The Photograph

The Photograph

ಇದು ನಿಮ್ಮ ಚಿತ್ತ


Scene 1

"ನೀವು ನನಗೆ actually ಏನಾಗಿದೆ ಅಂತ ಹೇಳೋದಕ್ಕೆ ಪ್ರಯತ್ನ ಪಡ್ತಿದ್ದೀರ? ಅಂದ್ರೆ ನನಗೆ....?”

"ಹೌದು ಹೌದು. ನಾನು ನಿಮಗೆ already ಹೇಳಿದೀನಿ ಇದು ಹೇಗೆ ಅಂತ", ಎಂದು ತನ್ನ ಹೇಳಿಕೆಯನ್ನು ನನಗೆ ಮನವರಿಕೆ ಮಾಡಿಸಲು ಪ್ರಯತ್ನಿಸುತ್ತಿದ್ದರು ಡಾ. ಅಭಿಷೇಕ್ ನಾಯರ್.

But, ನಾನು ಹೇಗೆ ನನ್ನ ಪಾಸ್ಟ್ ಲೈಫ್ ನೋಡ್ಲಿಕ್ಕೆ ಸಾಧ್ಯ. ನೆನಪು ಮಾಡ್ಕೋಳ್ ಬಹುದು. ಬಟ್ ರಿಪೀಟ್ ಆಗಿ ಅದೇ ಸೀನ್ ಅಲ್ಲಿ ನಾನೇ ಇರ್ತೀನಿ. ಅದು ಹೇಗೆ ಸಾಧ್ಯ?"

"ಹಾಹಾ. ಸಾಧ್ಯ ಇದೆ. ಏಕಾಗ್ರತೆಯೇ ಇವೆಲ್ಲದಕ್ಕೂ ಮೂಲ. You just need to concentrate. ಅಷ್ಟೇ"

“What?”

"ಇಲ್ಲಿ ಕೇಳಿ. ಈ ಯೋಚನೆ ಎಂಬುದು ಒಂದು ಶಕ್ತಿಯುತವಾದ ಆಯುಧ. ಎವೆರೀ ಥಾಟ್.. ಪ್ರತಿಯೊಂದು ಯೋಚನೆಗೂ ಒಂದು ತೂಕ ಇರುತ್ತೆ. ಆದ್ರೆ ಅದರ ಗಾಢತೆ ನೀವು ಎಷ್ಟು ಆಳವಾದ ಯೋಚನೆಯಲ್ಲಿ ಮುಳುಗಿದ್ದೀರ ಎಂಬುದರ ಮೇಲೆ ಡಿಪೆಂಡ್ ಆಗುತ್ತ್ತೆ. ಸೊ ನಿನಗೆ ಬುದ್ದಿಭ್ರಮಣೆ ಆಗಿದೆ ಅಂತ ಬೇರೆಯವ್ರು ತಿಳಿದುಕೊಳ್ಳೋ ಅಷ್ಟು ಡೀಪ್ ಯೋಚನೆಗೆ ಹೋದ್ರೆ, ಮೇ ಬಿ ಈ ನಿನ್ನ ಸುತ್ತಲಿನ ಪ್ರಪಂಚವನ್ನ ಮರೆತು ನಿನ್ನ ಜಗತ್ತಿನೊಳಗೆ ಹೋಗ್ತೀಯ.”

“ಆದರೆ ಅದು ಬೇರೆ ಯಾವುದೋ ಅಥವಾ ಏನೋ ಇರಬೇಕು."

“Yes, there is. ನಿನ್ನ ಸುತ್ತಲೂ ಪಿನ್ ಡ್ರಾಪ್ ಸೈಲೆನ್ಸ್ ಇರ್ಬೇಕು. ನಿನ್ನ ಯೋಚನೆಗೆ ಕಿಂಚಿತ್ತೂ ಧಕ್ಕೆ ಬರಬಾರ್ದು. Other than this, it’s pretty simple.”, ಎಂದು ನಗುತ್ತಾ ಹೇಳಿದರು. ನನಗೆ ಅವರು ನಗುವುದನ್ನು ನೋಡಿ ತುಂಬಾ ಆಶ್ಚರ್ಯ ಆಯಿತು. ಇದರಲ್ಲಿ ನಗುವುದು ಏನಿದೆ ಅಂತ ಸರಿಯಾಗಿ ಅರ್ಥ ಆಗಲಿಲ್ಲ. ಎಲ್ಲಾ ಭೌತವಿಜ್ಞಾನದ ನಿಯಮಗಳೆಲ್ಲವನ್ನೂ ಸುಳ್ಳು ಮಾಡಿ, ನಾನು ಹೇಗೆ ನನ್ನ ಭೂತಕಾಲಕ್ಕೆ ಹೋಗಲು ಸಾಧ್ಯ. ಇದು ಸಂಪೂರ್ಣವಾಗಿ ಹುಚ್ಚುತನ. A sheer madness, ನನ್ನದೇನ ಅಥವಾ ಡಾಕ್ಟರ್?

“ಡಾಕ್ಟರ್, ಇನ್ನೂ ನನಗೆ ಸಂಶಯ ಇದೆ, ಇದರಲ್ಲಿ ಏನೋ ಸರಿಯಿಲ್ಲ. ನೀವು ನನಗೆ ಹೆಲ್ಪ್ ಮಾಡೋಕೆ ಟ್ರೈ ಮಾಡ್ತಿದೀರಿ ಅಂತ ಗೊತ್ತು. ಆದ್ರೂ ಇದೊಂದು ಮಿಸ್ಟೇಕ್.”

“ನಾನು ನಿನಗೆ already ಎಲ್ಲವನ್ನೂ ವಿವರವಾಗಿ ಬಿಡಿಸಿ ಹೇಳಿದ್ದೀನಿ.”, ಎಂದು ತಮ್ಮ ಬಲಗೈಯನ್ನು ಗಾಳಿಯಲ್ಲಿ ವಿಚಿತ್ರವಾಗಿ ಎರಡು ಸುತ್ತು ಹಾಕಿ ಹೇಳಿದರು.

“ಹಾಗಾದ್ರೆ ಮತ್ತೊಮ್ಮೆ ಹೇಳಿ. ನೀವು ನನಗೆ ತುಂಬಾ ಕನ್ಫ್ಯೂಸ್ ಮಾಡ್ತ ಇದೀರಾ", ನಾನು ತಲೆಯನ್ನು ಕೊಡವುತ್ತಾ ಹೇಳಿದೆ. "ಕೇಳು ಇಲ್ಲಿ. ಅತ್ಯಂತ ಸಂಕೀರ್ಣ ಕಾರ್ಯವಿಧಾನಗಳ ಮೂಲಕ ಕಾಲಯಂತ್ರವನ್ನು ತಯಾರಿಸಲು ನೋಡಿ ವಿಫಲರಾಗಿದ್ದಾರೆ. ಅದು ಮಾಡಲಾಗದ ಕಾರ್ಯವನ್ನ ಒಂದು ಚಿಕ್ಕ ಫೋಟೋ ಜಾಣತನದಿಂದ ಮಾಡುತ್ತೆ. ಅದು ಸಮಯವನ್ನು ತನ್ನ ಚೌಕಟ್ಟಿನಲ್ಲಿ ಹಿಡಿದಿಡುತ್ತೆ. ಅದರಲ್ಲಿ ನಿನ್ನ ಭಾವನೆಗಳನ್ನು ಕೂಡಿಹಾಕುತ್ತೆ. ತನ್ನ ಪಾಡಿಗೆ ತಾನು ಸರಿಯುತ್ತಿರುವ ಸಮಯವನ್ನ, ಮತ್ತೆ ಹಿಂದಿರುಗಿಸಿ ತರಲಾಗದ ಸಮಯವನ್ನ ಈ ಫೋಟೋ ಸೆರೆ ಹಿಡಿಯುತ್ತೆ. ಸೊ ಇದು ನಮ್ಮ ನೆನಪುಗಳನ್ನು ಎಚ್ಚೆತ್ತುಕೊಳ್ಳುವಂತೆ ಮಾಡುವ, ಮತ್ತೆ ಅದೇ ಕಳೆದುಹೋದ ಕಾಲಕ್ಕೆ ಕೊಂಡೊಯ್ಯುವ ಹೆಬ್ಬಾಗಿಲು ಅಂದುಕೊಂಡ್ರೆ ತಪ್ಪಿಲ್ಲ."

ಅವರ ಒಂದೊಂದು ಪದವೂ ವಿವಿಧ ಗೊಂದಲಗಳನ್ನು ನನ್ನಲ್ಲಿ ಹುಟ್ಟುಹಾಕಿತೇ ವಿನಹ ಯಾವುದೇ ರೀತಿಯಲ್ಲೂ ಪರಿಹಾರ ನೀಡಲಿಲ್ಲ. ಅಕ್ಷರಶಃ ಒಂದು ಛಾಯಾಚಿತ್ರವನ್ನು ಪ್ರವೇಶಿಸಲು ಹೇಗೆ ಸಾಧ್ಯ? and go back in time?

"ಈ ಫೋಟೋದಲ್ಲಿ ಹಿಡಿದಿಡಲಾಗಿರುವ ಸಮಯ ಸ್ಥಿರವಾಗಿರಬಹುದು. ಆದರೆ ನಮ್ಮ ಪ್ರಸ್ತುತ ಚೌಕಟ್ಟಿನಲ್ಲಿ ಅದೊಂದು ಗತಿಸಿಹೋದ ಒಂದು ಘಟನೆಯಾಗಿರುತ್ತದೆ ಎಂಬುದು ನೆನಪಿರಲಿ. ಇದನ್ನ ನಾವು ಬೇಕಾದರೆ ಸಮಾನಾಂತರ ಸಮಯದ ಅಳತೆಗಳು ಅಂತ ಬೇಕಾದ್ರೆ ಕರೆಯಬಹುದು. i.e, 2 parallel time dimensions. ಒಂದು, ಈಗ ನಡೆಯುತ್ತಾ ಇರೋದು ಅಂದ್ರೆ ವರ್ತಮಾನ. ಮತ್ತೊಂದು, ಈ ಫೋಟೋದೊಳಗಿನ ಸ್ಥಿರವಾದ ಸಮಯ. And ನಮ್ಮ ಯೋಚನೆಗಳು, ಇವುಗಳು ನಿನಗೆ ಆ ಎರಡು ಸಮಯದ ನಡುವೆ ಸ್ವಿಚ್ ಆಗಲು ಶಕ್ತಿ ನೀಡುತ್ತವೆ."

ನನಗೆ ಏನು ಹೇಳಬೇಕೆಂದೇ ತೋಚಲಿಲ್ಲ. ಇದು ನನ್ನ ಬುದ್ದಿಶಕ್ತಿಯ ವ್ಯಾಪ್ತಿಯಲ್ಲಿ, ವೈಜ್ಞಾನಿಕವಾಗಿ ಯೋಚಿಸಲು ಸಾಧ್ಯವಿಲ್ಲವೇನೋ ಅನ್ನಿಸಿತು. ಡಾ. ಅಭಿಷೇಕ್ ಅವರು ತಮ್ಮ ಮಾತಿನ ಮೇಲೆ, ಹಾಗೂ ಪ್ರಚುರ ಪಡಿಸಿದ ಸಿದ್ಧಾಂತದ ಮೇಲೆ ಅತ್ಯಂತ ವಿಶ್ವಾಸವಿರುವಂತೆ ಕಂಡುಬಂದರು. ಈ ಎಲ್ಲಾ ಸಂಕೀರ್ಣ ಸಮರ್ಥನೆಗಳನ್ನು ಕೇಳಿದ ಮೇಲೆ ನನಗೆ ಅನ್ನಿಸಿದ್ದು ಮೊದಲು ಸ್ವಲ್ಪ ವಿಶ್ರಾಂತಿ ಬೇಕಾಗಿದೆ ಅಂತ ಅಷ್ಟೇ.

"ಹಾ. ಮತ್ತೊಂದು ವಿಷಯ", ಹೊರಡಲನುವಾದ ನನ್ನನ್ನು ಅಭಿಷೇಕ್ ತಡೆದರು. "ಹೇಳಿ ಡಾಕ್ಟರ್?"

"ನೀನು ಹಿಂದಿನ ಸಮಯಕ್ಕೆ ಪ್ರಯಾಣಿಸಲು, ನೀನು ಆ ಫೋಟೋದಲ್ಲಿ ಇರಲೇ ಬೇಕು. ಮತ್ತು ಆ ಫೋಟೋ ತೆಗೆದ ಸಮಯ ನೈಜ ಘಟನೆ ನಡೆದ ಸಮಯಕ್ಕೆ ಹೋಲಿಕೆಯಲ್ಲಿ ಇರಬೇಕು. ಹಾಗೆ ಆದಾಗ ಮಾತ್ರ ನಿನ್ನ ತಂದೆಯನ್ನು ಯಾರು ಹತ್ಯೆ ಮಾಡಿದ್ರು ಎಂಬುದು ತಿಳಿಯುತ್ತೆ."


Scene 2

​ನನ್ನ ಮನೆಯಲ್ಲಿರುವ ಟೆರೇಸ್ನಲ್ಲಿ ನಾನು ನಿಂತಿದ್ದೆ. ಇದು ಸರಿಯಾದ ಸಮಯ, ಸುಮಾರು ಸಂಜೆ 5 ಗಂಟೆ. ಆಕಾಶವು ತುಂಬಾ ಪ್ರಕಾಶಮಾನವಾಗಿದೆ, ತಂಗಾಳಿಯು ತುಂಬಾ ತಂಪಾಗಿದೆ. ಒಂದು ಕ್ಷಣ ನಾನೇಕೆ ಅಲ್ಲಿದ್ದೇನೆ ಎಂಬುದನ್ನೇ ಮರೆತುಬಿಟ್ಟೆ. ಒಂದು ವಾರದ ಹಿಂದೆ ನನ್ನ ತಂದೆಯ ಹತ್ಯೆಯಾದದ್ದು ಇದೇ ಸ್ಥಳದಲ್ಲಿ. ಪೊಲೀಸರು ನಿಮ್ಮ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೂ ನಾನು ನಂಬಿರಲಿಲ್ಲ. ಏಕೆಂದರೆ ಅವರು ತನ್ನನ್ನು ತಾನು ಕೊಂದುಕೊಳ್ಳುವಂತಹ ವ್ಯಕ್ತಿಗಳ ಸಾಲಿಗೆ ಸೇರಿದವರಾಗಿರಲಿಲ್ಲ. ಅವರು ಪ್ರಬಲವಾದ ತತ್ವಗಳು ಮತ್ತು ಮೌಲ್ಯಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡಂತಹ ವ್ಯಕ್ತಿ. ಅವರು ತಮ್ಮ ಬದುಕಿನಲ್ಲಿ ಬಂದಂತಹ ಕಷ್ಟಗಳನ್ನು ಎದುರಿಸಿದ್ದನ್ನು ನೋಡಿದ್ದೇನೆ. ಎಂದೂ ಕೂಡ ಅವರ ಕಣ್ಣಿನಲ್ಲಿ ಭಯವನ್ನು ಕಂಡವನಲ್ಲ. ಇಡೀ ವ್ಯಾಪಾರ ಸಾಮ್ರಾಜ್ಯ, ಮತ್ತು ವಿಶೇಷವಾಗಿ ನನ್ನ ತಾಯಿ ನಿಧನದ ನಂತರ ನನ್ನನ್ನು ಬೆಳೆಸುವುದು, ಅದು ಒಂದು ಸಾಮಾನ್ಯ ದುರ್ಬಲ ಹೃದಯದ, ಮನಸ್ಸಿನ ವ್ಯಕ್ತಿಯಿಂದ ಮಾಡಲಾಗುವುದಿಲ್ಲ.

ಡಾ. ಅಭಿಷೇಕ್ ನನ್ನ ತಂದೆಯ ಸಮೀಪದ ಸ್ನೇಹಿತರಲ್ಲಿ ಒಬ್ಬರು. ಅವರು ನನ್ನ ತಂದೆಯ ಮರಣದ ನಂತರ ನನ್ನನ್ನು ನೋಡಲು ಬಂದ್ದಿದ್ದರು. ನಾನು ಅವರ ಬಳಿ ತಂದೆಯ ಆತ್ಮಹತ್ಯೆ ಯ ಬಗ್ಗೆ ಸಂಶಯವಿರುವುದಾಗಿ ಹೇಳಿದಾಗ, ತಮ್ಮ ಕ್ಲಿನಿಕ್ ಗೆ ಬರಲು ಹೇಳಿದ್ದರು. ಆದರೆ ನೆನ್ನೆ ಅವರನ್ನು ಭೇಟಿಯಾಗಲು ಹೋದಾಗ ಅವರು ಹೇಳಿದ್ದು ಮಾತ್ರ ನಂಬಲರ್ಹವಾದದ್ದು ಅಲ್ಲ. ಆದರೆ ಎಲ್ಲಿ ಏನು ತಪ್ಪಾಗಿದೆ? ನಾನು ಇದರ ಬಗ್ಗೆ ತುಂಬಾ ಆಳವಾಗಿ ಯೋಚಿಸಬಹುದು. ಆದರೆ ಇದು ಯಾವ ಪಲಿತಾಂಶವನ್ನೂ ನೀಡದೆಂದು ನನಗೂ ತಿಳಿದಿದೆ. ನನ್ನ cameraವನ್ನು ಟೇಬಲಿನ ಮೇಲೆ ಇಟ್ಟು, ಟೆರೇಸ್ ಮೇಲೆ ಕುಳಿತುಕೊಂಡೆ. ಟೈಮರನ್ನು ನಾನು ಆಗಲೇ ಸೆಟ್ ಮಾಡಿ ಇಟ್ಟು ಬಂದಿದ್ದೆ. ಸರಿಯಾಗಿ ಸಮಯವನ್ನು ಹಿಡಿದಿಡುವ ಫೋಟೋವನ್ನು ಕೆಮೆರಾ ಕ್ಲಿಕ್ಕಿಸಿತ್ತು. ಆ ಚಿತ್ರ ನನ್ನ ತಂದೆಯ ಸಾವಿನ ರಹಸ್ಯವನ್ನು ಬಯಲುಮಾಡುವ ಆಸ್ತ್ರವಾಗಬಹುದೇ? ಎಲ್ಲದಕ್ಕೂ ಆ ಸಮಯವೇ ಉತ್ತರ ನೀಡಬೇಕು.

ನಾನು ನೇರವಾಗಿ ನನ್ನ ರೂಮಿಗೆ ಹೋಗಿ ಪ್ರೊಜೆಕ್ಟರ್ ಗೆ ಕೆಮೆರಾವನ್ನು ಸಿಕ್ಕಿಸಿದೆ. ನನ್ನ ಮಂಚದ ಮೇಲೆ ಕತ್ತಲಿನಲ್ಲಿ ಹೋಗಿ ಕುಳಿತುಕೊಂಡೆ. ನನ್ನ ಕಣ್ಣುಗಳು ಗೋಡೆಯಮೇಲೆ ಬೀಳುತ್ತ್ಟಿದ್ದ ನನ್ನ ಫೋಟೋ ಕಡೆಗೆ ಇತ್ತು. ಅದು ಕೇವಲ ನಾನು ಟೆರೇಸ್ ನ ಮೇಲೆ ಕುಳಿತುಕೊಂಡ ಚಿತ್ರ ಅಷ್ಟೇ. ಬಹಳ ಸಮಯದವರೆಗೂ ನಾನು ಅದನ್ನೇ, ಅರ್ಥಾಃತ್ ನನ್ನನ್ನೇ ನೋಡುತ್ತಾ ಕುಳಿತುಕೊಂಡೆ. ನನ್ನ ಮನಸ್ಸು ಇನ್ನೂ ಅನುಮಾನದಿಂದ ತುಂಬಿತ್ತು.

"ಇದು ಒಂದು ಮೂರ್ಖ ಕಲ್ಪನೆ", ನಾನು ಮತ್ತೊಮ್ಮೆ ಯೋಚಿಸಿದೆ.

ಚಿತ್ರವನ್ನು ನೋಡುವುದನ್ನು ಹೊರತುಪಡಿಸಿ ಏನು ಮಾಡಬೇಕೆಂದು ನನಗೆ ತಿಳಿದಿರಲಿಲ್ಲ. ಅದು ಕೇವಲ ನನ್ನ ಫೋಟೋ. ನನ್ನ ತಂದೆ, ಅಥವಾ ಬೇರೆ ಯಾರನ್ನೂ ನಾನು ನೋಡಲಿಲ್ಲ. ಅವರ ಕೊಲೆಯಾದ ನನ್ನ ಸಿದ್ಧಾಂತದ ಬಗ್ಗೆ ನಾನು ಯೋಚಿಸಲಾರಂಭಿಸಿದೆ. ನಾನು ಅವರ ಸಾವಿನ ಬಗ್ಗೆಯೇ ಯೋಚಿಸುತ್ತಾ, ಸುಮ್ಮನೆ ಆ ಫೋಟೋವನ್ನೇ ಧಿಟ್ಟಿಸಿ ನೋಡುತ್ತಿದ್ದೆ. ನನ್ನ ಕಣ್ಣುಗಳಲ್ಲಿ ನೀರು ತುಂಬಿಕೊಂಡಿದ್ದವು, ನನ್ನ ದೇಹ ನಿಧಾನವಾಗಿ ಕಂಪಿಸಿತು, ತಲೆ ತಿರುಗುವಂತಾಯಿತು. ನನ್ನ ತಂದೆಯ ಬಗ್ಗೆ, ಅವರ ಜೊತೆ ಕಳೆದ ಸಮಯದ ಬಗ್ಗೆ, ಅವರು ನನಗೆ ನೀಡಿದ ಜೀವನದ ಬಗ್ಗೆ, ಅವರ ಸಾವಿನ ಸುದ್ದಿ ಕೇಳಿದ ಸಮಯ, ಮೊದಲ ಬಾರಿ ಅವರ ಜೀವವಿಲ್ಲದ ದೇಹವನ್ನು ನೋಡಿದ ಕ್ಷಣ, ನೋವಿನಿಂದ ನಿಶ್ಚೇಷ್ಟನಾಗಿದ್ದ ಬಗ್ಗೆ ಯೋಚಿಸುತ್ತಿದ್ದೆ.

ಕಣ್ಣುಗಳಿಂದ ನೀರು ಧಾರಾಕಾರವಾಗಿ ಕೆನ್ನೆಯ ಮೇಲೆ ಜಾರತೊಡಗಿತು. ನಾನೂ ಕೂಡ ಈಗಲೇ ಸಾಯುತ್ತಿದ್ದೇನೆ ಎನ್ನುವಂತಹ ಭಾವನೆ ಬರತೊಡಗಿತು. ಇದ್ದಕ್ಕಿಂದ್ದಂತೆಯೇ ಗಾಳಿಯಲ್ಲಿ ನನ್ನ ದೇಹ ತೇಲುತ್ತಿರುವಂತೆ ಬಾಸವಾಯಿತು, ನನ್ನ ಕಾಲುಗಳು ನೆಲದ ಮೇಲೆಯೇ ಇರುವುದು ನನಗೆ ಕಾಣುತ್ತಿತ್ತು. ನನ್ನ ತಲೆಯಲ್ಲಿ ಆ ಕಿರುಚುವಿಕೆ ಕೇಳಿಸತೊಡಗಿತು. ಅದು ನನ್ನದೇ ದ್ವನಿ. ಹೌದು, ನಾನು ನನ್ನ ಸ್ವರವನ್ನು ದೂರದಲ್ಲಿ ಎಲ್ಲೋ ಕೇಳುತ್ತಿದ್ದೇನೆ. ನನ್ನ ಕಣ್ಣಿಗೆ ಕಾಣುತ್ತಿರುವುದು; ನನ್ನ ತಂದೆಯ ದೇಹ, ಆತನ ನಿಶ್ಚಲವಾದ ದೇಹ, ಮತ್ತು ಕೊಲೆಗಾರ. ಸ್ವಲ್ಪ ಸಮಯ ಕಣ್ಣಿಗೆ ಕತ್ತಲು ಕಟ್ಟಿದಂತಾಯಿತು.

ನನಗೆ ಸಾಯಬೇಕೆಂದು ಎನ್ನಿಸುತ್ತಿದೆ. ಉಸಿರುಗಟ್ಟುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನನಗೆ ಉಸಿರಾಡಲು ಆಗುತ್ತಿಲ್ಲ. ದೂರದಲ್ಲಿನ ದೀಪಗಳ ಮಿನುಗುವಿಕೆ ನನಗೆ ಹುಚ್ಚು ಹಿಡಿಯುವಂತೆ ಮಾಡುತ್ತಿವೆ. ನಾನು ಇದನ್ನೆಲ್ಲಾ ನಿಲ್ಲಿಸಲು ಸಾಧ್ಯವಾಗಿದ್ದರೆ ಎಂದು ಒಮ್ಮೆ ಮನಸ್ಸಿನಲ್ಲಿ ಬಂದರೂ ನಾನು ಏನೂ ಮಾಡಲಾರೆ. ಇಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿದಿದ್ದರೆ ನಿಲ್ಲಿಸಬಹುದಿತ್ತೇನೋ.

ನನ್ನ ಮುಂದೆ ಇದ್ದ ಬಾಗಿಲು ಕಿರ್ರೆಂದು ಶಬ್ದ ಮಾಡುತ್ತಾ ತೆರೆದುಕೊಂಡಿತ್ತು. Wait, ಅಲ್ಲಿ ಒಂದು ಬಾಗಿಲು ಇದೆ ಎಂದು ನನಗೆ ಗೊತ್ತಾಗಿದ್ದು ಆಗಲೇ. ಹಾಗಾದ್ರೆ ಎಲ್ಲಿದ್ದೇನೆ ನಾನು? Where the hell am I? ಏನಾಗುತ್ತಿದೆ ಎಂದು ತಿಳಿಯಲು ನಾನು ಎದ್ದು ನಿಲ್ಲಲು ಪ್ರಯತ್ನಿಸಿದೆ. ಆಗಲೇ ಅರಿವಾದದ್ದು ನಾನು ತೇಲುತ್ತಿದ್ದೇನೆ ಎಂದು, ಗಾಳಿಯಲ್ಲಲ್ಲ, ನೀರಿನಲ್ಲಿ. ನಾನು ಈಜಲಾರಂಭಿಸಿದೆ. ಸೂರ್ಯನ ಶಾಖ ಶಕ್ತಿಯ ಎದುರು ಹೆಚ್ಚು ಸಮಯ ಹೊಡೆದಾಡಲು ನನ್ನಿಂದ ಆಗದು ಎಂದೆನಿಸಿತು. ನನ್ನೆದುರು ಇದ್ದ ಆ ಬಾಗಿಲು ಇನ್ನೂ ತೆರೆದೇ ಇತ್ತು. ಮೇ ಬಿ ನನಗೆ ಬೇಕಿದ್ದ ಉತ್ತರಗಳು ಅದರ ಹಿಂದೆ ಇರಬಹುದೇ?

ಶುಭ್ರಾಕಾಶದ ಕೆಳಗೆ ನಾನು ಶಕ್ತಿ ಮೀರಿ ಈಜುತ್ತಿದ್ದೆ, ಪ್ರವಾಹಕ್ಕೆದುರಾಗಿ ಏನೂ ಅಲ್ಲ, ಅದು ನಿಂತ ನೀರಿನ ಕೆರೆ. ತಂಪಾದ ಗಾಳಿ ಬೀಸುತ್ತಿತ್ತು. ಆದರೆ ಬಿಸಿಲಿನ ಜಳ ಇದ್ದೇ ಇತ್ತು. ಮುಸ್ಸಂಜೆಯು ತನ್ನ ಸೌಂದರ್ಯದ ಪರಾಕಾಷ್ಟೆಯನ್ನು ತೋರಲು ಸಿದ್ದವಾಗುತ್ತಿತ್ತು. ನಾನು ಕ್ಷಣದಿಂದ ಕ್ಷಣಕ್ಕೆ ಬಲಹೀನಗೊಳ್ಳುತ್ತಾ ಸಾಗಿದ್ದೆ.

ಅನಿರ್ಧಿಷ್ಟ ಸಮಯದ ಈಜುವಿಕೆಯ ಬಳಿಕ ಆ ದ್ವಾರವನ್ನು ತಲುಪಿದ್ದೆ. ನನ್ನ ಬಟ್ಟೆಯೆಲ್ಲಾ ಒದ್ದೆಯಾಗಿ ಹೋಗಿತ್ತು. ಬೆವರಿನ ವಾಸನೆ ಮೂಗಿಗೆ ಬಡಿಯುತ್ತಿತ್ತು. How’s the hell this possible? ಬಾಗಿಲು ಅಗಲವಾಗಿ ತೆರೆದುಕೊಂಡಿತ್ತು, ನನ್ನನ್ನು ಯಾರಾದರೂ ಆಹ್ವಾನಿಸುತ್ತಿದ್ದಾರೆಯೇ? ನಾನು ಅದರ ಮೂಲಕ ಒಳನಡೆದರೆ ನನಗೆ ಕಂಡಿದ್ದೇನು? ನನ್ನದೇ ಮನೆಯ ಟೆರೇಸ್. ಇದು ತುಂಬಾ ವಿಚಿತ್ರ. ಯಾರೋ ಸ್ವಲ್ಪ ದೂರದಲ್ಲಿ ನಿಂತಿದ್ದರು. ಆಕೃತಿ ಮಾತ್ರ ಕಾಣುತ್ತಿತ್ತು. ಯಾರೆಂದು ತಿಳಿಯಲಿಲ್ಲ. So I went ahead. ನಾನು ಆ ಕಡೆಗೆ ನಿಧಾನವಾಗಿ ಹೆಜ್ಜೆ ಹಾಕಿದೆ. It was my father..!

ಹಾ.. ನನಗೆ ಇದನ್ನು ನಂಬೋದಕ್ಕೇ ಆಗ್ತಾ ಇಲ್ಲ. ಅವರು.. ಅವರು ಇಲ್ಲಿದ್ದಾರೆ. ಜೀವಂತವಾಗಿದ್ದಾರೆ. ನನಗೆ ಭಾವನೆಗಳನ್ನು ಹತ್ತಿಕ್ಕಿಕೊಳ್ಳುವ ಶಕ್ತಿ ಇಲ್ಲ. ಆದ್ದರಿಂದ ಅವರಿದ್ದ ಕಡೆಗೆ ವೇಗವಾಗಿ ಓಡಲು ಮೊದಲು ಮಾಡಿದೆ. ಆದರೆ ಇದ್ದಕ್ಕಿದ್ದಂತೆ ಯಾವುದೋ ಒಂದು ಭೀಕರ ಶಕ್ತಿ, ಕಾಣದ ಕೈಯೊಂದು ನನ್ನನ್ನು ಎತ್ತಿ ಹಿಂದಕ್ಕೆ ಎಸೆಯಿತು. ಹೇಗೋ ಮತ್ತೆ ಎದ್ದು ಓಡಲಾರಂಭಿಸಿದೆ. ಮತ್ತೆ ಮೊದಲಿನಂತೆ ಅದೃಶ್ಯ ಶಕ್ತಿ ನನ್ನನ್ನು ಇನ್ನೂ ಹಿಂದಕ್ಕೆ ಹಾಕಿತು. ಈ ಭಾರೀ ನನ್ನ ಮೂಗಿನಿಂದ ರಕ್ತ ಚಿಮ್ಮಿ ಬಂತು. ಅದರ ಕಡೆಗೆಲ್ಲಾ ಗಮನ ಹರಿಸುವಷ್ಟು ತಾಳ್ಮೆ ಇರಲಿಲ್ಲ. ನನ್ನ ತಂದೆ ಬಹಳ ದೂರದಲ್ಲಿದ್ಡ್ಡರು. ಅವರ ನೋಟ ಟೆರೇಸ್ ನ ನೆಲದ ಕಡೆಗಿತ್ತು. ಅವರು ಯಾವುದೋ ವಿಷಯದ ಸಲುವಾಗಿ ಚಿಂತಿತರಾಗಿದ್ದಂತೆ ಕಂಡುಬಂದರು. ನಾನು ಮತ್ತೊಮ್ಮೆ ಅವರಿದ್ದ ಸ್ಥಳವನ್ನು ತಲುಪಲು ಹವಣಿಸಿದೆ. ಒಂದು ಭಾರೀ, ಒಂದೇ ಒಂದು ಭಾರೀ ಅವರನ್ನು ಸ್ಪರ್ಶಿಸಲು, ಅವರ ಅಪ್ಪುಗೆಯನ್ನು ಪಡೆಯಲು ನನ್ನ ಮನಸ್ಸು ಹಪಹಪಿಸುತ್ತಿತ್ತು.

ಉಫ್, ಅಂತೂ ನನ್ನ ತಂದೆಯ ಬಳಿ ತಲುಪಿದ್ದೆ. ಒಮ್ಮೆ ಧೀರ್ಘವಾಗಿ ಉಸಿರೆಳೆದುಕೊಂಡು ಅವರ ಹೆಗಲ ಮೇಲೆ ಕೈಯಿಡಲು ಹೋದೆ. ಅಷ್ಟೇ, ನಾನು ಮತ್ತೊಮ್ಮೆ ಆ ನಿಗೂಢ ಶಕ್ತಿಯ ಹೊಡೆತಕ್ಕೆ ಸಿಲುಕಿದ್ದೆ. ಆದರೆ ಈ ಭಾರಿಯ ಹೊಡೆತದ ತೀವ್ರತೆಗೆ ಟೆರೆಸ್‌ನ ನೆಲ ಬಿರುಕು ಬಿಟ್ಟಿತ್ತು..! ನನ್ನ ಕಣ್ಣುಗಳಲ್ಲಿ ನಕ್ಷತ್ರಗಳು ಪ್ರತ್ಯಕ್ಷವಾಗತೊಡಗಿತು. ನನ್ನೆದುರಿನದೆಲ್ಲವೂ ಸ್ಪಷ್ಟತೆಯನ್ನು ಒಮ್ಮೆ ಕಳೆದುಕೊಳ್ಳುವುದು, ಮತ್ತೆ ಪಡೆದುಕೊಳ್ಳುವುದು ಆಗುತ್ತಿತ್ತು. ಈ ಉನ್ಮಾದದಲ್ಲಿಯೂ ಕೂಡ ನನ್ನ ತಂದೆ ಯಾರೊಂದಿಗೋ ಮಾತನಾಡುವುದನ್ನು ನೋಡಿದೆ. Wait, ಯಾರು ಆ ವ್ಯಕ್ತಿ? ಅವರಿಬ್ಬರೂ ವಾದ ಮಾಡುವಲ್ಲಿ ನಿರತರಾಗಿದ್ದರು. ನನ್ನ ತಂದೆಯ ಕೋಪ ಅವರ ಮುಖದಲ್ಲಿ ಕಾಣುತ್ತಿತ್ತು. ನನ್ನ ಇರುವಿಕೆ ಅವರ ಗಮನಕ್ಕೆ ಬರಲಿಲ್ಲವೇನೋ ಎಂದುಕೊಂಡೆ. ಆ ಅನಾಮಿಕ ವ್ಯಕ್ತಿ ನನ್ನ ತಂದೆಯ ತೋಳನ್ನು ಹಿಡಿದು ಟೆರೇಸಿನ ತೆರೆದ ಬಾಗದ ತುತ್ತತುದಿಗೆ ಕರೆದು ತಂದಾಗ ನನ್ನ ಹೃದಯ ಬಡಿತ ದ್ವಿಗುಣಗೊಂಡಿತ್ತು. ನನ್ನ ತಂದೆಯನ್ನು ಉಳಿಸಲು ಪ್ರಯತ್ನಪಡಬೇಕೆಂದು ಹೆಜ್ಜೆ ಎತ್ತಿದ್ದೆ ಅಷ್ಟೇ ಮಹಡಿಯಲ್ಲುಂಟಾಗಿದ್ದ ಬಿರುಕು ಇನ್ನೂ ಅಗಲವಾಗುತ್ತಾ ಸಾಗಿತು. ಯಾವುದೇ ಕ್ಷಣದಲ್ಲಿ ಕೂಡ ಕೂಡ ನಾನು ಕೆಳಗೆ ಬೀಳಬಹುದು. ಅದರ ಬಗ್ಗೆ ನನಗೆ ಚಿಂತೆ ಇಲ್ಲ. ಆದರೆ ನನ್ನ ತಂದೆಯ ಕೊಲೆಯನ್ನು ಮಾಡಿದ ಆ ವ್ಯಕ್ತಿಯ ಮುಖವನ್ನು ಮಾತ್ರ ನೋಡುವಂತಾದರೆ ಸಾಕು. ಕಣ್ಣು ಮಿಟುಕಿಸುವುದರೊಳಗೆ ಆ ಅಪರಿಚಿತ ವ್ಯಕ್ತಿ ನನ್ನ ತಂದೆಯನ್ನು ಬಲವಾಗಿ ತಳ್ಳಿತ್ತು. ಅವರು ಕಿರುಚುತ್ತಾ ಗಾಳಿಯಲ್ಲಿ ಕೆಳಗೆ ಕೆಳಗೆ ಹೋಗುತ್ತಿದ್ದಾರೆ. ಓಹ್, ನನ್ನ ದೃಷ್ಟಿಯಿಂದ ಮರೆಯಾಗಿ ಹೋದರು.

ನನ್ನ ತಂದೆಯನ್ನು ಹತ್ಯೆಗೈದ ಆ ಅನಾಮಿಕ ವ್ಯಕ್ತಿಯತ್ತ ನೋಡುತ್ತಿದ್ದೆ. ಕೊನೆಗೂ ಬಿರುಕು ಬಿಟ್ಟಿದ್ದ ಟೆರೇಸಿನ ನೆಲ ನನ್ನ ತೂಕವನ್ನು ತಡೆದುಕೊಳ್ಳಲಿಲ್ಲ. ಈ ಜಗತ್ತು ಕೊನೆಗೊಳ್ಳುವ ಸಮಯ, ಡೂಮ್ಸ್ ಡೇಯ ಭಾಸವಾಯಿತು. ಗುರುತ್ವಾಕರ್ಷಣೆ ತನ್ನ ಕೆಲಸವನ್ನು ಮಾಡಿತು. ನಾನು ಬೀಳುತ್ತಿದ್ದೆ. ಯಾವುದೇ ಹಿಡಿದಿಡುವ ಶಕ್ತಿಯಿಲ್ಲದೆ ಗಾಳಿಯಲ್ಲಿ ಬಲಹೀನ ವಸ್ತುವಿನಂತೆ ಜಾರಿಹೋಗುತ್ತಿದ್ದೆ, ಆ ಅಪರಿಚಿತ ವ್ಯಕ್ತಿಯಿಂದ ದೂರ ದೂರ ಸರಿದು. ಆದರೆ ಬೀಳುವ ಕೊನೆಯ ಕ್ಷಣದಲ್ಲಿ ಆ ವ್ಯಕ್ತಿಯ ಮುಖವನ್ನು ನೋಡಿದ್ದೆ. ಆಹ್.. ಆ ಕ್ರೂರ ಕೊಲೆಗಡುಕ ಕಣ್ಣುಗಳು. ಅವುಗಳನ್ನು ಮತ್ತೊಮ್ಮೆ ನೋಡಲು ನನ್ನಿಂದ ಸಾಧ್ಯವಿಲ್ಲ. ಈಗ ನನ್ನಲ್ಲಿ ಕಿಂಚಿತ್ತೂ ಸಂಶಯ ಉಳಿದಿಲ್ಲ. ಪಕ್ಕದ ಕಟ್ಟಡದ ಗಾಜಿನ ಗೋಡೆಯ ಮೇಲೆ ಆ ವ್ಯಕ್ತಿಯ ಬಿಂಬ, ಉಫ್... ಇಟ್ಸ್ ಮೈ ರಿಫ್ಲೆಕ್ಶನ್ ಕಂಡಿತು. ಅನಂತದೆಡೆಗೆ ಬೀಳುತ್ತ್ತಿರುವ ನನ್ನನ್ನು ಬಿಟ್ಟು ಆ ಮತ್ತೊಂದು 'ನಾನು' ಬೇರೆಡೆಗೆ ತಿರುಗಿತು. ನಾನು ತಳವಿಲ್ಲದ ಕತ್ತಲೆಯ ಕೂಪಕ್ಕೆ ಬೀಳುತ್ತಾ ಸಾಗಿದ್ದೆ.

Scene 3

Next Day... Morning 9AM

“ಸಾರ್..?”

“Hi ಸಂಚಿತಾ. ಯಾಕೆ ನನ್ನನ್ನು ಬರಹೇಳಿದ್ದು?”, ಎಂದು ಇನ್ಸ್‌ಪೆಕ್ಟರ್ ಮೋಹನ್ ನಗುತ್ತಾ ಹೇಳಿದರು.

“ನಾನು ನಿಮಗೆ ಏನೋ ಹೇಳಲಿಕ್ಕಿದೆ. I have something..”

“ಓಹ್. ನಾನು ನಿಮಗೆ ಎಷ್ಟು ಸಾರಿ ಹೇಳಿದ್ದೀನಿ? ನಿಮ್ಮ ತಂದೆ..your father committed suicide. Believe me.”, ನಾನು ಮತ್ತೆ ಅದೇ ಹಳೆಯ ರಾಗ ತೆಗೆದಾಗ ತಾಳ್ಮೆಗೆಟ್ಟು ಹೇಳಿದರು.

“I have a confession to make. ಅವ್ರದ್ದು ಸೂಸೈಡ್ ಅಲ್ಲ. ಮರ್ಡರ್. ನಾನೇ ಕೊಂದಿದ್ದು. ನನ್ನ ಮನೆಯ ಮಹಡಿಯಿಂದ ತಳ್ಳಿ ಕೊಂದಿದ್ದು ನಾನೇ. ಯಾಕೆ.....?”, ಎಂದು ಇನ್‌ಸ್ಪೆಕ್ಟರ್ ಎದುರು ಕಿರುಚಿದೆ. ನನ್ನ ಬಳಿ ಉತ್ತರವಿಲ್ಲ.

The End