[{"data":1,"prerenderedAt":454},["ShallowReactive",2],{"story-y2121":3,"summary-all":62},{"id":4,"title":5,"author":6,"body":7,"cover":17,"date":53,"description":54,"download":53,"extension":55,"meta":56,"navigation":57,"path":58,"seo":59,"slug":16,"stem":60,"__hash__":61},"stories\u002Fstories\u002Fy2121.md","Y2121","Akshara Hegde",{"type":8,"value":9,"toc":49},"minimark",[10,18,21,27,30,33,36,41,44],[11,12,13],"p",{},[14,15],"img",{"alt":16,"src":17},"y2121","\u002Fstories\u002Fy2121.jpg",[19,20,5],"h1",{"id":16},[11,22,23],{},[24,25,26],"strong",{},"ಹೊಸಮನೆಯ ಹುಡುಕಾಟದಲ್ಲಿ ಅಂತ್ಯವಿಲ್ಲದ ಅಂತರಿಕ್ಷ ಪ್ರವಾಸ",[11,28,29],{},"ಈ ವಿಶ್ವದ ನಿರ್ಮಾಣವಾಗಿ ಸರಿ ಸುಮಾರು 5 ಬಿಲಿಯನ್ ವರ್ಷಗಳ ಒಂದು ಅಂದಾಜು ಲೆಕ್ಕಾಚಾರವಾಗಿದ್ದರೂ ಭೂಮಿಯ ಮೇಲೆ ಜೀವಿಗಳ ಉಗಮವಾಗಿ ಕೆಲವೇ ಮಿಲಿಯನ್ ವರ್ಷಗಳಾಗಿವೆ. ಭೂಮಿಯ ಮೇಲಿನ ವಾತಾವರಣ ಬದಲಾಗುತ್ತ ಬಂದಂತೆ ಜೀವಿಗಳ ದೇಹಗಳಲ್ಲಿ ಬದಲಾವಣೆಗಳಾಗುತ್ತಾ ಬಂದವು. ಈ ವಿಕಾಸಗಳಲ್ಲಿ ಪ್ರಕೃತಿಯ ವಿನಾಶಕ್ಕೆ ಕಾರಣವಾಗುವ ಮನುಷ್ಯನ ವಿಕಾಸವೂ ಒಂದು. ಬೆಂಕಿಯುಂಡೆಯಾಗಿದ್ದ ಗೋಳವೊಂದು ತಂಪಾಗಿ ಹಸಿರು ಪೃಥ್ವಿಯಾಗಿತ್ತು. ಈಗ ಮತ್ತೆ ಬೆಂಕಿಯುಂಡೆಯಾಗುವತ್ತ ಸಾಗುವಂತೆ ಮಾಡಿದ್ದು ನಾವೇ ಅಲ್ಲವೇ?",[11,31,32],{},"ಸ್ಟೀಫನ್ ಹಾಕಿಂಗ್ಸ್ ಹೇಳುವಂತೆ ಮಾನವರು ಇನ್ನು 100 ವರ್ಷಗಳಲ್ಲಿ ಬೇರೊಂದು ಗ್ರಹವನ್ನು ಮನೆ ಮಾಡಿಕೊಳ್ಳದೆ ಇದ್ದರೆ ಮನುಷ್ಯ ಕುಲದ ವಿನಾಶ ಖಂಡಿತ. ಆದರೆ ಮಾನವೀಯತೆ ಎಂಬುದು ಪುಸ್ತಕಗಳಲ್ಲಿ ಮಾತ್ರ ಕಾಣಸಿಗುವ ಭಾವನೆಯಾಗಿದೆ. ನಾವು ಬೇರೊಂದು ಮನೆಯನ್ನು ಈ ವಿಶ್ವದಲ್ಲಿ ಹುಡುಕಬೇಕಾಗಿರುವುದು ಹೋಮೋಸೆಫಿಯಾನ್ಸ್ ಎಂಬ ಜೀವಿಯ ಅಳಿಯುವಿಕೆಯನ್ನು ತಪ್ಪಿಸಲು ಮಾತ್ರ.",[11,34,35],{},"ನಮ್ಮ ಗ್ರಹ-ಗೃಹ ಪೃಥ್ವಿಯನ್ನು ತೊರೆದು ಬೇರೊಂದು ಮನೆಯನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿಯನ್ನು ತಂದು ಕೊಂಡಿದ್ದೇವೆ. ಬೇರೊಂದು ಜೀವಿಗಳಿರುವ ಗ್ರಹ ಇನ್ನೂ ಕೂಡ ಪತ್ತೆಯಾಗಿಲ್ಲ. ಎಣಿಸಲಾರದಷ್ಟು ನಕ್ಷತ್ರಗಳು, ಅಕಾಶಕಾಯಗಳಿದ್ದರೂ ಭೂಮಿಯೊಂದರಲ್ಲೇ ಜೀವವೈವಿಧ್ಯಕ್ಕೆ ಸಾಕ್ಷಿಯಾಗುವುದಕ್ಕೆ ಕಾರಣವಾದ ಅಂಶವಾದರೂ ಏನು? ನಮ್ಮ ಸೌರವ್ಯೂಹದ ಸುತ್ತಮುತ್ತಲೂ ಹಲವಾರು ಜ್ಯೋತಿರ್ವರ್ಷಗಳ ದೂರದವರೆಗೂ ಯಾವುದೇ ಜೀವಿಯ ಕುರುಹುಗಳು ಕಂಡು ಬಂದಿಲ್ಲ. ಅಲ್ಲದೇ ಮಾನವನ ಜೀವಿತಾವಧಿಯು ವಿಶ್ವದ ಸಮಯಕ್ಕೆ ಹೋಲಿಸಿದರೆ ಗಣನೆಗೆ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ. ಹೀಗಿರುವಾಗ ಹೊಸದೊಂದು ವಾಸಯೋಗ್ಯ ಗ್ರಹದ ಹುಡುಕಾಟ ಸಾಧ್ಯವೇ? ವಿಶ್ವ ಪರ್ಯಟನೆಗೆ ಹೊರಟರೆ ಅಲ್ಲಿಯೇ ಸಂತನಯೋತ್ಪತ್ತಿಯ ಪ್ರಕ್ರಿಯೆಯನ್ನು ನಡೆಸುತ್ತಾ ಮುಂದುವರೆಯಬೇಕಾದೀತು. ಅದು ಒಂದು ಮಾರ್ಗವೆಂದು ತೋರಿದರೂ ಉಸಿರಾಟಕ್ಕೆ ನೂರಾರು ವರ್ಷಗಳಿಗೆ ಸಾಕಾಗುವಷ್ಟು ಆಮ್ಲಜನಕವನ್ನು ಕೊಂಡೊಯ್ಯುವುದು ಸಾಧ್ಯವೇ? ಹಾಗಾದರೆ ಪರ್ಯಾಯ ಮಾರ್ಗಗಳು!? ವರ್ಮ್ ಹೋಲ್ ಗಳ ನಿರ್ಮಾಣ? ಅಥವಾ ಸುಪ್ತ ಸ್ಥಿತಿಯಲ್ಲಿ ಅಂತರಿಕ್ಷಯಾತ್ರಿಗಳನ್ನು ಸಾಗಿಸುವುದು? ಎಲ್ಲದಕ್ಕೂ ಉತ್ತರವನ್ನು ಕಾಲವೇ ನೀಡುತ್ತದೆ...",[11,37,38],{},[24,39,40],{},"2045, ಅಕ್ಟೋಬರ್ 12",[11,42,43],{},"ಒಂದು ಸಣ್ಣ ಕೊಠಡಿ. ಒಳಗೆ ಒಂದು ದುಂಡನೆಯ ಮೇಜು. ಅದರ ಸುತ್ತಲೂ 3 ಜನ ಮಧ್ಯವಯಸ್ಸಿನ ವ್ಯಕ್ತಿಗಳು ಕೂತಿದ್ದಾರೆ. ಎಲ್ಲರ ಮುಖದಲ್ಲೂ ಗಂಭೀರ ಭಾವ ಎದ್ದು ಕಾಣುತ್ತಿದೆ. ಹವಾ ನಿಯಂತ್ರಿತ ಕೊಠಡಿಯಾಗಿದ್ದರೂ ಪರಿಸ್ಥಿತಿಯ ಗಾಂಭೀರ್ಯತೆ ಅಲ್ಲಿನ ವಾತಾವರಣವನ್ನು ಬಿಸಿಯಾಗಿಸಿತ್ತು. ಅವರಲ್ಲಿ ಗಲ್ಲಕ್ಕೆ ಕೈಕೊಟ್ಟು ಕೂತಿರುವವ ಡೇವಿಡ್ ಆಂಟೋನಿ, ಖಾಸಗಿ ಅಂತರಿಕ್ಷ ಕೇಂದ್ರವೊಂದರ ಮುಖ್ಯಸ್ಥ. ಅವನೆದುರಲ್ಲಿ ಸ್ಮಾರ್ಟ್-ಸ್ಪೆಕ್ಟ್ ಧರಿಸಿ ಲೆಕ್ಕಾಚಾರ ಹಾಕುತ್ತಿರುವ ವಿನಯ್ ಚತುರ್ವೇದಿ, ಭಾರತೀಯ ಖಾಸಗಿ ಅಂತರಿಕ್ಷ ಸಂಸ್ಥೆ ಹಾಗೂ nullBrainsನ ಉಪವಿಭಾಗದ ಅಧ್ಯಕ್ಷ. ಮೂರನೆಯ ಗಡ್ಡದಾರಿ ವ್ಯಕ್ತಿ ತುಟಿಗಳ ಮಧ್ಯೆ ಸಿಗಾರ್ ಸಿಕ್ಕಿಸಿಕೊಂಡು ತನ್ನ ಸಾವಿನ ಸಮಯವನ್ನು ಇನ್ನಷ್ಟು ಕಡಿಮೆಗೊಳಿಸುತ್ತಾ ಇದ್ದಾನೆ. ಅವನು ಬೇರಾರೂ ಅಲ್ಲ ; ರಾಮಚಂದ್ರ ಹೆಗಡೆ, nullBrains ಮಹಾ ಸಂಸ್ಥೆಯ ಸಂಸ್ಥಾಪಕ. ನಾಲ್ಕನೆಯ ಕುರ್ಚಿಯೊಂದು ಖಾಲಿಯಿದೆ. ಆ ವ್ಯಕ್ತಿಯ ಅಗಮನಕ್ಕಾಗಿಯೇ ಎಲ್ಲರೂ ಕಾಯುತ್ತಿದ್ದಾರೆ. ಸುಮಾರು ಅರ್ಧ ಗಂಟೆಯ ನಂತರ ಬಾಗಿಲನ್ನು ನಿಧಾನವಾಗಿ ತೆರೆದು ಒಳಕ್ಕೆ ಧಾವಿಸಿದ ಇಪ್ಪತ್ತರ ಆಸುಪಾಸಿನ ನಾಲ್ಕನೆಯ ವ್ಯಕ್ತಿ; ಮನೋಜ್ ಹೆಗಡೆ. ತನ್ನ ತಂದೆಯ ಮುಖವನ್ನೊಮ್ಮೆ ನೋಡಿ ತನಗಾಗಿ ಮಿಸಲಿಟ್ಟಿದ್ದ ಕುರ್ಚಿಯಲ್ಲಿ ಕೂರಹೋದ. ರಾಮಚಂದ್ರ ಹೆಗಡೆ ಒಮ್ಮೆಲೇ ಸಿಗಾರನ್ನು ಬಾಯಿಂದ ತೆಗೆದು, \"ವೆಲ್ಕಮ್ ಸನ್ ವೆಲ್ಕಮ್. ಮೀಟಿಂಗ್ ಟೈಂ ಎಷ್ಟೊತ್ತಿಗೆ ಇದ್ದಿದ್ದು. ನೀನು ಬಂದಿರುವುದು ಎಷ್ಟೊತ್ತಿಗೆ?\" ಎಂದು ಗದರಿದಾಗ ಬೆಚ್ಚಿಬಿದ್ದು ನಿಂತನು. ತನ್ನ ಬೈಗುಳವನ್ನು ಮುಂದುವರೆಸಹೊರಟ ರಾಮಚಂದ್ರಗೆ ವಿನಯ್ ಚತುರ್ವೇದಿ, \"ಲೆಟ್ಸ್ ಸ್ಟಾರ್ಟ್ ದಿ ಡಿಸ್ಕಶನ್ ಗಯ್ಸ್\" ಎಂದನು. ಒಮ್ಮೆ ತನ್ನ ಮಗನತ್ತ ಕೋಪದಿಂದ ಧಿಟ್ಟಿಸಿದ ರಾಮಚಂದ್ರ, \"ಓಕೆ. ಕನೆಕ್ಟ್ ಟು ದಿ ವರ್ಲ್ಡ್.\" ಎಂದು ವಿನಯ್ ಗೆ ಆದೇಶಿಸಿದರು. ಕೆಲವೇ ಕ್ಷಣಗಳಲ್ಲಿ ಅವರೆದುರು ಇದ್ದ ಪರದೆಯ ಮೇಲೆ 12 ದೇಶಗಳ ಮುಖ್ಯಸ್ಥರ ಮುಖಗಳು ಮೂಡಿದವು.",[11,45,46],{},[24,47,48],{},"To be continued...",{"title":50,"searchDepth":51,"depth":51,"links":52},"",2,[],null,"In search of a new home","md",{},true,"\u002Fstories\u002Fy2121",{"title":5,"description":54},"stories\u002Fy2121","iDAtC7VtJ6xFl208Qk2Sm2qL7WsXKdeL4W2SDuWzqHs",[63,83,102,121,140,159,178,197,216,238,257,275,294,313,331,350,369,387,404,424,436],{"id":64,"title":65,"author":53,"body":66,"category":73,"cover":74,"date":53,"description":75,"extension":55,"meta":76,"navigation":57,"path":77,"readingTime":78,"seo":79,"slug":80,"stem":81,"__hash__":82},"summary\u002Fstories\u002Fsummary\u002Fantima-teerpu.md","ಅಂತಿಮ ತೀರ್ಪು",{"type":8,"value":67,"toc":71},[68],[11,69,70],{},"ಪಶ್ಚಿಮ ಘಟ್ಟದ ಮಡಿಲಲ್ಲಿ ಮಳೆಯ ರಾತ್ರಿ, ಬ್ರಿಟಿಷರ ಕಾಲದ ಮರದ ಗೆಸ್ಟ್ ಹೌಸ್‌ನಲ್ಲಿ ನಾಲ್ಕು ಜನ ಸೇರಿದ್ದಾರೆ — ಶತಾಯುಷಿ ಜಮೀನ್ದಾರ ಶಂಕರೇಗೌಡರ ವಿಲ್ ಓದಲು. ಆದರೆ ಪತ್ರಕರ್ತ ಸೂರ್ಯ ಅವರ ಸಾವಿನ ಹಿಂದಿನ ಸತ್ಯವನ್ನು ಬಯಲಿಗೆಳೆಯುತ್ತಾನೆ — ದ್ವೇಷ, ದುರಾಸೆ, ಮತ್ತು ವಂಚನೆಯ ಕಥೆ.",{"title":50,"searchDepth":51,"depth":51,"links":72},[],"Fiction","\u002Fstories\u002Fantima-teerpu\u002Fimage1.png","ಪಶ್ಚಿಮ ಘಟ್ಟದ ಮಡಿಲಲ್ಲಿ ಒಂದು ಮಳೆಯ ರಾತ್ರಿ, ನಾಲ್ಕು ಜನರ ನಡುವೆ ನಡೆಯುವ ಸತ್ಯದ ಹುಡುಕಾಟ.",{},"\u002Fstories\u002Fantima-teerpu","15 min read",{"title":65,"description":75},"antima-teerpu","stories\u002Fsummary\u002Fantima-teerpu","5bvz31rQvy2g65GyMknlrAXYwTU3enXlIMDosxhsitQ",{"id":84,"title":85,"author":53,"body":86,"category":73,"cover":93,"date":53,"description":94,"extension":55,"meta":95,"navigation":57,"path":96,"readingTime":97,"seo":98,"slug":99,"stem":100,"__hash__":101},"summary\u002Fstories\u002Fsummary\u002Fchadurangadaata.md","ಚದುರಂಗದಾಟ",{"type":8,"value":87,"toc":91},[88],[11,89,90],{},"ಚದುರಂಗದ ಮಣೆಯ ಮೇಲೆ ರಾಜನನ್ನು ಬೀಳಿಸಲು ಕಾಲಾಳು ಕೊನೆಯವರೆಗೂ ಹೋರಾಡಲೇಬೇಕು. ಮಾಜಿ ಗೃಹ ಸಚಿವ ಅಭಯ್ ಪಾಟೀಲನ ಭ್ರಷ್ಟಾಚಾರದ ಸಾಮ್ರಾಜ್ಯದ ವಿರುದ್ಧ ಸೂರ್ಯನ ಅಂತಿಮ ಯುದ್ಧ. ತನ್ನ ತಂದೆಯ ಕೊಲೆಯ ಸತ್ಯವನ್ನು ಬಯಲಿಗೆಳೆಯಲು ಅಧಿಕಾರದ ಕೋಟೆಯನ್ನು ಭೇದಿಸಬೇಕಾದ ಅಪಾಯಕಾರಿ ಆಟ.",{"title":50,"searchDepth":51,"depth":51,"links":92},[],"\u002Fstories\u002Fchadurangadaata\u002Fimage1.png","ಭ್ರಷ್ಟ ರಾಜಕಾರಣಿ ಅಭಯ್ ಪಾಟೀಲನ ವಿರುದ್ಧ ಸೂರ್ಯನ ಅಂತಿಮ ಹೋರಾಟ.",{},"\u002Fstories\u002Fchadurangadaata","25 min read",{"title":85,"description":94},"chadurangadaata","stories\u002Fsummary\u002Fchadurangadaata","Njiw1HA5zNacgYqKNRMiGSfd6g5v0hWwugWGpcsNYg4",{"id":103,"title":104,"author":53,"body":105,"category":53,"cover":112,"date":53,"description":113,"extension":55,"meta":114,"navigation":57,"path":116,"readingTime":53,"seo":117,"slug":118,"stem":119,"__hash__":120},"summary\u002Fstories\u002Fsummary\u002Fcircle.md","Circle",{"type":8,"value":106,"toc":110},[107],[11,108,109],{},"ಗಡಿಯಾರದ ಚಿಕ್ಕ ಮುಳ್ಳು ೧೨ನ್ನು ದಾಟಿ ೧ರತ್ತ ಧಾಪುಗಾಲಿಡುತ್ತಿತ್ತು. ಅವಳು ತನ್ನ ಅಪಾರ್ಟ್‌ಮೆಂಟ್‌ನ ಟೆರೇಸ್ನ ತುತ್ತತುದಿಯಲ್ಲಿ ಕತ್ತಲಿನಲ್ಲಿ ಕರಗಿ ಲೀನವಾಗಿ ನಿಂತಿದ್ದಾಳೆ. 'u r a cheater. esht life na haal madiddiya? its enough. get outta my lyf' - ವಾತ್ಸಾಪ್ನಲ್ಲಿ ಇದ್ದ ಆ ಸಂದೇಶವನ್ನೇ ಮತ್ತೆ ಮತ್ತೆ ಓದಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.",{"title":50,"searchDepth":51,"depth":51,"links":111},[],"\u002Fstories\u002Fcircle.jpg","Secrets, love, betrayal and revenge",{"download":115},"https:\u002F\u002Fdrive.google.com\u002Ffile\u002Fd\u002F0B32WA8IcsE3QWk9Zc3RBOXc3dVk\u002Fview?usp=drive_link&resourcekey=0-0N5ZQM6SVSRDqyoHADQgpA","\u002Fstories\u002Fcircle",{"title":104,"description":113},"circle","stories\u002Fsummary\u002Fcircle","mNGN67ELByqoMCB9OVwOBrwZX-kKbwDcnF7Tee8p_78",{"id":122,"title":123,"author":53,"body":124,"category":53,"cover":131,"date":53,"description":132,"extension":55,"meta":133,"navigation":57,"path":135,"readingTime":53,"seo":136,"slug":137,"stem":138,"__hash__":139},"summary\u002Fstories\u002Fsummary\u002Fenendu-hesaridali.md","ಏನೆಂದು ಹೆಸರಿಡಲಿ",{"type":8,"value":125,"toc":129},[126],[11,127,128],{},"\"ಎಂದೆಂದಿಗೂ ನಿನ್ನ ನೆನಪುಗಳು ನಮ್ಮೊಂದಿಗೆ\"\nನನ್ನೆದುರು ಇದ್ದ ಗೋರಿಕಲ್ಲಿನ ಮೇಲೆ ಕೆತ್ತಲ್ಪಟ್ಟಿತ್ತು. ಅಂತ್ಯಸಂಸ್ಕಾರ ಮುಗಿದು ಗಂಟೆಗಳೇ ಕಳೆದು ಹೋಗಿದ್ದರೂ ನಾನಿನ್ನೂ ಮನೆಗೆ ಮರಳದೇ ಅಲ್ಲೇ ನಿಂತಿದ್ದೆ. ನೀನು ನನಗೆ ತುಂಬಾನೇ ಸ್ಪೆಶಲ್. ನೀನೇ ತಾನೇ ನನಗೆ ಲೈಫ್ ಅಂದ್ರೆ ಏನು ಅಂತ realize ಆಗೋ ಹಾಗೆ ಮಾಡಿದ್ದು. ಈ ಪ್ರಪಂಚ ಮೇಲಿನಿಂದ ನೋಡೋಕೆ ಮಾತ್ರ ಬಣ್ಣದ ಬುಗರಿ. ಆದ್ರೆ ಇಂದೊಂದು ಕತ್ತಲೆಯ ಕೂಪ. ಅದರಲ್ಲಿ ನೀನು ಒಮ್ಮೆ ಬೀಳತೊಡಗಿದೆ. ಯಾರು ನಿನ್ನ ಸಹಾಯಕ್ಕೆ ಬರಲಿಲ್ಲ. ಎಲ್ಲರೂ ಸುಮ್ಮನೆ ನೋಡುತ್ತಾ ನಿಲ್ಲುವವರೇ. ನೀನು ಆ ಕಂದಕಕ್ಕೆ ಹಾರಿದೆ. ನೀನು ನನ್ನನು ಕೈಹಿಡಿದು ಎತ್ತಲು ನೋಡಿದೆ. ಸಾಧ್ಯವಾಗಲಿಲ್ಲ. ಉಫ್... ನೀನು ನೆಲವನ್ನು ತಲುಪಿದೆ. But ನಾನು ಬೀಳುತ್ತಲೇ ಇದ್ದೇನೆ.",{"title":50,"searchDepth":51,"depth":51,"links":130},[],"\u002Fstories\u002Fenendu-hesaridali.jpg","I miss you and you'll wait for me",{"download":134},"https:\u002F\u002Fdrive.google.com\u002Ffile\u002Fd\u002F1kgDPpPL3spc4_mznGpJlOz3iYNrKwzDk\u002Fview?usp=drive_link","\u002Fstories\u002Fenendu-hesaridali",{"title":123,"description":132},"enendu-hesaridali","stories\u002Fsummary\u002Fenendu-hesaridali","5SFT8Th-uQFlfP2SVlLO7ApAf6BtpTZlGEu8AAhfqTE",{"id":141,"title":142,"author":53,"body":143,"category":73,"cover":150,"date":53,"description":151,"extension":55,"meta":152,"navigation":57,"path":153,"readingTime":154,"seo":155,"slug":156,"stem":157,"__hash__":158},"summary\u002Fstories\u002Fsummary\u002Fgaajina-mane.md","ಗಾಜಿನ ಮನೆ",{"type":8,"value":144,"toc":148},[145],[11,146,147],{},"ಗಾಜಿನ ಮನೆಯಲ್ಲಿ ವಾಸಿಸುವವರು ಕಲ್ಲು ಎಸೆಯುವುದಿಲ್ಲ, ಜಿಗಿಯುವುದೂ ಇಲ್ಲ — ಅವರನ್ನು ತಳ್ಳಲಾಗುತ್ತದೆ. ಟೆಕ್-ನೋವಾ ಸಂಸ್ಥೆಯ ಸಿ.ಇ.ಒ ವಿಕ್ರಮ್ ಸಿಂಗ್ ನಲವತ್ತನೇ ಮಹಡಿಯಿಂದ ಬಿದ್ದು ಸತ್ತಾಗ ಪೋಲೀಸರು ಆತ್ಮಹತ್ಯೆ ಎಂದರು. ಆದರೆ ಸೂರ್ಯ ಸ್ಮಾರ್ಟ್ ಹೋಮ್ ಸಿಸ್ಟಮ್‌ನ ಡಿಜಿಟಲ್ ಹೆಜ್ಜೆಗುರುತುಗಳಲ್ಲಿ ಪರ್ಫೆಕ್ಟ್ ಕೊಲೆಯ ಸಾಕ್ಷ್ಯ ಕಂಡುಕೊಳ್ಳುತ್ತಾನೆ.",{"title":50,"searchDepth":51,"depth":51,"links":149},[],"\u002Fstories\u002Fgaajina-mane\u002Fimage1.png","ಟೆಕ್-ನೋವಾ ಸಂಸ್ಥೆಯ ಸಿ.ಇ.ಒ ವಿಕ್ರಮ್ ಸಿಂಗ್ ಅವರ ಅನುಮಾನಾಸ್ಪದ ಸಾವಿನ ಹಿಂದಿನ ಡಿಜಿಟಲ್ ಸತ್ಯವನ್ನು ಸೂರ್ಯ ಬಯಲಿಗೆಳೆಯುತ್ತಾನೆ.",{},"\u002Fstories\u002Fgaajina-mane","12 min read",{"title":142,"description":151},"gaajina-mane","stories\u002Fsummary\u002Fgaajina-mane","PQMdJ-c1qqFr7EatDEoO_eM98pUzTBwqkEJxhs9ynNo",{"id":160,"title":161,"author":53,"body":162,"category":53,"cover":169,"date":53,"description":170,"extension":55,"meta":171,"navigation":57,"path":173,"readingTime":53,"seo":174,"slug":175,"stem":176,"__hash__":177},"summary\u002Fstories\u002Fsummary\u002Fhrudaya-halagide.md","ಹೃದಯ ಹಾಳಾಗಿದೆ",{"type":8,"value":163,"toc":167},[164],[11,165,166],{},"ಹೇಗೆ ಪ್ರಾರಂಭಿಸಬೇಕು ಅಂತಾನೆ ತಿಳೀತಿಲ್ಲ. ಆದ್ರೂ ಇವತ್ತು ನಿನಗೆ ಹೇಳ್ಬೇಕಾದದ್ದು ತುಂಬಾ ಇದೆ. ನಮ್ಮ ಸ್ನೇಹಕ್ಕೆ ಹತ್ತು ವರ್ಷಕ್ಕಿಂತ ಜಾಸ್ತಿ ವಯಸ್ಸಾದರೂ ನಮಗೆ ನಾವೇ friends ಅಂತ ಹೇಳಿಕೊಂಡು ದಶಕವಾಯಿತು ಅಷ್ಟೇ. ನಾವಿಬ್ಬರೂ ಯಾವಾಗ್ಲೂ ಜಗಳ ಮಾಡ್ತಾನೇ ಇದ್ರು ಅದು ಯಾವತ್ತೂ serious ಅಂತ ಹೇಳೋ ಮಟ್ಟಕ್ಕೆ ಹೋಗಿಲ್ಲ.",{"title":50,"searchDepth":51,"depth":51,"links":168},[],"\u002Fstories\u002Fhrudaya-halagide.jpeg","A story about a man who is trying to find himself.",{"download":172},"https:\u002F\u002Fdrive.google.com\u002Ffile\u002Fd\u002F1mr0nZQGddeAnSV75l8uvsoU_A1ON9mGl\u002Fview?usp=drive_link","\u002Fstories\u002Fhrudaya-halagide",{"title":161,"description":170},"hrudaya-halagide","stories\u002Fsummary\u002Fhrudaya-halagide","FiBcSVIZE9moOFVLu-z_8BPyvYAIl-wcgdFBwcq487I",{"id":179,"title":180,"author":53,"body":181,"category":73,"cover":188,"date":53,"description":189,"extension":55,"meta":190,"navigation":57,"path":192,"readingTime":154,"seo":193,"slug":194,"stem":195,"__hash__":196},"summary\u002Fstories\u002Fsummary\u002Fin-the-ruins-of-memory.md","In The Ruins of Memory",{"type":8,"value":182,"toc":186},[183],[11,184,185],{},"On the day before the new system was set to go live, he pulled his hoodie low over his head, put on his headphones, and sat down to hammer out the code.\nHe typed furiously, and no one dared interrupt. With his hoodie up, he was in the zone—performing brain surgery on a single task: finishing the project.\nHe received his death sentence with pure calm: textbook case of frontotemporal dementia at age 32. While his family wept beside him, he complimented the doctor's wedding ring.\nShe found herself scrutinizing every interaction: Was that his last joke? His last laugh? His last hug? She never knew.\nHowever diminished, a person lingers in the shattered roadways of their mind.",{"title":50,"searchDepth":51,"depth":51,"links":187},[],"\u002Fstories\u002Fin-the-ruins-of-memory.png","A story of love, loss, and what remains.",{"download":191,"featured":57},"https:\u002F\u002Fdrive.google.com\u002Ffile\u002Fd\u002F1Su6ZeXXcmDqxXjZdJXZ_wucAbxS7RRTs\u002Fview?usp=sharing","\u002Fstories\u002Fin-the-ruins-of-memory",{"title":180,"description":189},"in-the-ruins-of-memory","stories\u002Fsummary\u002Fin-the-ruins-of-memory","afgaUHURlM8PVjlZcXpnFJLIqtwHAT0dqU6UgieH-lE",{"id":198,"title":199,"author":53,"body":200,"category":73,"cover":207,"date":53,"description":208,"extension":55,"meta":209,"navigation":57,"path":210,"readingTime":211,"seo":212,"slug":213,"stem":214,"__hash__":215},"summary\u002Fstories\u002Fsummary\u002Fkoneya-tappoppige.md","ಕೊನೆಯ ತಪ್ಪೊಪ್ಪಿಗೆ",{"type":8,"value":201,"toc":205},[202],[11,203,204],{},"ಸತ್ಯ ಸಾಯುವುದಿಲ್ಲ — ಅದು ಕೆಲವೊಮ್ಮೆ ಮಾತು ಕಳೆದುಕೊಂಡು ಮೌನವಾಗಿ ನರಳುತ್ತಿರುತ್ತದೆ. 20 ವರ್ಷಗಳ ಹಿಂದೆ ತನ್ನ ತಂದೆ ಪತ್ರಕರ್ತ ರಘುವೀರ್ ಅವರ ಆಕಸ್ಮಿಕ ಸಾವಿನ ಹಿಂದಿನ ಸತ್ಯವನ್ನು ಹುಡುಕುತ್ತಾ ಸೂರ್ಯ ನಿವೃತ್ತ ಡಿಸಿಪಿ ಶಂಕರ್ ಪ್ರಸಾದ್ ಅವರ ಬಳಿ ಬರುತ್ತಾನೆ — ಅವರ ಮಾತು ನಿಂತಿದೆ, ಆದರೆ ಕಣ್ಣಲ್ಲಿರುವ ಸತ್ಯ ಇನ್ನೂ ಜೀವಂತವಿದೆ.",{"title":50,"searchDepth":51,"depth":51,"links":206},[],"\u002Fstories\u002Fkoneya-tappoppige\u002Fimage1.png","ಪತ್ರಕರ್ತ ಸೂರ್ಯ, ತನ್ನ ತಂದೆಯ 20 ವರ್ಷಗಳ ಹಿಂದಿನ ಸಾವಿನ ರಹಸ್ಯವನ್ನು ಬೇಧಿಸಲು ಮೌನವಾಗಿರುವ ನಿವೃತ್ತ ಪೊಲೀಸ್ ಅಧಿಕಾರಿಯ ಕೊನೆಯ ತಪ್ಪೊಪ್ಪಿಗೆಯನ್ನು ಹುಡುಕುತ್ತಾನೆ.",{},"\u002Fstories\u002Fkoneya-tappoppige","10 min read",{"title":199,"description":208},"koneya-tappoppige","stories\u002Fsummary\u002Fkoneya-tappoppige","ZUpdtOBz2GTy6kInN6lZTiWe0BtN3HzJAoJ3btz2nM8",{"id":217,"title":218,"author":53,"body":219,"category":53,"cover":229,"date":53,"description":230,"extension":55,"meta":231,"navigation":57,"path":233,"readingTime":53,"seo":234,"slug":235,"stem":236,"__hash__":237},"summary\u002Fstories\u002Fsummary\u002Flast-secret-of-a-merchant.md","The Last Secret of A Merchant",{"type":8,"value":220,"toc":227},[221,224],[11,222,223],{},"ಹರಿ ಎಂದಿನಂತೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಮನೆಯಿಂದ ಹೊರ ನಡೆದಾಗ ಬೆಳಗಿನ ಸೂರ್ಯನ ಕಿರಣ ಚರಕಪುರವನ್ನು ಇನ್ನೂ ಸಂಪೂರ್ಣವಾಗಿ ಆವರಿಸಿರಲಿಲ್ಲ.\nಅವನ ಕ್ರಮಬದ್ಧ ಜೀವನದಲ್ಲಿ ಅನಿರೀಕ್ಷಿತ ತಿರುವು ಕಾದಿತ್ತು. ತಿಳಿನೀರಿನ ಆಳದಲ್ಲಿ ಕಪ್ಪನೆಯ ಆಕೃತಿಯೊಂದು ಅಲುಗಾಡದೆ ಮಲಗಿತ್ತು.\nಆ ಕತ್ತಲೆಯ ಆಕೃತಿ ಯಾರು? ಅದು ಅಲ್ಲಿ ಏಕೆ ಕಾಯುತ್ತಿದೆ? ಮತ್ತು ಮುಖ್ಯವಾಗಿ, ಅದಕ್ಕೂ ಈತನಿಗೂ ಏನಾದರೂ ಸಂಬಂಧವಿದೆಯೇ?",[11,225,226],{},"...\nಈ ಹತ್ಯೆಯನ್ನು ಬೇಧಿಸಲು ಮತ್ತೆ ಬಂದಿದ್ದಾರೆ ಸರಳಾಕ್ಷ ಹುಲಿಮೀಸೆ ಮತ್ತು ಇನ್ಸ್ಪೆಕ್ಟರ್ ಗೋಪಾಲಾಚಾರ್ಯ.",{"title":50,"searchDepth":51,"depth":51,"links":228},[],"\u002Fstories\u002Flast-secret-of-merchant\u002F1.jpg","A thread from investigations of Saralaksha Hulimeese",{"download":232},"https:\u002F\u002Fdrive.google.com\u002Ffile\u002Fd\u002F1Bb2n_tSbjWgddGuJ2e3VMfszRw7DNo7a\u002Fview?usp=sharing","\u002Fstories\u002Flast-secret-of-a-merchant",{"title":218,"description":230},"last-secret-of-a-merchant","stories\u002Fsummary\u002Flast-secret-of-a-merchant","hj6M3HUsw6N4QdRkli72J3rPyuAurI-VC_T8JFBPsMw",{"id":239,"title":240,"author":53,"body":241,"category":53,"cover":248,"date":53,"description":249,"extension":55,"meta":250,"navigation":57,"path":252,"readingTime":53,"seo":253,"slug":254,"stem":255,"__hash__":256},"summary\u002Fstories\u002Fsummary\u002Flove-triangle.md","Love Triangle",{"type":8,"value":242,"toc":246},[243],[11,244,245],{},"ಹಲವರು ಸೋಲ್ತಾರೆ, ಕೆಲವರು ಗೆಲ್ತಾರೆ...\nಒಬ್ಬರಿಗೇ ಇಬ್ಬಿಬ್ಬರು ಲೈನ್ ಹೊಡೀತಾರೆ...\nಸ್ನೇಹ.. ದ್ವೇಷಕ್ಕೆ ತಿರುಗುತ್ತೆ...\nಮತ್ತೊಬ್ಬರ ಗೆಲುವು ಇನ್ನೊಂದು ಮನಸ್ಸಿಗೆ ಏಟು ಕೊಡುತ್ತೆ...\nಕೊನೆಯಲ್ಲಿ ಅಂತ್ಯ ಹೇಗೆ ಇರುತ್ತೆ..?",{"title":50,"searchDepth":51,"depth":51,"links":247},[],"\u002Fstories\u002Flove_triangle.jpg","A story about a love triangle",{"download":251},"https:\u002F\u002Fdrive.google.com\u002Ffile\u002Fd\u002F1P7eNcBAqDl8LVPeTi_nOk53jTjqduqg8\u002Fview?usp=drive_link","\u002Fstories\u002Flove-triangle",{"title":240,"description":249},"love-triangle","stories\u002Fsummary\u002Flove-triangle","k_Ce6VbWPVtWj3f5-7ZCg7eVD_uS5D6z7txaqgraBOQ",{"id":258,"title":259,"author":53,"body":260,"category":53,"cover":267,"date":53,"description":170,"extension":55,"meta":268,"navigation":57,"path":270,"readingTime":53,"seo":271,"slug":272,"stem":273,"__hash__":274},"summary\u002Fstories\u002Fsummary\u002Fmaleyali-joteyali.md","ಮಳೆಯಲಿ... ಜೊತೆಯಲಿ...",{"type":8,"value":261,"toc":265},[262],[11,263,264],{},"ಮಲೆನಾಡಿನ ಮಡಿಲ್ಲಲಿರುವ ಒಂದು ಊರು. ಮಳೆಗಾಲದ ಸಮಯ. ತಿಂಗಳಿನಿಂದ ಸುರಿಯುತ್ತಿದ್ದ ಕುಂಭಧ್ರೋಣ ಮಳೆ ನಾಲ್ಕೈದು ದಿನಗಳಿಂದ ಸ್ವಲ್ಪ ಕಡಿಮೆಯಾಗಿತ್ತು. ಆದರೂ ಮೋಡಗಳು ಮಾತ್ರ ಆಗಸದಲ್ಲಿ ಈಜಾಡಿಕೊಂಡೇ ಇದ್ದವು. ಸಂಜೆ ನಾಲ್ಕಕ್ಕೇ ಆರು ಗಂಟೆಯಾದಂತೆ ತೋರುತ್ತಿತ್ತು.",{"title":50,"searchDepth":51,"depth":51,"links":266},[],"\u002Fstories\u002Fmaleyali_joteyali.png",{"download":269},"https:\u002F\u002Fdrive.google.com\u002Ffile\u002Fd\u002F1j1mXlObPWALrmXaqj1ZAn0EeOIgjxTyN\u002Fview?usp=drive_link","\u002Fstories\u002Fmaleyali-joteyali",{"title":259,"description":170},"maleyali-joteyali","stories\u002Fsummary\u002Fmaleyali-joteyali","mRsOCjDK6XIE6KUDbJkXVBBK_U1fJnAtvZMoo_7O-_4",{"id":276,"title":277,"author":53,"body":278,"category":73,"cover":285,"date":53,"description":286,"extension":55,"meta":287,"navigation":57,"path":288,"readingTime":289,"seo":290,"slug":291,"stem":292,"__hash__":293},"summary\u002Fstories\u002Fsummary\u002Fmooka-devara-sannidhi.md","ಮೂಕ ದೇವರ ಸನ್ನಿಧಿ",{"type":8,"value":279,"toc":283},[280],[11,281,282],{},"ಶಾಪಗಳು ಕಲ್ಲಿನ ವಿಗ್ರಹಗಳಲ್ಲಿರುವುದಿಲ್ಲ — ಅವು ಮನುಷ್ಯರ ಹೃದಯದಲ್ಲಿ ಹುದುಗಿರುವ ದ್ವೇಷ ಮತ್ತು ದುರಾಸೆಗಳಲ್ಲಿರುತ್ತವೆ. ಹಂಪಿಯ ಉತ್ಖನನ ಸ್ಥಳದಲ್ಲಿ ಖ್ಯಾತ ಇತಿಹಾಸಕಾರ ಡಾ. ಅವಿನಾಶ್ ಆಚಾರ್ಯ ರಾತ್ರೋರಾತ್ರಿ ಕಣ್ಮರೆಯಾದಾಗ, ಸೂರ್ಯ ಮೂಕ ದೇವರ ಶಾಪದ ಹಿಂದಿನ ಮಾನವ ದುರಾಸೆಯ ಸತ್ಯವನ್ನು ಹುಡುಕುತ್ತಾನೆ.",{"title":50,"searchDepth":51,"depth":51,"links":284},[],"\u002Fstories\u002Fmooka-devara-sannidhi\u002Fimage1.png","ಹಂಪಿಯ ಉತ್ಖನನ ಸ್ಥಳದಲ್ಲಿ ಖ್ಯಾತ ಇತಿಹಾಸಕಾರರ ನಿಗೂಢ ಕಣ್ಮರೆ ಮತ್ತು ಶತಮಾನಗಳ ಹಳೆಯ ರಹಸ್ಯ.",{},"\u002Fstories\u002Fmooka-devara-sannidhi","18 min read",{"title":277,"description":286},"mooka-devara-sannidhi","stories\u002Fsummary\u002Fmooka-devara-sannidhi","ZJq1qdd7dFnuvaxcSJQQpKO1KEldRAZAnP0i-u2YajE",{"id":295,"title":296,"author":53,"body":297,"category":304,"cover":305,"date":53,"description":170,"extension":55,"meta":306,"navigation":57,"path":308,"readingTime":78,"seo":309,"slug":310,"stem":311,"__hash__":312},"summary\u002Fstories\u002Fsummary\u002Fnever-again.md","Never Again",{"type":8,"value":298,"toc":302},[299],[11,300,301],{},"\"Amrutha.. I think you need a hug.\", Vijay consoled sobbing Amrutha. Suddenly she hugged him tightly. He has no words to say. But he can only make her feel comfort. Even in the middle of crowd she is flying in dreamworld.. Because of him. But they don't know that something big coming to end everything... and lead to a big devastating turn in life so that they'll never meet again...\"",{"title":50,"searchDepth":51,"depth":51,"links":303},[],"Romance","\u002Fstories\u002Fnever_again.jpg",{"download":307},"https:\u002F\u002Fdrive.google.com\u002Ffile\u002Fd\u002F1fBUU5T2X36AYW8mmsLF8bM9C9BgOFu3O\u002Fview?usp=drive_link","\u002Fstories\u002Fnever-again",{"title":296,"description":170},"never-again","stories\u002Fsummary\u002Fnever-again","RD8xDk97BlK7AdXfWw7o3QP2Zny0QqWQhldATF4D33I",{"id":314,"title":315,"author":53,"body":316,"category":53,"cover":323,"date":53,"description":170,"extension":55,"meta":324,"navigation":57,"path":326,"readingTime":53,"seo":327,"slug":328,"stem":329,"__hash__":330},"summary\u002Fstories\u002Fsummary\u002Fninagagi.md","He's Waiting... ನಿನಗಾಗಿ",{"type":8,"value":317,"toc":321},[318],[11,319,320],{},"ಎಂಟು ವರ್ಷಗಳ ಅವನ ನಿರೀಕ್ಷೆ ಸುಳ್ಳಾಗಲಲಿಲ್ಲ. ಅವನನ್ನು ನೋಡಲು ಅವಳು ಬರುತ್ತಿದ್ದಾಳೆ. ಇವನ ಸಂತೋಷವನ್ನು ಅಳೆಯಲು ಮಾಪನಗಳೇ ಇರಲಿಲ್ಲ. ಮಾತನಾಡಲು ಸಾವಿರಾರು ವಿಷಯಗಳಿದ್ದರೂ ಸ್ವರವೇ ಹೊರಡಲಿಲ್ಲ. ಅವಳನ್ನೇ ಧಿಟ್ಟಿಸಿ ನೋಡುತ್ತಿದ್ದ ಆದಿತ್ಯ. ​ಕೈಯಲ್ಲಿ ಚೆಂಗುಲಾಬಿಯನ್ನು ಹಿಡಿದು ನಿಂತಿದ್ದ ಅವಳನ್ನೇ ನೋಡುತ್ತಿದ್ದಾನೆ. ಅವಳು ಮತ್ತೆ ಬಂದಿದ್ದಾಳೆ.",{"title":50,"searchDepth":51,"depth":51,"links":322},[],"\u002Fstories\u002Fninagagi.jpg",{"download":325},"https:\u002F\u002Fdrive.google.com\u002Ffile\u002Fd\u002F0B32WA8IcsE3QR0NrVUt2WnBrQzA\u002Fview?usp=drive_link&resourcekey=0-pZBUoKOJJ25AwL_ZLgAZsw","\u002Fstories\u002Fninagagi",{"title":315,"description":170},"ninagagi","stories\u002Fsummary\u002Fninagagi","aNh_UqH3UxCoF_d0TVrKNRixnZ3AE99uTU60660rU54",{"id":332,"title":333,"author":53,"body":334,"category":53,"cover":341,"date":53,"description":342,"extension":55,"meta":343,"navigation":57,"path":345,"readingTime":53,"seo":346,"slug":347,"stem":348,"__hash__":349},"summary\u002Fstories\u002Fsummary\u002Fpriti-anirikshita.md","ಪ್ರೀತಿ ಅನಿರೀಕ್ಷಿತ",{"type":8,"value":335,"toc":339},[336],[11,337,338],{},"ಸುಂದರ ಹೂತೋಟದ ಮೂಲೆಯಲ್ಲೊಂದು ಶತಮಾನಗಳಿಂದ ಬೆಳೆದು ನಿಂತಿರುವ ದೊಡ್ಡದೊಂದು ಮಾವಿನ ಮರ. ಮರದ ಕೆಳಗೆ ದಶಕಗಳ ಹಿಂದೆ ಮಾಡಿದ ಒಂದು ಕಲ್ಲಿನ ಬೆಂಚು. ಮಳೆಗಾಲದಲ್ಲಿ ಪಾಚಿಗಟ್ಟಿದ್ದ ಕುರುಹುಗಳು ಈಗಲೂ ಗೋಚರಿಸುತ್ತಿವೆ. ಅದರ ಮೇಲೆ ಅವಳು ಕುಳಿತಿದ್ದಾಳೆ, ಕೃಶಗೊಂಡಿರುವ ದೇಹ, ಇಂಗಿ ಹೋಗಿರುವ ಕಣ್ಣುಗಳು, ಬಣ್ಣ ಮಾಸಿದ ಸೀರೆ. ಹೌದು. ಅದು ಅವಳೇ. ಶ್ವೇತಾ ರಾವ್ ಮೊಣಕಾಲುಗಳ ಮೇಲೆ ಗಲ್ಲವಿಟ್ಟುಕೊಂಡು ಶೂನ್ಯ ನೋಟ ಬೀರುತ್ತಾ ಏನನ್ನೋ ಗಾಢವಾಗಿ ಯೋಚಿಸುತ್ತಾ ಕುಳಿತಿದ್ದಾಳೆ. ಅನಿರೀಕ್ಷಿತ ಪ್ರೇಮ ಕಥೆ; ಅವಳ ಜೀವನದ ವಿಚಿತ್ರ ವ್ಯಥೆ. ಅದು ಅವಳದೇ LOVE STORY.",{"title":50,"searchDepth":51,"depth":51,"links":340},[],"\u002Fstories\u002Flove_unexpected.jpg","A story of a girl",{"download":344},"https:\u002F\u002Fdrive.google.com\u002Ffile\u002Fd\u002F0B32WA8IcsE3Qc245UUNyOGZqSkE\u002Fview?usp=drive_link&resourcekey=0-bYxuGTKr5w_Y0zAIT_5e4g","\u002Fstories\u002Fpriti-anirikshita",{"title":333,"description":342},"priti-anirikshita","stories\u002Fsummary\u002Fpriti-anirikshita","ebki43G9sgx15zRvRjAOqO_GRdyei8mwE4mBPaNW6yw",{"id":351,"title":352,"author":53,"body":353,"category":53,"cover":360,"date":53,"description":361,"extension":55,"meta":362,"navigation":57,"path":364,"readingTime":53,"seo":365,"slug":366,"stem":367,"__hash__":368},"summary\u002Fstories\u002Fsummary\u002Ftears-of-a-martyr.md","Tears of a Martyr",{"type":8,"value":354,"toc":358},[355],[11,356,357],{},"ರಘು ತನ್ನ ತಲೆಯನ್ನು ಎತ್ತಲು ಹೆಣಗಾಡಿದ. ಆದರೆ ಮೂರು ಗುಂಡುಗಳನ್ನು ಹಿಡಿದಿಟ್ಟುಕೊಂಡಿದ್ದ ದೇಹ ಅವನಿಗೆ ಸಹಕರಿಸುವ ಸ್ಥಿತಿಯಲ್ಲಿರಲಿಲ್ಲ. ಕತ್ತಲೆ ತುಂಬಿದ ಕಣ್ಣುಗಳು ಕಾಲಘಟ್ಟದಲ್ಲಿ ಹಿಂದಕ್ಕೆ ಕೊಂಡೊಯ್ದವು. ಯುದ್ಧಭೂಮಿಯಲ್ಲಿ ಮಲಗಿ ನೋವುಣ್ಣುತ್ತಿದ್ದರೂ ದೂರದ ಕರುನಾಡಿನಲ್ಲಿ, ಮನೆಯ ಅಂಗಳದಲ್ಲಿ ನಿಂತಿದ್ದ ತಾಯಿಯ ನೆನಪು ತುಟಿಯ ಮೇಲೆ ನಗುವನ್ನು ತರಿಸಿತ್ತು. ನೆನಪಿನ ಮಸುಕಾದ ಹಾದಿಯಲ್ಲಿ ಯೋಚನೆ ಸಾಗಿತ್ತು. ಮುಚ್ಚಿದ ಕಣ್ಣುಗಳಲ್ಲಿ ರಚಿತವಾಗುತ್ತಿದ್ದ ಚಿತ್ರ ನಿಧಾನವಾಗಿ ನೈಜತೆಗೆ ತಿರುಗುತ್ತಿತ್ತು. ತನ್ನ ತಾಯಿಯ ಮುಗ್ದತೆ, ಪ್ರೀತಿ, ಅಕ್ಕರೆ ಮತ್ತು ಕಾಳಜಿಯನ್ನು ಮತ್ತೆ ಅನುಭವಿಸಲು ಸಮಯದಲ್ಲಿ ಭೂತದತ್ತ ಸಾಗಿದನು.",{"title":50,"searchDepth":51,"depth":51,"links":359},[],"\u002Fstories\u002Ftears_of_martyr.jpg","A soldier never cries...",{"download":363},"https:\u002F\u002Fdrive.google.com\u002Ffile\u002Fd\u002F1wbwxQG1UwQbHv4krUiclaSOjcBrgEiCH\u002Fview?usp=drive_link","\u002Fstories\u002Ftears-of-a-martyr",{"title":352,"description":361},"tears-of-a-martyr","stories\u002Fsummary\u002Ftears-of-a-martyr","OI6yx-tNoLBAY5stlElf7e8aljVbmBsmmQpPgiqMhwA",{"id":370,"title":371,"author":53,"body":372,"category":53,"cover":379,"date":53,"description":170,"extension":55,"meta":380,"navigation":57,"path":382,"readingTime":53,"seo":383,"slug":384,"stem":385,"__hash__":386},"summary\u002Fstories\u002Fsummary\u002Fthe-burning-desires.md","The Burning Desires",{"type":8,"value":373,"toc":377},[374],[11,375,376],{},"“Kill him now… Now or never…!!! ಇದೇ ನಿನ್ನ ನಾಶವಾದ ಬದುಕಿಗೆ ಏಕೈಕ ನ್ಯಾಯಯುತ ಪರಿಹಾರ.” - ಮತ್ತೆ ಮತ್ತೆ ತಲೆಯೊಳಗೆ ಪ್ರತಿಧ್ವನಿಸುತ್ತಿರುವ ವಾಕ್ಯ. ಮುಗ್ದಮುಖದ ಸ್ವಾತಿ ಅಡುಗೆ ಕೋಣೆಯಿಂದ ಹೊರಬಂದಳು. ಕೈಯಲ್ಲಿ ಹಿಡಿದ ಚಾಕುವಿನ ಮೊನಚು ಕೆಂಪು ಬಣ್ಣದ ದೀಪದಲ್ಲಿ ಹೊಳೆಯುತ್ತಿತ್ತು. ಕೋಣೆಯಲ್ಲಿ ಮಂಚದ ಮೇಲೆ ಅಂಗಾತವಾಗಿ ಸುಸ್ತಾಗಿ ಮಲಗಿದ್ದ ವ್ಯಕ್ತಿಯತ್ತ ಹೆಜ಼್ಜ಼ೆ ಹಾಕಿದಳು.",{"title":50,"searchDepth":51,"depth":51,"links":378},[],"\u002Fstories\u002Fthe_burning_desires.jpg",{"download":381},"https:\u002F\u002Fdrive.google.com\u002Ffile\u002Fd\u002F14moaOF_uQRHiY2BnHAoSm5sOvAQe9pCq\u002Fview?usp=drive_link","\u002Fstories\u002Fthe-burning-desires",{"title":371,"description":170},"the-burning-desires","stories\u002Fsummary\u002Fthe-burning-desires","U66gtrgO4eTFbWDmLsjcNhHh6NkX7hsE4NGB3cJ7wj4",{"id":388,"title":389,"author":53,"body":390,"category":53,"cover":397,"date":53,"description":170,"extension":55,"meta":398,"navigation":57,"path":399,"readingTime":53,"seo":400,"slug":401,"stem":402,"__hash__":403},"summary\u002Fstories\u002Fsummary\u002Fthe-gentleman.md","The Gentleman",{"type":8,"value":391,"toc":395},[392],[11,393,394],{},"ಹುಟ್ಟುತ್ತಾ ಎಲ್ಲರೂ ಸಾಮಾನ್ಯರಾಗಿಯೇ ಹುಟ್ಟುತ್ತಾರೆ. ಆದರೆ ನಂತರ ಮರೆಯಲಾರದ ಇತಿಹಾಸ ಸೃಷ್ಟಿಸಿ ಮರೆಯಾಗುತ್ತಾರೆ. ಬದುಕಿನಲ್ಲಿ ನಡೆಯುವ ಕೆಲವು ಘಟನೆಗಳು ಜೀವನ ಪಥವನ್ನೇ ಬದಲಾಯಿಸಿ ಬಿಡುತ್ತದೆ. ಕೆಲವು ತಿರುವುಗಳು ಸಾಮಾನ್ಯರನ್ನು ಅಸಾಮಾನ್ಯರನ್ನಾಗಿಸಿದರೆ, ಕೆಲವರು ಸರ್ವನಾಶವಾಗಿ ಬಿಡುತ್ತಾರೆ. THE GENTLEMANನಂತಹವರು ದೃವ ತಾರೆಗಳಾಗುತ್ತಾರೆ.",{"title":50,"searchDepth":51,"depth":51,"links":396},[],"\u002Fstories\u002Fthe_gentleman.png",{},"\u002Fstories\u002Fthe-gentleman",{"title":389,"description":170},"the-gentleman","stories\u002Fsummary\u002Fthe-gentleman","QZNQywBOnWn06AJidhUyozqX62O_EpDL2YqmMD6VC6c",{"id":405,"title":406,"author":53,"body":407,"category":414,"cover":415,"date":53,"description":170,"extension":55,"meta":416,"navigation":57,"path":418,"readingTime":419,"seo":420,"slug":421,"stem":422,"__hash__":423},"summary\u002Fstories\u002Fsummary\u002Fthe-photograph.md","The Photograph",{"type":8,"value":408,"toc":412},[409],[11,410,411],{},"\"ನೀವು ನನಗೆ actually ಏನಾಗಿದೆ ಅಂತ ಹೇಳೋದಕ್ಕೆ ಪ್ರಯತ್ನ ಪಡ್ತಿದ್ದೀರ? ಅಂದ್ರೆ ನನಗೆ....?”\n\"ಹೌದು ಹೌದು. ನಾನು ನಿಮಗೆ already ಹೇಳಿದೀನಿ ಇದು ಹೇಗೆ ಅಂತ\", ಎಂದು ತನ್ನ ಹೇಳಿಕೆಯನ್ನು ನನಗೆ ಮನವರಿಕೆ ಮಾಡಿಸಲು ಪ್ರಯತ್ನಿಸುತ್ತಿದ್ದರು ಡಾ. ಅಭಿಷೇಕ್ ನಾಯರ್.\n“But, ನಾನು ಹೇಗೆ ನನ್ನ ಪಾಸ್ಟ್ ಲೈಫ್ ನೋಡ್ಲಿಕ್ಕೆ ಸಾಧ್ಯ. ನೆನಪು ಮಾಡ್ಕೋಳ್ ಬಹುದು. ಬಟ್ ರಿಪೀಟ್ ಆಗಿ ಅದೇ ಸೀನ್ ಅಲ್ಲಿ ನಾನೇ ಇರ್ತೀನಿ. ಅದು ಹೇಗೆ ಸಾಧ್ಯ?\"\n​\"ಹಾಹಾ. ಸಾಧ್ಯ ಇದೆ. ಏಕಾಗ್ರತೆಯೇ ಇವೆಲ್ಲದಕ್ಕೂ ಮೂಲ. You just need to concentrate. ಅಷ್ಟೇ\"",{"title":50,"searchDepth":51,"depth":51,"links":413},[],"Mystery","\u002Fstories\u002Fthe_photograph.jpg",{"download":417},"https:\u002F\u002Fdrive.google.com\u002Ffile\u002Fd\u002F1OJt5pPjhG7hwXQPWsqTHmNk2ZlbEj-sP\u002Fview?usp=drive_link","\u002Fstories\u002Fthe-photograph","8 min read",{"title":406,"description":170},"the-photograph","stories\u002Fsummary\u002Fthe-photograph","Df98woawS5BTjeN7b_ifUAf607usb5FjOPed4EiJmKg",{"id":425,"title":5,"author":53,"body":426,"category":53,"cover":17,"date":53,"description":170,"extension":55,"meta":432,"navigation":57,"path":58,"readingTime":53,"seo":433,"slug":16,"stem":434,"__hash__":435},"summary\u002Fstories\u002Fsummary\u002Fy2121.md",{"type":8,"value":427,"toc":430},[428],[11,429,29],{},{"title":50,"searchDepth":51,"depth":51,"links":431},[],{},{"title":5,"description":170},"stories\u002Fsummary\u002Fy2121","R7vCmaFUDrS9OOuikeNO8ht587BhUsm5lkQpnrpbHTE",{"id":437,"title":438,"author":53,"body":439,"category":53,"cover":446,"date":53,"description":170,"extension":55,"meta":447,"navigation":57,"path":449,"readingTime":53,"seo":450,"slug":451,"stem":452,"__hash__":453},"summary\u002Fstories\u002Fsummary\u002Fyou.md","You",{"type":8,"value":440,"toc":444},[441],[11,442,443],{},"ಒಂದು ನೆರಳು ಮನೆಯಿಂದ ಹೊರಗೆ ಓಡಿದಂತಾಯಿತು. ಆತನ ದಿಗ್ಬ್ರಮೆ ಉಲ್ಬಣಗೊಳ್ಳುವಂತೆ ಮನೆಯ ಮುಂದಿನ ಬಾಗಿಲಿನ ಲಾಕ್ ತೆರೆದಿತ್ತು. ಯಾರೋ ಈಗ ತಾನೇ ಗಟ್ಟಿಯಾಗಿ ಎಳೆದಂತೆ ಬಾಗಿಲು ಅಲುಗಾಡುತ್ತಿತ್ತು. ಬಾಗಿಲಿನ ಸನಿಹಕ್ಕೆ ಹೋಗಿ ಹೊರಕ್ಕೆ ಇಣುಕಿ ನೋಡಿದ. ಅಪಾರ್ಟ್‌ಮೆಂಟಿನ ವರಾಂಡದ ಲೈಟ್ ಎಲ್ಲವೂ ಉರಿಯುತ್ತಿತ್ತು. ಆ ದಾರಿ ಸಹಜವಾಗಿಯೇ ತೋರಿತು. ಹಠಾತ್ ಚಲನವಲನದ ಸೂಚನೆಗಳು ಕಂಡುಬರಲಿಲ್ಲ.",{"title":50,"searchDepth":51,"depth":51,"links":445},[],"\u002Fstories\u002Fyou.jpg",{"download":448},"https:\u002F\u002Fdrive.google.com\u002Ffile\u002Fd\u002F1SbDfLnsQLth6bFB3glT_B48PKOX_reMT\u002Fview?usp=drive_link","\u002Fstories\u002Fyou",{"title":438,"description":170},"you","stories\u002Fsummary\u002Fyou","Q-NVxMSQTaAMKT0yetwJmGJ7APwMfy8HY_K5W8eqSHg",1784136280552]