿ ಶ್ರೀಧರನ ಫೋಟೋ ನೋಡುತ್ತಾ ಕುಳಿತಿದ್ದ ಶ್ವೇತಾಳನ್ನು ಶಾರದಕ್ಕ ಬಂದು ಉಷಾ ಸ್ಟೋರ್ ರೂಮಿಗೆ ಬರಬೇಕೆಂದು ಕರೆಯುತ್ತಿದ್ದಾಳೆಂದು ಹೇಳಿ ಹೋದರು. ಆದರೆ ಶ್ವೇತಾ ಅಲ್ಲಿಗೆ ಹೋದಾಗ ರೂಮಿನ ತುಂಬಾ ಕತ್ತಲಾವರಿಸಿತ್ತು.  ಇವಳಿಗೆ ಕತ್ತಲೆ ಎಂದರೆ ತುಂಬಾ ಭಯ. ಬಾಗಿಲ ಬಳಿಯೇ ನಿಂತು, \"ಉಷಾ, ಒಳಗೆ ಇದ್ಯಾ ನೀನು?\" ಮುಂದಿನ ಕ್ಷಣವೇ ಪ್ರಕಾಶಮಾನವಾದ ದೀಪವು ಬೆಳಗಿತು. ಅದರೊಟ್ಟಿಗೆ ಉಷಾ ಕೂಡ ಅತ್ಯಂತ ಶೀತಲ ದ್ವನಿಯಲ್ಲಿ ಹೇಳಿದಳು-\"ಓಹೋ, ನಿಂಗೆ ಕತ್ತಲೆ ಅಂದ್ರೆ ಹೆದ್ರಿಕೆ ಅಂತ ಕೇಳಿದ್ದಿ. ಪರ್ವಾಗಿಲ್ಲೆ ಒಳಗೆ ಬಾ. \" ಶ್ವೇತಾಳಿಗೆ ಅವಳ ಈ ದ್ವನಿಛಾಯೆಯಿಂದ ಸ್ವಲ್ಪ ಅನುಮಾನ ಬಂದಿತು. ಅಪಾಯದ ವಾಸನೆ ಮೂಗಿಗೆ ಬಡಿದಿತ್ತು. ಆದರೂ ಉಷಾ ಹೇಳಿದಂತೆ ದೂರದ ಮೂಲೆಯಲ್ಲಿದ್ದ ಖುರ್ಚಿಯಲ್ಲಿ ಹೋಗಿ ಕುಳಿತಳು. ಅಲ್ಲಿಯವರೆಗೂ ಸುಮ್ಮನಿದ್ದ ಉಷಾ, ಈಗ ಅತ್ಯಂತ ಕಠೋರವಾಗಿ, \"ನನ್ನ ಜೀವನಾನ permanent ಆಗಿ ಕತ್ತಲೆಗೆ ದೂಕಿದ ನೀನು ಇದೆ ಕತ್ತಲೇಲಿ ಗಾಳಿ ಇಲ್ದೆ ಒದ್ದಾಡಿ ಸಾಯಿ\" ಎಂದು ಹೇಳಿ ಅರೆಕ್ಷಣದಲ್ಲಿ ಬಾಗಿಲನ್ನು ಮುಚ್ಚಿದಳು. ಶ್ವೇತಾ ಓಡಿ ಹೋಗಿ ಬಾಗಿಲನ್ನು ಬಡಿದು ಚೀರಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಅತ್ತೆ ನಾಗರತ್ನ ದೇವಸ್ತಾನದಲ್ಲಿದ್ದರು. ಶ್ರೀಧರ ಕಚೇರಿಯಲ್ಲಿದ್ದ. ದೀಪ ಅರಿತು. ಮತ್ತೆ ರೂಮಿನ ತುಂಬಾ ಕತ್ತಲೆ..!",[11,401,402],{},"ಶ್ರೀಧರ ರಾತ್ರಿ 8 ಗಂಟೆಗೆ ಮನೆಗೆ ಮರಳಿದ. ಉಷಾ ಹಾಗೂ ಅಜ್ಜಿ ಊಟಕ್ಕೆ ಕುಳಿತಿದ್ದರು. ತಾಯಿ ದೇವಸ್ತಾನಕ್ಕೆ ದಿನಾಲೂ ಹೋಗುವುದು ಗೊತ್ತಿದ್ದರಿಂದ ಶ್ವೇತಾ ಬಗ್ಗೆ ಕೇಳಿದ. ಉಷಾ ತನಗೆ ಏನು ಗೊತ್ತಿಲ್ಲವೆಂದಳು. ಸಿಟ್ಟಿನಿಂದ ಶ್ವೇತಾಳನ್ನು ಹಲವು ಬಾರಿ ಕೂಗಿದ. ಯಾವುದೇ ಮಾರುತ್ತರ ಬಾರದಿದ್ದಾಗ ಪ್ರಶ್ನೆಯೊಂದು ಉದ್ಭವಿಸಿತು,\"ಶ್ವೇತಾ ಮನೆ ಬಿಟ್ಟು ಹೋದಳೆ?\" ಉಸಿರಾಡುವುದೇ ಕಷ್ಟವಾಗತೊಡಗಿತು. ಮನೆಯ ಮೂಲೆಮೂಲೆಯನ್ನೂ ಹುಡುಕಿದ. ಶ್ವೇತಾ ಮಾತ್ರ ಕಾಣಲಿಲ್ಲ.",[11,404,405],{},"ಹರೀಶನೊಡನೆ ಹೋಗಿದ್ದರೆ ಎಂಬ ಯೋಚನೆ ಬಂದೊಡನೆಯೇ ಹರೀಶನಿಗೆ ಕರೆ ಮಾಡಿದ. \"ಅವಳೆಲ್ಲಿ? ಅವಳೇನಾದ್ರೂ ನಿನ್ ಜೊತೆ ಇದ್ರೆ ಅವ್ಳನ್ನ ಸಾಯಿಸಿ ಬಿಡ್ತಿ.\"",[11,407,408],{},"\"What? ಯಾರು?\", ಎಂದು ಗಾಬರಿಯಿಂದ ಕೇಳಿದ ಹರೀಶ.",[11,410,411],{},"\"ಜಾಸ್ತಿ ಸ್ಮಾರ್ಟ್ ಆಗಿ ಆಕ್ಟ್ ಮಾಡಡ. ಅವಳನ್ನ ನಿನ್ನ ಹತ್ರ ಅಡಗಿಸಿ ಇಟ್ಕೊಳೊ ಅಷ್ಟು ಧೈರ್ಯ ಬಂತ?\"",[11,413,414],{},"\"OMG! Where is she? ಇಲ್ಲೆ. ಅವ್ಳು ಇಲ್ಲಿ ಇಲ್ಲೆ. ಅವ್ಳು ನನ್ ಹತ್ರ ಬರ್ಲೇ ಇಲ್ಲೆ. ಏನಾತು? ಅವ್ಳಿಗೆ ನೀನು ಏನಾದ್ರೂ ಮಾಡಿದ್ರೆ ನಾನು ಸುಮ್ನೆ ಬಿಡದಿಲ್ಲೆ.\"",[11,416,417],{},"\"ಹರಿ....\", ಈ ಬಾರಿ ಸಂಪೂರ್ಣ ಅಸಹಾಯಕನಾಗಿ ಹೇಳಿದ, \"ನಾನು ಮನೆಲಿ ಇರ್ಲೇ. ಈಗ ಬಂದು ನೋಡಿದ್ರೆ ಅವ್ಳಿಲ್ಲೆ. ಅವ್ಳು ನಿನ್ ..ನಿನ್ ಹತ್ರ ಬೈಂದ ಅಂತ... ಅಂತ..\" ಎಂದು ಏನೇನೋ ಹೇಳುತ್ತಾ ಕರೆಯನ್ನು ಕೊನೆಗೊಳಿಸಿದ. ಮನೆಯಲ್ಲಿದ್ದವರ ಮೇಲೆಲ್ಲಾ ರೇಗಾಡಿದ. ಯಾರಿಗೂ ಏನು ತಿಳಿದಿರಲಿಲ್ಲ.",[11,419,420],{},"ಸಿಸಿಟಿವಿ ವೀಡಿಯೋವನ್ನು ಪರೀಕ್ಷಿಸಿದಾಗ ಅವಳು ಮನೆಯಿಂದ ಹೊರಗೆ ಹೋಗಿಯೇ ಇಲ್ಲವೆಂದು ತಿಳಿಯಿತು. ತನ್ನ ತಲೆಯ ಮೇಲೆ ಕೈಯಾಡಿಸುತ್ತಾ ಬೇಡಿಕೊಳ್ಳುವಂತೆ ಕೂಗಿದ, \"ಶ್ವೇತಾ.. ಪ್ಲೀಸ್.. ವಾಪಸ್ ಬಾ..\" ಎಲ್ಲರೂ ಗಾಬರಿಯಲ್ಲಿದ್ದರೆ, ಉಷಾ ಸಂತೋಷದ ಕಡಲಲ್ಲಿ ತೇಲುತ್ತಿದ್ದಳು. ಅಷ್ಟರಲ್ಲಿ ಶಾರದಕ್ಕ ಬಂದು ಶ್ವೇತಾ 6 ಗಂಟೆ ಸುಮಾರಿಗೆ ಸ್ಟೋರ್ ರೂಮ್ ಕಡೆಗೆ ಹೋಗಿದ್ದಳು ಎಂದರು. ಶ್ರೀಧರ್ ಒಂದು ಕ್ಷಣವೂ ಅಲ್ಲಿ ನಿಲ್ಲದೆ ಅತ್ತ ಓಡಿದ. ಟಾಮಿ ಬಾಗಿಲನ್ನು ಕೆರೆಯುತ್ತಾ ಕುಳಿತಿತ್ತು. ಬಾಗಿಲನ್ನು ಒಡೆಯುವಂತೆ ಸೆಕ್ಯೂರಿಟೀ ರಾಮಣ್ಣನಿಗೆ ಹೇಳಿದ. ಒಳಗೆ ದೀಪವನ್ನು ಹೊತ್ತಿಸಿದಾಗ ಅವರಿಗೆ ಕಂಡಿದ್ದು ನೆಲದ ಮೇಲೆ ಎಚ್ಚರವಿಲ್ಲದೆ ಬಿದ್ದುಕೊಂಡಿದ್ದ ಶ್ವೇತಾ.",[11,422,423],{},"\"Now she’s out of danger. ಅವಳ ಅದೃಷ್ಟ ಚೆನ್ನಾಗಿ ಇತ್ತು. ಅವಳು ಬೇಗನೆ ಪ್ರಜ್ಞೆಯನ್ನು ಕಳೆದುಕೊಂಡಿದ್ದರಿಂದ ಯಾವುದೇ ಅಪಾಯ ಆಗಲಿಲ್ಲ. ಇಲ್ಲದಿದ್ರೆ ಬ್ರೈನಿಗೆ ತೊಂದ್ರೆ ಆಗ್ತಿತ್ತು. ಅವಳೀಗ ನಿದ್ದೆ ಮಾಡ್ತ ಇದಾಳೆ. But ಯಾರಾದ್ರೂ ಅವ್ಳ ಜೊತೆ ಇರ್ಲೇ ಬೇಕು.\"",[11,425,426],{},"\"ನಾನು ಅವ್ಳ ಜೊತೆ ಇರ್ತೀನಿ\", ಶ್ರೀಧರನ ದ್ವನಿಯಲ್ಲಿ ಇದ್ದ ಕಾಳಜಿಯನ್ನು ಕಂಡು ನಾಗರತ್ನರವರ ದೃಷ್ಟಿ ಒಮ್ಮೆ ಅವನ ಮೇಲೆ ಹೊರಳುತ್ತದೆ. ಅವರು ಇವನ ಮಾತಿಗೆ ಎದುರಾಡಲೂ ಇಲ್ಲ, ಏನನ್ನೂ ಹೇಳಲೂ ಇಲ್ಲ, ಬದಲಿಗೆ ನಿಧಾನವಾಗಿ ರೂಮಿನಿಂದ ಹೊರನಡೆದರು. ಅವರು ಆ ಮನೆಯ ಮುಂದಿನ ಮುಂಜಾನೆ ಸಂತೋಷಕಾರಕವಾಗಿರಬೇಕೆಂದು ಬಯಸುತ್ತಿದ್ದರು. ಆದರೆ ಅವರ್ ರೂಮಿನ ಕಡೆ ಹೆಜ್ಜೆ ಹಾಕಿದಾಗೆ ಎದುರಿನಲ್ಲಿ ಸಿಂಹಿಣಿಯಂತೆ ನಿಂತಿದ್ದ ಉಷಾ ಕಂಡಳು. ತನ್ನ ತಾಯಿಯ ಕಣ್ಣಿನಲ್ಲಿ ತನ್ನ ಬಗ್ಗೆ ಕಾಣುತ್ತಿದ್ದ ನಿರ್ಲಕ್ಷ ಅವಳನ್ನು ಇನ್ನಷ್ಟು  ಕ್ರೋಧಕ್ಕೀಡು ಮಾಡಿತು. \"ಮಮ್ಮಿ\" ಎಂದು ಅವಳು ಕಿರುಚಿದರೂ ನಾಗರತ್ನ ಅವಳನ್ನು ಅಪರಿಚತರನ್ನು ನೋಡಿದಂತೆ ಒಮ್ಮೆ ನೋಡಿ ಮುಂದೆ ಸಾಗಿದರು.",[60,428],{},[11,430,431],{},"ಶ್ವೇತಾ ತನ್ನ ಕೆನ್ನೆಯನ್ನು ಬೆಚ್ಚಗಿನ ಹತ್ತಿಯಂತಿದ್ದ ವಸ್ತುವಿಗೆ ಸವರಿದಳು.  ಏಳಲು ಸೋಮಾರಿತನ ತೋರಿ ಹಾಗೆಯೇ ಕಣ್ಣನ್ನು ಮುಚ್ಚಿಕೊಂಡೇ ಇದ್ದಳು. ಅವಳು ಮತ್ತೊಮ್ಮೆ ಅದೇ ಹತ್ತಿಯಂತಿದ್ದ ವಸ್ತುವಿಗೆ ಮೂಗನ್ನು ಸವರಿದಾಗ ಅವಳ ಕಣ್ಣುಗಳ ತೆರೆದುಕೊಂಡವು. ಒಮ್ಮೆಲೆ ಗಾಬರಿಯಿಂದ ಕಿರುಚ ಹೊರಟವಳು ಕೊನೆ ಕ್ಷಣದಲ್ಲಿ ತಡೆದುಕೊಂಡಳು. ಶ್ರೀಧರ ತನ್ನ ಮೊಣಕೈ ಮೇಲೆ ತಲೆಯನ್ನು ಬ್ಯಾಲೆನ್ಸ್ ಮಾಡುತ್ತಾ, ಮತ್ತೊಂದು ಕೈಯನ್ನು ಅವಳ ಹೊಟ್ಟೆಯ ಮೇಲೆ ಇಟ್ಟಿದ್ದ. ನೋಟ ಮಾತ್ರ ಅವಳ ಮೇಲೆಯೇ. ಅವರಿಬ್ಬರ ಕಾಲುಗಳು ಒಂದಕ್ಕೊಂದು ಬೆಸೆದುಕೊಂಡಿದ್ದವು. ತನ್ನದೊಂದು ಕೈ ಕೂಡಾ ಅವನ ಟಿ-ಶರ್ಟಿನ ಕಾಲರನ್ನು ಹಿಡಿದುಕೊಂಡಿದ್ದನ್ನು ನೋಡಿದಳು.",[11,433,434],{},"ಅವನು ಮೊದಲು ಕೇಳಿದ ಪ್ರಶ್ನೆ, \"How are you feeling now?\" ಅವನ ದ್ವನಿಯಲ್ಲಿದ್ದ ಕಾಳಜಿಯ ಛಾಯೆ ಹಿಂದೆಂದೂ ಕಂಡಿರಲಿಲ್ಲ. \"ರಾತ್ರಿಯಿಡೀ ಕನವರಿಸ್ತ ಇದ್ದೆ. ಅದಕ್ಕಾಗಿ ಹೀಗೆ ಹಿಡ್ಕಳಕಾತು. ಈಗ ಹೇಗೆ ಅನಿಸ್ತಾ ಇದ್ದು? ತಲೆ ನೋವು ಏನಾದ್ರೂ ಇದ್ದ?\" ಆ ಕ್ಷಣಕ್ಕೆ ಶ್ರೀಧರನೊಬ್ಬನೇ ತನ್ನ ಪಾಲಿಗೆ ಇರುವುದು, ಅವನನ್ನು ಬಿಟ್ಟರೆ ಬೇರಾರು ತನಗೆ ಇಷ್ಟು ಪ್ರೀತಿ ನೀಡಲಾರರು ಎಂದುಕೊಂಡಳು. ಅವಳಿಗೆ ಕಣ್ಣಿನಿಂದ ಜಾರಿದ ಹನಿಯನ್ನು  ತಡೆಯಲಾಗಲಿಲ್ಲ. ಏನು ತೊಂದರೆ ಇಲ್ಲವೆಂಬಂತೆ ಋಣಾತ್ಮಖವಾಗಿ ತಲೆಯಾಡಿಸಿದಳು.",[11,436,437],{},"ಅವಳ ಮುಖವನ್ನು ತನ್ನ ಅಂಗೈಗಳಲ್ಲಿ ಹಿಡಿದು ಪ್ರೀತಿಯಿಂದ, \" ಪ್ಲೀಸ್ ಶ್ವೇತಾ. ಅಳಡ. ಏನು ಆಗಲ್ಲೆ ನಿಂಗೆ. ನಾನು ನಿನ್ ಜೊತೆ ಇರ್ತಿ. ಎಲ್ಲದಕ್ಕೂ ಪರಿಹಾರ ನಾನು ಮಾಡ್ತಿ.\" ಅವನ ಈ ಮಮತೆಯುಕ್ತ ಮಾತನ್ನು ಕೇಳಿ ಸ್ವಲ್ಪ ನಿರಾಳವೆನ್ನಿಸಿ ಅವನನ್ನು ಗಟ್ಟಿಯಾಗಿ ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅಳತೊಡಗಿದಳು. ಅವಳು ಅಳುವುದನ್ನು ನಿಲ್ಲಿಸಿದ ನಂತರ ಶ್ರೀಧರ ಅವಳನ್ನು ಅಂಗಾತ ಮಲಗಿಸಿದ. ರೂಮಿನ ಉಷ್ಣಾಂಶ ವೇಗವಾಗಿ ಏರತೊಡಗಿತು. ತನ್ನ ಬೆರಳುಗಳಿಂದ ಕೆನ್ನೆಯ ಮೇಲಿದ್ದ ನೀರನ್ನು ಮೆಲ್ಲಗೆ ಒರೆಸಿದ. ತನ್ನ ಮುಖವನ್ನು ಅವಳ ಮುಖಾದತ್ತ ತರುತ್ತಿದ್ದಂತೆಯೇ ಶ್ವೇತಾ ಕಣ್ಣುಗಳನ್ನು ಮುಚ್ಚಿದಳು.",[11,439,440],{},"ಅವರಿಬ್ಬರ ತುಟಿಗಳು ಇನ್ನೇನು ಬೆರೆತುಹೋಗುತ್ತವೆಯೆಂದು ಕೊಳ್ಳುವಾಗಲೇ ಬಾಗಿಲನ್ನು ಜೋರಾಗಿ ಬಡಿಯುವ ಶಬ್ದ ಕೇಳಿಸಿತು. ದಡ್ಡನೆ ತಾವಿದ್ದ ಸ್ಥಿತಿಯಿಂದ ಎದ್ದು ಕುಳಿತರು. ಶ್ರೀಧರ ಹೋಗಿ ಬಾಗಿಲು ತೆರೆದ. ಅಲ್ಲಿ ನಿಂತಿದ್ದ ನಾಗರತ್ನ,  ಹರೀಶ ಮತ್ತು ಶ್ವೇತಾಳ ತಂದೆ-ತಾಯಿ ಬಂದಿರುವರೆಂದೂ, ಅವಳ ಬಟ್ಟೆಗಳನ್ನೆಲ್ಲಾ ಪ್ಯಾಕ್ ಮಾಡಬೇಕೆಂದು ಹೇಳಿದರು. ಅವಳು ಎಲ್ಲೂ ಹೋಗುವುದಿಲ್ಲ ಎಂದು ಕಿರುಚಿದಾಗ ಅಲ್ಲಿಗೆ ಹರೀಶ ಕೂಡ ಆಗಮಿಸಿದ. ರೂಮಿನೊಳಗೆ ಬಂದ ಹರೀಶನಿಗೆ ಹೊಡೆಯಲು ಹೋದ ಶ್ರೀಧರ. ಉಷಾ ಅವರಿಬ್ಬರ ನಡುವೆ ಬಂದು ನಿಂತು ತನ್ನ ಅಣ್ಣನತ್ತ ತಿರುಗಿ ಈ ಪರಿಸ್ಥಿತಿಗೆ ಕಾರಣ ಶ್ವೇತಾ, ಅವಳನ್ನು ತಾನು ಸಾಯಿಸುತ್ತೇನೆಂದು ಮುನ್ನುಗ್ಗಿದಳು.",[11,442,443],{},"ನಾಗರತ್ನ ಉಷಾಳ ಕೆನ್ನೆಗೊಂದು ಏಟು ಹಾಕಿ ಹೇಳಿದರು, \"ಎಷ್ಟು ಧೈರ್ಯ ನಿಂಗೆ ಅವಳ ಬಗ್ಗೆ ಏನೇನೋ ಬೈಯಕೆ. ನಿನ್ನನ್ನ ಕೊಲ್ಲಕು, ಅವ್ಳನ್ನಲ್ಲ. ಇದಕ್ಕೂ ಮುಂಚೆ ನನ್ನ ಹತ್ರ ಕೂಡ ಇದೆ ತರ ಸುಳ್ಳು ಹೇಳಿದ್ದೆ. ನಾನು ಸಪೋರ್ಟ್ ಮಾಡಲ್ಲೇ ಅಂತ ನಿನ್ನ ಅಣ್ಣನ ಹತ್ರ ಸೇಮ್ ಆಟ ಆಡಿದೆ.   ಅವ ನಂಬಿದ. ನೀನು ಯಾವತ್ತೂ ಪ್ರೆಗ್ನೆಂಟ್ ಆಗೇ ಇರ್ಲೇ. ಅದು ಹೇಗ್ ಸಾಧ್ಯ? ಹರೀಶ ನಿನ್ನ ಮೇಲೆ ಆಸಕ್ತಿ ತೋರ್ಸಿರ್ಲೆ ಇಲ್ಲೆ. ಇವ್ಳಿಂದಾಗಿ ಶ್ವೇತಾ ನರಕ ಅನುಭವಿಸಕಾತು. ಇನ್ಮುಂದೆ ಹೀಂಗೆ ಆಗ್ಲಾಗ ಅಂತ ಒಂದು ನಿರ್ಧಾರ ತಗೈOದಿ. ಅವ್ಳು ಹರೀಶನ ಜೊತೆ ಎಲ್ಲ ಸಂತೋಷ ಹಂಚಿಕೊಳ್ಳೋಕೆ ಯೋಗ್ಯ ಇದ್ದ. ಉಷಾ ಕಿರುಚಿದಳು, \"ಅವಳೊಬ್ಬ ರಾಕ್ಷಸಿ. ಅವ್ಳಿಗಾಗಿ ನನ್ನ ಜೀವನ ಹಾಳು ಮಾಡಡ. ಅವ್ಳನ್ನ ಆವಾಗ್ಲೇ ಕೊಲ್ಲಕಾಗಿತ್ತು. ಈಗ ಕೊಲ್ಲದೆ ಬಿಡದಿಲ್ಲೆ.\"",[11,445,446],{},"ಮುಂದೆ ಏನಾಗಬಹುದು ಎಂದು ತಿಳಿಯುವ ಮುಂಚೆಯೇ ಉಷಾ ಶ್ವೇತಾಳ ಕುತ್ತಿಗೆಯನ್ನು ಹಿಡಿದಿದ್ದಳು. ಶ್ವೇತಾ ಉಸಿರಾಡಲು ಕಷ್ಟ ಪಡತೊಡಗಿದಳು. \"ಉಷಾ...\", ಹರೀಶ ಮತ್ತು ಶ್ರೀಧರ, ಇಬ್ಬರೂ ಒಮ್ಮೆಲೆ ಕಿರುಚಿ ಅವಳತ್ತ ನುಗ್ಗಿದರು. ಶ್ರೀಧರ್ ಉಷಾಳನ್ನು ಎಷ್ಟು ಬಲವಾಗಿ ತಳ್ಳಿದನೆಂದರೆ ಅವಳು ಹೋಗಿ ಬಾಗಿಲ ಬಳಿ ಹೋಗಿ ಬಿದ್ದಳು. ಅತ್ಯಂತ ಆಘಾತಕ್ಕೆ ಒಳಗಾದ ಉಷಾ \"ಅಣ್ಣಾ..\" ಎಂದಳು. \"Stop...!\", ಶ್ರೀಧರ್ ಬೆಂಕಿಯಂತಾಗಿದ್ದ, \" ಅಣ್ಣಾ ಅಂತ ಕರ್ಯಡ. ನೀನು ನನ್ನ ಪಾಲಿಗೆ ಸತ್ತಂಗೆ.\" ಇಷ್ಟು ದಿನ ಹೀರೊ ಆಗಿದ್ದ ಅಣ್ಣಾ ಈಗ ವಿಲನ್ ಆಗಿ ಬದಲಾಗಿದ್ದ. ಉಷಾ ಅಲ್ಲಿಂದ ಎದ್ದು ತನ್ನ ರೂಮಿಗೆ ಓದಿ ಹೋಗಿ ಬಾಗಿಲು ಹಾಕಿಕೊಂಡಳು. ಶ್ರೀಧರ್ ಶ್ವೇತಾ ಕಡೆಗೆ ತಿರುಗಿದಾಗ ಹರೀಶ ಅವಳನ್ನು ಸಂತೈಸುತ್ತಿದ್ದ. ಶ್ವೇತಾಳ ಸುಖ-ಸಂತೋಷಕ್ಕಾಗಿಯಾದರೂ ತಾನು ಅವಳಿಂದ ದೂರಗಬೇಕೆಂದು ನಿರ್ಧರಿಸಿದ.",[60,448],{},[11,450,451],{},"ಉಷಾ ಆತ್ಮಹತ್ಯೆ ಮಾಡಿಕೊಂಡು ಅಂದಿಗೆ 14 ದಿನಗಳು ಕಳೆದಿದ್ದವು. ಪೂಜಾ ಕಾರ್ಯಗಳೆಲ್ಲ ಮುಗಿದು ಮನೆಯಲ್ಲಿ ಜನರ ಓಡಾಟವೆಲ್ಲ ಇಳಿದಿತ್ತು. ಅಡುಗೆ ಮನೆಯಿಂದ ಹೊರಬಂದ ಶ್ವೇತಾಳಿಗೆ ಕಂಡಿದ್ದು ಸೋಫಾ ಮೇಲೆ ಕುಳಿತಿದ್ದ ಹರೀಶ. \"Hi.. ಹೆಂಗಿದ್ದೆ? ಶ್ರೀ ಬೆಳಗ್ಗೇನೇ ಮನೆಗೆ ಬಾ ಅಂದ. ಎಂತಕೆ ಅಂತ ಗೊತ್ತಿಲ್ಲೆ.\", ಎಂದವನೇ ಶ್ರೀಧರನ ರೂಮಿನತ್ತ ಹೋದ. ಶ್ವೇತಾಳಿಗೆ ಕೂಡ ಕಾರಣ ಗೊತ್ತಿಲ್ಲ. ಅವಳೂ ಕೂಡ ನಿಧಾನವಾಗಿ ಹೋಗಿ ಬಾಗಿಲ ಮರೆಯಲ್ಲಿ ನಿಂತಳು. ಸೋಫಾ ಮೇಲೆ ಕುಳಿತಿದ್ದ ಶ್ರೀಧರನ ಬೆನ್ನು ಇವಳ ಕಡೆಗಿತ್ತು. ತನ್ನ ಕುಟುಂಬದ ಎಲ್ಲ ಫೋಟೋಗಳನ್ನು ನೋಡುತ್ತಾ ಕುಳಿತಿದ್ದ. ಇವಳ ತಲೆಯ ತುಂಬಾ ಇಲ್ಲಸಲ್ಲದ ಯೋಚನೆಗಳು.",[11,453,454],{},"\" ನನ್ನ ಕ್ಷಮಿಸು ಹರಿ. ನಾನು ಬಾರಿ ದೊಡ್ಡ ತಪ್ಪು ಮಾಡಿದ್ದಿ.\", ನಿರ್ಲಿಪ್ತ ಭಾವದಲ್ಲಿ ಶ್ರೀಧರ ಹೇಳಿದ.",[11,456,457],{},"\" ಅದೆಲ್ಲ ಆಗಿ ಹೋಗಿದ್ದು. ಈಗ ನೀನು ಕೂಡ ಅವ್ಳನ್ನ ಚೆನ್ನಾಗಿ ನೋಡಿಕೊಳ್ತಾ ಇದ್ದೇ.\", ಹರೀಶ ಸ್ನೇಹಿತನನ್ನು ಸಮಾಧಾನ ಮಾಡಲು ನೋಡಿದ.",[11,459,460],{},"\" ಪ್ಲೀಸ್ ಹರಿ. ನಾನು ಮತ್ತೆ ಆ ದಿನಗಳನ್ನ ನೆನಪು ಮಾಡ್ಕಳಕೆ ಇಷ್ಟ ಪಡದಿಲ್ಲೆ. ನನ್ನ ಫ್ರೆಂಡ್ ಖುಷಿನೇ ಕಿತ್ತುಕೊಂಡು ಪಾಪಿ ಆಗಿ ಬಿಟಿಡಿ. ಶ್ವೇತಾ ಒಂದು ಶುಭ್ರ ಸ್ಫಟಿಕದಂತಹ ವ್ಯಕ್ತಿತ್ವ ಹೊಂದಿದ ಹುಡ್ಗಿ. ಅವಳನ್ನ ಮದ್ವೆ ಆಗಿ ಎಲ್ಲ ಸಂತೋಷನಾ ಕೊಡು.\"",[11,462,463],{},"ಶ್ರೀಧರನ ಮಾತನ್ನು ಕೇಳಿ ಹರೀಶನಿಗೆ ತನ್ನ ಕಿವಿಗಳನ್ನೇ ನಂಬಲಾಗಲಿಲ್ಲ. ಆದರೆ ಶ್ವೇತಾಳಿಗೆ ಕಣ್ಣು ಕಪ್ಪಡರಿದಂತಾಯಿತು. ಕಾಲ ಕೆಳಗಿನ ನೆಲವೇ ಬಿರಿಯುತ್ತಿದೆ ಎನಿಸಿತು.",[11,465,466],{},"\"I want to give her divorce. And ಮತ್ತೊಂದು ವಿಷ್ಯ, she's still untouched and we never...\", ಶ್ರೀಧರನ ಮುಂದಿನ ಮಾತುಗಳನ್ನು ಶ್ವೇತಾಳಿಗೆ ಕೇಳಿಸಿಕೊಳ್ಳಲಾಗಲಿಲ್ಲ. ನಿಂತಲ್ಲೇ ನೆಲಕ್ಕೆ ಕುಸಿದು ಕುಳಿತಳು.",[11,468,469],{},"ಅವಳು ಮತ್ತೆ ತನ್ನ ಕಣ್ಣುಗಳನ್ನು ತೆರೆದಾಗ ಆಸ್ಪತ್ರೆಯಲ್ಲಿದ್ದಳು. ಸುತ್ತಲೂ ಎಲ್ಲರೂ ಇದ್ದರು, ಶ್ರೀಧರನೊಬ್ಬನನ್ನು ಹೊರತುಪಡಿಸಿ. ಅಲ್ಲಿಂದ ಡಿಸ್‌ಚಾರ್ಜ್ ಮಾಡಿದ ಮೇಲೆ ನೇರವಾಗಿ ಅವಳ ಮನೆಗೆ ಕರೆದೊಯ್ಯಲಾಯಿತು. 8 ದಿನಗಳು ಕಳೆದರೂ ಶ್ರೀಧರನಿಂದ ಕರೆಯೂ ಕೂಡ ಬರಲಿಲ್ಲ. ಮನೆಯವರೆಲ್ಲರೂ ಸೇರಿ ಡೈವೋರ್ಸ್ ಪೇಪರ್ಸ್ ಗೆ ಬಲವಂತವಾಗಿ ಸಹಿ ಮಾಡಿಸಿದರು. ಹೀಗೆ ಕೆಲವು ದಿನಗಳಾದ ಮೇಲೆ ಮನೆಯ ಮುಂದೆ ವಿದೇಶಿ ಕಾರೊಂದು ನಿಂತಿತ್ತು. ಜೊತೆಗೆ ಪೃಥ್ವಿ ಇಂಡಸ್ಟ್ರೀಸ್ನ 50% ಶೇರ್ ಇವಳ ಹೆಸರಿಗೆ ಬರೆದಿದ್ದ ಶ್ರೀಧರ. ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾದರೆ ವಿನಹ ಶ್ವೇತಾಳ ಅಭಿಪ್ರಾಯವನ್ನು ಯಾರೊಬ್ಬರೂ ಕೇಳಲಿಲ್ಲ. ಅವಳು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಇಷ್ಟ ಪಡುತ್ತಿದ್ದ ನೃತ್ಯವನ್ನೇ ಇನ್ನೂ ಮುಂದೆ ಮಾಡುವುದಿಲ್ಲವೆಂದು ಕಠೋರ ನಿರ್ಧಾರವನ್ನು ತೆಗೆದುಕೊಂಡಿದ್ದಳು.",[60,471],{},[11,473,474],{},[21,475,476],{},"Present Day",[11,478,479],{},"ಮಾರನೆಯ ದಿನ ಬೆಳಗ್ಗೆ ಮೊಬೈಲಿನ ರಿಂಗ್ ಕೇಳಿ ಎದ್ದು ಕುಳಿತಳು. ಸಮಯ ಬೆಳಗ್ಗೆ 6 ಗಂಟೆ. ಕರೆ ಮಾಡಿದವರ ಹೆಸರನ್ನು ನೋಡುತ್ತಿದ್ದಂತೆಯೇ ಕರೆಯನ್ನು ಸ್ವೀಕರಿಸಿದಳು. ಅದರೊಟ್ಟಿಗೆ ಪ್ರಶ್ನೆಗಳ ಸುರಿಮಳೆಯನ್ನೇ ನಾಗರತ್ನರವರ ಮೇಲೆ ಸುರಿಸಿದಳು. \"ಅತ್ತೆ..! ಏನಾತು? ಹೆಂಗಿದ್ದಿ ನೀವು? ಅಜ್ಜಿ..?\" ಎಂದು ಕೆಲಕ್ಷಣ ಮಾತನ್ನು ನಿಲ್ಲಿಸಿ ಮೆಲ್ಲಗೆ \"ಶ್ರೀ...! ಶ್ರೀ ಹೆಂಗಿದ್ದ ?\" ಎಂದಳು. ಅವನ ಹೆಸರನ್ನು ಕೇಳುತ್ತಿದ್ದಂತೆಯೇ ನಾಗರತ್ನ ಆಳುವ ಸ್ವರದಲ್ಲಿ, \"ಶ್ವೇತಾ... ನನ್ನ ಶ್ರೀ ಮೊದಲಿನ ಹಂಗಿಲ್ಲೆ. ಇದೇ ಮೊದಲ ಬಾರಿ ಮಾತ್ರೆ ಕೂಡ ತಗತ ಇಲ್ಲೆ. ಅಪ್ಪ, ತಂಗಿ ತೀರಿಕೊಂಡಾಗ ಕೂಡ ಇಷ್ಟೊಂದು ಅಪ್‌ಸೆಟ್ ಆಗಿರ್ಲೆ.   ಕೋರ್ಟಿಂದ ಬಂದ್ಮೇಲೆ ಊಟ-ತಿಂಡಿ ಸರಿ ಮಾಡ್ತ ಇಲ್ಲೆ. ಇವತ್ತು ಬೆಳಗ್ಗೆನೂ ತಿಂಡಿ ತಿನ್ನದೆ 5 ಗಂಟೆಗೆ ಆಫೀಸಿಗೆ ಹೋಯ್ದ. ಶ್ವೇತಾ.. ಕೇಳ್ತಾ ಇದ್ದ? ಶ್ವೇ... \"",[11,481,482],{},"ಇಷ್ಟೆಲ್ಲವನ್ನೂ ಕೇಳಿಸಿಕೊಳ್ಳಲು ಶ್ವೇತಾ ಅಲ್ಲಿದ್ದರೆ ತಾನೆ. ಅವಳು ತನ್ನ ರೂಮಿನಿಂದ ಹೊರಗೆ ಹೋಗಿ 20 ಸೆಕೆಂಡ್ಗಳೇ ಕಳೆದಿದ್ದವು. ಶ್ರೀಧರ ನೀಡಿದ್ದ ಕಾರನ್ನು ಕಣ್ಣೆತ್ತಿಯೂ ನೋಡದೆ ಇದ್ದವಳು , ಇಂದು ತಾನೇ ಡ್ರೈವ್ ಮಾಡಿಕೊಂಡು ಹೊರಟಳು. ಲಿಂಗನಮಕ್ಕಿಗೆ ಹೋಗುವ ದಾರಿಯಲ್ಲಿ ಜನಸಾಗರವೇ ನೆರೆದಿತ್ತು. 20 ಉಪಗ್ರಹಗಳನ್ನು ಹೊತ್ತ ರಾಕೆಟೊOದು \"ಲಿಂಗನಮಕ್ಕಿ ಉಪಗ್ರಹ ಉಡ್ಡಯನ ಕೇಂದ್ರ\"ದಿಂದ ಗಗನಕ್ಕೆ ಚಿಮ್ಮುವುದನ್ನು ನೋಡಲು ಅವರೆಲ್ಲ ಕಾಯ್ದು ಕುಳಿತಿದ್ದರು. ಇವಳಿಗೆ ನಿಧಾನಗತಿಯಲ್ಲಿ ಸಾಗುತ್ತಿರುವ ವಾಹನಗಳ ನಡುವೆ ಹೋಗಬೇಕಾದರೆ ಸಾಕುಸಾಕಾಯಿತು. ಶ್ರೀಧರನ ಬಗ್ಗೆ ಚಿಂತೆ ಬೇರೆ ಕೊರೆಯುತ್ತಿತ್ತು.",[11,484,485],{},"ಅಂತೂ ಟ್ರಾಫಿಕ್ ಧಾಟಿ ಪೃಥ್ವಿ ಇಂಡಸ್ಟ್ರೀಸ್ ಎದುರು ಕಾರನ್ನು ನಿಲ್ಲಿಸಿದಳು. 'ದೊಪ್ಪ್' ಎಂದು ಭೀಕರ ಶಬ್ಧವಾಯಿತು. ಕಾರಿನ ಬಾಗಿಲು ತೆರೆಯ ಹೋದವಳು ಬೆಚ್ಚಿ ಬಾಗಿಲು ಮುಚ್ಚಿದಳು. ಕಾರಿನ ಬ್ಯಾನೇಟ್ ನುಜ್ಜುಗುಜ್ಜಾಗಿತ್ತು. ಅದರ ಮೇಲೆ ಯುವಕನ ದೇಹವೊಂದು ಬಿದ್ದಿತ್ತು. ಸ್ವಲ್ಪ ತನ್ನ   ತಲೆಯನ್ನು ಬಾಗಿಸಿ ನೋಡಿದಳು. ಅವನ ಮುಖ ಕಂಡಿತು. ಅದು ಶ್ರೀಧರ ....!",[11,487,488,489],{},"​",[21,490,491],{},"THE END......????",[60,493],{},[11,495,496],{},"ತಲೆ ಸುತ್ತುತ್ತಿದ್ದರೂ ವಿದೇಶದಿಂದ ಇವನ ಕಂಪನಿಯ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಬಂದಿದ್ದ ಪ್ರತಿನಿಧಿಗಳಿಗೆ ತನ್ನ ಕಂಪನಿಯ ವ್ಯವಹಾರ, ರೀತಿ-ರಿವಾಜುಗಳ ಬಗ್ಗೆ ಮಾಹಿತಿ ನೀಡುತ್ತಿದ್ದ. ಅವನು ಶ್ರೀಧರ........ ಬಾಗಿಲು ದಡಾರನೆ ತೆರೆದುಕೊಂಡಿತು. ಹಿಂದೆಂದೂ ಇವನು ಕಂಡಿರದ ಅವತಾರದಲ್ಲಿ ಒಳನುಗ್ಗಿ ಬಂದಳು ಶ್ವೇತಾ. ಕೆದರಿಕೊಂಡಿರುವ ಕೂದಲುಗಳು, ಹಳೆಯದಾದ ಸಾಧಾರಣ ಸೀರೆ, ಅವನನ್ನು ಅರೆನಿಮಿಷದಲ್ಲಿ ಸುಟ್ಟು ಭಸ್ಮ ಮಾಡುವಂತೆ ತೋರುತ್ತಿದ್ದ ಬೆಂಕಿಯ ಉಂಡೆಗಳಂತೆ ಕಾಣುತ್ತಿರುವ ಅವಳ ಕಣ್ಣುಗಳು. ತನ್ನ ಕೆಟ್ಟ ಆಲೋಚನೆಗಳಿಂದ ಹೊರಬಂದಿದ್ದ ಶ್ವೇತಾ ಕಾರಿನಿಂದಿಳಿದು ನೇರವಾಗಿ ಶ್ರೀಧರನಿದ್ದ ರೂಮಿನ ಕಡೆಗೆ ಓಡಿ ಬಂದಿದ್ದಳು.",[11,498,499],{},"ಶ್ರೀಧರನಷ್ಟೇ ಅಲ್ಲ, ಅಲ್ಲಿದ್ದ ಎಲ್ಲರೂ ಈ ವಿಚಿತ್ರ ಸನ್ನಿವೇಶಕ್ಕೆ ಆವಾಕ್ಕಾಗಿ ಹೋದರು. ಅಲ್ಲಿ ಅಷ್ಟೊಂದು ಜನರು ಕುಳಿತಿದ್ದರೂ ಅವರನ್ನೆಲ್ಲಾ ನಿರ್ಲಕ್ಷಿಸಿ, ಕೆಲವೇ ಹೆಜ್ಜೆಗಳಲ್ಲಿ ಶ್ರೀಧರನತ್ತ ಧಾವಿಸಿ ಅವನ ಎದೆಯ ಮೇಲೆ ಗುದ್ದುತ್ತಾ ಹೆಚ್ಚು-ಕಡಿಮೆ ಕಿರುಚಿದಳು, -\"How dare you..?\" ಅವಳ ಈ ಹಠಾತ್ ಆಗಮನದಿಂದ ಆಘಾತದಲ್ಲಿದ್ದ ಶ್ರೀಧರ, \"What the..! What are you doing?\" \"ನಿಮ್ಮನ್ನ ನೀವು ಏನಂತ ತಿಳ್ಕೊ0ಡು ಬಿಟಿದಿ? ರಾಜಾನ? ಮಂತ್ರವಾದಿನಾ? What?\" ಸಿಟ್ಟಿನಿಂದ ಕೂಗಾಡುತ್ತಿದ್ದ ಶ್ವೇತಾಳನ್ನು ಕಣ್ಣು ಮಿಟುಕಿಸುತ್ತಾ ನೋಡುವುದನ್ನು ಬಿಟ್ಟರೆ ಬೇರೆನನ್ನೂ ಮಾಡಲು ಇವನಿಂದಾಗಲಿಲ್ಲ. ತನ್ನನ್ನು ಹುಡುಕಿಕೊಂಡು ತಾನಾಗಿಯೇ ಬಂದ ಶ್ವೇತಾಳನ್ನು ಕಂಡು ತನ್ನ ಅದೃಷ್ಟವನ್ನು ನಂಬಲು ಅವನಿಗೆ ಸಾಧ್ಯವಾಗಲಿಲ್ಲ. ಅಲ್ಲಿ ಸೇರಿದ್ದವರು ಗುಸುಗುಸು ಮಾತು ಆರಂಭಿಸಿದಾಗ ಇವನ ಯೋಚನೆಗಳಿಗೆ ಕಡಿವಾಣ ಬಿತ್ತು. ಕೂಡಲೇ ತನ್ನ ಕೈಯನ್ನು ಆಡಿಸಿ ಅವರೆಲ್ಲರಿಗೂ ಹೊರಗೆ ಕುಳಿತುಕೊಳ್ಳಲು ವಿನಂತಿಸಿದ. ಮೊದಲನೇ ವ್ಯಕ್ತಿ ತೆರೆದಿದ್ದ ಬಾಗಿಲು ಮುಚ್ಚುವುದರೊಳಗೆ ಕೊನೆಯ ವ್ಯಕ್ತಿಯೂ ಹೊರ ಜಾರಿದ್ದ. ಶ್ರೀಧರ ಶ್ವೇತಾಳ ಕೈಯನ್ನು ಹಿಡಿದು ಅವಳನ್ನು ಖುರ್ಚಿಯೊಂದರ ಮೇಲೆ ಕೂರಿಸಲು ಪ್ರಯತ್ನಿಸಿದ. ಅದಕ್ಕೆ ಪ್ರತಿಯಾಗಿ ಅವನ ಎದೆಯ ಮೇಲೆ ಮತ್ತೆ ಗುದ್ದಿದಳು. ಅವಳ ಉಸಿರಾಟ ಸಹಜಸ್ಥಿತಿಯಲ್ಲಿರಲಿಲ್ಲ. ಅದರೊಟ್ಟಿಗೆ ಕಣ್ಣುಗಳಿಂದ ವಿರಾಮವಿಲ್ಲದೆ ನೀರ ಹನಿಗಳು ಧರೆಗುರುಳುತ್ತಿದ್ದವು.",[11,501,502],{},"ತನ್ನ ತೋರು ಬೆರಳನ್ನು ಅವನ ಎದೆಗೆ ತಿವಿಯುತ್ತಾ \"ಕ್ಯೂಟ್ ಆಂಗ್ರೀ\" ಮುಖ ಮಾಡುತ್ತಾ ಹೇಳಿದಳು, \"ಎಂತಕೆ ಯಾವಾಗ್ಲೂ ನೀವೇ ನನ್ನ ಜೀವನದ ನಡೆಯನ್ನ ನಿರ್ಧರಿಸೋದು? ನಾನು ಬಡ ಮನೆತನದವ ಅಂತಾನ? ನನ್ನ ಜೀವನಾನ ನೀವು ಕುಶಲತೆಯಿಂದ ಬದಲಿಸಲು ನೋಡಿದಾಗ್ಲೆಲ್ಲ ನಾನು ಸುಮ್ನಿದ್ದಿ. ಚಂಡಮಾರುತದ ತರ ನನ್ನ lifeಗೆ entry ಕೊಟ್ಟಿ, ಬಲಾತ್ಕಾರದಿಂದ ನನ್ನ ಮದ್ವೆ ಆದಿ, ಆಗ್ಲೂ ಕೂಡ ನಾನು ಸುಮ್ನಿದ್ದಿ. ಉಷಾ ಜೀವನಾನ ಹಾಳು ಮಾಡಿದ್ದು ನಾವೇ ಅಂತ ನನ್ನ ಮತ್ತು ಹರಿನ ಧೂಷಿಸಿದರೂ ನಾನು ಎಂತು ಮಾತಾಡಲ್ಲೆ. ಉಷಾ ಆತ್ಮಹತ್ಯೆ ಮಾಡ್ಕಂಡ ಮೇಲೆ ನಿಮ್ಮ ಜೀವನದಿಂದ ನನ್ನ ಹೊರಕ್ಕೆ ಎಸದಿ, ಟಿಶ್ಯೂ ಪೇಪರ್ ತರ. ಅದರಿಂದ ನನ್ ಮರ್ಯಾದೆ ಏನಾಗ್ತು ಅಂತ ನೀವು ಯೋಚನೆ ಮಾಡ್ಲೆ ಇಲ್ಲೆ. ನಾನು ಅಷ್ಟೇ, ನೀವು ಮಾಡಿದ್ದನ್ನೆಲ್ಲಾ ಸುಮ್ಮನೆ ಒಪ್ಕಂಡಿ. ರಾತ್ರೋರಾತ್ರಿ ದುಡ್ಡು, ಕಾರು ಕೊಟ್ಟು ನನ್ನನ್ನ ಶ್ರೀಮಂತಳಾಗಿ ಮಾಡಿದಿ. ಮನೇಲಿ ಅತ್ತೆ-ಮಾವನ ಒತ್ತಡದಿಂದ ನಾನು ಅದೆಲ್ಲವನ್ನೂ ತಗಳಕಾತು. ನಾನು ಸಣ್ಣಕಿದ್ದಾವಗಿಂದಾನು ಅಪ್ಪ-ಅಮ್ಮನ ತರಾನೆ ನೋಡ್ಕೈಂದ. ಅವ್ರನ್ನ ನಾನು ಮಾವ..ಅತ್ತೆ ಅಂತ ಕರ್ದಿದ್ದೆ ನೆನಪಿಲ್ಲೆ. ಅವುಕ್ಕೆ ಎದ್ರು ಮಾತಾಡದು ಸರಿ ಅಲ್ಲ ಅಂತ ನನ್ನ ಸ್ವಾಭಿಮಾನನ ಬಿಟ್ಟು ಸುಮ್ನಾದಿ. ನೀವ್ಯಾಕೆ ಒಂದೇ ಒಂದ್ ಸರಿನೂ ನನ್ನ ಆಸೆ , ಆಕಾಂಕ್ಷೆ, ಈ ನಮ್ಮ ಸಂಬಂಧದ ಬಗ್ಗೆ ಕೇಳಲೇ ಇಲ್ಲೆ? ಆದ್ರೆ ಇವತ್ತು ನಿಮ್ಮ ಜೀವನದ ಜೊತೆನೇ ಆಟ ಆಡಿ ನಿಮ್ಮ limitನ ಮೀರಿಬಿಟಿದಿ. ನಂಗೆ ನಿಮ್ಮ ಈ ನಡವಳಿಕೆಯಿಂದ ಸಾಕಾಗಿ ಹೋಯ್ದು. ಯಾರು ನೀವು? ಯಾಕೆ ಹೀಂಗೆಲ್ಲಾ ಮಾಡಿದ್ದು?\", ಎನ್ನುತ್ತಾ ಅವನ ಕೊರಳಪಟ್ಟಿಯನ್ನು ಹಿಡಿದು ಜಗ್ಗಿದಳು, ಗದ್ಗದಿಸುತ್ತಾ ಕರಗಿಹೋದಳು. ಶ್ರೀಧರನಿಗೆ ಈ ಅನಿರೀಕ್ಷಿತ ಬದಲಾವಣೆಗಳಿಂದ ಏನು ಹೇಳಬೇಕೆಂಬುದೇ ತೋಚುತ್ತಿಲ್ಲ. ಆದರೂ ಆದಷ್ಟು ಸಿಹಿದನಿಯಲ್ಲಿ ಅವಳ ಹೆಸರನ್ನು ಹೇಳಲು ಶಕ್ತನಾದ.",[11,504,505],{},"\"ಶ್ವೇತಾ..! ನಾನು...\" ಅವಳಿಗೆ ಇನ್ನೂ ವಿವರಿಸಲು ಬಾಯಿ ತೆರೆಯ ಹೋದ. ಆದರೆ ಶ್ವೇತಾ ತನ್ನೆರಡೂ ಕೈಗಳನ್ನು ಅವನ ಕತ್ತಿನ ಸುತ್ತ ಬಳಸಿ ಹಿಡಿದಿದ್ದರಿಂದ ಮಾತು ಅಲ್ಲಿಗೆ ನಿಂತಿತು. ಕಣ್ಣು ಅವಳ ಕಣ್ಣಿನ ಒಳಗೆ ಇದ್ದ ಪ್ರೀತಿಯನ್ನು ಅನುಭವಿಸತೊಡಗಿತು. ಹಿಂದಿನ ಗೋಡೆಗೆ ಬಡಿದು ಕೆಳಗೆ ಬೀಳುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಅವಳ ಸೊಂಟದ ಮೇಲೆ ಕೈ ಹಾಕಿ ಬಿಗಿಯಾಗಿ ಹಿಡಿದ. ಇವನು ಮುಂದೆ ಏನು ಮಾತಾಡುವುದು ಎಂದು ಪದಗಳನ್ನು ಮನದಲ್ಲಿ ಪೋಣಿಸುತ್ತಿರುವಾಗಲೇ ಅವಳ ಮೃದು-ತೇವ ಬರಿತವಾದ ತುಟಿಗಳು ಇವನ ತುಟಿಯನ್ನು ಒತ್ತಿ ಹಿಡಿದಿದ್ದವು.",[11,507,508],{},"ಇಬ್ಬರಿಗೂ ಅರ್ಜೆಂಟಾಗಿ ಗಾಳಿಯ ಅವಶ್ಯಕತೆ ಇದೆಯೆನಿಸಿ ತಲೆಯನ್ನು ಹಿಂದಕ್ಕೆ ಎಳೆದುಕೊಂಡರು. ಅವರಿಬ್ಬರ ಉಸಿರು ನಾನಿನ್ನ ಬಿಡಲಾರೆ ಎಂಬಂತೆ ಬೆರೆಯುತ್ತಿತ್ತು. \"ಶ್ವೇತಾ..\" ಎಂದು ಸಣ್ಣದಾಗಿ ಉಸುರಿದ. ಶ್ವೇತಾ ಅವನ ಮಾತಿನಲ್ಲಿದ್ದ ಸಿಹಿಯಿಂದ ಸಣ್ಣಗೆ ಕಂಪಿಸಿದಳು. ಕಣ್ಣು ಮುಚ್ಚಿಕೊಂಡೇ ಒಮ್ಮೆ 'ಹ್ಮ್' ಎಂದಳು.\" \"ಶ್ವೇತಾ.. ಪ್ಲೀಸ್.. ಕಣ್ಣು ತೆರಿ. ಒಂದೇ ಒಂದು ಸರಿ ಪ್ಲೀಸ್.\" ಕಣ್ಣನ್ನು ತೆರೆದಳಾದರೂ ನೋಟವನ್ನು ನೆಲಕ್ಕೆ ಹರಿಬಿಟ್ಟಳು. \"'ಶ್ವೇತಾ.. ನನ್ನನ್ನ ಇಷ್ಟು ಬೇಗ ಕ್ಷಮಿಸಿ ಬಿಡ್ತ್ಯ? ನಾನೊಬ್ಬ ಸರ್ಟಿಫೈಡ್ ಜರ್ಕ್. ನಾನು ನಿನ್ ಜೊತೆ ನಡೆದುಕೊಂಡಿದ್ದ ರೀತಿ ರಾಕ್ಷಸರಿಗಿಂತಲೂ ಕಡೆ ಆಗಿತ್ತು. ಆದ್ರೂ.. ನೀನು... ಇದನ್ನ ಮೊದ್ಲೇ ಯಾಕೆ ಹೇಳಲ್ಲೇ? Why? ಈಗ ಹರಿಯ ಕತೆ?\" ಹಾ ಹಾ.. ಈಗ ಹರಿಯ ಕತೆ ಹರಿಕತೆ ಕೇಳುವುದೊಂದೇ.. ಅವಳ ಹೃದಯದಲ್ಲಿ ಮತ್ತೆ ಹೆದರಿಕೆಯೊಂದು ಉದ್ಭವಿಸಿ ಅವನನ್ನು ಮತ್ತಷ್ಟು ಗಟ್ಟಿಯಾಗಿ ತಬ್ಬಿಕೊಂಡಳು. ಮತ್ತೆ ಬಿಕ್ಕಿದಳು. ಅವಳ ಈ ಅಸಮಾಧಾನವನ್ನರಿತ ಶ್ರೀಧರ ಅವಳಿಗೆ ಒರಗಿ, ಕೆನ್ನೆಯ ಮೇಲೆ ಜಾರುತ್ತಿದ್ದ ಕಣ್ಣೀರಿನ ಮೇಲೊಂದು ಮುತ್ತಿಕ್ಕಿದ. ಅವನ ಭುಜದ ಮೇಲೆ ಶ್ವೇತಾ ತಲೆಯನ್ನಿರಿಸಿದಳು. ಕೆಲನಿಮಿಷಗಳ ನಂತರ, ಶ್ವೇತಾ ತನ್ನ ಎಂದಿನ ಮೃದು ಸ್ವರದಲ್ಲಿ ಹೇಳಿದಳು,\"ನಂಗೆ ಯಾವಾಗ ನಿಮ್ಮೇಲೆ ಪ್ರೀತಿ ಹುಟ್ಟಿದ್ದು ಅಂತ ಗೊತ್ತೇ ಆಗಲ್ಲೆ. ಶ್ರೀ..don't leave me.  ನೀವಿಲ್ದೆ ನಾನು ಬದ್ಕಾದಿಲ್ಲೆ.. ಪ್ಲೀಸ್...\" ಅವಳ ಈ ಮಾತುಗಳನ್ನು ಕೇಳಿದ ಶ್ರೀಧರನ ಕಣ್ಣುಗಳಲ್ಲಿ ನೀರು ಅವನಿಗೇ ತಿಳಿಯದೆಲೆಯೇ ತುಂಬಿಕೊಂಡವು. ಅವಳ ತಲೆಯನ್ನು ತನ್ನ ಎದೆಗೆ ಒರಗಿಸಿಕೊಂಡು ಗದ್ಗದಿತನಾಗಿ ಅವಳ ಕಿವಿಯಲ್ಲಿ ಮೆಲ್ಲಗೆ ಉಸುರಿದ,\"I love you too... ನೀನಿಲ್ದೆ ನಾನು ಜೀವಂತ ಶವದ ತರ ಆಗಿಬಿಟಿದಿ. ನೀನು ಹರಿನ ಈಗ್ಲೂ love ಮಾಡ್ತಿದ್ದೆ ಅಂತ ಯೋಚನೆ ಮಾಡಿದಿ.  So\" ಮತ್ತೆ ಸಿಟ್ಟಿನ ಮುಖ ಮಾಡಿದ ಶ್ವೇತಾ ಅವನೆದೆಯ ಮೇಲೆ ಗುದ್ದಿದಳು. \"ಅದನ್ನ ನನ್ನ ಹತ್ರ ಯಾಕ್ ಕೇಳಲ್ಲೇ? ನೀವೇ ಅದನ್ನೂ decide ಮಾಡಿದಿ. I hate you\" ಅವಳ ಈ ಹುಸಿಗೋಪಕ್ಕೆ ನಕ್ಕ ಶ್ರೀಧರ, \"Sorr,,,,\" ಎನ್ನುವುದರೊಳಗಾಗಿ ಅವನ ಮಾತು ನಿಂತಿತ್ತು. ಇವನ ತುಟಿಯ ಮೇಲೆ ಮತ್ತೊಂದು ಮುತ್ತನ್ನು ನೀಡಿದ ಶ್ವೇತಾ ಮೂಳೆಮುರಿವಂತಹ ಅಪ್ಪುಗೆಯನ್ನು ಕೊಟ್ಟಳು.",[11,510,511],{},[21,512,513],{},"THE END",[11,515,516],{},[517,518,519],"em",{},"This story is dedicated to the villages which were drowned in Sharavathi Reservoir 60 years ago.",{"title":289,"searchDepth":521,"depth":521,"links":522},2,[],"\u002Fstories\u002Flove_unexpected.jpg",null,"An unexpected love story of a girl","https:\u002F\u002Fdrive.google.com\u002Ffile\u002Fd\u002F0B32WA8IcsE3Qc245UUNyOGZqSkE\u002Fview?usp=drive_link&resourcekey=0-bYxuGTKr5w_Y0zAIT_5e4g","md",{},true,"\u002Fstories\u002Fpriti-anirikshita",{"title":5,"description":525},"priti-anirikshita","stories\u002Fpriti-anirikshita","f86MaV9leHYz9Ho9RXkDfRhjPIx8XUXWhI_Me1PT4sQ",[536,556,575,594,613,632,651,670,689,711,730,748,767,786,804,819,838,856,873,893,910],{"id":537,"title":538,"author":524,"body":539,"category":546,"cover":547,"date":524,"description":548,"extension":527,"meta":549,"navigation":529,"path":550,"readingTime":551,"seo":552,"slug":553,"stem":554,"__hash__":555},"summary\u002Fstories\u002Fsummary\u002Fantima-teerpu.md","ಅಂತಿಮ ತೀರ್ಪು",{"type":8,"value":540,"toc":544},[541],[11,542,543],{},"ಪಶ್ಚಿಮ ಘಟ್ಟದ ಮಡಿಲಲ್ಲಿ ಮಳೆಯ ರಾತ್ರಿ, ಬ್ರಿಟಿಷರ ಕಾಲದ ಮರದ ಗೆಸ್ಟ್ ಹೌಸ್‌ನಲ್ಲಿ ನಾಲ್ಕು ಜನ ಸೇರಿದ್ದಾರೆ — ಶತಾಯುಷಿ ಜಮೀನ್ದಾರ ಶಂಕರೇಗೌಡರ ವಿಲ್ ಓದಲು. ಆದರೆ ಪತ್ರಕರ್ತ ಸೂರ್ಯ ಅವರ ಸಾವಿನ ಹಿಂದಿನ ಸತ್ಯವನ್ನು ಬಯಲಿಗೆಳೆಯುತ್ತಾನೆ — ದ್ವೇಷ, ದುರಾಸೆ, ಮತ್ತು ವಂಚನೆಯ ಕಥೆ.",{"title":289,"searchDepth":521,"depth":521,"links":545},[],"Fiction","\u002Fstories\u002Fantima-teerpu\u002Fimage1.png","ಪಶ್ಚಿಮ ಘಟ್ಟದ ಮಡಿಲಲ್ಲಿ ಒಂದು ಮಳೆಯ ರಾತ್ರಿ, ನಾಲ್ಕು ಜನರ ನಡುವೆ ನಡೆಯುವ ಸತ್ಯದ ಹುಡುಕಾಟ.",{},"\u002Fstories\u002Fantima-teerpu","15 min read",{"title":538,"description":548},"antima-teerpu","stories\u002Fsummary\u002Fantima-teerpu","5bvz31rQvy2g65GyMknlrAXYwTU3enXlIMDosxhsitQ",{"id":557,"title":558,"author":524,"body":559,"category":546,"cover":566,"date":524,"description":567,"extension":527,"meta":568,"navigation":529,"path":569,"readingTime":570,"seo":571,"slug":572,"stem":573,"__hash__":574},"summary\u002Fstories\u002Fsummary\u002Fchadurangadaata.md","ಚದುರಂಗದಾಟ",{"type":8,"value":560,"toc":564},[561],[11,562,563],{},"ಚದುರಂಗದ ಮಣೆಯ ಮೇಲೆ ರಾಜನನ್ನು ಬೀಳಿಸಲು ಕಾಲಾಳು ಕೊನೆಯವರೆಗೂ ಹೋರಾಡಲೇಬೇಕು. ಮಾಜಿ ಗೃಹ ಸಚಿವ ಅಭಯ್ ಪಾಟೀಲನ ಭ್ರಷ್ಟಾಚಾರದ ಸಾಮ್ರಾಜ್ಯದ ವಿರುದ್ಧ ಸೂರ್ಯನ ಅಂತಿಮ ಯುದ್ಧ. ತನ್ನ ತಂದೆಯ ಕೊಲೆಯ ಸತ್ಯವನ್ನು ಬಯಲಿಗೆಳೆಯಲು ಅಧಿಕಾರದ ಕೋಟೆಯನ್ನು ಭೇದಿಸಬೇಕಾದ ಅಪಾಯಕಾರಿ ಆಟ.",{"title":289,"searchDepth":521,"depth":521,"links":565},[],"\u002Fstories\u002Fchadurangadaata\u002Fimage1.png","ಭ್ರಷ್ಟ ರಾಜಕಾರಣಿ ಅಭಯ್ ಪಾಟೀಲನ ವಿರುದ್ಧ ಸೂರ್ಯನ ಅಂತಿಮ ಹೋರಾಟ.",{},"\u002Fstories\u002Fchadurangadaata","25 min read",{"title":558,"description":567},"chadurangadaata","stories\u002Fsummary\u002Fchadurangadaata","Njiw1HA5zNacgYqKNRMiGSfd6g5v0hWwugWGpcsNYg4",{"id":576,"title":577,"author":524,"body":578,"category":524,"cover":585,"date":524,"description":586,"extension":527,"meta":587,"navigation":529,"path":589,"readingTime":524,"seo":590,"slug":591,"stem":592,"__hash__":593},"summary\u002Fstories\u002Fsummary\u002Fcircle.md","Circle",{"type":8,"value":579,"toc":583},[580],[11,581,582],{},"ಗಡಿಯಾರದ ಚಿಕ್ಕ ಮುಳ್ಳು ೧೨ನ್ನು ದಾಟಿ ೧ರತ್ತ ಧಾಪುಗಾಲಿಡುತ್ತಿತ್ತು. ಅವಳು ತನ್ನ ಅಪಾರ್ಟ್‌ಮೆಂಟ್‌ನ ಟೆರೇಸ್ನ ತುತ್ತತುದಿಯಲ್ಲಿ ಕತ್ತಲಿನಲ್ಲಿ ಕರಗಿ ಲೀನವಾಗಿ ನಿಂತಿದ್ದಾಳೆ. 'u r a cheater. esht life na haal madiddiya? its enough. get outta my lyf' - ವಾತ್ಸಾಪ್ನಲ್ಲಿ ಇದ್ದ ಆ ಸಂದೇಶವನ್ನೇ ಮತ್ತೆ ಮತ್ತೆ ಓದಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.",{"title":289,"searchDepth":521,"depth":521,"links":584},[],"\u002Fstories\u002Fcircle.jpg","Secrets, love, betrayal and revenge",{"download":588},"https:\u002F\u002Fdrive.google.com\u002Ffile\u002Fd\u002F0B32WA8IcsE3QWk9Zc3RBOXc3dVk\u002Fview?usp=drive_link&resourcekey=0-0N5ZQM6SVSRDqyoHADQgpA","\u002Fstories\u002Fcircle",{"title":577,"description":586},"circle","stories\u002Fsummary\u002Fcircle","mNGN67ELByqoMCB9OVwOBrwZX-kKbwDcnF7Tee8p_78",{"id":595,"title":596,"author":524,"body":597,"category":524,"cover":604,"date":524,"description":605,"extension":527,"meta":606,"navigation":529,"path":608,"readingTime":524,"seo":609,"slug":610,"stem":611,"__hash__":612},"summary\u002Fstories\u002Fsummary\u002Fenendu-hesaridali.md","ಏನೆಂದು ಹೆಸರಿಡಲಿ",{"type":8,"value":598,"toc":602},[599],[11,600,601],{},"\"ಎಂದೆಂದಿಗೂ ನಿನ್ನ ನೆನಪುಗಳು ನಮ್ಮೊಂದಿಗೆ\"\nನನ್ನೆದುರು ಇದ್ದ ಗೋರಿಕಲ್ಲಿನ ಮೇಲೆ ಕೆತ್ತಲ್ಪಟ್ಟಿತ್ತು. ಅಂತ್ಯಸಂಸ್ಕಾರ ಮುಗಿದು ಗಂಟೆಗಳೇ ಕಳೆದು ಹೋಗಿದ್ದರೂ ನಾನಿನ್ನೂ ಮನೆಗೆ ಮರಳದೇ ಅಲ್ಲೇ ನಿಂತಿದ್ದೆ. ನೀನು ನನಗೆ ತುಂಬಾನೇ ಸ್ಪೆಶಲ್. ನೀನೇ ತಾನೇ ನನಗೆ ಲೈಫ್ ಅಂದ್ರೆ ಏನು ಅಂತ realize ಆಗೋ ಹಾಗೆ ಮಾಡಿದ್ದು. ಈ ಪ್ರಪಂಚ ಮೇಲಿನಿಂದ ನೋಡೋಕೆ ಮಾತ್ರ ಬಣ್ಣದ ಬುಗರಿ. ಆದ್ರೆ ಇಂದೊಂದು ಕತ್ತಲೆಯ ಕೂಪ. ಅದರಲ್ಲಿ ನೀನು ಒಮ್ಮೆ ಬೀಳತೊಡಗಿದೆ. ಯಾರು ನಿನ್ನ ಸಹಾಯಕ್ಕೆ ಬರಲಿಲ್ಲ. ಎಲ್ಲರೂ ಸುಮ್ಮನೆ ನೋಡುತ್ತಾ ನಿಲ್ಲುವವರೇ. ನೀನು ಆ ಕಂದಕಕ್ಕೆ ಹಾರಿದೆ. ನೀನು ನನ್ನನು ಕೈಹಿಡಿದು ಎತ್ತಲು ನೋಡಿದೆ. ಸಾಧ್ಯವಾಗಲಿಲ್ಲ. ಉಫ್... ನೀನು ನೆಲವನ್ನು ತಲುಪಿದೆ. But ನಾನು ಬೀಳುತ್ತಲೇ ಇದ್ದೇನೆ.",{"title":289,"searchDepth":521,"depth":521,"links":603},[],"\u002Fstories\u002Fenendu-hesaridali.jpg","I miss you and you'll wait for me",{"download":607},"https:\u002F\u002Fdrive.google.com\u002Ffile\u002Fd\u002F1kgDPpPL3spc4_mznGpJlOz3iYNrKwzDk\u002Fview?usp=drive_link","\u002Fstories\u002Fenendu-hesaridali",{"title":596,"description":605},"enendu-hesaridali","stories\u002Fsummary\u002Fenendu-hesaridali","5SFT8Th-uQFlfP2SVlLO7ApAf6BtpTZlGEu8AAhfqTE",{"id":614,"title":615,"author":524,"body":616,"category":546,"cover":623,"date":524,"description":624,"extension":527,"meta":625,"navigation":529,"path":626,"readingTime":627,"seo":628,"slug":629,"stem":630,"__hash__":631},"summary\u002Fstories\u002Fsummary\u002Fgaajina-mane.md","ಗಾಜಿನ ಮನೆ",{"type":8,"value":617,"toc":621},[618],[11,619,620],{},"ಗಾಜಿನ ಮನೆಯಲ್ಲಿ ವಾಸಿಸುವವರು ಕಲ್ಲು ಎಸೆಯುವುದಿಲ್ಲ, ಜಿಗಿಯುವುದೂ ಇಲ್ಲ — ಅವರನ್ನು ತಳ್ಳಲಾಗುತ್ತದೆ. ಟೆಕ್-ನೋವಾ ಸಂಸ್ಥೆಯ ಸಿ.ಇ.ಒ ವಿಕ್ರಮ್ ಸಿಂಗ್ ನಲವತ್ತನೇ ಮಹಡಿಯಿಂದ ಬಿದ್ದು ಸತ್ತಾಗ ಪೋಲೀಸರು ಆತ್ಮಹತ್ಯೆ ಎಂದರು. ಆದರೆ ಸೂರ್ಯ ಸ್ಮಾರ್ಟ್ ಹೋಮ್ ಸಿಸ್ಟಮ್‌ನ ಡಿಜಿಟಲ್ ಹೆಜ್ಜೆಗುರುತುಗಳಲ್ಲಿ ಪರ್ಫೆಕ್ಟ್ ಕೊಲೆಯ ಸಾಕ್ಷ್ಯ ಕಂಡುಕೊಳ್ಳುತ್ತಾನೆ.",{"title":289,"searchDepth":521,"depth":521,"links":622},[],"\u002Fstories\u002Fgaajina-mane\u002Fimage1.png","ಟೆಕ್-ನೋವಾ ಸಂಸ್ಥೆಯ ಸಿ.ಇ.ಒ ವಿಕ್ರಮ್ ಸಿಂಗ್ ಅವರ ಅನುಮಾನಾಸ್ಪದ ಸಾವಿನ ಹಿಂದಿನ ಡಿಜಿಟಲ್ ಸತ್ಯವನ್ನು ಸೂರ್ಯ ಬಯಲಿಗೆಳೆಯುತ್ತಾನೆ.",{},"\u002Fstories\u002Fgaajina-mane","12 min read",{"title":615,"description":624},"gaajina-mane","stories\u002Fsummary\u002Fgaajina-mane","PQMdJ-c1qqFr7EatDEoO_eM98pUzTBwqkEJxhs9ynNo",{"id":633,"title":634,"author":524,"body":635,"category":524,"cover":642,"date":524,"description":643,"extension":527,"meta":644,"navigation":529,"path":646,"readingTime":524,"seo":647,"slug":648,"stem":649,"__hash__":650},"summary\u002Fstories\u002Fsummary\u002Fhrudaya-halagide.md","ಹೃದಯ ಹಾಳಾಗಿದೆ",{"type":8,"value":636,"toc":640},[637],[11,638,639],{},"ಹೇಗೆ ಪ್ರಾರಂಭಿಸಬೇಕು ಅಂತಾನೆ ತಿಳೀತಿಲ್ಲ. ಆದ್ರೂ ಇವತ್ತು ನಿನಗೆ ಹೇಳ್ಬೇಕಾದದ್ದು ತುಂಬಾ ಇದೆ. ನಮ್ಮ ಸ್ನೇಹಕ್ಕೆ ಹತ್ತು ವರ್ಷಕ್ಕಿಂತ ಜಾಸ್ತಿ ವಯಸ್ಸಾದರೂ ನಮಗೆ ನಾವೇ friends ಅಂತ ಹೇಳಿಕೊಂಡು ದಶಕವಾಯಿತು ಅಷ್ಟೇ. ನಾವಿಬ್ಬರೂ ಯಾವಾಗ್ಲೂ ಜಗಳ ಮಾಡ್ತಾನೇ ಇದ್ರು ಅದು ಯಾವತ್ತೂ serious ಅಂತ ಹೇಳೋ ಮಟ್ಟಕ್ಕೆ ಹೋಗಿಲ್ಲ.",{"title":289,"searchDepth":521,"depth":521,"links":641},[],"\u002Fstories\u002Fhrudaya-halagide.jpeg","A story about a man who is trying to find himself.",{"download":645},"https:\u002F\u002Fdrive.google.com\u002Ffile\u002Fd\u002F1mr0nZQGddeAnSV75l8uvsoU_A1ON9mGl\u002Fview?usp=drive_link","\u002Fstories\u002Fhrudaya-halagide",{"title":634,"description":643},"hrudaya-halagide","stories\u002Fsummary\u002Fhrudaya-halagide","FiBcSVIZE9moOFVLu-z_8BPyvYAIl-wcgdFBwcq487I",{"id":652,"title":653,"author":524,"body":654,"category":546,"cover":661,"date":524,"description":662,"extension":527,"meta":663,"navigation":529,"path":665,"readingTime":627,"seo":666,"slug":667,"stem":668,"__hash__":669},"summary\u002Fstories\u002Fsummary\u002Fin-the-ruins-of-memory.md","In The Ruins of Memory",{"type":8,"value":655,"toc":659},[656],[11,657,658],{},"On the day before the new system was set to go live, he pulled his hoodie low over his head, put on his headphones, and sat down to hammer out the code.\nHe typed furiously, and no one dared interrupt. With his hoodie up, he was in the zone—performing brain surgery on a single task: finishing the project.\nHe received his death sentence with pure calm: textbook case of frontotemporal dementia at age 32. While his family wept beside him, he complimented the doctor's wedding ring.\nShe found herself scrutinizing every interaction: Was that his last joke? His last laugh? His last hug? She never knew.\nHowever diminished, a person lingers in the shattered roadways of their mind.",{"title":289,"searchDepth":521,"depth":521,"links":660},[],"\u002Fstories\u002Fin-the-ruins-of-memory.png","A story of love, loss, and what remains.",{"download":664,"featured":529},"https:\u002F\u002Fdrive.google.com\u002Ffile\u002Fd\u002F1Su6ZeXXcmDqxXjZdJXZ_wucAbxS7RRTs\u002Fview?usp=sharing","\u002Fstories\u002Fin-the-ruins-of-memory",{"title":653,"description":662},"in-the-ruins-of-memory","stories\u002Fsummary\u002Fin-the-ruins-of-memory","afgaUHURlM8PVjlZcXpnFJLIqtwHAT0dqU6UgieH-lE",{"id":671,"title":672,"author":524,"body":673,"category":546,"cover":680,"date":524,"description":681,"extension":527,"meta":682,"navigation":529,"path":683,"readingTime":684,"seo":685,"slug":686,"stem":687,"__hash__":688},"summary\u002Fstories\u002Fsummary\u002Fkoneya-tappoppige.md","ಕೊನೆಯ ತಪ್ಪೊಪ್ಪಿಗೆ",{"type":8,"value":674,"toc":678},[675],[11,676,677],{},"ಸತ್ಯ ಸಾಯುವುದಿಲ್ಲ — ಅದು ಕೆಲವೊಮ್ಮೆ ಮಾತು ಕಳೆದುಕೊಂಡು ಮೌನವಾಗಿ ನರಳುತ್ತಿರುತ್ತದೆ. 20 ವರ್ಷಗಳ ಹಿಂದೆ ತನ್ನ ತಂದೆ ಪತ್ರಕರ್ತ ರಘುವೀರ್ ಅವರ ಆಕಸ್ಮಿಕ ಸಾವಿನ ಹಿಂದಿನ ಸತ್ಯವನ್ನು ಹುಡುಕುತ್ತಾ ಸೂರ್ಯ ನಿವೃತ್ತ ಡಿಸಿಪಿ ಶಂಕರ್ ಪ್ರಸಾದ್ ಅವರ ಬಳಿ ಬರುತ್ತಾನೆ — ಅವರ ಮಾತು ನಿಂತಿದೆ, ಆದರೆ ಕಣ್ಣಲ್ಲಿರುವ ಸತ್ಯ ಇನ್ನೂ ಜೀವಂತವಿದೆ.",{"title":289,"searchDepth":521,"depth":521,"links":679},[],"\u002Fstories\u002Fkoneya-tappoppige\u002Fimage1.png","ಪತ್ರಕರ್ತ ಸೂರ್ಯ, ತನ್ನ ತಂದೆಯ 20 ವರ್ಷಗಳ ಹಿಂದಿನ ಸಾವಿನ ರಹಸ್ಯವನ್ನು ಬೇಧಿಸಲು ಮೌನವಾಗಿರುವ ನಿವೃತ್ತ ಪೊಲೀಸ್ ಅಧಿಕಾರಿಯ ಕೊನೆಯ ತಪ್ಪೊಪ್ಪಿಗೆಯನ್ನು ಹುಡುಕುತ್ತಾನೆ.",{},"\u002Fstories\u002Fkoneya-tappoppige","10 min read",{"title":672,"description":681},"koneya-tappoppige","stories\u002Fsummary\u002Fkoneya-tappoppige","ZUpdtOBz2GTy6kInN6lZTiWe0BtN3HzJAoJ3btz2nM8",{"id":690,"title":691,"author":524,"body":692,"category":524,"cover":702,"date":524,"description":703,"extension":527,"meta":704,"navigation":529,"path":706,"readingTime":524,"seo":707,"slug":708,"stem":709,"__hash__":710},"summary\u002Fstories\u002Fsummary\u002Flast-secret-of-a-merchant.md","The Last Secret of A Merchant",{"type":8,"value":693,"toc":700},[694,697],[11,695,696],{},"ಹರಿ ಎಂದಿನಂತೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಮನೆಯಿಂದ ಹೊರ ನಡೆದಾಗ ಬೆಳಗಿನ ಸೂರ್ಯನ ಕಿರಣ ಚರಕಪುರವನ್ನು ಇನ್ನೂ ಸಂಪೂರ್ಣವಾಗಿ ಆವರಿಸಿರಲಿಲ್ಲ.\nಅವನ ಕ್ರಮಬದ್ಧ ಜೀವನದಲ್ಲಿ ಅನಿರೀಕ್ಷಿತ ತಿರುವು ಕಾದಿತ್ತು. ತಿಳಿನೀರಿನ ಆಳದಲ್ಲಿ ಕಪ್ಪನೆಯ ಆಕೃತಿಯೊಂದು ಅಲುಗಾಡದೆ ಮಲಗಿತ್ತು.\nಆ ಕತ್ತಲೆಯ ಆಕೃತಿ ಯಾರು? ಅದು ಅಲ್ಲಿ ಏಕೆ ಕಾಯುತ್ತಿದೆ? ಮತ್ತು ಮುಖ್ಯವಾಗಿ, ಅದಕ್ಕೂ ಈತನಿಗೂ ಏನಾದರೂ ಸಂಬಂಧವಿದೆಯೇ?",[11,698,699],{},"...\nಈ ಹತ್ಯೆಯನ್ನು ಬೇಧಿಸಲು ಮತ್ತೆ ಬಂದಿದ್ದಾರೆ ಸರಳಾಕ್ಷ ಹುಲಿಮೀಸೆ ಮತ್ತು ಇನ್ಸ್ಪೆಕ್ಟರ್ ಗೋಪಾಲಾಚಾರ್ಯ.",{"title":289,"searchDepth":521,"depth":521,"links":701},[],"\u002Fstories\u002Flast-secret-of-merchant\u002F1.jpg","A thread from investigations of Saralaksha Hulimeese",{"download":705},"https:\u002F\u002Fdrive.google.com\u002Ffile\u002Fd\u002F1Bb2n_tSbjWgddGuJ2e3VMfszRw7DNo7a\u002Fview?usp=sharing","\u002Fstories\u002Flast-secret-of-a-merchant",{"title":691,"description":703},"last-secret-of-a-merchant","stories\u002Fsummary\u002Flast-secret-of-a-merchant","hj6M3HUsw6N4QdRkli72J3rPyuAurI-VC_T8JFBPsMw",{"id":712,"title":713,"author":524,"body":714,"category":524,"cover":721,"date":524,"description":722,"extension":527,"meta":723,"navigation":529,"path":725,"readingTime":524,"seo":726,"slug":727,"stem":728,"__hash__":729},"summary\u002Fstories\u002Fsummary\u002Flove-triangle.md","Love Triangle",{"type":8,"value":715,"toc":719},[716],[11,717,718],{},"ಹಲವರು ಸೋಲ್ತಾರೆ, ಕೆಲವರು ಗೆಲ್ತಾರೆ...\nಒಬ್ಬರಿಗೇ ಇಬ್ಬಿಬ್ಬರು ಲೈನ್ ಹೊಡೀತಾರೆ...\nಸ್ನೇಹ.. ದ್ವೇಷಕ್ಕೆ ತಿರುಗುತ್ತೆ...\nಮತ್ತೊಬ್ಬರ ಗೆಲುವು ಇನ್ನೊಂದು ಮನಸ್ಸಿಗೆ ಏಟು ಕೊಡುತ್ತೆ...\nಕೊನೆಯಲ್ಲಿ ಅಂತ್ಯ ಹೇಗೆ ಇರುತ್ತೆ..?",{"title":289,"searchDepth":521,"depth":521,"links":720},[],"\u002Fstories\u002Flove_triangle.jpg","A story about a love triangle",{"download":724},"https:\u002F\u002Fdrive.google.com\u002Ffile\u002Fd\u002F1P7eNcBAqDl8LVPeTi_nOk53jTjqduqg8\u002Fview?usp=drive_link","\u002Fstories\u002Flove-triangle",{"title":713,"description":722},"love-triangle","stories\u002Fsummary\u002Flove-triangle","k_Ce6VbWPVtWj3f5-7ZCg7eVD_uS5D6z7txaqgraBOQ",{"id":731,"title":732,"author":524,"body":733,"category":524,"cover":740,"date":524,"description":643,"extension":527,"meta":741,"navigation":529,"path":743,"readingTime":524,"seo":744,"slug":745,"stem":746,"__hash__":747},"summary\u002Fstories\u002Fsummary\u002Fmaleyali-joteyali.md","ಮಳೆಯಲಿ... ಜೊತೆಯಲಿ...",{"type":8,"value":734,"toc":738},[735],[11,736,737],{},"ಮಲೆನಾಡಿನ ಮಡಿಲ್ಲಲಿರುವ ಒಂದು ಊರು. ಮಳೆಗಾಲದ ಸಮಯ. ತಿಂಗಳಿನಿಂದ ಸುರಿಯುತ್ತಿದ್ದ ಕುಂಭಧ್ರೋಣ ಮಳೆ ನಾಲ್ಕೈದು ದಿನಗಳಿಂದ ಸ್ವಲ್ಪ ಕಡಿಮೆಯಾಗಿತ್ತು. ಆದರೂ ಮೋಡಗಳು ಮಾತ್ರ ಆಗಸದಲ್ಲಿ ಈಜಾಡಿಕೊಂಡೇ ಇದ್ದವು. ಸಂಜೆ ನಾಲ್ಕಕ್ಕೇ ಆರು ಗಂಟೆಯಾದಂತೆ ತೋರುತ್ತಿತ್ತು.",{"title":289,"searchDepth":521,"depth":521,"links":739},[],"\u002Fstories\u002Fmaleyali_joteyali.png",{"download":742},"https:\u002F\u002Fdrive.google.com\u002Ffile\u002Fd\u002F1j1mXlObPWALrmXaqj1ZAn0EeOIgjxTyN\u002Fview?usp=drive_link","\u002Fstories\u002Fmaleyali-joteyali",{"title":732,"description":643},"maleyali-joteyali","stories\u002Fsummary\u002Fmaleyali-joteyali","mRsOCjDK6XIE6KUDbJkXVBBK_U1fJnAtvZMoo_7O-_4",{"id":749,"title":750,"author":524,"body":751,"category":546,"cover":758,"date":524,"description":759,"extension":527,"meta":760,"navigation":529,"path":761,"readingTime":762,"seo":763,"slug":764,"stem":765,"__hash__":766},"summary\u002Fstories\u002Fsummary\u002Fmooka-devara-sannidhi.md","ಮೂಕ ದೇವರ ಸನ್ನಿಧಿ",{"type":8,"value":752,"toc":756},[753],[11,754,755],{},"ಶಾಪಗಳು ಕಲ್ಲಿನ ವಿಗ್ರಹಗಳಲ್ಲಿರುವುದಿಲ್ಲ — ಅವು ಮನುಷ್ಯರ ಹೃದಯದಲ್ಲಿ ಹುದುಗಿರುವ ದ್ವೇಷ ಮತ್ತು ದುರಾಸೆಗಳಲ್ಲಿರುತ್ತವೆ. ಹಂಪಿಯ ಉತ್ಖನನ ಸ್ಥಳದಲ್ಲಿ ಖ್ಯಾತ ಇತಿಹಾಸಕಾರ ಡಾ. ಅವಿನಾಶ್ ಆಚಾರ್ಯ ರಾತ್ರೋರಾತ್ರಿ ಕಣ್ಮರೆಯಾದಾಗ, ಸೂರ್ಯ ಮೂಕ ದೇವರ ಶಾಪದ ಹಿಂದಿನ ಮಾನವ ದುರಾಸೆಯ ಸತ್ಯವನ್ನು ಹುಡುಕುತ್ತಾನೆ.",{"title":289,"searchDepth":521,"depth":521,"links":757},[],"\u002Fstories\u002Fmooka-devara-sannidhi\u002Fimage1.png","ಹಂಪಿಯ ಉತ್ಖನನ ಸ್ಥಳದಲ್ಲಿ ಖ್ಯಾತ ಇತಿಹಾಸಕಾರರ ನಿಗೂಢ ಕಣ್ಮರೆ ಮತ್ತು ಶತಮಾನಗಳ ಹಳೆಯ ರಹಸ್ಯ.",{},"\u002Fstories\u002Fmooka-devara-sannidhi","18 min read",{"title":750,"description":759},"mooka-devara-sannidhi","stories\u002Fsummary\u002Fmooka-devara-sannidhi","ZJq1qdd7dFnuvaxcSJQQpKO1KEldRAZAnP0i-u2YajE",{"id":768,"title":769,"author":524,"body":770,"category":777,"cover":778,"date":524,"description":643,"extension":527,"meta":779,"navigation":529,"path":781,"readingTime":551,"seo":782,"slug":783,"stem":784,"__hash__":785},"summary\u002Fstories\u002Fsummary\u002Fnever-again.md","Never Again",{"type":8,"value":771,"toc":775},[772],[11,773,774],{},"\"Amrutha.. I think you need a hug.\", Vijay consoled sobbing Amrutha. Suddenly she hugged him tightly. He has no words to say. But he can only make her feel comfort. Even in the middle of crowd she is flying in dreamworld.. Because of him. But they don't know that something big coming to end everything... and lead to a big devastating turn in life so that they'll never meet again...\"",{"title":289,"searchDepth":521,"depth":521,"links":776},[],"Romance","\u002Fstories\u002Fnever_again.jpg",{"download":780},"https:\u002F\u002Fdrive.google.com\u002Ffile\u002Fd\u002F1fBUU5T2X36AYW8mmsLF8bM9C9BgOFu3O\u002Fview?usp=drive_link","\u002Fstories\u002Fnever-again",{"title":769,"description":643},"never-again","stories\u002Fsummary\u002Fnever-again","RD8xDk97BlK7AdXfWw7o3QP2Zny0QqWQhldATF4D33I",{"id":787,"title":788,"author":524,"body":789,"category":524,"cover":796,"date":524,"description":643,"extension":527,"meta":797,"navigation":529,"path":799,"readingTime":524,"seo":800,"slug":801,"stem":802,"__hash__":803},"summary\u002Fstories\u002Fsummary\u002Fninagagi.md","He's Waiting... ನಿನಗಾಗಿ",{"type":8,"value":790,"toc":794},[791],[11,792,793],{},"ಎಂಟು ವರ್ಷಗಳ ಅವನ ನಿರೀಕ್ಷೆ ಸುಳ್ಳಾಗಲಲಿಲ್ಲ. ಅವನನ್ನು ನೋಡಲು ಅವಳು ಬರುತ್ತಿದ್ದಾಳೆ. ಇವನ ಸಂತೋಷವನ್ನು ಅಳೆಯಲು ಮಾಪನಗಳೇ ಇರಲಿಲ್ಲ. ಮಾತನಾಡಲು ಸಾವಿರಾರು ವಿಷಯಗಳಿದ್ದರೂ ಸ್ವರವೇ ಹೊರಡಲಿಲ್ಲ. ಅವಳನ್ನೇ ಧಿಟ್ಟಿಸಿ ನೋಡುತ್ತಿದ್ದ ಆದಿತ್ಯ. ​ಕೈಯಲ್ಲಿ ಚೆಂಗುಲಾಬಿಯನ್ನು ಹಿಡಿದು ನಿಂತಿದ್ದ ಅವಳನ್ನೇ ನೋಡುತ್ತಿದ್ದಾನೆ. ಅವಳು ಮತ್ತೆ ಬಂದಿದ್ದಾಳೆ.",{"title":289,"searchDepth":521,"depth":521,"links":795},[],"\u002Fstories\u002Fninagagi.jpg",{"download":798},"https:\u002F\u002Fdrive.google.com\u002Ffile\u002Fd\u002F0B32WA8IcsE3QR0NrVUt2WnBrQzA\u002Fview?usp=drive_link&resourcekey=0-pZBUoKOJJ25AwL_ZLgAZsw","\u002Fstories\u002Fninagagi",{"title":788,"description":643},"ninagagi","stories\u002Fsummary\u002Fninagagi","aNh_UqH3UxCoF_d0TVrKNRixnZ3AE99uTU60660rU54",{"id":805,"title":806,"author":524,"body":807,"category":524,"cover":523,"date":524,"description":814,"extension":527,"meta":815,"navigation":529,"path":530,"readingTime":524,"seo":816,"slug":532,"stem":817,"__hash__":818},"summary\u002Fstories\u002Fsummary\u002Fpriti-anirikshita.md","ಪ್ರೀತಿ ಅನಿರೀಕ್ಷಿತ",{"type":8,"value":808,"toc":812},[809],[11,810,811],{},"ಸುಂದರ ಹೂತೋಟದ ಮೂಲೆಯಲ್ಲೊಂದು ಶತಮಾನಗಳಿಂದ ಬೆಳೆದು ನಿಂತಿರುವ ದೊಡ್ಡದೊಂದು ಮಾವಿನ ಮರ. ಮರದ ಕೆಳಗೆ ದಶಕಗಳ ಹಿಂದೆ ಮಾಡಿದ ಒಂದು ಕಲ್ಲಿನ ಬೆಂಚು. ಮಳೆಗಾಲದಲ್ಲಿ ಪಾಚಿಗಟ್ಟಿದ್ದ ಕುರುಹುಗಳು ಈಗಲೂ ಗೋಚರಿಸುತ್ತಿವೆ. ಅದರ ಮೇಲೆ ಅವಳು ಕುಳಿತಿದ್ದಾಳೆ, ಕೃಶಗೊಂಡಿರುವ ದೇಹ, ಇಂಗಿ ಹೋಗಿರುವ ಕಣ್ಣುಗಳು, ಬಣ್ಣ ಮಾಸಿದ ಸೀರೆ. ಹೌದು. ಅದು ಅವಳೇ. ಶ್ವೇತಾ ರಾವ್ ಮೊಣಕಾಲುಗಳ ಮೇಲೆ ಗಲ್ಲವಿಟ್ಟುಕೊಂಡು ಶೂನ್ಯ ನೋಟ ಬೀರುತ್ತಾ ಏನನ್ನೋ ಗಾಢವಾಗಿ ಯೋಚಿಸುತ್ತಾ ಕುಳಿತಿದ್ದಾಳೆ. ಅನಿರೀಕ್ಷಿತ ಪ್ರೇಮ ಕಥೆ; ಅವಳ ಜೀವನದ ವಿಚಿತ್ರ ವ್ಯಥೆ. ಅದು ಅವಳದೇ LOVE STORY.",{"title":289,"searchDepth":521,"depth":521,"links":813},[],"A story of a girl",{"download":526},{"title":806,"description":814},"stories\u002Fsummary\u002Fpriti-anirikshita","ebki43G9sgx15zRvRjAOqO_GRdyei8mwE4mBPaNW6yw",{"id":820,"title":821,"author":524,"body":822,"category":524,"cover":829,"date":524,"description":830,"extension":527,"meta":831,"navigation":529,"path":833,"readingTime":524,"seo":834,"slug":835,"stem":836,"__hash__":837},"summary\u002Fstories\u002Fsummary\u002Ftears-of-a-martyr.md","Tears of a Martyr",{"type":8,"value":823,"toc":827},[824],[11,825,826],{},"ರಘು ತನ್ನ ತಲೆಯನ್ನು ಎತ್ತಲು ಹೆಣಗಾಡಿದ. ಆದರೆ ಮೂರು ಗುಂಡುಗಳನ್ನು ಹಿಡಿದಿಟ್ಟುಕೊಂಡಿದ್ದ ದೇಹ ಅವನಿಗೆ ಸಹಕರಿಸುವ ಸ್ಥಿತಿಯಲ್ಲಿರಲಿಲ್ಲ. ಕತ್ತಲೆ ತುಂಬಿದ ಕಣ್ಣುಗಳು ಕಾಲಘಟ್ಟದಲ್ಲಿ ಹಿಂದಕ್ಕೆ ಕೊಂಡೊಯ್ದವು. ಯುದ್ಧಭೂಮಿಯಲ್ಲಿ ಮಲಗಿ ನೋವುಣ್ಣುತ್ತಿದ್ದರೂ ದೂರದ ಕರುನಾಡಿನಲ್ಲಿ, ಮನೆಯ ಅಂಗಳದಲ್ಲಿ ನಿಂತಿದ್ದ ತಾಯಿಯ ನೆನಪು ತುಟಿಯ ಮೇಲೆ ನಗುವನ್ನು ತರಿಸಿತ್ತು. ನೆನಪಿನ ಮಸುಕಾದ ಹಾದಿಯಲ್ಲಿ ಯೋಚನೆ ಸಾಗಿತ್ತು. ಮುಚ್ಚಿದ ಕಣ್ಣುಗಳಲ್ಲಿ ರಚಿತವಾಗುತ್ತಿದ್ದ ಚಿತ್ರ ನಿಧಾನವಾಗಿ ನೈಜತೆಗೆ ತಿರುಗುತ್ತಿತ್ತು. ತನ್ನ ತಾಯಿಯ ಮುಗ್ದತೆ, ಪ್ರೀತಿ, ಅಕ್ಕರೆ ಮತ್ತು ಕಾಳಜಿಯನ್ನು ಮತ್ತೆ ಅನುಭವಿಸಲು ಸಮಯದಲ್ಲಿ ಭೂತದತ್ತ ಸಾಗಿದನು.",{"title":289,"searchDepth":521,"depth":521,"links":828},[],"\u002Fstories\u002Ftears_of_martyr.jpg","A soldier never cries...",{"download":832},"https:\u002F\u002Fdrive.google.com\u002Ffile\u002Fd\u002F1wbwxQG1UwQbHv4krUiclaSOjcBrgEiCH\u002Fview?usp=drive_link","\u002Fstories\u002Ftears-of-a-martyr",{"title":821,"description":830},"tears-of-a-martyr","stories\u002Fsummary\u002Ftears-of-a-martyr","OI6yx-tNoLBAY5stlElf7e8aljVbmBsmmQpPgiqMhwA",{"id":839,"title":840,"author":524,"body":841,"category":524,"cover":848,"date":524,"description":643,"extension":527,"meta":849,"navigation":529,"path":851,"readingTime":524,"seo":852,"slug":853,"stem":854,"__hash__":855},"summary\u002Fstories\u002Fsummary\u002Fthe-burning-desires.md","The Burning Desires",{"type":8,"value":842,"toc":846},[843],[11,844,845],{},"“Kill him now… Now or never…!!! ಇದೇ ನಿನ್ನ ನಾಶವಾದ ಬದುಕಿಗೆ ಏಕೈಕ ನ್ಯಾಯಯುತ ಪರಿಹಾರ.” - ಮತ್ತೆ ಮತ್ತೆ ತಲೆಯೊಳಗೆ ಪ್ರತಿಧ್ವನಿಸುತ್ತಿರುವ ವಾಕ್ಯ. ಮುಗ್ದಮುಖದ ಸ್ವಾತಿ ಅಡುಗೆ ಕೋಣೆಯಿಂದ ಹೊರಬಂದಳು. ಕೈಯಲ್ಲಿ ಹಿಡಿದ ಚಾಕುವಿನ ಮೊನಚು ಕೆಂಪು ಬಣ್ಣದ ದೀಪದಲ್ಲಿ ಹೊಳೆಯುತ್ತಿತ್ತು. ಕೋಣೆಯಲ್ಲಿ ಮಂಚದ ಮೇಲೆ ಅಂಗಾತವಾಗಿ ಸುಸ್ತಾಗಿ ಮಲಗಿದ್ದ ವ್ಯಕ್ತಿಯತ್ತ ಹೆಜ಼್ಜ಼ೆ ಹಾಕಿದಳು.",{"title":289,"searchDepth":521,"depth":521,"links":847},[],"\u002Fstories\u002Fthe_burning_desires.jpg",{"download":850},"https:\u002F\u002Fdrive.google.com\u002Ffile\u002Fd\u002F14moaOF_uQRHiY2BnHAoSm5sOvAQe9pCq\u002Fview?usp=drive_link","\u002Fstories\u002Fthe-burning-desires",{"title":840,"description":643},"the-burning-desires","stories\u002Fsummary\u002Fthe-burning-desires","U66gtrgO4eTFbWDmLsjcNhHh6NkX7hsE4NGB3cJ7wj4",{"id":857,"title":858,"author":524,"body":859,"category":524,"cover":866,"date":524,"description":643,"extension":527,"meta":867,"navigation":529,"path":868,"readingTime":524,"seo":869,"slug":870,"stem":871,"__hash__":872},"summary\u002Fstories\u002Fsummary\u002Fthe-gentleman.md","The Gentleman",{"type":8,"value":860,"toc":864},[861],[11,862,863],{},"ಹುಟ್ಟುತ್ತಾ ಎಲ್ಲರೂ ಸಾಮಾನ್ಯರಾಗಿಯೇ ಹುಟ್ಟುತ್ತಾರೆ. ಆದರೆ ನಂತರ ಮರೆಯಲಾರದ ಇತಿಹಾಸ ಸೃಷ್ಟಿಸಿ ಮರೆಯಾಗುತ್ತಾರೆ. ಬದುಕಿನಲ್ಲಿ ನಡೆಯುವ ಕೆಲವು ಘಟನೆಗಳು ಜೀವನ ಪಥವನ್ನೇ ಬದಲಾಯಿಸಿ ಬಿಡುತ್ತದೆ. ಕೆಲವು ತಿರುವುಗಳು ಸಾಮಾನ್ಯರನ್ನು ಅಸಾಮಾನ್ಯರನ್ನಾಗಿಸಿದರೆ, ಕೆಲವರು ಸರ್ವನಾಶವಾಗಿ ಬಿಡುತ್ತಾರೆ. THE GENTLEMANನಂತಹವರು ದೃವ ತಾರೆಗಳಾಗುತ್ತಾರೆ.",{"title":289,"searchDepth":521,"depth":521,"links":865},[],"\u002Fstories\u002Fthe_gentleman.png",{},"\u002Fstories\u002Fthe-gentleman",{"title":858,"description":643},"the-gentleman","stories\u002Fsummary\u002Fthe-gentleman","QZNQywBOnWn06AJidhUyozqX62O_EpDL2YqmMD6VC6c",{"id":874,"title":875,"author":524,"body":876,"category":883,"cover":884,"date":524,"description":643,"extension":527,"meta":885,"navigation":529,"path":887,"readingTime":888,"seo":889,"slug":890,"stem":891,"__hash__":892},"summary\u002Fstories\u002Fsummary\u002Fthe-photograph.md","The Photograph",{"type":8,"value":877,"toc":881},[878],[11,879,880],{},"\"ನೀವು ನನಗೆ actually ಏನಾಗಿದೆ ಅಂತ ಹೇಳೋದಕ್ಕೆ ಪ್ರಯತ್ನ ಪಡ್ತಿದ್ದೀರ? ಅಂದ್ರೆ ನನಗೆ....?”\n\"ಹೌದು ಹೌದು. ನಾನು ನಿಮಗೆ already ಹೇಳಿದೀನಿ ಇದು ಹೇಗೆ ಅಂತ\", ಎಂದು ತನ್ನ ಹೇಳಿಕೆಯನ್ನು ನನಗೆ ಮನವರಿಕೆ ಮಾಡಿಸಲು ಪ್ರಯತ್ನಿಸುತ್ತಿದ್ದರು ಡಾ. ಅಭಿಷೇಕ್ ನಾಯರ್.\n“But, ನಾನು ಹೇಗೆ ನನ್ನ ಪಾಸ್ಟ್ ಲೈಫ್ ನೋಡ್ಲಿಕ್ಕೆ ಸಾಧ್ಯ. ನೆನಪು ಮಾಡ್ಕೋಳ್ ಬಹುದು. ಬಟ್ ರಿಪೀಟ್ ಆಗಿ ಅದೇ ಸೀನ್ ಅಲ್ಲಿ ನಾನೇ ಇರ್ತೀನಿ. ಅದು ಹೇಗೆ ಸಾಧ್ಯ?\"\n​\"ಹಾಹಾ. ಸಾಧ್ಯ ಇದೆ. ಏಕಾಗ್ರತೆಯೇ ಇವೆಲ್ಲದಕ್ಕೂ ಮೂಲ. You just need to concentrate. ಅಷ್ಟೇ\"",{"title":289,"searchDepth":521,"depth":521,"links":882},[],"Mystery","\u002Fstories\u002Fthe_photograph.jpg",{"download":886},"https:\u002F\u002Fdrive.google.com\u002Ffile\u002Fd\u002F1OJt5pPjhG7hwXQPWsqTHmNk2ZlbEj-sP\u002Fview?usp=drive_link","\u002Fstories\u002Fthe-photograph","8 min read",{"title":875,"description":643},"the-photograph","stories\u002Fsummary\u002Fthe-photograph","Df98woawS5BTjeN7b_ifUAf607usb5FjOPed4EiJmKg",{"id":894,"title":895,"author":524,"body":896,"category":524,"cover":903,"date":524,"description":643,"extension":527,"meta":904,"navigation":529,"path":905,"readingTime":524,"seo":906,"slug":907,"stem":908,"__hash__":909},"summary\u002Fstories\u002Fsummary\u002Fy2121.md","Y2121",{"type":8,"value":897,"toc":901},[898],[11,899,900],{},"ಈ ವಿಶ್ವದ ನಿರ್ಮಾಣವಾಗಿ ಸರಿ ಸುಮಾರು 5 ಬಿಲಿಯನ್ ವರ್ಷಗಳ ಒಂದು ಅಂದಾಜು ಲೆಕ್ಕಾಚಾರವಾಗಿದ್ದರೂ ಭೂಮಿಯ ಮೇಲೆ ಜೀವಿಗಳ ಉಗಮವಾಗಿ ಕೆಲವೇ ಮಿಲಿಯನ್ ವರ್ಷಗಳಾಗಿವೆ. ಭೂಮಿಯ ಮೇಲಿನ ವಾತಾವರಣ ಬದಲಾಗುತ್ತ ಬಂದಂತೆ ಜೀವಿಗಳ ದೇಹಗಳಲ್ಲಿ ಬದಲಾವಣೆಗಳಾಗುತ್ತಾ ಬಂದವು. ಈ ವಿಕಾಸಗಳಲ್ಲಿ ಪ್ರಕೃತಿಯ ವಿನಾಶಕ್ಕೆ ಕಾರಣವಾಗುವ ಮನುಷ್ಯನ ವಿಕಾಸವೂ ಒಂದು. ಬೆಂಕಿಯುಂಡೆಯಾಗಿದ್ದ ಗೋಳವೊಂದು ತಂಪಾಗಿ ಹಸಿರು ಪೃಥ್ವಿಯಾಗಿತ್ತು. ಈಗ ಮತ್ತೆ ಬೆಂಕಿಯುಂಡೆಯಾಗುವತ್ತ ಸಾಗುವಂತೆ ಮಾಡಿದ್ದು ನಾವೇ ಅಲ್ಲವೇ?",{"title":289,"searchDepth":521,"depth":521,"links":902},[],"\u002Fstories\u002Fy2121.jpg",{},"\u002Fstories\u002Fy2121",{"title":895,"description":643},"y2121","stories\u002Fsummary\u002Fy2121","R7vCmaFUDrS9OOuikeNO8ht587BhUsm5lkQpnrpbHTE",{"id":911,"title":912,"author":524,"body":913,"category":524,"cover":920,"date":524,"description":643,"extension":527,"meta":921,"navigation":529,"path":923,"readingTime":524,"seo":924,"slug":925,"stem":926,"__hash__":927},"summary\u002Fstories\u002Fsummary\u002Fyou.md","You",{"type":8,"value":914,"toc":918},[915],[11,916,917],{},"ಒಂದು ನೆರಳು ಮನೆಯಿಂದ ಹೊರಗೆ ಓಡಿದಂತಾಯಿತು. ಆತನ ದಿಗ್ಬ್ರಮೆ ಉಲ್ಬಣಗೊಳ್ಳುವಂತೆ ಮನೆಯ ಮುಂದಿನ ಬಾಗಿಲಿನ ಲಾಕ್ ತೆರೆದಿತ್ತು. ಯಾರೋ ಈಗ ತಾನೇ ಗಟ್ಟಿಯಾಗಿ ಎಳೆದಂತೆ ಬಾಗಿಲು ಅಲುಗಾಡುತ್ತಿತ್ತು. ಬಾಗಿಲಿನ ಸನಿಹಕ್ಕೆ ಹೋಗಿ ಹೊರಕ್ಕೆ ಇಣುಕಿ ನೋಡಿದ. ಅಪಾರ್ಟ್‌ಮೆಂಟಿನ ವರಾಂಡದ ಲೈಟ್ ಎಲ್ಲವೂ ಉರಿಯುತ್ತಿತ್ತು. ಆ ದಾರಿ ಸಹಜವಾಗಿಯೇ ತೋರಿತು. ಹಠಾತ್ ಚಲನವಲನದ ಸೂಚನೆಗಳು ಕಂಡುಬರಲಿಲ್ಲ.",{"title":289,"searchDepth":521,"depth":521,"links":919},[],"\u002Fstories\u002Fyou.jpg",{"download":922},"https:\u002F\u002Fdrive.google.com\u002Ffile\u002Fd\u002F1SbDfLnsQLth6bFB3glT_B48PKOX_reMT\u002Fview?usp=drive_link","\u002Fstories\u002Fyou",{"title":912,"description":643},"you","stories\u002Fsummary\u002Fyou","Q-NVxMSQTaAMKT0yetwJmGJ7APwMfy8HY_K5W8eqSHg",1781856567841]