Cover Image

Circle

ಗಡಿಯಾರದ ಚಿಕ್ಕ ಮುಳ್ಳು ೧೨ನ್ನು ದಾಟಿ ೧ರತ್ತ ಧಾಪುಗಾಲಿಡುತ್ತಿತ್ತು. ಅವಳು ತನ್ನ ಅಪಾರ್ಟ್‌ಮೆಂಟ್‌ನ ಟೆರೇಸ್ನ ತುತ್ತತುದಿಯಲ್ಲಿ ಕತ್ತಲಿನಲ್ಲಿ ಕರಗಿ ಲೀನವಾಗಿ ನಿಂತಿದ್ದಾಳೆ. 'u r a cheater. esht life na haal madiddiya? its enough. get outta my lyf' - ವಾತ್ಸಾಪ್ನಲ್ಲಿ ಇದ್ದ ಆ ಸಂದೇಶವನ್ನೇ ಮತ್ತೆ ಮತ್ತೆ ಓದಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.

Cover Image

ಏನೆಂದು ಹೆಸರಿಡಲಿ

"ಎಂದೆಂದಿಗೂ ನಿನ್ನ ನೆನಪುಗಳು ನಮ್ಮೊಂದಿಗೆ" ನನ್ನೆದುರು ಇದ್ದ ಗೋರಿಕಲ್ಲಿನ ಮೇಲೆ ಕೆತ್ತಲ್ಪಟ್ಟಿತ್ತು. ಅಂತ್ಯಸಂಸ್ಕಾರ ಮುಗಿದು ಗಂಟೆಗಳೇ ಕಳೆದು ಹೋಗಿದ್ದರೂ ನಾನಿನ್ನೂ ಮನೆಗೆ ಮರಳದೇ ಅಲ್ಲೇ ನಿಂತಿದ್ದೆ. ನೀನು ನನಗೆ ತುಂಬಾನೇ ಸ್ಪೆಶಲ್. ನೀನೇ ತಾನೇ ನನಗೆ ಲೈಫ್ ಅಂದ್ರೆ ಏನು ಅಂತ realize ಆಗೋ ಹಾಗೆ ಮಾಡಿದ್ದು. ಈ ಪ್ರಪಂಚ ಮೇಲಿನಿಂದ ನೋಡೋಕೆ ಮಾತ್ರ ಬಣ್ಣದ ಬುಗರಿ. ಆದ್ರೆ ಇಂದೊಂದು ಕತ್ತಲೆಯ ಕೂಪ. ಅದರಲ್ಲಿ ನೀನು ಒಮ್ಮೆ ಬೀಳತೊಡಗಿದೆ. ಯಾರು ನಿನ್ನ ಸಹಾಯಕ್ಕೆ ಬರಲಿಲ್ಲ. ಎಲ್ಲರೂ ಸುಮ್ಮನೆ ನೋಡುತ್ತಾ ನಿಲ್ಲುವವರೇ. ನೀನು ಆ ಕಂದಕಕ್ಕೆ ಹಾರಿದೆ. ನೀನು ನನ್ನನು ಕೈಹಿಡಿದು ಎತ್ತಲು ನೋಡಿದೆ. ಸಾಧ್ಯವಾಗಲಿಲ್ಲ. ಉಫ್... ನೀನು ನೆಲವನ್ನು ತಲುಪಿದೆ. But ನಾನು ಬೀಳುತ್ತಲೇ ಇದ್ದೇನೆ.

Cover Image

ಹೃದಯ ಹಾಳಾಗಿದೆ

ಹೇಗೆ ಪ್ರಾರಂಭಿಸಬೇಕು ಅಂತಾನೆ ತಿಳೀತಿಲ್ಲ. ಆದ್ರೂ ಇವತ್ತು ನಿನಗೆ ಹೇಳ್ಬೇಕಾದದ್ದು ತುಂಬಾ ಇದೆ. ನಮ್ಮ ಸ್ನೇಹಕ್ಕೆ ಹತ್ತು ವರ್ಷಕ್ಕಿಂತ ಜಾಸ್ತಿ ವಯಸ್ಸಾದರೂ ನಮಗೆ ನಾವೇ friends ಅಂತ ಹೇಳಿಕೊಂಡು ದಶಕವಾಯಿತು ಅಷ್ಟೇ. ನಾವಿಬ್ಬರೂ ಯಾವಾಗ್ಲೂ ಜಗಳ ಮಾಡ್ತಾನೇ ಇದ್ರು ಅದು ಯಾವತ್ತೂ serious ಅಂತ ಹೇಳೋ ಮಟ್ಟಕ್ಕೆ ಹೋಗಿಲ್ಲ.

Cover Image

The Last Secret of A Merchant

ಹರಿ ಎಂದಿನಂತೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಮನೆಯಿಂದ ಹೊರ ನಡೆದಾಗ ಬೆಳಗಿನ ಸೂರ್ಯನ ಕಿರಣ ಚರಕಪುರವನ್ನು ಇನ್ನೂ ಸಂಪೂರ್ಣವಾಗಿ ಆವರಿಸಿರಲಿಲ್ಲ. ಅವನ ಕ್ರಮಬದ್ಧ ಜೀವನದಲ್ಲಿ ಅನಿರೀಕ್ಷಿತ ತಿರುವು ಕಾದಿತ್ತು. ತಿಳಿನೀರಿನ ಆಳದಲ್ಲಿ ಕಪ್ಪನೆಯ ಆಕೃತಿಯೊಂದು ಅಲುಗಾಡದೆ ಮಲಗಿತ್ತು. ಆ ಕತ್ತಲೆಯ ಆಕೃತಿ ಯಾರು? ಅದು ಅಲ್ಲಿ ಏಕೆ ಕಾಯುತ್ತಿದೆ? ಮತ್ತು ಮುಖ್ಯವಾಗಿ, ಅದಕ್ಕೂ ಈತನಿಗೂ ಏನಾದರೂ ಸಂಬಂಧವಿದೆಯೇ?

... ಈ ಹತ್ಯೆಯನ್ನು ಬೇಧಿಸಲು ಮತ್ತೆ ಬಂದಿದ್ದಾರೆ ಸರಳಾಕ್ಷ ಹುಲಿಮೀಸೆ ಮತ್ತು ಇನ್ಸ್ಪೆಕ್ಟರ್ ಗೋಪಾಲಾಚಾರ್ಯ.

Cover Image

Love Triangle

ಹಲವರು ಸೋಲ್ತಾರೆ, ಕೆಲವರು ಗೆಲ್ತಾರೆ... ಒಬ್ಬರಿಗೇ ಇಬ್ಬಿಬ್ಬರು ಲೈನ್ ಹೊಡೀತಾರೆ... ಸ್ನೇಹ.. ದ್ವೇಷಕ್ಕೆ ತಿರುಗುತ್ತೆ... ಮತ್ತೊಬ್ಬರ ಗೆಲುವು ಇನ್ನೊಂದು ಮನಸ್ಸಿಗೆ ಏಟು ಕೊಡುತ್ತೆ... ಕೊನೆಯಲ್ಲಿ ಅಂತ್ಯ ಹೇಗೆ ಇರುತ್ತೆ..?

Cover Image

ಮಳೆಯಲಿ... ಜೊತೆಯಲಿ...

ಮಲೆನಾಡಿನ ಮಡಿಲ್ಲಲಿರುವ ಒಂದು ಊರು. ಮಳೆಗಾಲದ ಸಮಯ. ತಿಂಗಳಿನಿಂದ ಸುರಿಯುತ್ತಿದ್ದ ಕುಂಭಧ್ರೋಣ ಮಳೆ ನಾಲ್ಕೈದು ದಿನಗಳಿಂದ ಸ್ವಲ್ಪ ಕಡಿಮೆಯಾಗಿತ್ತು. ಆದರೂ ಮೋಡಗಳು ಮಾತ್ರ ಆಗಸದಲ್ಲಿ ಈಜಾಡಿಕೊಂಡೇ ಇದ್ದವು. ಸಂಜೆ ನಾಲ್ಕಕ್ಕೇ ಆರು ಗಂಟೆಯಾದಂತೆ ತೋರುತ್ತಿತ್ತು.

Cover Image

Never Again

"Amrutha.. I think you need a hug.", Vijay consoled sobbing Amrutha. Suddenly she hugged him tightly. He has no words to say. But he can only make her feel comfort. Even in the middle of crowd she is flying in dreamworld.. Because of him. But they don't know that something big coming to end everything... and lead to a big devastating turn in life so that they'll never meet again..."

Cover Image

He's Waiting... ನಿನಗಾಗಿ

ಎಂಟು ವರ್ಷಗಳ ಅವನ ನಿರೀಕ್ಷೆ ಸುಳ್ಳಾಗಲಲಿಲ್ಲ. ಅವನನ್ನು ನೋಡಲು ಅವಳು ಬರುತ್ತಿದ್ದಾಳೆ. ಇವನ ಸಂತೋಷವನ್ನು ಅಳೆಯಲು ಮಾಪನಗಳೇ ಇರಲಿಲ್ಲ. ಮಾತನಾಡಲು ಸಾವಿರಾರು ವಿಷಯಗಳಿದ್ದರೂ ಸ್ವರವೇ ಹೊರಡಲಿಲ್ಲ. ಅವಳನ್ನೇ ಧಿಟ್ಟಿಸಿ ನೋಡುತ್ತಿದ್ದ ಆದಿತ್ಯ. ​ಕೈಯಲ್ಲಿ ಚೆಂಗುಲಾಬಿಯನ್ನು ಹಿಡಿದು ನಿಂತಿದ್ದ ಅವಳನ್ನೇ ನೋಡುತ್ತಿದ್ದಾನೆ. ಅವಳು ಮತ್ತೆ ಬಂದಿದ್ದಾಳೆ.

Cover Image

ಪ್ರೀತಿ ಅನಿರೀಕ್ಷಿತ

ಸುಂದರ ಹೂತೋಟದ ಮೂಲೆಯಲ್ಲೊಂದು ಶತಮಾನಗಳಿಂದ ಬೆಳೆದು ನಿಂತಿರುವ ದೊಡ್ಡದೊಂದು ಮಾವಿನ ಮರ. ಮರದ ಕೆಳಗೆ ದಶಕಗಳ ಹಿಂದೆ ಮಾಡಿದ ಒಂದು ಕಲ್ಲಿನ ಬೆಂಚು. ಮಳೆಗಾಲದಲ್ಲಿ ಪಾಚಿಗಟ್ಟಿದ್ದ ಕುರುಹುಗಳು ಈಗಲೂ ಗೋಚರಿಸುತ್ತಿವೆ. ಅದರ ಮೇಲೆ ಅವಳು ಕುಳಿತಿದ್ದಾಳೆ, ಕೃಶಗೊಂಡಿರುವ ದೇಹ, ಇಂಗಿ ಹೋಗಿರುವ ಕಣ್ಣುಗಳು, ಬಣ್ಣ ಮಾಸಿದ ಸೀರೆ. ಹೌದು. ಅದು ಅವಳೇ. ಶ್ವೇತಾ ರಾವ್ ಮೊಣಕಾಲುಗಳ ಮೇಲೆ ಗಲ್ಲವಿಟ್ಟುಕೊಂಡು ಶೂನ್ಯ ನೋಟ ಬೀರುತ್ತಾ ಏನನ್ನೋ ಗಾಢವಾಗಿ ಯೋಚಿಸುತ್ತಾ ಕುಳಿತಿದ್ದಾಳೆ. ಅನಿರೀಕ್ಷಿತ ಪ್ರೇಮ ಕಥೆ; ಅವಳ ಜೀವನದ ವಿಚಿತ್ರ ವ್ಯಥೆ. ಅದು ಅವಳದೇ LOVE STORY.

Cover Image

Tears of a Martyr

ರಘು ತನ್ನ ತಲೆಯನ್ನು ಎತ್ತಲು ಹೆಣಗಾಡಿದ. ಆದರೆ ಮೂರು ಗುಂಡುಗಳನ್ನು ಹಿಡಿದಿಟ್ಟುಕೊಂಡಿದ್ದ ದೇಹ ಅವನಿಗೆ ಸಹಕರಿಸುವ ಸ್ಥಿತಿಯಲ್ಲಿರಲಿಲ್ಲ. ಕತ್ತಲೆ ತುಂಬಿದ ಕಣ್ಣುಗಳು ಕಾಲಘಟ್ಟದಲ್ಲಿ ಹಿಂದಕ್ಕೆ ಕೊಂಡೊಯ್ದವು. ಯುದ್ಧಭೂಮಿಯಲ್ಲಿ ಮಲಗಿ ನೋವುಣ್ಣುತ್ತಿದ್ದರೂ ದೂರದ ಕರುನಾಡಿನಲ್ಲಿ, ಮನೆಯ ಅಂಗಳದಲ್ಲಿ ನಿಂತಿದ್ದ ತಾಯಿಯ ನೆನಪು ತುಟಿಯ ಮೇಲೆ ನಗುವನ್ನು ತರಿಸಿತ್ತು. ನೆನಪಿನ ಮಸುಕಾದ ಹಾದಿಯಲ್ಲಿ ಯೋಚನೆ ಸಾಗಿತ್ತು. ಮುಚ್ಚಿದ ಕಣ್ಣುಗಳಲ್ಲಿ ರಚಿತವಾಗುತ್ತಿದ್ದ ಚಿತ್ರ ನಿಧಾನವಾಗಿ ನೈಜತೆಗೆ ತಿರುಗುತ್ತಿತ್ತು. ತನ್ನ ತಾಯಿಯ ಮುಗ್ದತೆ, ಪ್ರೀತಿ, ಅಕ್ಕರೆ ಮತ್ತು ಕಾಳಜಿಯನ್ನು ಮತ್ತೆ ಅನುಭವಿಸಲು ಸಮಯದಲ್ಲಿ ಭೂತದತ್ತ ಸಾಗಿದನು.

Cover Image

The Burning Desires

“Kill him now… Now or never…!!! ಇದೇ ನಿನ್ನ ನಾಶವಾದ ಬದುಕಿಗೆ ಏಕೈಕ ನ್ಯಾಯಯುತ ಪರಿಹಾರ.” - ಮತ್ತೆ ಮತ್ತೆ ತಲೆಯೊಳಗೆ ಪ್ರತಿಧ್ವನಿಸುತ್ತಿರುವ ವಾಕ್ಯ. ಮುಗ್ದಮುಖದ ಸ್ವಾತಿ ಅಡುಗೆ ಕೋಣೆಯಿಂದ ಹೊರಬಂದಳು. ಕೈಯಲ್ಲಿ ಹಿಡಿದ ಚಾಕುವಿನ ಮೊನಚು ಕೆಂಪು ಬಣ್ಣದ ದೀಪದಲ್ಲಿ ಹೊಳೆಯುತ್ತಿತ್ತು. ಕೋಣೆಯಲ್ಲಿ ಮಂಚದ ಮೇಲೆ ಅಂಗಾತವಾಗಿ ಸುಸ್ತಾಗಿ ಮಲಗಿದ್ದ ವ್ಯಕ್ತಿಯತ್ತ ಹೆಜ಼್ಜ಼ೆ ಹಾಕಿದಳು.

Cover Image

The Gentleman

ಹುಟ್ಟುತ್ತಾ ಎಲ್ಲರೂ ಸಾಮಾನ್ಯರಾಗಿಯೇ ಹುಟ್ಟುತ್ತಾರೆ. ಆದರೆ ನಂತರ ಮರೆಯಲಾರದ ಇತಿಹಾಸ ಸೃಷ್ಟಿಸಿ ಮರೆಯಾಗುತ್ತಾರೆ. ಬದುಕಿನಲ್ಲಿ ನಡೆಯುವ ಕೆಲವು ಘಟನೆಗಳು ಜೀವನ ಪಥವನ್ನೇ ಬದಲಾಯಿಸಿ ಬಿಡುತ್ತದೆ. ಕೆಲವು ತಿರುವುಗಳು ಸಾಮಾನ್ಯರನ್ನು ಅಸಾಮಾನ್ಯರನ್ನಾಗಿಸಿದರೆ, ಕೆಲವರು ಸರ್ವನಾಶವಾಗಿ ಬಿಡುತ್ತಾರೆ. THE GENTLEMANನಂತಹವರು ದೃವ ತಾರೆಗಳಾಗುತ್ತಾರೆ.

Cover Image

The Photograph

"ನೀವು ನನಗೆ actually ಏನಾಗಿದೆ ಅಂತ ಹೇಳೋದಕ್ಕೆ ಪ್ರಯತ್ನ ಪಡ್ತಿದ್ದೀರ? ಅಂದ್ರೆ ನನಗೆ....?” "ಹೌದು ಹೌದು. ನಾನು ನಿಮಗೆ already ಹೇಳಿದೀನಿ ಇದು ಹೇಗೆ ಅಂತ", ಎಂದು ತನ್ನ ಹೇಳಿಕೆಯನ್ನು ನನಗೆ ಮನವರಿಕೆ ಮಾಡಿಸಲು ಪ್ರಯತ್ನಿಸುತ್ತಿದ್ದರು ಡಾ. ಅಭಿಷೇಕ್ ನಾಯರ್. “But, ನಾನು ಹೇಗೆ ನನ್ನ ಪಾಸ್ಟ್ ಲೈಫ್ ನೋಡ್ಲಿಕ್ಕೆ ಸಾಧ್ಯ. ನೆನಪು ಮಾಡ್ಕೋಳ್ ಬಹುದು. ಬಟ್ ರಿಪೀಟ್ ಆಗಿ ಅದೇ ಸೀನ್ ಅಲ್ಲಿ ನಾನೇ ಇರ್ತೀನಿ. ಅದು ಹೇಗೆ ಸಾಧ್ಯ?" ​"ಹಾಹಾ. ಸಾಧ್ಯ ಇದೆ. ಏಕಾಗ್ರತೆಯೇ ಇವೆಲ್ಲದಕ್ಕೂ ಮೂಲ. You just need to concentrate. ಅಷ್ಟೇ"

Cover Image

Y2121

ಈ ವಿಶ್ವದ ನಿರ್ಮಾಣವಾಗಿ ಸರಿ ಸುಮಾರು 5 ಬಿಲಿಯನ್ ವರ್ಷಗಳ ಒಂದು ಅಂದಾಜು ಲೆಕ್ಕಾಚಾರವಾಗಿದ್ದರೂ ಭೂಮಿಯ ಮೇಲೆ ಜೀವಿಗಳ ಉಗಮವಾಗಿ ಕೆಲವೇ ಮಿಲಿಯನ್ ವರ್ಷಗಳಾಗಿವೆ. ಭೂಮಿಯ ಮೇಲಿನ ವಾತಾವರಣ ಬದಲಾಗುತ್ತ ಬಂದಂತೆ ಜೀವಿಗಳ ದೇಹಗಳಲ್ಲಿ ಬದಲಾವಣೆಗಳಾಗುತ್ತಾ ಬಂದವು. ಈ ವಿಕಾಸಗಳಲ್ಲಿ ಪ್ರಕೃತಿಯ ವಿನಾಶಕ್ಕೆ ಕಾರಣವಾಗುವ ಮನುಷ್ಯನ ವಿಕಾಸವೂ ಒಂದು. ಬೆಂಕಿಯುಂಡೆಯಾಗಿದ್ದ ಗೋಳವೊಂದು ತಂಪಾಗಿ ಹಸಿರು ಪೃಥ್ವಿಯಾಗಿತ್ತು. ಈಗ ಮತ್ತೆ ಬೆಂಕಿಯುಂಡೆಯಾಗುವತ್ತ ಸಾಗುವಂತೆ ಮಾಡಿದ್ದು ನಾವೇ ಅಲ್ಲವೇ?

Cover Image

You

ಒಂದು ನೆರಳು ಮನೆಯಿಂದ ಹೊರಗೆ ಓಡಿದಂತಾಯಿತು. ಆತನ ದಿಗ್ಬ್ರಮೆ ಉಲ್ಬಣಗೊಳ್ಳುವಂತೆ ಮನೆಯ ಮುಂದಿನ ಬಾಗಿಲಿನ ಲಾಕ್ ತೆರೆದಿತ್ತು. ಯಾರೋ ಈಗ ತಾನೇ ಗಟ್ಟಿಯಾಗಿ ಎಳೆದಂತೆ ಬಾಗಿಲು ಅಲುಗಾಡುತ್ತಿತ್ತು. ಬಾಗಿಲಿನ ಸನಿಹಕ್ಕೆ ಹೋಗಿ ಹೊರಕ್ಕೆ ಇಣುಕಿ ನೋಡಿದ. ಅಪಾರ್ಟ್‌ಮೆಂಟಿನ ವರಾಂಡದ ಲೈಟ್ ಎಲ್ಲವೂ ಉರಿಯುತ್ತಿತ್ತು. ಆ ದಾರಿ ಸಹಜವಾಗಿಯೇ ತೋರಿತು. ಹಠಾತ್ ಚಲನವಲನದ ಸೂಚನೆಗಳು ಕಂಡುಬರಲಿಲ್ಲ.